ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ಪ್ರಶಸ್ತಿ/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಗಳ ಶಕ್ತಿ

[ಬದಲಾಯಿಸಿ]

ಅಲೆಗಳಲ್ಲಿರುವ ಶಕ್ತಿಯನ್ನು ವಿದ್ಯುತ್ಛಕ್ತಿಯಂತಹ ಉಪಯುಕ್ತ ರೂಪಗಳಾಗಿ ಬದಲಿಸಬಹುದು.ಸದ್ಯಕ್ಕೆ ಅಷ್ಟು ಬಳಕೆಯಲ್ಲಿರದಿದ್ದರೂ ಅಲೆಗಳ ಶಕ್ತಿಯನ್ನು ಭವಿಷ್ಯದ ಶಕ್ತಿಯ ಆಕರವನ್ನಾಗಿ ನೋಡಬಹುದು.ಪವನ ಶಕ್ತಿ, ಸೌರಶಕ್ತಿಗಳಂತೆ, ಪವನಶಕ್ತಿಯೂ ನವೀಕರಿಸಬಹುದಾದ ಶಕ್ತಿಯ ಆಕರಗಳಲ್ಲೊಂದು. ಎಲ್ಲಾ ಸ್ಥಳಗಳಲ್ಲೂಶಕ್ತಿಯನ್ನು ಉತ್ಪಾದಿಸಲು ಬೇಕಾದಷ್ಟು ವೇಗದ ಅಲೆಗಳು ದೊರಕದ ಕಾರಣ ಅಲೆಗಳಿಂದ ವಿದ್ಯುದುತ್ಪಾದನೆ ದುಬಾರಿ ಮತ್ತು ಕೆಲವೇ ಸ್ಥಳಗಳಲ್ಲಿ ಮಾತ್ರ ಸಾಧ್ಯವಾಗಬಹುದಾದ ಕೆಲಸವೆಂಬ ಪ್ರತೀತಿಯಿತ್ತು. ಆದರೆ ಇತ್ತೀಚೆಗಿನ ವೈಜ್ಞಾನಿಕ ಸಂಶೋಧನೆಗಳು ಹಿಂದಿಗಿಂತ ಕಡಿಮೆ ಖರ್ಚಿನಲ್ಲಿ, ಸುಲಭವಾಗಿ ಅಲೆಗಳ ಶಕ್ತಿಯ ಬಳಕೆಯನ್ನು ಸಾಧ್ಯವಾಗಿಸುತ್ತಿವೆ

ಇತಿಹಾಸ

[ಬದಲಾಯಿಸಿ]

ಅಲೆಗಳಿಂದ ಶಕ್ತಿಯನ್ನು ಉತ್ಪಾದಿಸಬಹುದಾದ ಜಲಯಂತ್ರಗಳನ್ನು(tidemill) ಯುರೋಪ್ ಮತ್ತು ಉತ್ತರ ಅಮೇರಿಕಾದ ಅಟ್ಲಾಂಟಿಕ್ ತೀರಗಳಲ್ಲಿ ಮಧ್ಯ ಯುಗದಲ್ಲಿ,ರೋಮನ್ ಕಾಲದಿಂದಲೇ ಬಳಸಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ.ಒಳಬರುತ್ತಿದ್ದ ನೀರನ್ನು ದೊಡ್ಡ ಕೊಳಗಳಲ್ಲಿ ಶೇಖರಿಸಿ ಅವು ಹೊರಬರುವಾಗ ಉತ್ಪಾದನೆಯಾಗುವ ಅಲೆಗಳಲ್ಲಿದ್ದ ರಭಸ ಜಲಯಂತ್ರದ ಚಕ್ರಗಳನ್ನು ತಿರುಗಿಸಿ,ಆ ಮೂಲಕ ಯಾಂತ್ರಿಕ ಶಕ್ತಿಯನ್ನು ಉತ್ಪಾದಿಸಲಾಗುತ್ತಿತ್ತು. ಹತ್ತೊಂಭತ್ತನೆಯ ಶತಮಾನದಲ್ಲಿ ಧುಮುಕುವ ನೀರಿನಿಂದ ಟರ್ಬೈನುಗಳನ್ನು ಬಳಸಿ ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಪ್ರಾರಂಭಿಸಲಾಯಿತು.

ಅಲೆಗಳಿಂದ ದೊಡ್ಡ ಮಟ್ಟದಲ್ಲಿ ವಿದ್ಯುದುದ್ಪಾದನೆಯನ್ನು ಮಾಡಲು ಪ್ರಾರಂಭಿಸಿದ್ದು ಪ್ರಾರಂಭಿಸಿದ್ದು ಫ್ರಾನ್ಸಿನ ರಾಂನ್ಸ್ ವಿದ್ಯುತ್ ಕೇಂದ್ರದಲ್ಲಿ. ೧೯೬೬ರಲ್ಲಿ ಕಾರ್ಯಾರಂಭಿಸಿದ ಈ ಕೇಂದ್ರ ನಂತರದಲ್ಲಿ ಸಿಹ್ವ ವಿದ್ಯುದುತ್ಪಾದನಾ ಕೇಂದ್ರ ಪ್ರಾರಂಭವಾಗುವವರೆಗೂ ಅತೀ ದೊಡ್ಡ ಕೇಂದ್ರವಾಗಿತ್ತು. ಸಾಗರತಟದಲ್ಲಿರೋ ಕೇಂದ್ರಗಳ ಮೂಲಕ ಸುಮಾರು ಒಂದು ಟೆರಾ ವ್ಯಾಟನಷ್ಟು ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ.

ಅಲೆಗಳಿಂದ ವಿದ್ಯುತ್ ಶಕ್ತಿಯ ಉತ್ಪಾದನೆ

[ಬದಲಾಯಿಸಿ]

ಬಾಹ್ಯಾಕಾಶದ ಕಾಯಗಳಿಂದುಂಟಾಗುವ ಗುರುತ್ವಾಕರ್ಷಣೆಯ ಸೆಳೆತಗಳು ಸಾಗರದಲ್ಲಿ ನಿಯತಕಾಲಿಕವಾದ ಅಲೆಗಳನ್ನು ಹುಟ್ಟುಹಾಕುತ್ತದೆ. ಆಕಾಶಕಾಯಗಳ ಸೆಳೆತ ಮತ್ತು ಕಡಲೆಡೆಗಿನ ಸೆಳೆತಗಳ ಕಾರಣದಿಂದ ಸಾಗರದ ನೀರಿನಲ್ಲಿ ತಾತ್ಕಾಲಿಕ ಉಬ್ಬರವುಂಟಾಗುತ್ತದೆ. ಈ ಉಬ್ಬರದಿಂದ ಸಾಗರದ ಮಧ್ಯದಲ್ಲಿನ ನೀರು ದಡದತ್ತ ತಳ್ಳಲ್ಪಟ್ಟು ಅಲೆಗಳ ನಿರ್ಮಾಣವಾಗುತ್ತದೆ. ಭೂಮಿಯ ಸುತ್ತ ಸುತ್ತುವ ಚಂದ್ರನಿಂದ ಈ ಉಬ್ಬರವಿಳಿತಗಳು ನಿರಂತರವಾಗಿ ನಡೆಯುತ್ತಿರುತ್ತದೆ.ಹಾಗಾಗಿ ನವೀಕರಿಸಬಹುದಾದ ಬೇರೆಲ್ಲಾ ಶಕ್ತಿಯ ಮೂಲಗಳು ಸೂರ್ಯನನ್ನು ಶಕ್ತಿಯ ಆಕರವಾಗಿ ಆಶ್ರಯಿಸಿದರೆ, ಅಲೆಗಳಿಂದ ಶಕ್ತಿಯನ್ನು ಪಡೆಯುವ ವಿಧಾನವು ಚಂದ್ರನನ್ನು ಶಕ್ತಿಯ ಆಕರವಾಗಿಸುತ್ತದೆ.


ಉತ್ಪಾದನಾ ಕ್ರಮಗಳು

[ಬದಲಾಯಿಸಿ]
  1. ಅಲೆಗಳ ಪ್ರವಾಹದಿಂದ ವಿದ್ಯುದುತ್ಪಾದನೆ(Tidal stream generator)
  2. ಅಲೆಗಳ ತಡೆಯಿಂದ ವಿದ್ಯುದುತ್ಪಾದನೆ(Tidal barrage)
  3. ಅಲೆಗಳ ಚಲನಾತ್ಮಕತೆಯಿಂದ ವಿದ್ಯುದುತ್ಪಾದನೆ(Dynamic tidal power)
  4. Tidal lagoon


ಉಲ್ಲೇಖಗಳು

[ಬದಲಾಯಿಸಿ]