ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:ನಗರಕೆರೆಜಗದೀಶ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ ನಗರಕೆರೆಜಗದೀಶ್


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೮:೦೧, ೨೭ ಡಿಸೆಂಬರ್ ೨೦೨೧ (UTC)

ಬಳಕೆಯ ಕನ್ನಡ ಬಳಸಿ

[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಸಂಪಾದನೆ ಮಾಡುತ್ತಿರುವುದಕ್ಕೆ ಧನ್ಯವಾದಗಳು. ಆದರೆ ನೀವು ಸಾಮಾನ್ಯವಾಗಿ ಜನಬಳಕೆಯಲ್ಲಿರುವ ಹಲವು ಪದಗಳನ್ನು ಅನವಶ್ಯಕವಾಗಿ ಬದಲಿಸುತ್ತಿದ್ದೀರಿ. ಈ ರೀತಿಯ ಬದಲಾವಣೆ ಅಗತ್ಯವಿಲ್ಲ. "ಜನರು" ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ. ಇದು ಶತಮಾನಗಳಿಂದ ಬಳಕೆಯಲ್ಲಿರುವ ಪದ. ಇದನ್ನು "ಮಂದಿ" ಎಂದು ಬದಲಾವಣೆ ಮಾಡಿದ್ದೀರಿ. ಇಂತಹ ಬದಲಾವಣೆ ಅಗತ್ಯವಿಲ್ಲ. ಇದು ಒಂದು ಉದಾಹರಣೆ ಮಾತ್ರ. ಇಂತಹ ಹಲವು ಅನವಶ್ಯಕ ಬದಲಾವಣೆಗಳನ್ನು ನೀವು ಮಾಡಿದ್ದೀರಿ. ಈ ರೀತಿಯ ಬದಲಾವಣೆಗಳು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಅಗತ್ಯವೇ ಎಂದು ನೀವು ಅರಳಿಕಟ್ಟೆಯಲ್ಲಿ ಚರ್ಚಿಸಿ ಬಹುತೇಕ ಮಂದಿ ಅದಕ್ಕೆ ಒಪ್ಪಿದರೆ ಆಗ ಮಾತ್ರ ಇಂತಹ ಬದಲಾವಣೆ ಮಾಡಿ. ಸದ್ಯಕ್ಕೆ ಇಂತಹ ಬದಲಾವಣೆ ಮಾಡಬೇಡಿ. ಮೊದಲಿಗೆ ನೀವು ಮಾಡಿರುವ ಇಂತಹ ಎಲ್ಲ ಬದಲಾವಣೆಗಳನ್ನು ಮೊದಲಿನ ರೂಪಕ್ಕೇ ತನ್ನಿ. ನಂತರ ಅರಳಿಕಟ್ಟೆಯಲ್ಲಿ ಚರ್ಚಿಸಿ. ನಿಮ್ಮ ವಾದಕ್ಕೆ ಬಹುಮತದ ಬೆಂಬಲ ದೊರಕಿದರೆ ಆಗ ಮಾತ್ರ ಬದಲಾವಣೆ ಮಾಡಿ.--ಪವನಜ ಯು. ಬಿ. (ಚರ್ಚೆ) ೧೭:೩೬, ೨ ಜನವರಿ ೨೦೨೨ (UTC)

ನೀವು ಮಾಡಿದ ಎಲ್ಲಾ ಸಂಪಾದನೆಗಳನ್ನೂ ಮೊದಲಿನಂತಾಗಿಸಲಾಗಿದೆ (rollback). ಇನ್ನೊಮ್ಮೆ ಈ ರೀತಿ ಅನವಶ್ಯಕ ಬದಲಾವಣೆಗಳನ್ನು ಅಂದರೆ ಅನುತ್ಪಾದಕ ಸಂಪಾದನೆಗಳನ್ನು ಮಾಡಿದರೆ ನಿಮ್ಮನ್ನು ನಿರ್ಬಂಧಿಸಲಾಗುವುದು.--ಪವನಜ ಯು. ಬಿ. (ಚರ್ಚೆ) ೧೭:೧೬, ೩ ಜನವರಿ ೨೦೨೨ (UTC)

ನನ್ಗೆ ಗೊತ್ತಿರೊ ನುಡಿಲಿ ಬರ್‍ದವ್ನಿ. ಮುಂದೆ ಸೈತ ನಾನು ಕಲ್ತಿರೊ, ನನಗೆ ಗೊತ್ತಿರುವ ನುಡಿಯಲ್ಲಿ ಬರಿತೀನಿ,ನೀಮು ಬರೀ ಕನ್ನಡ ಬರೂರ್‍ಗೆ ಅವ್ಮಾನ ಮಡ್ತಿದಿರಿ. ನಗರಕೆರೆಜಗದೀಶ್ (ಚರ್ಚೆ) ೦೪:೨೩, ೪ ಜನವರಿ ೨೦೨೨ (UTC)

ನಗರಕೆರೆಜಗದೀಶ್ ಅವರೇ, ತಾವು ದಯವಿಟ್ಟು ತಪ್ಪು ಭಾವಿಸಬಾರದು. ತಮ್ಮ ಬಗ್ಗೆ ತಮ್ಮ ಭಾಷೆಯ ಬಗ್ಗೆ ನಮಗೆಲ್ಲರಿಗೂ ಅಪಾರವಾದ ಗೌರವ ಇದೆ. ಆದರೆ ಜನರು ಸಾಮಾನ್ಯವಾಗಿ ಬಳಸುವ/ಅನೇಕ ವರ್ಷಗಳಿಂದ ಬಳಸುತ್ತಾ ಬಂದಿರುವ ಶಬ್ದಗಳನ್ನು ಬಳಸಿದಲ್ಲಿ ಎಲ್ಲರಿಗೂ ಅರ್ಥವಾಗುತ್ತದೆ ಎಂದಷ್ಟೆ ನಿರ್ವಾಹಕರು ಸೂಚಿಸಿದ್ದಾರೆ ಅಷ್ಟೆ. ನಿಮ್ಮ ಭಾಷೆಯ ಬಗ್ಗೆ ಯಾರೂ ಅಗೌರವ ತೋರಿಸಿಲ್ಲ, ಅವಮಾನ ಮಾಡಿಲ್ಲ ಅನ್ನುವುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.--Kishorekumarrai (ಚರ್ಚೆ) ೦೧:೦೮, ೫ ಜನವರಿ ೨೦೨೨ (UTC)

ನಾನು ಕಲಿತಿರುವಂಗೆ ಅಟೆ ಬರಿಕೆ ಆಯ್ತದೆ ಬರ್‍ದೆ ಇರೂದ ಏನ್ ಮಾಡುಮ? ಬಗೆ ಬಗೆ ಕನ್ನಡ ಅವೆ ಎಲ್ಲವ್ಕುವೆ ಅನುವು ಮಾಡ್ಕೊಡಿ, ಗರಿಮೆಯ ಗರಿ ಹೆಚ್ಚಾಯ್ತವೆ. ಎಲ್ರು ಒಟ್ಗೆ ಹೋಗುಮ. ನಗರಕೆರೆಜಗದೀಶ್ (ಚರ್ಚೆ) ೦೬:೫೫, ೫ ಜನವರಿ ೨೦೨೨ (UTC)

ಪ್ರತಿಯೊಂದು ಭಾಷೆಗೂ ಅದರದ್ದೇ ಆದ ಗೌರವ ಇದೆ. ನಾನು ಕಲಿತ್ತದ್ದು ಇಷ್ಟೇ ಎಂದುಕೊಂಡು ಬರೆಯಹೋದರೆ ಉಳಿದವರಿಗೆ ಅದು ಅರ್ಥವಾಗದೇ ಹೋದರೆ ಯಾರು ಬರೆದು ಏನು ಪ್ರಯೋಜನ? ಭಾಷೆಯ ಗುಣವೇ ಮತ್ತೊಬ್ಬರಿಗೆ ಅರ್ಥವಾಗುವಂತೆ ಹೇಳುವುದು ಜೊತೆಗೆ ಬರೆಯುವುದು. ನನಗೆ ಮೋಡಿ ಕನ್ನಡ ಮಾತ್ರ ಬರುವುದು ನಾನು ಅದರಲ್ಲೇ ಬರೆಯುತ್ತೇನೆ ಅನ್ನುವುದು ಮೊಂಡುವಾದ ಅಗಿ ಬಿಡುತ್ತದೆ. ಉದಾಹರಣೆಗೆ ನಾನು ತುಳುವ ನನಗೆ ತುಳು ಲಿಪಿಯಲ್ಲಿಯೇ ಬರೆಯುತ್ತೇನೆ ಅಂದರೆ ತುಳುಲಿಪಿ ತಿಳಿಯದಿರುವವರ ಗತಿ ಏನು? ಅದಕ್ಕಾಗಿ ಕನ್ನಡ ಲಿಪಿಯನ್ನು ಬಳಸಿಕೊಂಡು ತುಳು ಲೇಖನಗಳನ್ನು ಬರೆಯುತ್ತಿದ್ದೇವೆ ಇದು ಒಪ್ಪಿತವಾದ ಲಿಪಿ.--Kishorekumarrai (ಚರ್ಚೆ) ೧೫:೦೦, ೧೩ ಜನವರಿ ೨೦೨೨ (UTC)