ಸಣ್ಣ ಜಾಜಿ
ಗೋಚರ
Jasminum officinale | |
---|---|
Botanical illustration | |
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. officinale
|
Binomial name | |
Jasminum officinale |
ಸಣ್ಣ ಜಾಜಿ ಹಬ್ಬಿ ಬೆಳೆಯುವ ಪೊದೆ ಬಗೆಯದು. ಗಟ್ಟಿಮುಟ್ಟಾಗಿ ಬೆಳೆಯುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು ಜಾಸ್ಮಿನಮ್ ಅಫಿಸಿನೇಲ್. ಇದು ಕಾಕಸಸ್ ಮತ್ತು ಏಷ್ಯಾದ ಭಾಗಗಳಿಗೆ ಸ್ಥಳೀಯವಾಗಿದೆ.
ಬೇಸಿಗೆಯಲ್ಲಿ ಇದರ ಹೂವುಗಳ ತೀಕ್ಷ್ಣ ಪರಿಮಳಕ್ಕಾಗಿ ಸಮಶೀತೋಷ್ಣ ಭಾಗಗಳಾದ್ಯಂತ ತೋಟಗಾರರು ಇದಕ್ಕೆ ವಿಶೇಷವಾಗಿ ಪ್ರಾಮುಖ್ಯ ನೀಡುತ್ತಾರೆ.
ಗುಣಲಕ್ಷಣಗಳು
[ಬದಲಾಯಿಸಿ]ಅಭಿಮುಖ ರೀತಿಯ ಏಕ ಪಿಚ್ಛಕ ಸಂಯುಕ್ತ ಎಲೆಗಳನ್ನು ಪಡೆದಿದೆ. ಪ್ರತಿ ಎಲೆಯಲ್ಲಿ 3-7 ಪತ್ರಕಗಳುಂಟು.[೧] ತುದಿಯ ಪತ್ರಕ ಉಳಿದವಕ್ಕಿಂತ ದೊಡ್ಡದು. ರೆಂಬೆಗಳ ಅಗ್ರಭಾಗದಲ್ಲಿ ಲಘು ಸಂಖ್ಯೆಯ ಹೂಗಳುಳ್ಳ ಸೀಮಾಕ್ಷಿ ಮಂಜರಿಗಳು ಮೂಡುವುವು. ಒಮ್ಮೊಮ್ಮೆ ಮಂಜರಿಯಲ್ಲಿ ಒಂದೇ ಹೂವಿರುವುದುಂಟು. ಹೂಗಳ ಬಣ್ಣ ಬಿಳಿ.[೨] ಪ್ರತಿ ಹೂವಿನಲ್ಲಿ 4-5 ದಳ ಅಷ್ಟೇ ಸಂಖ್ಯೆಯ ನಿದಳಗಳಿವೆ. ಹೂ ಅರಳುವ ಕಾಲ ಜುಲೈ-ಅಕ್ಟೋಬರ್, ಪರ್ಷಿಯ ಅಥವಾ ಕಾಶ್ಮೀರ ಇದರ ತವರು ಎನ್ನಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Jasminum officinale - Plant Finder". www.missouribotanicalgarden.org. Retrieved 2021-10-05.
- ↑ RHS A-Z encyclopedia of garden plants. United Kingdom: Dorling Kindersley. 2008. p. 1136. ISBN 978-1405332965.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: