ವಿಷಯಕ್ಕೆ ಹೋಗು

ಸಗಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆರಣಿಯನ್ನು ಒಣಗಿಸುತ್ತಿರುವುದು

ಸಗಣಿಯು ಗೋಜಾತಿಯ ಪ್ರಾಣಿಗಳ ತ್ಯಾಜ್ಯ ಉತ್ಪನ್ನ. ಈ ಪ್ರಜಾತಿಗಳಲ್ಲಿ ದನಗಳು, ಕಾಡು ಕೋಣ, ಯಾಕ್, ಮತ್ತು ಎಮ್ಮೆ ಸೇರಿವೆ. ಸಗಣಿಯು ಪ್ರಾಣಿಯ ಹೊಟ್ಟೆಯ ಮೂಲಕ ಸಾಗಿದ ಸಸ್ಯ ವಸ್ತುವಿನ ಜೀರ್ಣವಾಗದ ಶೇಷ. ಪರಿಣಾಮರೂಪಿಯಾದ ಮಲವು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಬಣ್ಣವು ಹಸಿರಿನಿಂದ ಕಪ್ಪು ಬಣ್ಣದವರೆಗೆ ಬದಲಾಗುತ್ತದೆ, ಮತ್ತು ಹಲವುವೇಳೆ ಗಾಳಿಗೆ ಒಡ್ಡಿಕೆಯಾದ ನಂತರ ಶೀಘ್ರದಲ್ಲಿಯೇ ಗಾಢವಾಗುತ್ತದೆ. ಸಾಮಾನ್ಯವಾಗಿ ಗಾಢ ಕಂದು ಬಣ್ಣವಿರುವ ಸಗಣಿಯನ್ನು ಹಲವುವೇಳೆ ಗೊಬ್ಬರವಾಗಿ ಬಳಸಲಾಗುತ್ತದೆ. ಅಭಿವೃದ್ಧಿಹೊಂದುತ್ತಿರುವ ವಿಶ್ವದ ಅನೇಕ ಭಾಗಗಳಲ್ಲಿ, ಮತ್ತು ಪೂರ್ವದಲ್ಲಿ ಯೂರೋಪ್‍ನ ಪರ್ವತ ಪ್ರದೇಶಗಳಲ್ಲಿ, ಬಿಲ್ಲೆ ಮಾಡಿ ಒಣಗಿಸಿದ ಸಗಣಿಯನ್ನು ಇಂಧನವಾಗಿ ಬಳಸಲಾಗುತ್ತದೆ. ಇದನ್ನು ಬೆರಣಿ (ಕುರುಳು) ಎಂದು ಕರೆಯಲಾಗುತ್ತದೆ. ಸಗಣಿಯನ್ನು ಸಂಗ್ರಹಿಸಿ ಜೈವಿಕ ಅನಿಲವನ್ನು ಉತ್ಪಾದಿಸಲು ಕೂಡ ಬಳಸಬಹುದು. ಇದರಿಂದ ವಿದ್ಯುಚ್ಛಕ್ತಿ ಮತ್ತು ಉಷ್ಣವನ್ನು ಉತ್ಪಾದಿಸಬಹುದು.

"https://kn.wikipedia.org/w/index.php?title=ಸಗಣಿ&oldid=889814" ಇಂದ ಪಡೆಯಲ್ಪಟ್ಟಿದೆ