ಸಂಬಳವನ್ನು ಕೊಡುವ ಪದ್ದತಿ

ವಿಕಿಪೀಡಿಯ ಇಂದ
Jump to navigation Jump to search

ಸಂಬಳವನ್ನು ಕೊಡುವ ಪದ್ಡತಿಗಳು[ಬದಲಾಯಿಸಿ]

ಸಿಬ್ಬಂದಿ ವರ್ಗದವರಿಗೆ ಅಥವಾ ಕೂಲಿಕಾರರಿಗೆ ಯೋಗ್ಯ ರೀತಿಯಲ್ಲಿ ಸಂಬಳವನ್ನು ಕೊಡುವುದು ವ್ಯವಹಾರ ಆಡಳಿತದ ಸುಧಾರಣೆಯ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಸಮಸ್ಯೆಯಾಗಿದೆ. ನೌಕರರಿಗೆ ಸಂಬಳವೆಂದರೆ ಅವನ ಆದಾಯವಾಗಿರುತ್ತದೆಯಲ್ಲದೇ ಅವನ ಜೀವನ ಮಟ್ಟವನ್ನು ಮತ್ತು ಸಮಾಜದಲ್ಲಿ ಅವನ ಸ್ಥಾನಮಾನಗಳನ್ನು ನಿರ್ಧರಿಸುತ್ತದೆ. ಇಲ್ಲಿ ಮಹತ್ವವಾದದ್ದೆಂದರೆ ಅವನಿಗೆ ಸಂಬಳವನ್ನು ಯಾವ ರೀತಿಯಲ್ಲಿ ಕೊಡಲಾಗುತ್ತದೆ ? ಅಂದರೆ ಸಂಬಳವನ್ನು ಕೊಡಲು ಅನುಸರಿಸುವ ಪದ್ಧತಿ ಯಾವದು ? ಉತ್ಪಾದಕರಿಗೆ ಸಂಬಳವೆಂದರೆ ಉತ್ಪಾದನಾ ವೆಚ್ಚವನ್ನು ನಿರ್ಧರಿಸುತ್ತದೆ. ಆದ್ದರಿಂದ ಉತ್ಪಾದಕನು ಕಡಿಮೆ ಉತ್ಪಾದನಾ ವೆಚ್ಚವಾಗುವ ಮತ್ತು ಹೆಚ್ಚಿಗೆ ಸಂಬಳವನ್ನೀಯಬಹುದಾದ ಒಂದು ಅನುಕೂಲ ಪದ್ಧತಿಯನ್ನು ಅನುಸರಿಸಲು ಇಚ್ಚಿಸುತ್ತಾರೆ.

ಪ್ರತಿಯೊಬ್ಬ ವ್ಯವಹಾರಸ್ಥನೂ ಉತ್ಪಾದನಾ ವೆಚ್ಚಗಳನ್ನು ಆದಷ್ಟುಮಟಿಗೆ ಕಡಿಮೆ ಮಾಡಲು ಇಚ್ಛಿಸುತ್ತಾನೆ. ಸಂಬಳವು ಕೂಡ ಉತ್ಪಾದನಾ ವೆಚ್ಚದಲ್ಲಿ ಬರುತ್ತದೆಯಾದ್ದರಿಂದ ಅದನ್ನು ಕೂಡ ಕಡಿಮೆ ಮಾಡಲಿಚ್ಛಿಸುತ್ತಾನ್. ಕೂಲಿಕಾರರಿಗೆ ಸಂಬಳವನ್ನು ಕೊಡಬೇಕಾದರೆ ಪ್ರತಿಯೊಬ್ಬ ವ್ಯವಹಾರಸ್ಥನೂ ಮೂರು ಉದ್ದೇಶಗಳನ್ನು ಹೊಂದಿರುತ್ತಾನೆ. ಮೊದಲನೆಯದಾಗಿ ಉತ್ಪಾದನಾ ವೆಚ್ಚದಲ್ಲಿ ಇಳಿಮುಖವಾಗಬೇಕು. ಎರಡನೆಯದಾಗಿ, ಉತ್ಪಾದನೆಯು ಅಧಿಕ ಪ್ರಮಾಣದಲ್ಲಿ ಆಗಬೇಕು. ಮತ್ತು ಕೊನೆಯದಾಗಿ, ಕೂಲಿಕಾರರಿಗೆ ಕೊಡ ತಮಗೆ ದೊರೆತ ಸಂಬಳದ್ದಿಂದ ತೃಪ್ತಿಯಾಗಿರಬೇಕು ಈ ಮೂರು ಉದ್ದೇಶಗಳನ್ನು ಪೂರ್ಣಗೊಳಿಸುವಂಥ ಒಂದು ಸಂಬಳದ ಪದ್ದತಿಯನ್ನು ಅನುಸರಿಸಲು ಉತ್ಪಾದಕರು ಇಲ್ಲವೇ ವ್ಯವಹಾರಸ್ಥರು ಇಚ್ಚಿಸುತ್ತಾರೆ.

Annual growth of 1.4% in average weekly earnings including bonuses

ವೆಲ್ಡನ್ ಎಂಬ ತಜ್ಞರು ಹೇಳಿದಂತೆ, "ಕಡಿಮೆ ಸಂಬಳವಂದರೆ ಉತ್ಪಾದನಾ ವೆಚ್ಚವೂ ಕಡಿಮೆಯಾಗುತ್ತದೆ; ಆದರೆ ಹೆಚ್ಚು ಸಂಬಳವನ್ನು ಕೊಟ್ಟರೂ ಕೂಡ ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವಾಗುತ್ತದೆ ಎಂಬುದನ್ನು ಅನೇಕ ಸಮರ್ಥ ವ್ಯವಹಾರಸ್ಥರು ಕಂಡುಕೊಂಡಿದ್ದಾರೆ"

ಸಂಬಳವನ್ನಿಯುವ ಪದ್ಧತಿಗಳು[ಬದಲಾಯಿಸಿ]

ಸಂಬಳವನ್ನಿಯುವ ಪದ್ಧತಿಗಳು ಅನೇಕ ಇವೆ. ಕೆಲವು ಸಂಸ್ಥೆಗಳು ಕೆಲಸ ಮಾಡಿದ ವೇಳೆಯನ್ನನುಸರಿಸಿ ಸಂಬಳವನ್ನೀಯುತ್ತಿದ್ದರೆ, ಇನ್ನು ಕೆಲ ಸಂಸ್ಥೆಗಳು ಉತ್ಪಾದನೆಯನ್ನಾಧಾರವಾಗಿಟ್ಟುಕೊಂಡು ಸಂಬಳವನ್ನೀಯುತ್ತವೆ. ಆದರೆ ಸಂಬಳದ ಪದ್ದತಿಗಳಲ್ಲಿ ಈ ಎರಡೂ ಅತೀ ಮುಖ್ಯವಾದ ಪದ್ಧತಿಗಳಾಗಿವೆ. ಒಂದು ವೇಳೆಗನುಸಾರವಾಗಿ ಸಂಬಳವನ್ನೀಯುವ ಪದ್ಧತಿ ಹಾಗೂ ಇನ್ನೊಂದು, ಉತ್ಪಾದನಾ ಸಾಮರ್ಥ್ಯವನ್ನನುಸರಿಸಿ ಸಂಬಳವನ್ನೀಯುವ ಪದ್ಧತಿ ಈ ಎರಡೂ ಪದ್ಧತಿಗಳಿಂದಾಗುವ ಆನಾನುಕೂಲತೆಗಳನ್ನು ದೂರೀಕರಿಸಲು ಇನ್ನೂ ಕೆಲವು ಪದ್ಧತಿಗಳನ್ನು ಕೂಡ ಅನುಸರಿಸಲಾಗುತ್ತಿದೆ. ಅವುಗಳನ್ನು ವಿವರವಾಗಿ ವಿವರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

...History of the house of P. and F. Corbin, MCMIV issued in commemoration of the fiftieth anniversary of the founding of the house (1904) (14591223390)

ವೇಳೆಗನುಸಾರವಾಗಿ ಸಂಬಳವನ್ನೀಯುವ ಪದ್ಧತಿ[ಬದಲಾಯಿಸಿ]

ಹೆಸರೇ ಸೂಚಿಸವಂತೆ, ಈ ಪದ್ಧತಿಯಲ್ಲಿ ವೇಳೆಯು ಸಂಬಳವನ್ನು ನಿರ್ಧರಿಸುವ ಮೂಲವಾಗಿರುತ್ತದೆ. ಕೆಲಸಗಾರರು ಕೆಲಸ ಮಾಡಿದ ಪ್ರತಿ ತಾಸಿಗೆ ಇಲ್ಲವೇ ಪ್ರತಿ ದಿನಕ್ಕೆ ಇಲ್ಲವೇ ಪ್ರತಿ ತಿಂಗಳಿಗೆ ಎಷ್ಟು ಸಂಬಳವನ್ನು ಕೊಡಬೇಕೆಂಬುದನ್ನು ಮೊದಲೇ ನಿರ್ಧರಿಸಲಾಗಿರುತ್ತದೆ. ಈ ನಿರ್ಧರಿಸಲ್ಪಟ್ಟ ಬೆಲೆಯ ಪ್ರಕಾರ ಕೆಲಸಗಾರರು ಸಂಬಳವನ್ನು ಪಡೆಯುತ್ತಾರೆ. ಇದು ಸಂಬಳವನ್ನೀಯಲು ಉಪಯೋಗಿಸುವ ಅತ್ಯಂತ ಪುರಾತನ ಪದ್ಧತಿಗಳಲ್ಲೊಂದಾಗಿದೆ. ಈ ಪದ್ಧತಿಯಲ್ಲಿ ಕೆಲಸಗಾರರಿಗೆ ಅವರು ಕಾರ್ಯ ಮಾಡಿದ ವೇಳೆಗೆ ತಕ್ಕಂತೆ ಸಂಬಳವು ದೊರೆಯುತ್ತದೆ.ಅವರು ಎಷ್ಟು ಕೆಲಸ ಮಾಡಿದರು ? ಅಥವಾ ಎಷ್ಟು ಸರಕನ್ನು ಉತ್ಪಾದಿಸಿದರು? ಎಂಬುದು ಮುಖ್ಯವಾದುದಲ್ಲ. ಉದಾಹರಣೆಗೆ, ಒಬ್ಬ ಕೆಲಸಗಾರನಿಗೆ ಒಂದು ತಾಸಿಗೆ ಒಂದು ರೂಪಾಯಿ ಸಂಬಳ ದೊರೆಯುತ್ತದೆ. ಎಂದು ಭಾವಿಸುವಾ. ಕೆಲಸಗಾರನು ಎಂಟು ತಾಸುಗಳ ವರೆಗೆ ಕೆಲಸ ಮಾಡಿದನೆಂದರೆ ಅವನಿಗೆ ಎಂಟು ರೊಪಾಯಿ ಸಂಬಳವು ದೊರೆಯುತ್ತದೆ. ಹೇಗೆ ಅವನು ಕಾರ್ಯ ಮಾಡಿದ ಸಮಯವು ಮಹತ್ವದ್ದಾಗಿರುವದ್ದಿಲ್ಲ. ಆದ್ದರಿಂದ ಈ ಪದ್ಧತಿಯಲ್ಲಿ ಉತ್ಪಾದನೆಯ ಹೆಚ್ಚಳದಿಂದಾಗುವ ಲಾಭವೂ ಅಥವಾ ಉತ್ಪಾದನೆಯ ಇಳಿತದಿಂದಾಗುವ ನಷ್ಟವೂ ಒಡೆಯನಿಗೆ ಸಂಬಂಧಿಸಿರುತ್ತದೆ.

ಉತ್ಪಾದನೆಗನುಗುಣವಾಗಿ ಸಂಬಳವನ್ನೀಯುವ ಪದ್ಧತಿ[ಬದಲಾಯಿಸಿ]

ಈ ಪದ್ಧತಿಯು ಕೂಡ ಅತ್ಯಂತ ಪುರಾತನವಾಗಿದ್ದರೂ ಕೂಡ, ಇದರ ಉಪಯೋಗವನ್ನು ಇತ್ತೀಚಿನ ದಿನಗಳಲ್ಲಿ ಮಾಡಿಕೊಳ್ಳಲಾಗುತ್ತದೆ. ಈ ಪದ್ಧತಿಯಲ್ಲಿ ಹೆಸರೇ ಸೂಚಿಸುವಂತೆ, ಕೆಲಸಗಾರರಿಗೆ ಅವರವರ ಉತ್ಪಾದನಾ ಸಾಮರ್ಥ್ಯಕ್ಕನುಗುಣವಾಗಿ ಸಂಬಳವನ್ನೀಯಲಾಗುತ್ತದೆ. ಆದ್ದರಿಂದ, ಈ ಪದ್ಧತಿಯಲ್ಲಿ ಕೆಲಸಗಾರರು ಕೆಲಸ ಮಾಡಿದ ವೇಳೆಗೆ ಮಹತ್ವವಿರದೇ, ಅವರ ಉತ್ಪಾದನೆಗೆ ಮಹತ್ವವಿರುತ್ತದೆ. ಪ್ರತಿ ಕೆಲಸಗಾರರ ಉತ್ಪಾದನೆಯು ಅವರವರ ಸಂಬಳವನ್ನು ನಿರ್ಧರಿಸತ್ತದೆ. ಉದಾಹರಣೆಗೆ, ಒಬ್ಬ ಕೆಲಸಗಾರನಿಗೆ ಒಂದು ನಿರ್ದಿಷ್ಟ ವಸ್ತುವಿನ ಉತ್ಪಾದನೆಗೆ ೫ ರೂಪಾಯಿ ಸಂಬಳವು ದೊರೆಯುತ್ತದೆ ಎನ್ನೋಣ. ಈ ರೀತಿಯಲ್ಲಿ ಒಬ್ಬ ಕೆಲಸಗಾರನು ಪ್ರತಿ ದಿನ ೫ ವಸ್ತುಗಳನ್ನು ಉತ್ಪಾದಿಸಿದರೆ ಅವನಿಗೆ ಪ್ರತಿ ವಸ್ತುವಿಗೆ ಒಂದು ರೂಪಾಯಿಯಂತೆ ಇಪ್ಪತ್ತ್ಯೆದು ರೂಪಾಯಿ ಸಂಬಳವು ದೊರೆಯುತ್ತದೆ. ಅವನು ಹೇಗೆ ಹೇಗೆ, ಹೆಚ್ಚು ಹೆಚ್ಚು ಉತ್ಪಾದಿಸುತ್ತಾನೆಯೋ ಅದೇ ರೀತಿಯಲ್ಲಿ ಅವನಿಗೆ ಹೆಚ್ಚು ಹೆಚ್ಚು ಸಂಬಳವು ದೊರೆಯುತ್ತದೆ.[೧] ==ಕೆಲಸಗಾರರಿಗೆ ಲಾಭದಲ್ಲೊಂದು ಪಾಲು ಕೊಡುವ ಪದ್ಧತಿ== ಯಾವುದೇ ಒಂದು ಸಂಸ್ಥೆ ಯೋಗ್ಯ ರೀತಿಯಲ್ಲಿ ಕಾರ್ಯವನ್ನು ಸಾಗಿಸಬೇಕಾದರೆ, ಆ ಸಂಸ್ಥೆಯಲ್ಲಿ ಮಾಲೀಕರಿಗೂ ಮತ್ತು ಕೆಲಸಗಾರರಿಗೂ ಯೋಗ್ಯವಾದ ಮತ್ತು ಹಿತಕರವಾದ ಸಂಬಂಧವಿರಬೇಕಾದುದು ಅತ್ಯವಶ್ಯ. ಇಬ್ಬರಲ್ಲಿಯೂ ಅಸೂಯೆ, ದ್ವೇಷಗಳು ತಾಂಡವವಾಡುತ್ತಿದ್ದರೆ, ಆ ಸಂಸ್ಥೆಯು ಏಳ್ಗೆ ಯಾಗಲಾರದು. ಏಕೆಂದರೆ, ಇಬ್ಬರಲ್ಲಿಯೂ ವ್ಯೆಮನಸ್ಸಿದ್ದರೆ, ಅದರಿಂದ ಒಳಕಲಹಗಳು, ಹರತಾಳಗಳು, ಹೊರಗೀಲಿಗಳು ಮೊದಲದವುಗಳು ಪದೇ ಪದೇ ಆಗುತ್ತಿರುತ್ತವೆ. ಇದಲ್ಲದೇ ನೌಕರರು ಹೆಚ್ಚು ದಿನ ಅಲ್ಲಿ ನಿಲ್ಲುವದಿಲ್ಲವಾದ್ದರಿಂದ ಅವರು ಬದಲಾವಣೆಯಾಗುತ್ತಿರುತ್ತಾರೆ. ಇದರಿಂದಾಗಿ ಉತ್ಪಾದನಾ ಸಾಮರ್ಥ್ಯವು ಇಳಿಯುತ್ತದೆಯಾದ್ದರಿಂದ ಸಂಸ್ಥೆಯ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ, ಇವರಿಬ್ಬರ ಮಧ್ಯ ಹಿತಕರವಾದ ಸಂಬಂಧವನ್ನು ಕಲ್ಪಿಸುವದಕ್ಕಾಗಿಯೇ ಅನೇಕ ಬಗೆಯಲ್ಲಿ ಪ್ರೋತ್ಸಾಹನಕರವಾದ ಪದ್ಧತಿಗಳನ್ನು ಜಾರಿಗೆ ತರಲಾಗಿದ್ದರೂ ಕೂಡ, ಮಾಲೀಕರ ಹಾಗೂ ಕೆಲಸಗಾರರ ನಡುವಿನ ಅಂತರವನ್ನು ಕಡಿಮೆಮಾಡುವಲ್ಲಿಯಾಗಲೀ ಅಥವಾ ಅವರ ನಡುವೆ ಯೋಗ್ಯ ಸಂಬಂಧವನ್ನು ಕಲ್ಪಿಸುವಲ್ಲಿಯಾಗಲೀ ಇನ್ನೂ ಯಶಸ್ಸಿಯಾಗಿಲ್ಲ. ಈ ಕಾರಣದಿಂದಲೇ ಕೆಲಸಗಾರರಿಗೆ ಲಾಭದಲ್ಲಿ ಒಂದು ಪಾಲನ್ನು ಕೊಡುವ ಮತ್ತು ಅವರಿಗೆ ಸಹ-ಪಾಲುದಾರಿಕೆಯನ್ನು ಪದ್ಧತಿಗಳನ್ನು ಜಾರಿಗೆ ತರಲಾಗಿದೆ. ಈ ಪದ್ಧತಿಗಳು ಮಾಲೀಕರ ಹಾಗೂ ಕೆಲಸಗಾರರ ಮಧ್ಯ ಇರುವ ಕಲಹವನ್ನು ತೊಡೆದು ಹಾಕುವಲ್ಲಿ ಯಶಸ್ಸಿಯಾಗಬಲ್ಲದೆಂಬ ಬಲವಾದ ನಂಬಿಕೆಯಿಂದಲೇ ಇವುಗಳನ್ನು ಅನೇಕ ಕಡೆಗಳಲ್ಲಿ ಜಾರಿಯಲ್ಲಿ ತರಲಾಗುತ್ತಿದೆ. ಇತ್ತೀಚಿಗೆ ಇವುಗಳನ್ನು ಜಾರಿಯಲ್ಲಿ ತರಬೇಕೆಂದು ಭಾರತ ಸರಕಾರವು ಕಾಯ್ದೆಯನ್ನೂ ಕೂಡ ಪಾಸು ಮಾಡಿದೆ.

ಸಹಪಾಲುಗಾರಿಕೆ[ಬದಲಾಯಿಸಿ]

[೨]ಲಾಭದಲ್ಲಿ ಪಾಲುಗಾರರಿದ್ದಂತೆಯೇ ಈ ಪದ್ಧತಿಯಲ್ಲಿ ಲಾಭವನ್ನು ಕೆಲಸಗಾರರಲ್ಲಿ ಹಂಚಿ ಕೊಡಲಾಗುವುದು. ಅಂದರೆ ಕೆಲಸಗಾರರನ್ನು ಕೂಡ ಪಾಲುಗಾರರಂತೆಯೇ ಪರಿಗಣಿಸಲಾಗುತ್ತದೆ ಆದರೆ ಈ ಪದ್ಧತಿಯಲ್ಲಿ ಕೆಲಸಗಾರರಿಗೆ ಅವರಿಗೆ ಕೂಡ ಬೇಕಾದ ಲಾಭಾಂಶವನ್ನು ಹಣದ ರೂಪದಲ್ಲಿ ಕೊಡಲಾಗುವುದಿಲ್ಲ. ಅದನ್ನು ಅವರ ಹೆಸರಿನಲ್ಲಿ ಇಟ್ಟು, ಸಂಸ್ಥೆಯ ಶೇರುಗಳನ್ನು ಕೊಡಲಾಗುವುದು. ಇಲ್ಲವೇ ಅವರ ಪ್ರಾವೀಂಡೆಂಟ್ ಫಂಡ ಖಾತೆಗೆ ಜಮಾ ಮಾಡಲಾಗುವುದು. ಕೆಲಸಗಾರರಿಗೆ ಶೇರು ಸರ್ಟಿಫೀಕೆಟುಗಳನ್ನು ಕೊಡಲಾಗುವುದು. ಇದರಿಂದಾಗಿ ಕೆಲಸಗಾರರು ಸಂಸ್ಥೆಯ ಶೇರುದಾರರಾಗುತ್ತಾರೆ. ಹೀಗೆ ಈ ಪದ್ಧತಿಯಲ್ಲಿ ಅವರಿಗೆ ಕೇವಲ ಲಾಭದಲ್ಲಿ ಪಾಲುದೊರೆಯುವುದಲ್ಲದೇ ಸಂಸ್ಥೆಯ ಆಡಳಿತದಲ್ಲಿ ಕೂಡ ಮಹತ್ವದ ಸ್ಥಾನವು ದೊರಕುತ್ತದೆ. ಅವರು, ಇದರಿಂದ ಸಂಸ್ಥೆಯ ಆಡಳಿತವನ್ನು ನಿಯಂತ್ರಿಸುವಲ್ಲಿ ಶಕ್ಯರಾಗುತ್ತಾರೆ. ಹೀಗೆ ಕೆಲಸಗಾರರ ಸ್ಥಾನಮಾನಗಳಲ್ಲಿ ಬದಲಾವಣೆಯುಂಟಾಗುವದಲ್ಲದೇ, ಅವರ ಆಸಕ್ತಿಯ ಸಂಸ್ಥೆಯ ಅಭಿವೃದ್ಧಿಯ ಕಡೆಗೆ ಸಾಗುತ್ತದೆ. ಅವರ ಆಕಾಂಕ್ಷೆಗಳು ಹಾಗೂ ಅಸಕ್ತಿಯು ಸಂಸ್ಥೆಯ ಬಂಡವಾಳದೊಂದಿಗೆ ವಿಲೀನಗೊಳ್ಳುತ್ತವೆ. ಹೀಗಾಗಿ ಈ, ಪದ್ಧತಿಯಲ್ಲಿ ಕೆಲಸಗಾರರ ಹಾಗೂ ಮಾಲೀಕರ ಮಧ್ಯ ಯಾವ ಅಂತರವೂ ಉಳಿಯುವದಿಲ್ಲ. ಇದರಿಂದಾಗಿ ಕೆಲಸಗಾರರ ಹಾಗೂ ಮಾಲೀಕರ ನಡುವಿನ ವೈಮನಸ್ಸು ಹಾಗೂ ಕಲಹಗಳು ಕೊನೆಗೊಂಡು, ಸಂಸ್ಥೆಯು ಸರ್ವತೋಮುಖ ಅಭಿವೃದ್ಧಿಯಾಗುವದರಲ್ಲಿ ಸಂಶಯವಿಲ್ಲ. ಕೆಲಸಗಾರರ ಆಸಕ್ತಿಯು ಸಂಸ್ಥೆಯ ಅಭಿವೃದ್ಧಿಯೊಂದಿಗೆ ವಿಲೀನಗೊಳ್ಳುವದರಿಂದ, ಅವರು ಅದರ ಅಭಿವೃದ್ಧಿಯ ಕಡೆಗೆ ಗಮನವನ್ನು ಹರಿಸುತ್ತಾರೆ; ಉತ್ಪಾದನೆಯನ್ನು ಹೆಚ್ಚಿಸುವದಕ್ಕಾಗಿ ಶ್ರಮವಹಿಸಿ ದುಡಿಯುತ್ತಾರೆ; ಕೆಲಸಗಾರರ ಕೆಲಸವನ್ನು ಬಿಡುವದು ಕೂಡ ಕಡಿಮೆಯಾಗುತ್ತದೆಯಲ್ಲದೇ ಕೆಲಸಗಾರರಲ್ಲಿಯ ಅಶಾಂತಿ ಹಾಗೂ ಅರಾಜಕತೆಗಳೂ ದೂರವಾಗುತ್ತವೆ. ಕೆಲಸಗಾರರು ಹೆಚ್ಚಿನ ಆಸಕ್ತಿ ವಹಿಸಿ ದುಡಿಯುವದರಿಂದ, ಅನೇಕ ಬಗೆಯ ಹಾನಿಗಳು ದೂರವಾಗುತ್ತವೆ. ಈ ರೀತಿಯಾಗಿ, ಸಹಪಾಲುಗಾರಿಕೆಯ ಪದ್ಧತಿಯು ಕೆಲಸಗಾರರ ಹಾಗೂ ಮಾಲೀಕರ ನಡುವಿನ ಅಂತರವನ್ನು ದೂರಮಾಡಲು ಸಹಾಯಕವಾಗಿದೆ.[೩] ==ಕನಿಷ್ಟ ವೇತನ ಪದ್ಧತಿ==[೪] ಅರ್ಥಶಾಸ್ತ್ರ ಹಾಗು ಆಯವ್ಯಯಶಾಸ್ತ್ರ|ಆಯವ್ಯಯಶಾಸ್ತ್ರದಲ್ಲಿ, ಕನಿಷ್ಠ ವೆಚ್ಚ ವೆಂದರೆ ಒಂದು ಘಟಕದಲ್ಲಿನ ಉತ್ಪಾದನಾ ಪರಿಕರಗಳಿಗೆ ಸಂಬಂಧಿಸಿದ್ದಾಗಿದೆ. ಸಿದ್ದಗೊಂಡ ನಂತರ ಆಯಾ ಪ್ರಮಾಣದಲ್ಲಿ ಉಂಟಾಗುವ ಒಟ್ಟಾರೆ ವೆಚ್ಚ|ಒಟ್ಟಾರೆ ವೆಚ್ಚದಲ್ಲಿನ ಒಟ್ಟು ಮೊತ್ತವೇ ಇದರ ಉತ್ಪಾದಕತೆಯ ವೆಚ್ಚಕ್ಕೆ ಸಮದರ್ಶಿಯಾಗಿರುತ್ತದೆ. ಅದೆಂದರೆ, ಉತ್ಪನ್ನದ ಮತ್ತೊಂದು ಉಪ ಉತ್ಪನ್ನದ ಸಿದ್ದತೆಗೆ ತಗಲುವ ವೆಚ್ಚ. ಗಣಿತಶಾಸ್ತ್ರಕ್ಕೆ ಅನುಸಾರವಾಗಿ, ಉತ್ಪನ್ನದ ಪ್ರಮಾಣಕ್ಕೆ ಸಂಬಂಧಿಸಿದಂತೆ ಕನಿಷ್ಠ ವೆಚ್ಚದ ಏರಿಳಿತವನ್ನು ಒಟ್ಟಾರೆ ವೆಚ್ಚ ವ್ಯತ್ಯಾಸದ(ಟೋಟಲ್ ಕಾಸ್ಟ್ ) ಮೊದಲ ಉತ್ಪನ್ನವೆಂದು ವಿವರಿಸಲಾಗಿದೆ. ಕನಿಷ್ಠ ವೆಚ್ಚವು ಉತ್ಪಾದನೆಯ ಪ್ರಮಾಣದೊಂದಿಗೆ ಬದಲಾಗುತ್ತದೆ ಎಂಬುದನ್ನು ಗಮನಿಸಬಹುದಾಗಿದೆ, ಜೊತೆಗೆ ಉತ್ಪಾದನೆಯ ಪ್ರತಿಯೊಂದು ಹಂತದಲ್ಲಿ, ಕನಿಷ್ಠ ವೆಚ್ಚವೆಂದರೆ ಉತ್ಪಾದನೆಗೊಂಡ ಮುಂದಿನ ಘಟಕದ ವೆಚ್ಚ . ಸಾಧಾರಣವಾಗಿ, ಉತ್ಪಾದನೆಯ ಪ್ರತಿ ಹಂತದಲ್ಲಿಯೂ ಕನಿಷ್ಠ ವೆಚ್ಚವು, ಮುಂದಿನ ಉಪವಸ್ತು ಉತ್ಪಾದನೆಗೆ ಅಗತ್ಯವಾದ ಹೆಚ್ಚುವರಿ ವೆಚ್ಚ ಒಳಗೊಂಡಿರುತ್ತದೆ. ಉತ್ಪಾದನೆಗೆ ಹೆಚ್ಚುವರಿ (ಬಂಡವಾಳ ಹೂಡಿಕೆಯಂತಹ)ಸಾಧನಗಳ ಅಗತ್ಯವಿದ್ದರೆ, ಉದಾಹರಣೆಗೆ, ಒಂದು ಹೊಸ ಕಾರ್ಖಾನೆಯ ಪ್ರಾರಂಭಿಸುವಲ್ಲಿ, ಬೇಕಾಗುವ ಹೆಚ್ಚುವರಿ ಸಾಧನಗಳ ಕನಿಷ್ಠ ವೆಚ್ಚವು ಹೊಸ ಕಾರ್ಖಾನೆಯ ನಿರ್ಮಾಣಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕವಾಗಿ, ಖರ್ಚು-ವೆಚ್ಚ ವಿಶ್ಲೇಷಣೆಯು ಸಣ್ಣ ಹಾಗು ದೀರ್ಘಕಾಲಿಕ ಸಂದರ್ಭಗಳಲ್ಲಿ ಪ್ರತ್ಯೇಕವಾಗಿರುತ್ತದೆ, ಜೊತೆಗೆ ಅತ್ಯಂತ ದೀರ್ಘಕಾಲಿಕ ಅವಧಿಯಲ್ಲಿ, ಎಲ್ಲ ವೆಚ್ಚಗಳು ಕನಿಷ್ಠವಾಗಿರುತ್ತದೆ. ಉತ್ಪಾದನೆಯ ಪ್ರತಿ ಮಟ್ಟ ಹಾಗು ಸಮಯವನ್ನು ಗಣನೆಗೆ ತೆಗೆದುಕೊಂಡಲ್ಲಿ, ಕನಿಷ್ಠ ವೆಚ್ಚಗಳು ಉತ್ಪಾದನೆಯ ಹಂತದಲ್ಲಿ ಬದಲಾವಣೆ ಹೊಂದುವ ಎಲ್ಲ ವೆಚ್ಚಗಳನ್ನು ಒಳ ಗೊಂಡಿರುತ್ತವೆ, ಜೊತೆಗೆ ಇತರ ವೆಚ್ಚಗಳನ್ನು ನಿಗದಿತ ಉತ್ಪಾದನಾ ದರಗಳೆಂದು ಪರಿಗಣಿಸಲಾಗುತ್ತದೆ. ಇತರ ಹಲವು ಅಂಶಗಳು ಕನಿಷ್ಠ ವೆಚ್ಚದ ಮೇಲೆ ಪರಿಣಾಮ ಉಂಟುಮಾಡುತ್ತವೆ; ಜೊತೆಗೆ ಅದರ ಅಧಿಕ ಉಪಯೋಗ ವಾಸ್ತವದಲ್ಲಿ ಸಮಸ್ಯೆಯನ್ನು ಸೃಷ್ಟಿಸಬಹುದು. ಇದರಲ್ಲಿ ಕೆಲವೊಂದನ್ನು ಮಾರುಕಟ್ಟೆಯ ವೈಫಲ್ಯವೆಂದು ಪರಿಗಣಿಸಲಾಗಿದೆ. ಇದರಲ್ಲಿ ಮಾಹಿತಿಯ ಸಮ ಹಂಚಿಕೆಯ ಕೊರತೆ, ಋಣಾತ್ಮಕ ಅಥವಾ ಗುಣಾತ್ಮಕ ಬಾಹ್ಯ ವಿಷಯಗಳ ಉಪಸ್ಥಿತಿ, ನಿರ್ವಹಣಾ ವೆಚ್ಚಗಳು, ಬೆಲೆ ತಾರತಮ್ಯ ಹಾಗು ಇತರ ಅಂಶಗಳನ್ನು ಒಳಗೊಂಡಿದೆ.

ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ಉಳಿತಾಯ[ಬದಲಾಯಿಸಿ]

ಪ್ರಮಾಣಾನುಗುಣ ಉಳಿತಾಯವೆಂಬ ಕಲ್ಪನೆಯು ದೀರ್ಘಾವಧಿಯಲ್ಲಿ ಬಳಕೆಯಾಗುತ್ತದೆ, ನಿಗದಿತ ಅವಧಿಯಲ್ಲಿ ಸಂಸ್ಥೆಯ ಎಲ್ಲ ಸಾಧನಗಳು ಬದಲಾಗಬಹುದು, ಈ ರೀತಿಯಾಗಿ ಯಾವುದೇ ಸ್ಥಿರ ಯಂತ್ರೋಪಕರಣ ಅಥವಾ ಸ್ಥಿರವಾದ ಬೆಲೆ ಇರುವುದಿಲ್ಲ. ಉತ್ಪಾದನೆಯು ಪ್ರಮಾಣಾ ನುಗುಣ ಉಳಿತಾಯ|ಪ್ರಮಾಣಾನುಗುಣ ಉಳಿತಾಯಕ್ಕೆ ಒಳಪಟ್ಟಿರುತ್ತದೆ. (ಅಥವಾ ಅಪ್ರಮಾಣಾನುಗುಣ ಉಳಿತಾಯ). ಪ್ರಮಾಣಾನುಗುಣ ಉಳಿತಾಯವು, ಉತ್ಪಾದನೆಯ ಒಂದು ಹೆಚ್ಚುವರಿ ಘಟಕವನ್ನು ಎಲ್ಲ ಹಿಂದಿನ ಘಟಕಗಳ ಸರಾಸರಿ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾದಂತಹ ಸಂದರ್ಭದಲ್ಲಿ ಅಸ್ತಿತ್ವದಲ್ಲಿರುತ್ತದೆಂದು ಹೇಳಲಾಗುತ್ತದೆ- ಅದೆಂದರೆ, ದೀರ್ಘಾವಧಿಯ ಕನಿಷ್ಠ ವೆಚ್ಚವು ದೀರ್ಘಾವಧಿಯ ಸರಾಸರಿ ವೆಚ್ಚಕ್ಕಿಂತ ಕಡಿಮೆಯಿದ್ದರೆ, ನಂತರದ ಅಂಶವು ಕಡಿಮೆಯಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸರಾಸರಿ ವೆಚ್ಚಕ್ಕಿಂತ ಅಧಿಕವಾದ ಕನಿಷ್ಠ ವೆಚ್ಚವು ಉತ್ಪಾದನೆಯ ಮಟ್ಟಗಳನ್ನು ಒಳಗೊಳ್ಳಬಹುದು, ಜೊತೆಗೆ ಸರಾಸರಿ ವೆಚ್ಚವು ಉತ್ಪಾನೆಯ ಒಂದು ಹೆಚ್ಚುವರಿ ಅಂಶವಾಗಿದೆ. ಈ ಸಾಮಾನ್ಯ ಪರಿಸ್ಥಿತಿಗೆ, ಸರಾಸರಿ ವೆಚ್ಚ ಹಾಗು ಕನಿಷ್ಠ ವೆಚ್ಚವು ಸಮನಾಗಿರುವ ಹಂತದಲ್ಲಿ ಕನಿಷ್ಠ ಸರಾಸರಿ ವೆಚ್ಚವು ಉಂಟಾಗುತ್ತದೆ. (ನಕ್ಷೆ ತಯಾರಿಸಿದಾಗ, ಕನಿಷ್ಠ ವೆಚ್ಚದ ರೇಖೆಯು ಸರಾಸರಿ ವೆಚ್ಚದ ರೇಖೆಯನ್ನು ಕೆಳಗಿನಿಂದ ಛೇದಿಸುತ್ತದೆ); ಸ್ಥಿರ ಬೆಲೆಗಳು ಸೊನ್ನೆಗಿಂತ ಅಧಿಕವಾಗಿದ್ದರೆ, ಕನಿಷ್ಠ ವೆಚ್ಚಕ್ಕೆ ಈ ಅಂಶವು ಸಮನಾಗಿ ಇರುವುದಿಲ್ಲ .

ಉಲ್ಲೇಖಗಳು[ಬದಲಾಯಿಸಿ]

  1. http://www.payscale.com/research/US/Job=Production_Worker/Hourly_Rate
  2. http://www.dol.gov/ebsa/publications/profitsharing.html
  3. http://accountlearning.blogspot.in/2010/05/wage-payment-system-its-importance-and.html
  4. http://www.paycheck.in/main/salary/minimumwages/karnataka