ಸಂದೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂದೇಶ್ ಭಾರತೀಯ ಉಪಖಂಡದಲ್ಲಿನ ಪೂರ್ವ ಭಾಗದಲ್ಲಿರುವ ಬಂಗಾಳ ಪ್ರದೇಶದಿಂದ ಹುಟ್ಟಿಕೊಂಡ ಒಂದು ಸಿಹಿ ತಿನಿಸಾಗಿದೆ. ಇದನ್ನು ಹಾಲು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ.[೧] ಕೆಲವು ಪಾಕವಿಧಾನಗಳು ಛೇನಾ ಅಥವಾ ಪನೀರ್‌ನ (ಇದನ್ನು ಹಾಲನ್ನು ಹೆಪ್ಪುಗಟ್ಟಿಸಿ ಅದರಿಂದ ಹಾಲೊಡಕನ್ನು ಬೇರೆಮಾಡಿ ತಯಾರಿಸಲಾಗುತ್ತದೆ) ಬಳಕೆಯನ್ನು ಬೇಡುತ್ತವೆ.[೨] ಢಾಕಾ ಪ್ರದೇಶದಲ್ಲಿನ ಕೆಲವು ಜನರು ಇದನ್ನು ಪ್ರಾಣಹರ (ಅಕ್ಷರಶಃ ಹೃದಯ ಕದಿಯುವಂಥದ್ದು) ಎಂದು ಕರೆಯುತ್ತಾರೆ. ಇದು ಸಂದೇಶ್‍ನ ಮೃದು ಬಗೆಯಾಗಿದ್ದು ಇದನ್ನು ಖೋವಾ ಹಾಗೂ ಮೊಸರಿನ ಸಾರದಿಂದ ತಯಾರಿಸಲಾಗುತ್ತದೆ.[೩]

ಸಂದೇಶ್‍ನ ಅತ್ಯಂತ ಸರಳ ಬಗೆಯೆಂದರೆ ಮಖಾ ಸಂದೇಶ್ (ಮಖಾ = ನಾದಿದ). ಛೇನಾವನ್ನು ಸಕ್ಕರೆಯೊಂದಿಗೆ ಕಡಿಮೆ ಉರಿಯಲ್ಲಿ ಚಿಮ್ಮಿಸಿ ಇದನ್ನು ತಯಾರಿಸಲಾಗುತ್ತದೆ. ಸಂದೇಶ್ ಮೂಲಭೂತವಾಗಿ ಸಿಹಿಯಾಗಿಸಿದ ಬಿಸಿ ಛೇನಾ ಆಗಿರುತ್ತದೆ. ಇದಕ್ಕೆ ಚೆಂಡಿನ ಆಕಾರ ನೀಡಲಾದಾಗ, ಇದನ್ನು ಕಾಂಚಾಗೊಲ್ಲ (ಕಾಂಚಾ = ಹಸಿ; ಗೊಲ್ಲ = ಚೆಂಡು) ಎಂದು ಕರೆಯಲಾಗುತ್ತದೆ. ಹೆಚ್ಚು ಸಂಕೀರ್ಣವಾದ ಮತ್ತು ವಿಸ್ತಾರವಾಗಿ ತಯಾರಿಸಲಾದ ಸಂದೇಶ್‍ಗೆ ಛೇನಾವನ್ನು ಒಣಗಿಸಿ ಒತ್ತಿ ಸೋಸಿ, ಹಣ್ಣುಗಳ ತಿರುಳಿನಿಂದ ರುಚಿಗೊಳಿಸಿ, ಕೆಲವೊಮ್ಮೆ ಬಣ್ಣಗಳನ್ನೂ ಸೇರಿಸಿ, ಅನೇಕ ವಿಭಿನ್ನ ಮಟ್ಟಗಳ ಸ್ನಿಗ್ಧತೆ ಬರುವವರೆಗೆ ಬೇಯಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. The Oxford Companion to Sugar and Sweets. Oxford University Press. 1 April 2015. pp. 592–. ISBN 978-0-19-931361-7.
  2. Nirmal Sinha (2007). "Chhana". In Y. H. Hui (ed.). Handbook of Food Products Manufacturing, 2 Volume Set. Vol. Volume 2. John Wiley & Sons. p. 643. ISBN 978-0-470-11354-7. {{cite book}}: |volume= has extra text (help)
  3. Ken Albala, ed. (2011). Food Cultures of the World Encyclopedia. Vol. Volume 1: Africa and the Middle East. Santa Barbara, Calif.: Greenwood. p. 34. ISBN 978-0-313-37627-6. {{cite book}}: |volume= has extra text (help)
"https://kn.wikipedia.org/w/index.php?title=ಸಂದೇಶ್&oldid=993887" ಇಂದ ಪಡೆಯಲ್ಪಟ್ಟಿದೆ