ವಿಷಯಕ್ಕೆ ಹೋಗು

ಸಂತ ಫ಼್ರಾನ್ಸಿಸ್ ಸಾವೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂತ ಫ್ರಾನ್ಸಿಸ್ ಸವೇರಿಯವರ ಜೀವ ಗಾತ್ರದ ಪ್ರತಿಮೆ

ಸಂತ ಫ್ರಾನ್ಸಿಸ್ ಸವೇರಿಯವರು ೧೫೦೬ ಎಪ್ರಿಲ್ ೭ರಂದು, ಸ್ಪೈನ್ ದೇಶದಲ್ಲಿ ಹುಟ್ಟಿದರು.ಇವರು ‍ ನವಾರೇ ಎಂಬ ರಾಜಮನೆತನದಲ್ಲಿ ಹುಟ್ಟಿದರು. ಸವೇರಿಯವರು, ಕ್ರಿಸ್ಟಿಯನ್ ಮಿಶನರಿಯಗಿದ್ದರು. ಸಂತ ಇಗ್ನಸಿಯವರು ಸ್ತಾಪಿಸಿದ ಯೇಸು ಸಭೇಯ ೭ ಸ್ತಾಪಕರಲ್ಲಿ ಇವರು ಒಬ್ಬರು.ಇವರು ಕ್ರಿಸ್ತ ಧರ್ಮವನ್ನು ಏಷ್ಯಾ ಖಂಡದ ಅನೇಕ ದೇಶಗಳಲ್ಲಿ, ಪ್ರಮುಕವಾಗಿ ಪೋರ್ತುಗೀಸರು ಆಳುತಿದ್ದ ಭಾಗಗಳಲ್ಲಿ ಸಾರುವುದರಲ್ಲಿ ಪ್ರಮುಖ ಪಾತ್ರವಹಿಸಿದರು. ಜಪಾನ್, ಬೊರ್ನಿಯೊ, ಮಲುಕು ದ್ವೀಪಗಳು, ಮತ್ತು ಇತರ ಪ್ರದೇಶಗಳಿಗೆ ಮೊದಲ ಕ್ರಿಶ್ಚಿಯನ್ ಮಿಷನರಿಯಗಿ ಹೊದರು. ತನ್ನ ಮಿಷನರಿ ಉಪದೇಶವನ್ನು ಚೀನ ದೇಶಕ್ಕೆ ವಿಸ್ತರಿಸಲು ಅವರು ಹಂಬಲಿಸಿದರು. ಇದಕ್ಕೆ ಸಿದ್ದತೆಯನ್ನು ಮಡಿದರು, ಆದರೆ ಅವರು ಸಂಶಿಯನ್ ದ್ವೀಪದಲ್ಲಿ ನಿಧನರಾದರು. ೧೬೨೪ ರಲ್ಲಿ ಅವರನ್ನು ಸ್ಯಾಂಟಿಯಾಗೊ ಮತ್ತು ನವಾರ್ರೆಯ ಪೋಷಕ ಮಾಡಲಾಯಿತು.ಅವರನ್ನು "Apostle of the Indies," ಮತ್ತು the "Apostle of Japan" ಎಂದು ಕರೆಯಲಗುತ್ತದೆ. ಧರ್ಮ ಸಭೆಯು ಕಂಡ ಶ್ರೇಷ್ಠ ಮಿಷನರಿಯಾಗಿದ್ದಾರೆ.

ಬಾಲ್ಯ

[ಬದಲಾಯಿಸಿ]

ಫ್ರಾನ್ಸಿಸ್ ಸವೇರಿಯವರು ನವಾರೆಯ, ಸವೇರಿ ಎಂಬ ಮನೆತನದಲ್ಲಿ ಹುಟ್ಟಿದರು.ಜುವಾನ್ ದೆ ಜಸ್ಸೊ ವೈ ಅತೊಂಡೊ, ಅವರ ತಂದೆಯವರು ರಾಜ ಜೋನ್ II, ಇವರಿಗೆ ಹಣಕಾಸು ಸಲಹೆಗರರರಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದರು. ಸವೇರಿಯವರು ೯ ವರ್ಷದವರಿರುವಗ, ಅವರ ತಂದೆ ತೀರಿ ಹೋದರು. ಡೊನಾ ಮಾರಿಯಾ ಡೆ ಅಜ್ಪಿಲ್ಸುಎಟ ಐ ಆಜ್ನರೆಜ್, ಅವರ ತಾಯಿ. ೧೫೧೬ರಲ್ಲಿ, ೧೫೨೫ರಲ್ಲಿ ಸವೇರಿಯವರು ಶಿಕ್ಷಣ ಪಡೆಯುದಕ್ಕೆ ಪ್ಯಾರೀಸಿಗೆ ಹೋಗುವ ವರೆಗೆ ಅವರು ಯುದ್ದದ ವತವರಣದಲ್ಲಿ ಬೆಳೆದರು. ಅಲ್ಲಿ ಅವರು,ಮುಂದಿನ ೧೧ ವರ್ಷಗಳನ್ನು ಕಳೆದರು. ಅವರ ವ್ಯಾಸಂಗದ ಸಮಯದಲ್ಲಿ ಅವರು ಉತ್ತಮ ಕ್ರೀಡಾಪಟು ಆಗಿದ್ದರು.

ಸಂತ ಫ಼್ರಾನ್ಸಿಸ್ ಸಾವೇರಿ ಸ್ಪೇಯ್ನ್[ಶಾಶ್ವತವಾಗಿ ಮಡಿದ ಕೊಂಡಿ] ದೇಶದ ನವಾರೆಯ ಸಾವೇರಿ ಎಂಬ ರಾಜಮನೆತನದಲ್ಲಿ ಜನಿಸಿದರು. ಚಿಕ್ಕಂದಿನಿಂದಲೇ ಯಾವುದೇ ಕಷ್ಟಗಳ ಅರಿವಿಲ್ಲದೆ, ಐಶಾರಾಮಿ ಜೀವನ ನಡೆಸುತ್ತಿದ್ದರು. ಒಮ್ಮೆ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವಾಗ ಆಕಸ್ಮಿಕವಾಗಿ ಅವರಿಗೆ ಸಂತ ಪೀಟರ್ ಫ಼ೇಬರ್ ಹಾಗು ಲೊಯೊಲಾದ ಸಂತ ಇಗ್ನಾಸಿಯವರ ಭೇಟಿಯಾಯಿತು. ಮೊದಮೊದಲಿಗೆ ಫ಼್ರಾನ್ಸಿಸ್ ಅವರಿಂದ ದೂರವಾಗಲು ಯತ್ನಿಸಿದರೂ, ಅವರ ಮಾತುಗಳು ಸಾವೇರಿಯ ಅಂತರಂಗದಲ್ಲಿ ಮನೆಮಾಡಿತ್ತು. "ಇಡೀ ವಿಶ್ವವನ್ನೇ ಜಯಿಸಿ, ನಿನ್ನ ಆತ್ಮವನ್ನು ಕಳೆದುಕೊಂಡರೆ ಏನು ಪ್ರಯೋಜನ ?" ಈ ಕಿಡಿ ಅವರನ್ನು ಆಧ್ಯಾತ್ಮ ಜೀವನದೆಡೆಗೆ ಕರೆದೊಯ್ಯುತ್ತದೆ.ಈ ರೀತಿ ಸಾವೇರಿ ದೇವರ ಹಾಗೂ ಪರರ ಸೇವೆಗೆ ಅಣಿಯಾಗಿ, ಸಂತ ಇಗ್ನಾಸಿಯವರು ಸ್ಥಾಪಿಸಿದ 'ಯೇಸು ಸಭೆ'ಗೆ ಸೇರುತ್ತಾರೆ.

ಸಂತ ಫ಼್ರಾನ್ಸಿಸ್ ಸಾವೇರಿ

ದೈವ ಕರೆ

[ಬದಲಾಯಿಸಿ]

೧೫೨೯ರಲ್ಲಿ ಪೀಟರ್ ಫೇಬರ್ ಅವರು ಸವೇರಿಯವರ ಜೊತೆ ವಾಸಿಯಾಗಿ ಬಂದರು. ಲೊಯೋಲದ ಇಗ್ನಾಸಿಯವರು, ಅವರೊಡನೆ ಸೇರಿದರು.ಇಗ್ನಾಸಿಯವರು ಪ್ಯಾರಿಸಿಗೆ ಬರುವಗ ಅವರಿಗೆ, ೩೮ ವರ್ಷ ವಯಸ್ಸಾಗಿತ್ತು. ಫೇಬರ್ ಅವರು ಮನಸ್ಸು ಬೇಗನೆ, ಇಗ್ನಾಸಿಯವರ ಮಾತಿನ ಕಡೆಗೆ ವಾಲಿತು. ಆದರೆ, ಸವೇರಿಯವರ ಮನಸ್ಸು ಇಹ-ಲೋಕದ ವೈಬವದ ಕಡೆಗೆ ನೆಟ್ಟಿತ್ತು. ಮೊದಮೊದಲಿಗೆ ಸವೇರಿಯವರು, ಇಗ್ನಾಸಿಯವರನ್ನು ಹಾಸ್ಯಗರರೆಂದು ಪರಿಗಣಿಸಿದರು. ಫೇಬರ್ ರಜದಲ್ಲಿ ಮನೆಗೆ ಹೋದಾಗ, ಇಗ್ನಾಸಿಯವರು ಮತ್ತು ಸವೇರಿಯವರು ಮಾತ್ರ ಕೊಠಡಿಯಲ್ಲಿದ್ದರು. ಈ ಸಮಯದಲ್ಲಿ ಇಗ್ನಾಸಿಯವರು, ಸವೇರಿಯವರ ಮನ ಪರಿವರ್ತಿಸಲು ಸಫಲರಾದರು. ೧೫೩೦ಯಲ್ಲಿ ಸವೇರಿಯವರು ತಮ್ಮ ಎಂ.ಎ ಪದವಿಯನ್ನು ಪೂರ್ತಿಗೊಳಿಸಿದ ನಂತರ, ತತ್ವ-ಶಾಸ್ತ್ರ ಕಲಿಸರಾರಂಬಿಸಿದರು. ಮುಂದೆ,ಆಗಸ್ಟ್ ೧೫೩೪ ೧೫ ರಂದು ಏಳು ವಿದ್ಯಾರ್ಥಿಗಳು, ಸೇಂಟ್ ಪಿಯೆರ್ ಡಿ ಮೊಮ್ಮತ್ರ್, ಇಲ್ಲಿ ಬಂದು ಸೇರುತ್ತಾರೆ. ಅವರ ಹೆಸರುಗಳು ಹೀಗಿವೆ: ಫ್ರಾನ್ಸಿಸ್, ಇಗ್ನಾಸಿ, ಆಲ್ಫೊನ್ಸೋ ಸಲ್ಮೆರೋನ್, ಡಿಯಾಗೋ ಲೈನೆಜ್, ಸ್ಪೆನಿನಿಂದ ನಿಕೋಲಸ್ ಬೊಬಾಡಿಲ್ಲಾ, ಪೀಟರ್ ಫೇಬರ್, ಮತ್ತು ಸೈಮನ್ ರೋಡ್ರಿಗಾಸ್. ಅವರೆಲ್ಲರು ಮೂರು ಪ್ರತಿಘ್ನೆಗಳನ್ನು ಮಾಡಿದರು. ಹಾಗೆಯೇ ಜೆರುಸಲೇಮಿಗೆ ಹೋಗಿ, ಅಲ್ಲಿರುವ ಅರಬ್ಬರನ್ನು, ಕ್ರೈಸ್ತರನ್ನಾಗಿ ಮಾಡಲು ನಿರ್ದರಿಸಿದರು. ಸವೇರಿಯವರು ೧೫೩೪ರಲ್ಲಿ ಅವರ ತತ್ವಶಾಸ್ತ್ರವನ್ನು ಪ್ರರಂಭಿಸಿದರು. ೧೫೩೭ ಜೂನ್ ೨೪ರಂದು ಅವರು ಯಾಜಕ ದೀಕ್ಷೆಯನ್ನು ಸ್ವೀಕರಿಸಿದರು. ೧೫೩೯ರಲ್ಲಿ ಇಗ್ನಾಸಿಯವರು ತನ್ನ ೭ ಮಂದಿ ಸಂಗಡಿಗರೊಡನೆ ಯೇಸು ಸಭೆಯನ್ನು ಪ್ರರಂಭಿಸಿದರು.

ಸಾವೇರಿಯವರಿಗೆ ದರ್ಶನ

ಮಿಶನರಿ ಕೆಲಸ

[ಬದಲಾಯಿಸಿ]

೧೫೪೦ರಲ್ಲಿ ಪೋರ್ಚುಗೀಸ್ ದೇಶದ ಅರಸ,ಜಗದ್ಗುರುವಿನಲ್ಲಿ, ಹೊಸದ್ದಾಗಿ ಸ್ತಾಪನೆಗೊಂಡ ಯೇಸು ಸಭೆಯ ಸದಸ್ಯರನ್ನು, ದೂರದ ದೇಶವಾದ ಭಾರತದಲ್ಲಿಯೂ ಕ್ರೈಸ್ತ ಧರ್ಮವನ್ನು ಗೊತ್ತು ಪಡಿಸಬೇಕೆಂದು ಕೇಳಿಕೊಳ್ಳುತ್ತಾರೆ. ಅರಸರ ನಿರಂತರ ಬೇಡಿಕೆಯ ನಂತರ ಜಗದ್ಗುರುಗಳು ಇದಕ್ಕೆ ಒಪ್ಪುತ್ತಾರೆ. ಇಗ್ನಾಸಿಯವರು, ನಿಕೋಲಸ್ ಬೋಬಡಿಲ್ಲ ಮತ್ತು ಸೈಮೊನ್ ರೊಡ್ರಿಗಸರನ್ನು ಭಾರತಕ್ಕೆ ಮಿಶನರಿಯಾಗಿ ನೇಮಿಸುತ್ತಾರೆ. ಸೈಮೊನ್ ರೊಡ್ರಿಗಸರನ್ನು ಪೋರ್ಚುಗಲ್ ದೇಶದ ಅರಸರು ತಮ್ಮಲ್ಲೆ ಉಳಿಸಿಕೊಳ್ಳುತ್ತಾರೆ. ಇನ್ನು, ನಿಕೋಲಸ್ ಬೋಬಡಿಲ್ಲ ಹಠಾತ್ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರಿಗೂ ಹೊಗಲೂ ಆಗಲಿಲ್ಲ.ಈ ಸಮಯದಲ್ಲಿ, ಇಗ್ನಾಸಿಯವರು, ಸವೇರಿಯವರಲ್ಲಿ ಕೇಳಿದಾಗ ಅವರು ಹೊರಡಲು ಸಿದ್ದರಗುತ್ತಾರೆ. ಅವರಿಗೆ ಹೊರಡಲು ಸಿಕ್ಕ ಸಮಯ ಬರೀ ಅರ್ಧ ದಿನ. ಹೀಗೆ, ಅವರು ಯೇಸು ಸಭೆಯ ಮೊದಲ ಮಿಶನರಿಯಗುತ್ತಾರೆ. ಅವರು ೧೫೪೦ ಮಾರ್ಚ್ ೧೫ರಂದು ರೋಮ್ ದೇಶ ಬಿಡುತ್ತಾರೆ.

ಸಂತ ಫ಼್ರಾನ್ಸಿಸ್ ‍ಸಾವೇರಿ - ಜೆಸು- ಇಟಲಿ 2015

೧೫೪೨ ಮೇ ೬ರಂದು ಸವೇರಿಯವರು ಗೋವ (ಇದು ಭಾರತದಲ್ಲಿ ಪೋರ್ಚುಗೀಸರು ಆಳುತ್ತಿದ್ದ ಪ್ರಮುಖ ಪಟ್ಟಣವಗಿತ್ತು) ತಲುಪುತ್ತಾರೆ. ರಾಜ ಜಾನ್ III ಇವರ ಆದೇಶದ ಪ್ರಕಾರ, ಪೋರ್ಚುಗೀಸ್ ನಿವಾಸಿಯಾರಲ್ಲಿ ಕ್ರಿಶ್ಚಿಯನ್ ಧರ್ಮ ಪುನಃಸ್ಥಾಪಿಸುವುದು ಸವೇರಿಯವರ ಪ್ರಾಥಮಿಕ ಕೆಲಸವಾಗಿತ್ತು. ಗೋವಾದಲ್ಲಿ ಚರ್ಚುಗಳು, ಪಾದ್ರಿಗಳು, ಮತ್ತು ಧರ್ಮಾದ್ಯಕ್ಶರಿದ್ದರು, ಆದರೆ ಗೋವದ ಆಚೆಗೆ ಯಾರು ಬೋದಕರು ಅಥವಾ ಗುರುಗಳಿರಲ್ಲಿಲ್ಲ. ಸವೇರಿಯವರು, ಗೋವದಲ್ಲಿದ್ದ ಪೋರ್ಚುಗೀಸರಿಗೆ ಬೋಧಿಸಲು ಪ್ರರಂಭಿಸಿದರು. ಅವರು ಮೊದಲ ೫ ತಿಂಗಳುಗಳಲ್ಲಿ ಕಲಿಸುವುದು ಮತ್ತು ಅನಾರೋಗ್ಯಸ್ತರನ್ನು ಭೇಟಿ ಮಾಡುವುದರಲ್ಲಿ ತಮ್ಮ ವೇಳೆಯನ್ನು ಕಳೆದರು.ಮುಂದೆ ಇದನ್ನು ವಿಸ್ತರಿಸಿದರು.ಇನ್ನು, ಅವರು ಸಂತ ಇಗ್ನಾಸಿಯವರಿಗೆ ಪತ್ರ ಬರೆಯುವುದರ ಮೂಲಕ ದೂರದ, ಭಾರತದಲ್ಲಿದ್ದರು, ಅವರೊಡನೆ ಸಂಭಂದ ಇಟ್ಟರು.[] [] ಅವರು ತಮಿಳ್ನಾಡಿನಿಂದ ಶ್ರೀಲಂಕವರೆಗಿದ್ದ "ಪಾರವ" ಜನಾಂಗದ ಬಗ್ಗೆ ಬಹಳ ಆಸಕ್ತಿ ತೋರಿದರು. 'ಪಾರವ' ಜನಾಂಗದವರು, ಸವೇರಿಯವರು ಬರುವ ೧೦ ವಷಗಳ ಹಿಂದೆಯೇ ಕ್ರೈಸ್ತರಾಗಿದ್ದರು. ಆದರೆ, ಅವರ ಬಗ್ಗೆ ಯಾರು ಹೆಚ್ಚಿನ ಆಸಕ್ತಿ ತೋರಲಿಲ್ಲ. ಗೋವದಲ್ಲಿದ್ದ ಕೆಲವು ಯಾಜಕರ ಜೊತೆಗೆ, ಸವೇರಿಯವರು 'ಪಾರವ' ಜನರಿಗೆ ಕ್ರೈಸ್ತ ಧರ್ಮದ ತತ್ವಗಳನ್ನು ಭೋದಿಸಿದರು.ಮುಂದೆ ಸವೇರಿಯವರಿಗೆ, ಸಂತ ಪೌಲರ ಕಾಲೇಜು ನಡೆಸುವ ಆಹ್ವಾನವು ಬಂದಿತು. ಮುಂದಿನ ೩ ವರ್ಷಗಳಲ್ಲಿ ಅವರು ೪೦ ಧರ್ಮ ಕೇಂದ್ರಗಳನ್ನು ಸ್ತಾಪಿಸಿದರು ಹಾಗೂ ಅನೇಕರನ್ನು ಕ್ರೈಸ್ತ ಧರ್ಮಕ್ಕೆ ಮತಂತರಿಸಲು ಪ್ರಯತ್ನಿಸಿದರು. ಆದರೆ, ಅವರ ಪ್ರಯತ್ನಕ್ಕೆ ಪೋರ್ಚುಗೀಸ್ ಸೈನಿಕರು, ಕೆಟ್ಟ ನಡತೆಯಿಂದ, ಮುಳುವಾದರು.

ಜಪಾನ್ ಮತ್ತು ಚೀನಾ

[ಬದಲಾಯಿಸಿ]

ಮಲಕ್ಕಾಯೆಂಬಲ್ಲಿ, ಡಿಸೆಂಬರ್ ೧೫೪೭ರಲ್ಲಿ, ಸವೇರಿಯವರು ಅಂಜಿರೊ ಎಂಬ ಜಪಾನಿನ ವ್ಯಕ್ತಿಯನ್ನು ಭೇಟಿಯಾದರು. ಅಂಜಿರೊರವರು ಹಿಂದೆ, ಅಂದರೆ, ೧೫೪೫ರಲ್ಲಿ ಸವೇರಿಯವರ ಬಗ್ಗೆ ಕೇಳಿ, ಅವರನ್ನು ಭೇಟಿಯಗಲು ಮಲಕ್ಕಾದಿಂದ ಕಗೋಶಿಮಕ್ಕೆ ಪ್ರಯಾಣಿಸಿದ್ದರು. ಅಂಜಿರೊರವರು ಒಬ್ಬ ಕೊಲೆಗಾರರಾಗಿದ್ದರು.ಸವೇರಿಯವರನ್ನು ಬೇಟಿಯಾದ ಬಳಿಕ ಪರಿವರ್ತನೆಗೊಳ್ಳುತ್ತಾರೆ. ಮುಂದೆ ಜಪಾನ್ ದೇಶದ ಮೊದಲ ಕ್ರಿಸ್ತಿಯನ್ ಆಗುತ್ತಾರೆ, 'ಪಾಲೊ ಡಿ ಸಾಂಟಾ ಫೆ' ಹೆಸರನ್ನು ಪಡೆದುಕೊಳ್ಳುತ್ತಾರೆ.ಇವರನ್ನೆ,ಸವೇರಿಯವರು ಮಧ್ಯವರ್ತಿಯನ್ನಾಗಿ ಉಪಯೋಗಿಸುತ್ತಾರೆ. ಜನವರಿ ೧೫೪೮ರಲ್ಲಿ, ಸವೇರಿಯವರು ಗೋವಕ್ಕೆ ಮರಳಿ,ಗೋವ ಮಿಶನಿನ ಮುಖ್ಯಸ್ತರಾಗುತ್ತಾರೆ.೧೫ ತಿಂಗಳ ಕಾಲ ಗೋವದಲ್ಲಿ ಉಳಿಯುತ್ತಾರೆ. ಏಪ್ರಿಲ್ ೧೫೪೯, ೧೫ ರಂದು ಗೋವಾ ಬಿಟ್ಟು ಮಲಕ್ಕಾಕ್ಕೆ ಪ್ರಯಣಿಸುತ್ತಾರೆ.ಅವರು ತಾನು, "ಅಪೋಸ್ಟೋಲಿಕ್ ಪೋಪ್" ಗುರುವಿನ ನಿಯೋಗಿಯೆಂದು ತನ್ನನ್ನು ಪರಿಚಯಿಸುವ ಉದ್ದೇಶದಿಂಲೇ, "ಕಿಂಗ್ ಆಫ್ ಜಪಾನ್" ಇವರಿಗೆ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ. ಫ್ರಾನ್ಸಿಸ್ ಕ್ಸೇವಿಯರ್, ಅಂಜಿರೊ ಮತ್ತು ಮೂರು ಇತರ ಜೆಸ್ವಿಟರು, ಜುಲೈ೨೭ ೧೫೪೯ ಜಪಾನ್ ತಲುಪುತ್ತಾರೆ, ಆದರೆ ಆಗಸ್ಟ್ ೧೫ರವರೆಗೆ ಆವರ ಹಡಗು ಯಾವುದೇ ಬಂದರಿನಲ್ಲಿ ಪ್ರವೇಶಿಸಲು ಅನುಮತಿ ಲಭಿಸಲಿಲ್ಲ. ಕೊನೆಗೆ, ಸತ್ಸುಮಾ ಪ್ರಾಂತ್ಯದ ಕ್ಯೂಷು ದ್ವೀಪದಲ್ಲಿ, ಅವರನ್ನು ಪೋರ್ಚುಗೀಸ್ ರಾಜನ ಪ್ರತಿನಿಧಿಯಾಗಿ ಸ್ವಾಗತ ಲಭಿಸಿತು. ಆದರೆ ಒಂದು ವರ್ಷದ ನಂತರ ಕ್ರೈಸ್ತ ಧರ್ಮಕ್ಕೆ ಮತಂತರಿಸುವುದು ನಿಶೇದಿಸಲಾಯಿತು. ಫ್ರಾನ್ಸಿಸ್, ಜಪಾನಿಗೆ ಹೋದ ಮೊದಲ ಕ್ರೈಸ್ತ ಮಿಶನರಿ. ಅವರು, ಅವರೊಡನೆ ಮಡೊನ್ನಾ ಮತ್ತು ಬಾಲ ಯೇಸುವಿನ ಚಿತ್ರಗಳನ್ನು ತೆಗೆದುಕೊಂಡು ಹೋದರು.ಈ ಚಿತ್ರಗಳು ಜಪಾನಿನ ಜನರಿಗೆ ಕ್ರೈಸ್ತ ಧರ್ಮ ಭೋಧಿಸುವುದಕ್ಕೆ ಉಪಯೋಗ ಮಾಡಿದರು. [] ಏಪ್ರಿಲ್ ೧೭ರಂದು ಸವೇರಿ ಮತ್ತು ದಿಯಗೋ ಪೆರೇರಾ ಚೀನಾಕ್ಕೆ ಪ್ರಯಾಣಿಸಿದರು. ಅವರು, "ತಮ್ಮನ್ನು ಅಪೋಸ್ಟೋಲಿಕ್ ಪೋಪ್" ಗುರುವಿನ ನಿಯೋಗಿಯನ್ನಾಗಿ ಮತ್ತು ದಿಯಗೋ ಪೆರೇರಾರನ್ನು ಪೋರ್ಚುಗಲ್ ರಾಜ ರಾಯಭಾರಿಯಾಗಿ ಪರಿಚಯಿಸಲು ಯೋಜಿಸಿದರು. ಆದರೆ,ಅವರು "ಅಪೋಸ್ಟೋಲಿಕ್ ಪೋಪ್" ಗುರುವಿನ ನಿಯೋಗಿ ಅವರ ಪ್ರಶಂಸಾಪತ್ರವನ್ನು ಮಲಾಕ್ಕದಲ್ಲೆ ಮರೆತು ಬಂದಿದ್ದರು. ಮಲಾಕಾದಲ್ಲಿ ಬಂದರಿನಲ್ಲಿ, ಅವರು ಕ್ಯಾಪಿಟಾವೊ ಅಲ್ವಾರೊ ಡೆ ಅಟೈಡೆ ಡ ಗಾಮಾರನ್ನು ಎದುರಿಸಿದರು. ಅವರು, ಈಗ ಬಂದರಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಕ್ಯಾಪಿಟಾವೊರವರು, ಸವೇರಿಯವರ ನನ್ಸಿಯೋ ಎಂಬ ಶೀರ್ಷಿಕೆಯನ್ನು ಗುರುತಿಸಲು ನಿರಾಕರಿಸಿದರು, ಪೆರೇರಾ ಅವರ ರಾಯಭಾರಿಯ ಪಟ್ಟದಿಂದ ರಾಜೀನಾಮೆ ನೀಡಲು ಆಗ್ರಹಿಸಿದರು ಮತ್ತು ಚೀನಾದ ಚಕ್ರವರ್ತಿಗೆ ಮಲಕಾದಲ್ಲಿ ಬಿಡಬೇಕಾದ ಉಡುಗೊರೆಗಳನ್ನು ಕೋರಿದರು.

ಸಾವೇರಿಯ ಜೀವನದ ಅತೀ ಮಹತ್ತರ ಆಸೆ ಎಂದರೆ ಚೀನಾದಲ್ಲಿ ಸುವಾರ್ತೆ ಸಾರುವುದಾಗಿತ್ತು. ಆದರೆ ೧೫೫೨ರ ಆಗಸ್ಟ್ ತಿಂಗಳಲ್ಲಿ ಸಾಂಚಿಯಾಂಗ್ ಎಂಬ ದ್ವೀಪದಲ್ಲಿದ್ದಾಗ ಒಂದು ವಿಶೇಷ ರೋಗದಿಂದ ನರಳಿದರು. ಡಿಸೆಂಬರ್ ೩, ೧೫೫೨ ರಂದು ಅದೇ ದ್ವೀಪದಲ್ಲಿ ಕೊನೆಯುಸಿರೆಳೆದರು. ಅವರ ಸಂಗಡಿಗರು ಅಲ್ಲಿಂದ ಹೊರಡಲೇಬೇಕಾದ್ದರಿಂದ ಬೇರೆ ಉಪಾಯವಿಲ್ಲದೆ ಅವರ ಮೃತ ದೇಹವನ್ನು ಅಲ್ಲೇ ಹೂತು ಹೋದರು. ಕೆಲ ಸಮಯದ ಬಳಿಕ ವಾಪಸ್ಸು ಅವರ ಮೂಳೆಗಳನ್ನು ತೆಗೆಯಲು ಬಂದಾಗ ಎಲ್ಲರೂ ದಿಗ್ಬ್ರಾಂತರಾಗುವ ಸನ್ನಿವೇಶ ಕಾದು ಕುಳಿತಿತ್ತು. ಅವರ ದೇಹ ಕೊಳೆಯದೆ ಹಾಗೆಯೇ ಉಳಿದಿತ್ತು, ಈಗಲೂ ಗೋವಾದಲ್ಲಿ ಇಡಲಾಗಿದೆ.

ಸಾಂತಾ ಕ್ರೂಜ್ ಹಡಗು, ಚೀನಾ ಮುಖ್ಯ ಭೂಭಾಗದ ದಕ್ಷಿಣ ಕರಾವಳಿಯಿಂದ ೧೪ ಕಿ.ಮೀ ದೂರದ ಷಾಂಚೂನ್ ಎಂಬ ಚೀನೀ ದ್ವೀಪವನ್ನು ತಲುಪಿತು. ಈ ಸಮಯದಲ್ಲಿ, ಅವರು ಜೆಸ್ವಿಟ್ ವಿದ್ಯಾರ್ಥಿ, ಅಲ್ವೊರೊ ಫೆರೀರಾ, ಆಂಟೋನಿಯೊ ಎಂಬ ಚೀನೀ ಮನುಷ್ಯ ಮತ್ತು ಕ್ರಿಸ್ಟೋಫರ್ ಎಂಬ ಮಲಬಾರ್ ಸೇವಕ ಮಾತ್ರ ಇದ್ದರು. ನವೆಂಬರ್ ಮಧ್ಯದಲ್ಲಿ ಅವರು ಒಂದು ಪತ್ರವನ್ನು ಕಳುಹಿಸಿದರು, ಒಬ್ಬ ಮನುಷ್ಯನು ದೊಡ್ಡ ಪ್ರಮಾಣದ ಹಣಕ್ಕೆ ವಿನಿಮಯವಾಗಿ ಮುಖ್ಯ ಭೂಮಿಗೆ ಕರೆದೊಯ್ಯಲು ಒಪ್ಪಿರುತ್ತಾನೆಂದು. ಅಲ್ವಾರೋ ಫೆರೀರಾ ಅವರನ್ನು ಮರಳಿ ಕಳುಹಿಸಿದ ನಂತರ, ಅವರು ಆಂಟೋನಿಯೊದಿಂದ ಮಾತ್ರ ಉಳಿಯುತ್ತಿದ್ದರು. ಅವರು ಚೀನಾ ಪ್ರಧಾನ ಭೂಭಾಗಕ್ಕೆ ಕರೆದೊಯ್ಯುವ ದೋಣಿಗಾಗಿ ಕಾಯುತ್ತಿದ್ದಾಗ ಅವರು ೧೫೫೨ ರ ಡಿಸೆಂಬರ್ ೩ ರಂದು ಜ್ವರದಿಂದ ಚೀನಾದ ತೈಷಾನ್ನ ಶಾಂಗ್ಚುವಾನ್ನಲ್ಲಿ ನಿಧನರಾದರು.

ಸಮಾಧಿಗಳು ಮತ್ತು ಅವಶೇಷಗಳು

[ಬದಲಾಯಿಸಿ]

ಅವರನ್ನು ಮೊದಲ ಬಾರಿಗೆ ಷಾಂಚುವಾನ್ ದ್ವೀಪ, ತೈಷಾನ್, ಗುವಾಂಗ್ಡಾಂಗ್ ಸಮುದ್ರತೀರದಲ್ಲಿ ಸಮಾಧಿ ಮಾಡಲಾಯಿತು.೧೫೫೩ ರ ಫೆಬ್ರವರಿ ೧೫ ರಂದು ಅವರ ಅವಶೇಷದ ದೇಹವನ್ನು ದ್ವೀಪದಿಂದ ತೆಗೆದುಕೊಳ್ಳಲಾಯಿತು ಮತ್ತು ಪೋರ್ಚುಗೀಸ್ ಮಲಾಕಾದಲ್ಲಿ, ಸೇಂಟ್ ಪಾಲ್ಸ್ ಚರ್ಚಿನಲ್ಲಿ ತಾತ್ಕಾಲಿಕವಾಗಿ ಸಮಾಧಿ ಮಾಡಲಾಯಿತು.೨೨ ಮಾರ್ಚ್ ೧೫೫೩ ರಂದು ಚರ್ಚ್ನಲ್ಲಿ ತೆರೆದ ಸಮಾಧಿ ಈಗ ಸವೇರಿಯವರ ಸಮಾಧಿಯ ಸ್ಥಳವಾಗಿದೆ. ೧೫ ಏಪ್ರಿಲ್ ೧೫೫೩ರಲ್ಲಿ, ಗೋವಾದಿಂದ ಪೆರೆರಾ ಮರಳಿ ಬಂದಾಗ ಶವವನ್ನು ತೆಗೆದುಹಾಕಲಾಯಿತು ಮತ್ತು ಅದನ್ನು ತನ್ನ ಮನೆಗೆ ವರ್ಗಾಯಿಸಲಾಯಿತು. ೧೧ ಡಿಸೆಂಬರ್ ೧೫೫೩ ರಂದು, ಸವೇರಿಯವರ ದೇಹವನ್ನು ಗೋವಾಗೆ ಸಾಗಿಸಲಾಯಿತು. ದೇಹವು ಈಗ ಗೋವಾದಲ್ಲಿನ ಬೋಮ್ ಜೇಸು ಬೆಸಿಲಿಕಾದಲ್ಲಿದ್ದು, ಅಲ್ಲಿ ೧೬೩೭ ರ ಡಿಸೆಂಬರ್ ೨ ರಂದು ಬೆಳ್ಳಿಯ ಕ್ಯಾಸ್ಕೆಟ್ನಲ್ಲಿ ಸುತ್ತುವರಿದ ಗಾಜಿನ ಧಾರಕದಲ್ಲಿ ಇರಿಸಲಾಗಿತ್ತು.

ಸ್ಮರಣೆ ಮತ್ತು ಗೌರವ

[ಬದಲಾಯಿಸಿ]

ಫ್ರಾನ್ಸಿಸ್ ಸವೇರಿಯವರನ್ನು ೨೫ ಅಕ್ಟೋಬರ್ ೧೬೧೯ ರಂದು ಪೋಪ್ ಪೌಲ್ ಅವರಿಂದ ಪುನೀತ ಪದವಿ ಮತ್ತು ೧೨ಮಾರ್ಚ್ ೧೬೨೨ ರಂದು ಇಗ್ನೇಷಿಯಸ್ ಲೊಯೋಲಾರವರೊಡನೆ ಪೋಪ್ ಗ್ರೆಗರಿ XV ಯಿಂದ ಸಂತರೆಂದು ಘೋಷಿಸಲ್ಪಟ್ಟರು. ಪೋಪ್ ಪಿಯುಸ್ XIರವರು, ಅವರನ್ನು "ಕ್ಯಾಥೋಲಿಕ್ ಮಿಷನ್ಸ್ ಪೋಷಕ" ಎಂದು ಘೋಷಿಸಿದರು. ಅವರ ಹಬ್ಬದ ದಿನವು ೩ ಡಿಸೆಂಬರ್.

ಸಾಧನೆ ಹಾಗು ಪ್ರಚಾರ

[ಬದಲಾಯಿಸಿ]

೧೫೪೦ ರಲ್ಲಿ ಪೋರ್ಚುಗಲ್ ರಾಜ ಜಾನ್ ಪೆದ್ರೋ ಮಸ್ಕರೇನ್ಹಸ್ಮೌ ಜೆಸ್ಯೂಟ್ ಪ್ರಚಾರಕರನ್ನುಭಾರತಕ್ಕೆ ಆಹ್ವಾನಿಸಿದರು. ಅವರಿಗೆ ಕ್ರೈಸ್ತ ಮೌಲ್ಯಗಳ ಮೇಲೆ ತುಂಬಾ ನಂಬಿಕೆ ಇದ್ದ ಕಾರಣ, ಅವರ ಕೆಲಸಗಳು ಭಾರತದಲ್ಲೂ ನಡೆಯಬೆಕು ಎಂದು ಆಶಿಸಿದರು. ಪದ್ರಾದೊ ಒಪ್ಪಂದದಡಿ ಹಾಗು ಪೋಪ್ ಜಾನ್ III ರಲ್ಲಿ ಸತತ ಮನವಿ ಮಾಡಿದ ನಂತರ ಯೇಸು ಸಭೆ ಹೊಸದಾಗಿ ಭಾರತಕ್ಕೆ ಬಂದಿತು. ಇಲ್ಲಿ ಸೇವೆ ಸಲ್ಲಿಸಲು ಉನ್ನತ ಶಿಕ್ಶಣವನ್ನು ಮುಗಿಸಿದ ಜೆಸ್ವಿಟರನ್ನು ಆಹ್ವಾನಿಸಲಾಯಿತು. ಸಂತ ಇಗ್ನಾಸಿ ಲೊಯೋಲಾ ರವರು ನಿಖೋಲಸ್ ಬೊಬದಿಲ್ಲ ಹಾಗು ಸೈಮನ್ ರೊಡ್ರಿಗಸ್ ರವರನ್ನು ಭಾರತಕ್ಕೆ ಕಳುಹಿಸುವುದಾಗಿ ನಿರ್ಧರಿಸಿದರು. ಆದರೆ ಕೊನೆಗೆ ಬೊಬದಿಲ್ಲರವರು ಖಾಯಿಲೆಗೆ ಒಳಗಾದರಿಂದ ಸಂತ ಫ಼್ರಾನ್ಸಿಸ್ ರವರನ್ನು ಭಾರತಕ್ಕೆ ಕಳುಹಿಸುವುದಾಗಿ ಇಗ್ನಾಸಿಯವರು ನಿರ್ಧರಿಸಿದರು.

ಹೀಗೆ ೧೫೪೦ ರಲ್ಲಿ ಪೋರ್ಚುಗೀಸ್ ಅರಸನ ಬೇಡಿಕೆಯ ಮೇರೆಗೆ, ಸಂತ ಇಗ್ನಾಸಿಯ ಮಾತಿಗೆ ವಿಧೇಯನಾಗಿ, ಕಡಲಾಚೆಗಿನ ಪೂರ್ವ ಇಂಡೀಸ್ ದೇಶಗಳತ್ತ ಸಮುದ್ರ ಮಾರ್ಗದ ಮೂಲಕ ಸಾವೇರಿ ಭಾರತಕ್ಕೆ ಬಂದರು. ೧೩ ತಿಂಗಳುಗಳ ಕಠಿಣ, ಅಪಾಯಕರ ಹಾಗು ಸಾಹಸಮಯ ಸಮುದ್ರಯಾನ ನಡೆಸಿ ಗೋವಾಕ್ಕೆ ತಲುಪಿದರು.ಅಲ್ಲಿ ಯೇಸುಕ್ರಿಸ್ತನ ಜೀವನ ಮೌಲ್ಯಗಳನ್ನು ಬೋಧಿಸಿ, ಜನರ ಮನ ಗೆದ್ದರು. ಹೀಗೆ ಅನೇಕರು ಕ್ರಿಸ್ತನ ಅನುಯಾಯಿಗಳಾಗಿ ಮತಾಂತರಗೊಂಡರು. ಆ ಸಮಯದಲ್ಲಿ ಅನೇಕ ವಿರೋಧಗಳನ್ನೂ ಅವರು ಎದುರಿಸಬೇಕಾಯಿತು. ಅವರು ಭಾರತಕ್ಕೆ ಬರುವಾಗ ಕೈಯಲ್ಲಿ ಕೇವಲ ಒಂದು ರೂಲ್ ಬುಕ್, ಶಿಲುಭೆ ಹಾಗು ಭೋಧನ ಪುಸ್ತಕವನ್ನು ತಂದಿದ್ದರು. ಫ್ರಾನ್ಸಿಸ್ ಕ್ಸೇವಿಯರ್ ಮುಖ್ಯವಾಗಿ ಏಶಿಯಾದ ನಾಲ್ಕು ಕೇಂದ್ರಗಳಲ್ಲಿಅವರ ಸೇವಾಕರ್ಯವನ್ನು ಮಾಡಿದರು;ಮಲಾಕ್ಕ, ಅಮ್ಬೊಇನ ಮತ್ತು ತೆರ್ನೈತ್, ಜಪಾನ್ ಹಾಗು ಚೈನಾ. ಅವರ ಪ್ರತಿಯೊಂದು ಕೆಲಸವು ಅವರಲ್ಲಿ ಸಧಾ ದೇವರ ಪ್ರೀತಿಯನ್ನು ಹೆಚ್ಚಿಸುತಿತ್ತು.

ಸಂತ ಪದವಿ

[ಬದಲಾಯಿಸಿ]

ಫ್ರಾನ್ಸಿಸ್ ಕ್ಸೇವಿಯರ್ ರವರನ್ನು ೨೫ ಅಕ್ಟೋಬರ್ ೧೬೧೯ ರಂದು ಪಾಲ್ ೫ ರವರು ಬಿಯಾಟಿಫ಼ೈ ಮಾಡಿದರು ಹಾಗು ಗ್ರೆಗರಿ ೧೫ ರವರು ೧೨ ಮಾರ್ಚ್, ೧೬೨೨ ರಂದು ಅವರನ್ನು ಒಬ್ಬ ಸಂತ ಎಂದು ಘೊಶಿಸಿದರು.ಡಿಸೆಂಬರ್ ೩ ಸಂತ ಫ಼್ರಾನ್ಸಿಸ್ ‍ಸಾವೇರಿಯವರ ಹಬ್ಬದ ದಿನವಾಗಿದೆ. ಅವರ ಮೂಲಕ ಅನೇಕ ಪವಾಡಗಳು ನಡೆದಿವೆ, ಈಗಲೂ ನಡೆಯತ್ತಿವೆ.

ಉಲ್ಲೇಖ

[ಬದಲಾಯಿಸಿ]
  1. https://archive.org/details/lifelettersofstf01coleuoft
  2. https://books.google.co.in/books?id=gbJSAAAAcAAJ&printsec=frontcover&dq=bibliogroup:"The+Life+and+Letters+of+St.+Francis+Xavier"&hl=es&sa=X&ei=EZ5YVOjKJcGa7gaKhYGYCA&
  3. https://books.google.co.in/books/about/Gesuiti.html?id=xLfQAAAACAAJ&redir_esc=y