ಸಂಜೀವ್ ಮುಖರ್ಜಿ
ಸಂಜೀವ್ ಮುಖರ್ಜಿಯವರು ಭಾರತದ ಪ್ರಮುಖ ಕ್ರೀಡಾ ಪತ್ರಕರ್ತರು. ಇವರು ಡಿಡಿ ಸ್ಪೋರ್ಟ್ಸ್ ಮತ್ತು ಸಿಎನ್ಎನ್-ನ್ಯೂಸ್೧೮ ಚಾನೆಲ್‌ನ ಕ್ರಿಕೆಟ್ ವಿಭಾಗದ ಸಂಪಾದಕರಾಗಿದ್ದಾರೆ. [೧] ಇವರು ತನಿಖಾ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಪತ್ರಿಕೋದ್ಯಮದಲ್ಲಿ ಒಂದು ದಶಕದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ.
ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರ ಪದಚ್ಯುತಿಗೆ ಸಂಬಂಧಿಸಿದ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದವನ್ನು ವರದಿ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿನಿಧಿಸುವ ಸಂಸತ್ ಸದಸ್ಯ ಶಶಿ ತರೂರ್ ರವರ ರಾಜೀನಾಮೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ವಿವಾದದ ಕುರಿತು ಅವರು ೨೦೧೦ ರಲ್ಲಿ ಸರಣಿ ವರದಿಗಳನ್ನು ಪ್ರಕಟ ಮಾಡಿದರು. [೨]
ಇವರು ದೂರದರ್ಶನದಲ್ಲಿ 'ಕಿಂಗ್ಸ್ ಆಫ್ ಕ್ರಿಕೆಟ್' ನಂತಹ ಜನಪ್ರಿಯ ಕ್ರಿಕೆಟ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ ಮತ್ತು ಬ್ಯುಸಿನೆಸ್ ಸ್ಟ್ಯಾಂಡರ್ಡ್ ಮತ್ತು ಮಿಂಟ್ ನಂತಹ ನಿಯತಕಾಲಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುತ್ತಾರೆ.
ಮುಖರ್ಜಿಯವರು ಮೂಲತಃ ಕೋಲ್ಕತ್ತಾ ದವರು ಮತ್ತು ೨೦೦೦ ರ ದಶಕದ ಆರಂಭದಲ್ಲಿ ರೆಡ್ ಎಫ್‌ಎಂನಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ್ದಾರೆ . [೩]
ಪ್ರಶಸ್ತಿಗಳು
[ಬದಲಾಯಿಸಿ]೨೦೧೬ ರಲ್ಲಿ, ಮುಖರ್ಜಿ ಅವರು ಎರಡು ಪ್ರಮುಖ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡರು ಅವುಗಳೆಂದರೆ ಕ್ರೀಡಾ ಪ್ರಸಾರ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಗುರುತಿಸಿ ಪುರಸ್ಕರಿಸಲಾಯಿತು. ನಂತರ ಜೂನ್ ೨೯ ರಂದು ಇವರಿಗೆ ನ್ಯೂಸ್ ಟೆಲಿವಿಷನ್ ಅವಾರ್ಡ್ಸ್ ಮತ್ತು ೨೦೧೬ ರಲ್ಲಿ ಅತ್ಯುತ್ತಮ ಕ್ರೀಡಾ ಸುದ್ದಿ ಕಾರ್ಯಕ್ರಮ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಂತರ ಅದೇ ವರ್ಷದ ನವೆಂಬರ್‌ನಲ್ಲಿ ಅವರು ಕ್ರೀಡಾ ವಿಭಾಗದಲ್ಲಿನ ಪ್ರತಿಷ್ಠಿತ ಪ್ರಶಸ್ತಿಯಾದ ರಾಮನಾಥ್ ಗೋಯೆಂಕಾ ಪ್ರಶಸ್ತಿಯನ್ನು ಪಡೆದರು.
ಉಲ್ಲೇಖಗಳು
[ಬದಲಾಯಿಸಿ]- ↑ "Sanjeeb Mukherjea: Exclusive News Stories by Sanjeeb Mukherjea on Current Affairs, Events at News18". News18 (in ಅಮೆರಿಕನ್ ಇಂಗ್ಲಿಷ್). Retrieved 2016-06-15.
- ↑ "IPL saga: BCCI likely to scrap Kochi team". News18. Retrieved 2016-06-15.
- ↑ "Radio-InterView". Retrieved 2016-06-15.