ಷರಬತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಬೇಲದ ಷರಬತ್ತು

ಷರಬತ್ತು (ಪಾನಕ) ಹಣ್ಣುಗಳು ಅಥವಾ ಹೂವಿನ ಎಸಳುಗಳಿಂದ ತಯಾರಿಸಲಾದ ಪಶ್ಚಿಮ ಏಷ್ಯಾ, ಭಾರತೀಯ ಉಪಖಂಡ ಹಾಗೂ ಇಂಡೊನೇಷ್ಯಾದ ಒಂದು ಜನಪ್ರಿಯ ಪಾನೀಯವಾಗಿದೆ.[೧] ಇದು ಸಿಹಿಯಾದ ಪಾನೀಯವಾಗಿದ್ದು, ಇದನ್ನು ಸಾಮಾನ್ಯವಾಗಿ ತಂಪಾಗಿಸಿ ನೀಡಲಾಗುತ್ತದೆ. ಇದನ್ನು ಸಾಂದ್ರೀಕೃತ ರೂಪದಲ್ಲಿ ನೀಡಿ ಚಮಚದಿಂದ ತಿನ್ನಬಹುದು ಅಥವಾ ನೀರಿನಿಂದ ತನೂಕರಿಸಿ ಪಾನೀಯವನ್ನು ಸೃಷ್ಟಿಸಬಹುದು.

ಜನಪ್ರಿಯ ಷರಬತ್ತುಗಳನ್ನು ಮುಂದೆ ಹೇಳಲಾದ ಪದಾರ್ಥಗಳಲ್ಲಿ ಒಂದರಿಂದ ತಯಾರಿಸಲಾಗುತ್ತದೆ: ಕಾಮಕಸ್ತೂರಿ ಬೀಜಗಳು, ಗುಲಾಬಿ ಜಲ, ತಾಜಾ ಗುಲಾಬಿ ಎಸಳುಗಳು, ಶ್ರೀಗಂಧ, ಬೆಳವಲ, ದಾಸವಾಳ, ನಿಂಬೆಹಣ್ಣು, ಕಿತ್ತಳೆ, ಮಾವು, ಅನಾನಸ್, ಫುಲ್ಶಾ ಹಾಗೂ ಚೀಯಾ ಬೀಜಗಳು.

ಷರಬತ್ತನ್ನು ಜನಪ್ರಿಯವಾಗಿ ಮುಸ್ಲಿಮರು ರಂಜಾನ್ ತಿಂಗಳ ಅವಧಿಯಲ್ಲಿ ತಮ್ಮ ದಿನದ ಉಪವಾಸವನ್ನು ಮುರಿಯುವಾಗ ಸೇವಿಸುತ್ತಾರೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Molavi, Afshin (2002). Persian Pilgrimages. W. W. Norton & Company. p. 113. ISBN 0-393-05119-6. {{cite book}}: Cite has empty unknown parameter: |coauthors= (help)
  2. "The World's First Soft Drink". Muslim Heritage. Archived from the original on 2016-12-24.
"https://kn.wikipedia.org/w/index.php?title=ಷರಬತ್ತು&oldid=939648" ಇಂದ ಪಡೆಯಲ್ಪಟ್ಟಿದೆ