ಶ್ರೀ ಗೋವಿಂದಜಿ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಗೋವಿಂದಜಿ ದೇವಾಲಯವು ಇಂಫಾಲದಲ್ಲಿರುವ ಅತ್ಯಂತ ದೊಡ್ಡ ಹಿಂದೂ ವೈಷ್ಣವ ದೇವಾಲಯವಾಗಿದೆ. ಇದು ಆಗಿನ ಮಣಿಪುರ ರಾಜ್ಯದ ಹಿಂದಿನ ರಾಜರ ಅರಮನೆಯ ಪಕ್ಕದಲ್ಲಿ ಸ್ಥಿತವಾಗಿದೆ. ಈ ದೇವಾಲಯವು ವಿನ್ಯಾಸದಲ್ಲಿ ಸರಳವಾಗಿದ್ದು ಎರಡು ಚಿನ್ನದ ಗುಮ್ಮಟಗಳು, ಹಾಸು ಹೊದೆಸಿದ ಆಸ್ಥಾನ ಮತ್ತು ಒಂದು ದೊಡ್ಡ, ಎತ್ತರದಲ್ಲಿರುವ ಮಂಟಪ ಅಥವಾ ಸಭಾಂಗಣವನ್ನು ಹೊಂದಿದೆ. ಗರ್ಭಗೃಹದ ಮಧ್ಯದ ಕೋಣೆಯು ಮುಖ್ಯ ದೇವತೆಯಾದ, ಕೃಷ್ಣನ ಅವತಾರವೆಂದು ಹೇಳಲಾದ ಗೋವಿಂದಜಿ ಮತ್ತು ಅವನ ಗೆಳತಿ ರಾಧೆಯ ಮೂರ್ತಿಯನ್ನು ಹೊಂದಿದೆ. ಗರ್ಭಗೃಹದ ಇತರ ಎರಡು ಕೋಣೆಗಳಲ್ಲಿ, ಮುಖ್ಯ ದೇವತೆಯ ಎರಡೂ ಬದಿಗಳಲ್ಲಿ ಪೂಜಿಸಲಾದ ವಿಗ್ರಹಗಳೆಂದರೆ ಒಂದು ಕಡೆಯಲ್ಲಿ ಬಲಭದ್ರ ಹಾಗೂ ಕೃಷ್ಣ, ಮತ್ತು ಇನ್ನೊಂದೆಡೆ ಜಗನ್ನಾಥ, ಸುಭದ್ರ ಮತ್ತು ಬಲಭದ್ರರ ವಿಗ್ರಹಗಳು. ಮೂಲತಃ ಈ ದೇವಾಲಯವನ್ನು ಮಹಾರಾಜ ನರ ಸಿಂಗ್‍ರ ಆಳ್ವಿಕೆಯ ಕಾಲದಲ್ಲಿ ೧೮೪೬ರಲ್ಲಿ ನಿರ್ಮಿಸಲಾಯಿತು. ಮಹಾರಾಜ ಚಂದ್ರಕೃತಿ ಇದನ್ನು ೧೮೭೬ರಲ್ಲಿ ಮರುನಿರ್ಮಿಸಿದರು.[೧][೨]

ಉಲ್ಲೇಖಗಳು[ಬದಲಾಯಿಸಿ]

ಗ್ರಂಥಸೂಚಿ[ಬದಲಾಯಿಸಿ]

  • Assembly, Manipur (India). Legislative (28 November 1972). Proceedings. Official Report. {{cite book}}: Invalid |ref=harv (help)
  • Broadcasting, India. Ministry of Information and (2010). India: A Reference Annual. ISBN 978-81-230-1617-7. {{cite book}}: Invalid |ref=harv (help)
  • Darpan, Pratiyogita (July 2008). Pratiyogita Darpan. Pratiyogita Darpan. {{cite book}}: Invalid |ref=harv (help)
  • Devi, L. Kunjeswori (2003). Archaeology in Manipur. Rajesh Publications. ISBN 978-81-85891-18-7. {{cite book}}: Invalid |ref=harv (help)
  • Dikshit, Kamal Ramprit; Dikshit, Jutta K (21 October 2013). North-East India: Land, People and Economy. Springer Science & Business Media. ISBN 978-94-007-7055-3. {{cite book}}: Invalid |ref=harv (help)
  • Ghosh, G. K.; Ghosh, Shukla (1 January 1997). Women of Manipur. APH Publishing. ISBN 978-81-7024-897-2. {{cite book}}: Invalid |ref=harv (help)
  • Laveesh, Bhandari (1 September 2009). Indian States At A Glance 2008-09: Performance, Facts And Figures - North-East And Sikkim. Pearson Education India. ISBN 978-81-317-2348-7. {{cite book}}: Invalid |ref=harv (help)
  • Sanajaoba, Naorem (2003). Manipur, Past and Present: The Heritage and Ordeals of a Civilization. Mittal Publications. ISBN 978-81-7099-853-2. {{cite book}}: Invalid |ref=harv (help)