ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

Incomplete list.png This page or section is incomplete.

ಮೈಸೂರು ಭಾಗದಲ್ಲಿರುವ ಹೆಸರಾಂತ ರಂಗ ಸಂಸ್ಥೆ ಗುಬ್ಬಿ"ಶ್ರೀ ಚನ್ನ ಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ"೧೮೮೪ರಲ್ಲಿ ಗುಬ್ಬಿ ಚಂದಣ್ಣನವರ ನೇತ್ರತ್ವದಲ್ಲಿ ಹುಟ್ಟಿಕೊಂಡಿತು.ಯಕ್ಷಗಾನ ನಾಟಕವಾದ "ಕುಮಾರ ರಾಮನ ಕಥೆ "ಯಿಂದ ಪ್ರಾರಂಭವಾದ ಇವರ ರಂಗ ಚಟುವಟಿಕೆ ಇಡೀ ಕರ್ನಾಟಕ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ಕೂಡ ತನ್ನ ವೈಭವವನ್ನು,ರಂಗ ಭೂಮಿಯ ಚಟುವಟಿಕೆಯನ್ನು ಬೆಳಗಿದ ಕೀರ್ತಿ ಇದರದ್ದು. ಕನ್ನಡ ನಾಟಕಗಳ ಕಂಪನ್ನು ದಕ್ಷಿಣ ಭಾರತದಾದ್ಯಂತ ಮತ್ತು ದೂರದ ಮುಂಬೈವರೆಗೆ ಹರಡಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲಬೇಕು.ಕನ್ನಡದ ಮನರಂಜನಾ ಕ್ಷೇತ್ರವನ್ನು ಶ್ರೀಮಂತ ಗೊಳಿಸಿದ ಸಂಸ್ತೆಗಳಲ್ಲಿ ಗುಬ್ಬಿ ಕಂಪನಿಗೆ ಆಗ್ರಸ್ತಾನ ಸಲ್ಲುತ್ತದೆ. ೧೮೮೪ರಲ್ಲಿ ಆರಂಭವಾದ 'ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘ" ನೂರು ವರ್ಷಗಳನ್ನು ಆಚರಿಸಿಕೊಂಡ ಜಗತ್ತಿನ ಏಕೈಕ ವ್ರತ್ತಿ ನಿರತ ರಂಗ ಸಂಸ್ಥೆ. ಜನ ಮಾನಸದಲ್ಲಿ "ಗುಬ್ಬಿ ನಾಟಕ ಕಂಪನಿ" ಅಥವಾ ಗುಬ್ಬಿ ಕಂಪನಿ ಎಂದೇ ಚಿರಸ್ತಾಯಿಯಾಗಿದೆ. ಇದನ್ನು ಸ್ಥಾಪಿಸಿದವರು ಚಂದಣ್ಣ,ನೀಲಕಂಠಪ್ಪ ಮತ್ತು ಅಬ್ದುಲ್ ಅಜೀಜ್ ಎಂಬ ರಂಗಾಸಕ್ತರು.ಕಂಪನಿ ನಾಟಕಗಳನ್ನು ಹೆಚ್ಹು ಸೋಪಜ್ಞತೆಯಿಂದ ಪ್ರದರ್ಶಿಸಬೇಕೆಂಬ ಬಯಕೆ ಅವರಲ್ಲಿತ್ತು. ಕ್ರಮೇಣ ಜನಪ್ರೀಯತೆ ಕಂಡುಕೊಂಡ ಈ ಸಂಸ್ಥೆಗೆ ೧೯೮೬ರಲ್ಲಿ ಆರು ವರ್ಷದ ಬಾಲಕ ಜಿ.ಎಚ್.ವೀರಣ್ಣ ಕೂಲಿಮಠ ವಿದ್ಯಾಬ್ಯಾಸ ಬಿಟ್ಟು ಕಲಾವಿದರಾಗಿ ಸೇರಿದರು.ಮುಂದಿನದು ಇತಿಹಾಸ!!! "ನಮನ"