ಶ್ರೀಲೀಲಾ (ನಟಿ)
ಗೋಚರ
ಶ್ರೀಲೀಲಾ | |
---|---|
Born | ಶ್ರೀಲೀಲಾ ೧೪ ಜುಲೈ ೨೦೦೧ ಡೆಟ್ರಾಯ್ಟ್, ಮಿಚಿಗನ್, ಅಮೆರಿಕ ಸಂಯುಕ್ತ ಸಂಸ್ಥಾನ.[೧] |
Nationality | ಭಾರತೀಯ |
Occupation |
|
Years active | 2019–ಈವರೆಗೆ |
ಶ್ರೀಲೀಲಾ ಕನ್ನಡ ಚಿತ್ರರಂಗದ ನಟಿ. ಎ. ಪಿ. ಅರ್ಜುನ್ ನಿರ್ದೇಶನದ ೨೦೧೯ರ ಕಿಸ್ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣ ಆರಂಭಿಸಿದರು. ಮೊದಲ ಚಿತ್ರದಲ್ಲೇ ಗುರುತಿಸಿಕೊಂಡ ಇವರು ನಟನೆಯ ಜೊತೆಗೆ ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿಯೂ ಅಧ್ಯಯನ ನಡೆಸುತ್ತಿದ್ದಾರೆ. [೨].
ವೈಯಕ್ತಿಕ ಜೀವನ
[ಬದಲಾಯಿಸಿ]ಅಮೆರಿಕದ ಮಿಚಿಗನ್ ನಲ್ಲಿ, ಶುಭಕರ್ ರಾವ್ ಸುರಪನೇನಿ ಮತ್ತು ಸ್ವರ್ಣಲತ ದಂಪತಿಗಳಿಗೆ ಜನಿಸಿದ ಶ್ರೀಲೀಲಾ ಅವರಿಗೆ ಇಬ್ಬರು ಅಣ್ಣಂದಿರು ಇದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ಹೊಸನಟ ವಿರಾಟ್ ಜೊತೆಗೆ ಅಭಿನಯಿಸಿದ ಕಿಸ್ ಚಿತ್ರವೇ ಲೀಲಾ ಅವರ ಮೊದಲ ಚಿತ್ರ[೩]. ಅರ್ಜುನ್ ನಿರ್ದೇಶಿಸಿದ ಈ ಚಿತ್ರ ಯಶಸ್ಸನ್ನು ಗಳಿಸಿತು. ತಮ್ಮ ಮೊದಲ ಚಿತ್ರದ ಬಿಡುಗಡೆಗೂ ಮೊದಲೇ, ನಟ ಶ್ರೀಮುರಳಿ ಜೊತೆಗೆ ಭರಾಟೆ ಚಿತ್ರಕ್ಕೆ ನಾಯಕಿಯಾಗಿ ಲೀಲಾ ಆಯ್ಕೆಯಾದರು. ಅವರ ಎರಡೂ ಚಿತ್ರಗಳು ಗೆಲುವು ಸಾಧಿಸಿವೆ.[೪]
ಚಿತ್ರಗಳು
[ಬದಲಾಯಿಸಿ]ವರ್ಷ | ಚಿತ್ರ | ಪಾತ್ರ | ಭಾಷೆ | ವಿವರ |
---|---|---|---|---|
2019 | ಕಿಸ್ಸ್ | ನಂದಿನಿ | ಕನ್ನಡ | ಮೊದಲ ಚಿತ್ರ |
2019 | ಭರಾಟೆ | ರಾಧಾ | ಕನ್ನಡ |
ಉಲ್ಲೇಖಗಳು
[ಬದಲಾಯಿಸಿ]- ↑ "Sree Leela: Age, Wiki, Photos, Biography". FilmiFeed. Archived from the original on 2020-06-24. Retrieved 2020-08-23.
- ↑ "Sree Leela Age, Biography, Height, Place of Birth, News & Photos - See latest". www.seelatest.com.
- ↑ "ಆರ್ಕೈವ್ ನಕಲು". Archived from the original on 2020-07-12. Retrieved 2020-08-23.
- ↑ https://www.prajavani.net/entertainment/cinema/shreeleela-chitchat-722093.html