ವಿಷಯಕ್ಕೆ ಹೋಗು

ಶ್ರೀಮಂತ ಕಾಶಿನಾಥ ಅವಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ[ಬದಲಾಯಿಸಿ]

ವಿಜಯಪುರ ವಿಜಯಪುರ [೧] ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ೧೯೭೯ ಜೂನ್ ೧ ರಂದು ಶ್ರೀಮಂತ ಕಾಶಿನಾಥ ಅವಟಿಯವರು ಜನಿಸಿದರು.ಅಂಧ ಪುತ್ರರಾದ ಇವರು ಗೌರಮ್ಮ ಮತ್ತು ಕಾಶಿನಾಥ ಅವಟಿ ದಂಪತಿಗಳ ಪುತ್ರ.


ವಿದ್ಯಾಭ್ಯಾಸ[ಬದಲಾಯಿಸಿ]

ಸಂಗೀತದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಅಂಧ ಬಾಲಕರ ಪಾಠಶಾಲೆ,ಹುಬ್ಬಳ್ಳಿಯಲ್ಲಿ ಮುಗಿಸಿ ಸಂಗೀತಾಭ್ಯಾಸವನ್ನು ಗುರುಗಳಾದ ಈಶ್ರರಪ್ಪ ಅರಣ್ಯವರ ಎಂಬುವರಲ್ಲಿ ಪ್ರಾರಭಿಸಿದರು.ಪ್ರೌಢಶಿಕ್ಷಣವನ್ನು ಜಗದ್ಗುರು ಶ್ರೀ ಬಾಲಗಂಗಾಧರನಾಥ ಅಂಧ ಮಕ್ಕಳ ವಸತಿಯುತ ಶಾಲೆ ಅರ್ಚಕರಹಳ್ಳಿಯ ರಾಮನಗರ ಜಿಲ್ಲೆಯಲ್ಲಿ ಮುಗಿಸಿದರು.ವಿಜಯಪುರ ಜಿಲ್ಲೆಯ ನೂತನ ಕಲಾ ಮಹಾವಿದ್ಯಾಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಜೊತೆಗೆ ಸಂಗೀತ ವಿದ್ವಾಂಸರಾದ ಪಂಡಿತ್ ಪುಟ್ಟರಾಜ ಗವಾಯಿಪುಟ್ಟರಾಜ ಗವಾಯಿಗಳು [೨] ಮತ್ತು ಚನ್ನವೀರ ಬನ್ನೂರುರ ಬಳಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಮಾಡಿದ್ದಾರೆ.

ಪದವಿಗಳು[ಬದಲಾಯಿಸಿ]

ಪಂಡಿತ್ ಪಂಚಾಕ್ಷರಿ ಗವಾಯಿಪಂಚಾಕ್ಷರಿ ಗವಾಯಿಗಳು [೩] ಸಂಗೀತ ಮಹಾವಿದ್ಯಾಲಯ ಮತ್ತು ಗದಗದ ಪಂಡಿತ್ ಪುಟ್ಟರಾಜ ಕವಿ ಗವಾಯಿಯವರ ಬಳಿ ಶಿಶ್ವತ್ವದಲ್ಲಿ ಹಿಂದೂಸ್ಥಾನಿ ಸಂಗೀತದಲ್ಲಿ ಪದವಿ ಪಡೆದಿದ್ದಾರೆ.

ಸಾಧನೆ[ಬದಲಾಯಿಸಿ]

ಕಲಾತ್ಮಕ ಚಲನ ಚಿತ್ರವಾದ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿಎಂಬ ಚಲನಚಿತ್ರದಲ್ಲಿ ಮೊದಲ ಬಾರಿಗೆ ಅಂಧ ಕಲಾವಿದರಾಗಿ ದ್ವಿಪಾತ್ರದಲ್ಲಿ ಅಭನಯಿಸಿದ್ದಾರೆ.ನವರಸಪುರ ರಾಷ್ಟ್ರೀಯ ಸಂಗೀತೋತ್ಸವ ,ಪಟ್ಟದಕಲ್ಲಿನ ಉತ್ಸವವಾದ ಚಾಲುಕ್ಯೋತ್ಸವ,ಹಂಪಿ ಉತ್ಸವ,ವಚನ ಸಂಗೀತ್ಯೋತ್ಸವ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದಾರೆ.ಸಂಗೀತ ಸಂಯೋಜಕರಾದ ಇವರು ಮಕ್ಕಳಗೀತೆಗಳಿಗೆ,ಭಾವಗೀತೆ ಮತ್ತು ಭಕ್ತಿಗೀತೆ,ವಚನಗಳಿಗೆ,ಸುಗಮ ಸಂಗೀತ ಮುಂತಾದ ಪ್ರಕಾರದ ಗೀತೆಗಳಿಗೆ ಸ್ವರ ಸಂಯೋಜಿಸಿದ್ದಾರೆ.ಪ್ರಸ್ತುತ ಬಸವನ ಬಾಗೇವಾಡಿಯಲ್ಲಿ ಗ್ರಾಮೀಣ ಜನರಿಗೆ ಮತ್ತು ಹೊರ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಅಂತರ್ಜಾಲದ ಮೂಲಕ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ.ಪ್ರಸ್ತುತ ಇವರು ಅಕ್ಕನಾಗಮ್ಮ ಬಾಲಕೀಯರ ಸರ್ಕಾರಿ ಪ್ರೌಢಶಾಲೆ ಬಸವನ ಬಾಗೇವಾಡಿಯಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಆಕಾಶವಾಣಿ ಮತ್ತು ದೂರದರ್ಶನದ ಕಲಾವಿದರಾಗಿದ್ದಾರೆ.


ಹಾಡಿನ ಪ್ರತಿಗಳು[ಬದಲಾಯಿಸಿ]

  • ವಚನರಶ್ಮಿ
  • ನೀನಿರದ ಬದುಕು
  • ಯುವ ಜಾಗೃತಿ
  • ಜೀನಭಕ್ತಿ ಸುಧಾಮೃತ
  • ವಿಧಿಯಾಟ
  • ಹಾಡೋಣ ಬನ್ನಿ

ಪ್ರಶಸ್ತಿಗಳು[ಬದಲಾಯಿಸಿ]

೧೯೯೫-೯೬ ನೇಯ ಸಾಲಿನಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಮತ್ತು ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಗದಲ್ಲಿ ೧-೧೧-೨೦೧೧ ರಂದು ಸಂಗೀತ ಕ್ಷೇತ್ರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮತ್ತು೨೦೧೬ ರಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.


ಉಲ್ಲೇಖಗಳು[ಬದಲಾಯಿಸಿ]

  1. https://kn.wikipedia.org/s/p46
  2. https://kn.wikipedia.org/s/8uw
  3. https://kn.wikipedia.org/s/8rj