ವಿಷಯಕ್ಕೆ ಹೋಗು

ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

 


ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ

ವ್ಯಾಪ್ತಿಪ್ರದೇಶ ಭಾರತ
ಶಾಖೆ Indian Air Force
ಸೇವಾವಧಿ15 ಜೂನ್ ೧೯೮೦ – ೨೧ ಡಿಸೆಂಬರ್ ೨೦೧೮
ಶ್ರೇಣಿ(ದರ್ಜೆ) ಏರ್ ಮಾರ್ಷಲ್
ಸೇವಾ ಸಂಖ್ಯೆ16053
ಅಧೀನ ಕಮಾಂಡ್ಸೆಂಟ್ರಲ್ ಏರ್ ಕಮಾಂಡ್
ವಾಯುಪಡೆಯ ಉಪ ಮುಖ್ಯಸ್ಥ
ಪ್ರಶಸ್ತಿ(ಗಳು) ಪರಮ ವಿಶಿಷ್ಟ ಸೇವಾ ಪದಕ


ಅತಿ ವಿಶಿಷ್ಟ ಸೇವಾ ಪದಕ


ವಾಯು ಸೇನಾ ಪದಕ ಸಹಾಯಕ-ಡಿ-ಕ್ಯಾಂಪ್
ಸಂಗಾತಿಅಲ್ಪನಾ ಸಿನ್ಹ

ಏರ್ ಮಾರ್ಷಲ್ ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ, PVSM, AVSM, VM, ADC ಅವರು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿದ್ದರು. ಅವರು ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (AOC-in-C), ಸೆಂಟ್ರಲ್ ಏರ್ ಕಮಾಂಡ್ ೧ ಜನವರಿ ೨೦೧೬ ರಿಂದ ೩೧ ಡಿಸೆಂಬರ್ ೨೦೧೮ ವರೆಗೆ ಸೇವೆ ಸಲ್ಲಿಸಿದ್ದಾರೆ. ಅವರು ಏರ್ ಮಾರ್ಷಲ್ ಕುಲವಂತ್ ಸಿಂಗ್ ಗಿಲ್ ಅವರಿಂದ ಅಧಿಕಾರ ವಹಿಸಿಕೊಂಡರು ಮತ್ತು ನಂತರ ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡರು. AVSM, VM. []

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಸಿನ್ಹಾರವರು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ವಿದ್ಯಾರ್ಥಿ. ಅವರು ಫ್ರಾನ್ಸ್‌ನಲ್ಲಿ ಆಪರೇಷನಲ್ ಎಲೆಕ್ಟ್ರಾನಿಕ್ ವಾರ್‌ಫೇರ್ ಕೋರ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸೆಕ್ಯುರಿಟಿ ಸ್ಟಡೀಸ್‌ನ ಕಾರ್ಯನಿರ್ವಾಹಕ ಕೋರ್ಸ್ ಅನ್ನು ಸಹ ಮಾಡಿಕೂಂಡಿದ್ದಾರೆ. [] []

ವೃತ್ತಿ

[ಬದಲಾಯಿಸಿ]

ಸಿನ್ಹಾರವರು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ೧೫ ಜೂನ್ ೧೯೮೦ ರಂದು ನಿಯೋಜಿಸಲ್ಪಟ್ಟರು. ಅವರು ೩೭೦೦ ಗಂಟೆಗಳ ಕಾಲ ಹಾರಾಟವನ್ನು ಮಾಡಿದ್ದಾರೆ. ಹಲವಾರು ರೀತಿಯ ಹೋರಾಟಗಳಲ್ಲಿ ಭಾಗವಹಿಸಿದ ಅನುಭವವನ್ನು ಪಡೆದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು ಈ ಕೆಳಗಿನ ಜವಾಬ್ದಾರಿ ಗಳನ್ನು ನಿಭಾಯಿಸಿದ್ದಾರೆ.

  1. ಎಲೆಕ್ಟ್ರಾನಿಕ್ ವಾರ್‌ಫೇರ್ ರೇಂಜ್‌ನ ಕಮಾಂಡೆಂಟ್
  2. ಇಸ್ರೇಲ್‌ನಲ್ಲಿ AWACS ಪ್ರಾಜೆಕ್ಟ್ ತಂಡದ ಟೀಮ್ ಲೀಡರ್
  3. ಫ್ರಂಟ್ ಲೈನ್ Su-30 MKI ಬೇಸ್‌ನ ಏರ್ ಆಫೀಸರ್ ಕಮಾಂಡಿಂಗ್
  4. ವಾಯುಪಡೆಯ ಸಹಾಯಕ ಮುಖ್ಯಸ್ಥ (ಯೋಜನೆಗಳು)
  5. ಪ್ರಧಾನ ನಿರ್ದೇಶಕ ಯೋಜನೆಗಳು
  6. ಪ್ರಧಾನ ನಿರ್ದೇಶಕ C4ISR
  7. ಪ್ರಧಾನ ನಿರ್ದೇಶಕ ಸ್ವಾಧೀನಗಳು
  8. ಕಾರ್ಯಾಚರಣೆಯ ಉಪ ನಿರ್ದೇಶಕರು (ಎಲೆಕ್ಟ್ರಾನಿಕ್ ವಾರ್‌ಫೇರ್)
  9. ಬೇಸಿಕ್ ಫ್ಲೈಯಿಂಗ್ ಟ್ರೈನಿಂಗ್ ಸ್ಕೂಲ್‌ನ ಮುಖ್ಯ ಫ್ಲೈಯಿಂಗ್ ಬೋಧಕರಾಗಿ
  10. ಏರ್‌ಕ್ರೂ ಪರೀಕ್ಷಾ ಮಂಡಳಿಯಲ್ಲಿ ಏರ್ ಫೋರ್ಸ್ ಎಕ್ಸಾಮಿನರಾಗಿ
  11. ವಾಯುಪಡೆಯ ಉಪ ಮುಖ್ಯಸ್ಥ (೩೦ ಏಪ್ರಿಲ್ ೨೦೧೪ - ೩೧ ಡಿಸೆಂಬರ್ ೨೦೧೫)

ಇದಲ್ಲದೆ ಅವರು 'ಎ' ವರ್ಗದ ಫ್ಲೈಯಿಂಗ್ ಇನ್‌ಸ್ಟ್ರಕ್ಟರ್, ಇನ್‌ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಪರೀಕ್ಷಕರಾಗಿದ್ದಾರು. ಅವರು ನಂ ೭ನೇ ಸ್ಕ್ವಾಡ್ರನ್‌ನ ಕಮೋಡೋರ್ ಕಮಾಂಡೆಂಟ್ ಆಗಿದ್ದರು. [] []

ಪ್ರಶಸ್ತಿಗಳು ಮತ್ತು ಪದಕಗಳು

[ಬದಲಾಯಿಸಿ]

ಅವರ ವೃತ್ತಿಜೀವನದ ೩೮ ವರ್ಷಗಳ ಅವಧಿಯಲ್ಲಿ, ಅವರಿಗೆ ಹಲವಾರು ಪದಕಗಳನ್ನು ನೀಡಲಾಗಿದೆ: ಎರಡು ರಾಷ್ಟ್ರಪತಿ ಪದಕಗಳು, ಅತಿ ವಿಶಿಷ್ಟ ಸೇವಾ ಪದಕ (ಜನವರಿ ೨೦೧೧), ವಾಯು ಸೇನಾ ಪದಕ . [] [] ಮತ್ತು ಪರಮ ವಿಶಿಷ್ಟ ಸೇವಾ ಪದಕ (ಜನವರಿ ೨೦೧೮). []

ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ
ವಾಯು ಸೇನಾ ಪದಕ ಸಾಮಾನ್ಯ ಸೇವಾ ಪದಕ - ನಾಗಾ ಹಿಲ್ಸ್ ಸೇವೆ ಸಾಮಾನ್ಯ ಸೇವಾ ಪದಕ ವಿಶೇಷ ಸೇವಾ ಪದಕ
ಆಪರೇಷನ್ ಪರಾಕ್ರಮ್ ಪದಕ ಸೈನ್ಯ ಸೇವಾ ಪದಕ ಹೈ ಆಲ್ಟಿಟ್ಯೂಡ್ ಸೇವಾ ಪದಕ ವಿದೇಶ್ ಸೇವಾ ಪದಕ
ಸ್ವಾತಂತ್ರ್ಯ ಪದಕದ ೫೦ ನೇ ವಾರ್ಷಿಕೋತ್ಸವ ೦ವರ್ಷಗಳ ಸುದೀರ್ಘ ಸೇವಾ ಪದಕ ೦ವರ್ಷಗಳ ಸುದೀರ್ಘ ಸೇವಾ ಪದಕ ೯ ವರ್ಷಗಳ ಸುದೀರ್ಘ ಸೇವಾ ಪದಕ

ವೈಯಕ್ತಿಕ ಜೀವನ

[ಬದಲಾಯಿಸಿ]

ಅಲ್ಪನಾ ಸಿನ್ಹಾ ಇವರ ಧರ್ಮಪತ್ನಿ. ಇವರಿಗೆ ಒಬ್ಬ ಮಗನಿದ್ದಾನೆ. ಅವರ ಸಹೋದರ ಬಿಬಿಪಿ ಸಿನ್ಹಾ ಕೂಡ ಭಾರತೀಯ ವಾಯುಪಡೆಯಲ್ಲಿ ಏರ್ ಮಾರ್ಷಲ್ ಆಗಿದ್ದರು. [] [] []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "Air Marshal Sinha to be CAC chief - Times of India". The Times of India. Retrieved 2017-10-12."Air Marshal Sinha to be CAC chief - Times of India". The Times of India. Retrieved 12 October 2017.
  2. ೨.೦ ೨.೧ ೨.೨ ೨.೩ "Press Information Bureau". Retrieved 2017-10-12.
  3. "Press Information Bureau". Retrieved 2017-10-12.
  4. "390 Republic Day Gallantry and Other Defence Decorations Announced".
  5. "Press Information Bureau". Retrieved 2017-10-12.


Military offices
Preceded by ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್,
ಸೆಂಟ್ರಲ್ ಏರ್ ಕಮಾಂಡ್

1 ಜನವರಿ ೨೦೧೬ - ೩೧ ಡಿಸೆಂಬರ್ ೨೦೧೮
Succeeded by
Preceded by ವಾಯುಪಡೆಯ ಉಪ ಮುಖ್ಯಸ್ಥ
೩೦ ಏಪ್ರಿಲ್ ೨೦೧೪ - ೩೧ ಡಿಸೆಂಬರ್ ೨೦೧೫
Succeeded by