ವಿಷಯಕ್ಕೆ ಹೋಗು

ರಾಜೇಶ್ ಕುಮಾರ್ (ಏರ್ ಮಾರ್ಷಲ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏರ್ ಮಾರ್ಷಲ್

ರಾಜೇಶ್ ಕುಮಾರ್

ಪರಮ ವಿಶಿಷ್ಥ ಸೇವಾ ಪದಕ, ಅತಿ ವಿಶಿಷ್ಥ ಸೇವಾ ಪದಕ, ವಾಯು ಸೇನಾ ಪದಕ, ಏಯಡೆ - ಡೆ - ಕ್ಯಾಂಪ್
ಸೇವಾವಧಿ೪ ಜೂನ್ ೧೯೮೨ – ೩೧ Aಆಗಸ್ಥ್ ೨೦೨೧
ಶ್ರೇಣಿ(ದರ್ಜೆ) ಏರ್ ಮಾರ್ಷಲ್
ಸೇವಾ ಸಂಖ್ಯೆ16770[]
ಅಧೀನ ಕಮಾಂಡ್ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್
ಸೆಂಟ್ರಲ್ ಏರ್ ಕಮಾಂಡ್
ಪ್ರಶಸ್ತಿ(ಗಳು)ಪರಮ ವಿಶಿಷ್ಥ ಸೇವಾ ಪದಕ
ಅತಿ ವಿಶಿಷ್ಥ ಸೇವಾ ಪದಕ
ವಾಯು ಸೇನಾ ಪದಕ
ಏಯಡೆ - ಡೆ - ಕ್ಯಾಂಪ್
ಸಂಗಾತಿಜಯ ಕುಮಾರ್

ಏರ್ ಮಾರ್ಷಲ್ ರಾಜೇಶ್ ಕುಮಾರ್ ಅವರು ಭಾರತೀಯ ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದಾರೆ. ಅವರು ಕೊನೆಯದಾಗಿ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಕಮಾಂಡರ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದರು. ಏರ್ ಮಾರ್ಷಲ್ ನವಕರಣಜಿತ್ ಸಿಂಗ್ ಧಿಲ್ಲಾನ್ ಅವರ ನಿವೃತ್ತಿಯ ನಂತರ ೨೦೨೧ ರ ಜನವರಿ ೩೧ ರಂದು ಅವರು ಅಧಿಕಾರ ವಹಿಸಿಕೊಂಡರು.[] ಈ ಹಿಂದೆ ಅವರು ಸೆಂಟ್ರಲ್ ಏರ್ ಕಮಾಂಡ್ ಎಒಸಿ-ಇನ್-ಸಿ ಮತ್ತು ಈಸ್ಟರ್ನ್ ಏರ್ ಕಮಾಂಡ್ ನಲ್ಲಿ ಎಸ್ಎಎಸ್ಒ ಆಗಿ ಸೇವೆ ಸಲ್ಲಿಸಿದ್ದರು. ಅವರು ೩೧ ಆಗಸ್ಟ್ ೨೦೨೧ ರಂದು ನಿವೃತ್ತರಾದರು. [][][]

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಕುಮಾರ್ ಅವರು ಅಜಮೇರ್‌ನ ಮಾಯೊ ಕಾಲೇಜು ಮತ್ತು ರಾ‌ಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕವಸ್ಲ- ಇದರ ಹಳೆವಿದ್ಯಾರ್ಥಿ. ವಾಯು ಕಮಾಂಡ್ ಮತ್ತು ಸ್ಥಾಫ್ ಕಾಲೇಜು, ಮೋಂಟ್ಗೋಮೇರಿ, ಅಲಬಾಮ -ಇಲ್ಲಿನ ಪದವೀಧರರು. ಸಿಕಂದರಾಬಾದ್‌ನಲ್ಲಿರುವ ರಕ್ಷಣಾ ನಿರ್ವಹಣಾ ಕಾಲೇಜಿನಿಂದ ಉನ್ನತ ರಕ್ಷಣಾ ನಿರ್ವಹಣಾ ತರಬೇತಿಯನ್ನೂ ಪಡೆದಿರುವರು.[][]

ವೃತ್ತಿಜೀವನ

[ಬದಲಾಯಿಸಿ]

ಕುಮಾರ್ ಅವರನ್ನು ೧೯೮೨ ರ ಜೂನ್ ೪ ರಂದು ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಫೈಟರ್ ಏರ್ಕ್ರಾಫ್ಟ್ ಸ್ಕ್ವಾಡ್ರನ್ ಮತ್ತು ಫ್ರಂಟ್-ಲೈನ್ ವಾಯುನೆಲೆಯನ್ನು ಮುನ್ನಡೆಸಿದ್ದಾರೆ. ಅವರು ಎ ವರ್ಗದ ಫ್ಲೈಯಿಂಗ್ ಬೋಧಕ, ಇನ್ಸ್ಟ್ರುಮೆಂಟ್ ರೇಟಿಂಗ್ ಬೋಧಕ ಮತ್ತು ಏರ್ ಕ್ರೂ ಮೇಲ್ವಿಚಾರಕರಾಗಿದ್ದಾರೆ.[][] ಅವರು ಇಸ್ರೇಲ್‌ನ ಎಡಬ್ಲ್ಯೂಎಸಿಎಸ್ ಯೋಜನೆಯ ಮೇಲ್ವಿಚಾರಣಾ ತಂಡದ ನಾಯಕರಾಗಿ, ಬೆಂಗಳೂರಿನ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ ಭಾರತೀಯ ವಾಯುಪಡೆಯ ಯೋಜನಾ ನಿರ್ವಹಣಾ ತಂಡದ ನಿರ್ದೇಶಕರಾಗಿ ಮತ್ತು ಶಿಲ್ಲಾಂಗ್‌ನ ಪೂರ್ವ ವಾಯು ಕಮಾಂಡ್‌ನ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ನೇಮಕರಾಗಿದ್ದಾರೆ.[][]

ತಮ್ಮ ೩೬ ವರ್ಷಗಳ ವೃತ್ತಿಜೀವನದಲ್ಲಿ, ಕುಮಾರ್ ಅವರಿಗೆ ೨೦೨೧ ರಲ್ಲಿ ಪರಮ್ ವಿಶಿಷ್ಟ ಸೇವಾ ಪದಕ, ೨೦೧೯ ರಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ಆಪರೇಷನ್ ಪರಾಕ್ರಮ ಶೌರ್ಯಕ್ಕಾಗಿ ವಾಯು ಸೇನಾ ಪದಕ ನೀಡಲಾಗಿದೆ.[೧೦][೧೧][೧೨]

ಪರಮ ವಿಶಿಷ್ಟ ಸೇವಾ ಪದಕ ಅತಿ ವಿಶಿಷ್ಟ ಸೇವಾ ಪದಕ ವಾಯು ಸೇನಾ ಪದಕ

ರಾಜೇಶ್ ಕುಮಾರ್ ಅವರು ಜಯಾ ಕುಮಾರ್ ಅವರನ್ನು ವಿವಾಹವಾಗಿದ್ದಾರೆ. ಅವರಿಗೆ ಇಬ್ಬರು ಪುತ್ರರಿದ್ದಾರೆ .[೧೦]

ಉಲ್ಲೇಖಗಳು

[ಬದಲಾಯಿಸಿ]
  1. "411 Republic Day Gallantry and Other Defence Decorations Announced". pib.nic.in. Press Information Bureau, Government of India. Archived from the original on 27 ಮಾರ್ಚ್ 2019. Retrieved 3 ಮಾರ್ಚ್ 2019.
  2. "Air Marshal Rajesh Kumar to take over as new chief of Strategic Forces Command". 31 ಜನವರಿ 2021.
  3. "Rapid Turnover in IAF Brass". Bharat Shakti. 29 ಮೇ 2021.
  4. "Air Marshal SBP Sinha will retire on December 31". 29 ಡಿಸೆಂಬರ್ 2018. Retrieved 20 ಫೆಬ್ರವರಿ 2019.
  5. "Air Marshal Rajesh Kumar takes charge as AOC-in-C". 2 ಜನವರಿ 2019. Archived from the original on 6 ಮಾರ್ಚ್ 2019. Retrieved 21 ಫೆಬ್ರವರಿ 2019.
  6. ೬.೦ ೬.೧ "IAF's key interface with Industry is new Central Commander". SP's MAI. Archived from the original on 6 ಮಾರ್ಚ್ 2019. Retrieved 20 ಫೆಬ್ರವರಿ 2019.
  7. ೭.೦ ೭.೧ "Air Marshal Rajesh Kumar is the new Air Officer Commanding-in-Chief Central Air Command". 1 ಜನವರಿ 2019. Archived from the original on 22 ಜನವರಿ 2019. Retrieved 3 ಮಾರ್ಚ್ 2019.
  8. "Raksha Mantri Visits Forward Army & Airforce Bases in Assam & Arunachal Pradesh". Press Information Bureau, Government of India. 5 ನವೆಂಬರ್ 2017. Retrieved 3 ಮಾರ್ಚ್ 2019.
  9. "Air Marshal Rajesh taken over as the Senior Air Staff Officer at HQ EAC". SP News Agency. Archived from the original on 1 ಜನವರಿ 2018. Retrieved 3 ಮಾರ್ಚ್ 2019.
  10. ೧೦.೦ ೧೦.೧ "Air Marshal Rajesh taken over as the Senior Air Staff Officer at HQ EAC". SP News Agency. Archived from the original on 1 ಜನವರಿ 2018. Retrieved 3 ಮಾರ್ಚ್ 2019."Air Marshal Rajesh taken over as the Senior Air Staff Officer at HQ EAC".
  11. "Distinguished Service and Gallantry Awards to IAF Personnel on Republic Day 2019". pib.nic.in. Press Information Bureau, Government of India.
  12. "President Shri Ram Nath Kovind approves 455 Gallantry & other defence decorations to Armed Forces personnel on Republic Day". PIB. 25 ಜನವರಿ 2021.
Military offices
Preceded by
ನವಕರಂಜಿತ್ ಸಿಂಗ್ ಧಿಲ್ಲೋನ್
ಕಮಾಂಡರ್ ಇನ್ ಚೀಫ್, ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್
೧ ಫೆಬ್ರವರಿ ೨೦೨೧ – ೩೧ ಅಗಸ್ಟ್ ೨೦೨೧
Succeeded by
ಆರ್. ಬಿ. ಪಂಡಿತ್
Preceded by
ಶ್ಯಾಮ್ ಬಿಹಾರಿ ಪ್ರಸಾದ್ ಸಿನ್ಹಾ
ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್, ಸೆಂಟ್ರಲ್ ಏರ್ ಕಮಾಂಡ್
೧ ಜನವರಿ ೨೦೧೯ – ೩೧ ಜನವರಿ ೨೦೨೧
Succeeded by
ಅಮಿತ್ ತಿವಾರಿ
Preceded by
ರಘುನಾಥ್ ನಂಬಿಯಾರ್
ಹಿರಿಯ ಏರ್ ಸ್ಟಾಫ್ ಅಧಿಕಾರಿ- ಈಸ್ಟ‌ರ್ನ್ ಏರ್ ಕಮಾಂಡ್
೧ ಮಾರ್ಚ್ ೨೦೧೭ – ೩೧ ಡಿಸೆಂಬರ್ ೨೦೧೮
Succeeded by
ಸಂದೀಪ್ ಸಿಂಗ್