ಶೈಲಾ ಯು.
ಗೋಚರ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಉಲ್ಲೇಖಗಳ ಅವಶ್ಯಕತೆ ಇದ್ದು, ಲೇಖನವನ್ನು ವಿಕಿಗೆ ತಕ್ಕಂತೆ ತಿದ್ದಬೇಕಿದೆ. |
ಅವರು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪಿಎಚ್.ಡಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಪ್ರಮುಖ ರಾಷ್ಟ್ರಮಟ್ಟದ ಕಮ್ಮಟಗಳು,ವಿಚಾರಸಂಕಿರಣಗಳು ಹಾಗು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇವರು ಬೇರೆ ಬೇರೆ ಸಂದರ್ಭದಲ್ಲಿ ೨೫ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ.
ಶಿಕ್ಷಣ
[ಬದಲಾಯಿಸಿ]- ಎಂ.ಎ : ಕನ್ನಡ ಸಾಹಿತ್ಯ,ಮಂಗಳೂರು ವಿಶ್ವವಿದ್ಯಾನಿಲಯ ೧೯೯೧
- ಪಿ.ಎಚ್.ಡಿ. ಪದವಿ : ೧೯೯೮
- ಯು.ಜಿ.ಸಿ. ಉಪನ್ಯಾಸಕ ಅರ್ಹತಾ ಪರೀಕ್ಷೆ : ಯು.ಜಿ.ಸಿ. ನವದೆಹಲಿ ತೇರ್ಗಡೆ,೧೯೯೨
- ಸಂಶೋಧನಾ ವಿಷಯ : ದಕ್ಷಿಣ ಕನ್ನಡ ಜಿಲ್ಲೆಯ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ
- ಪದವಿ ನೀಡಿದ ವಿಶ್ವವಿದ್ಯಾಲಯ : ಮಂಗಳೂರು ವಿಶ್ವವಿದ್ಯಾಲಯ
ಇತರ ಮಾಹಿತಿಗಳು
[ಬದಲಾಯಿಸಿ]- ಪ್ರಥಮ ಬಹುಮಾನ(ಲಲಿತಾ ರೈ ಮತ್ತು ಪದ್ಮಾ ಶೆಣೈ ದತ್ತಿನಿಧಿ)-ಎಂ.ಎಸ್.ವೇದಾ ಅವರ 'ಕಪ್ಪು ಕಿವಿಯ ಬಿಳಿಯ ಕುದುರೆಗಳು' ಕಾದಂಬರಿಯ ಕುರಿತ ವಿಮರ್ಶಾ ಲೇಖನ-೨೦೧೨
- ಸಹನಿರ್ದೇಶಕಿ,ಉಳ್ಳಾಲದ ರಾಣಿ ಅಬ್ಬಕ್ಕಳ ಕುರಿತು ಸಾಕ್ಷ್ಯಚಿತ್ರ -೨೦೧೨
- ಕಾರ್ಯದರ್ಶಿ,ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.)ಮಂಗಳೂರು;೨೦೧೧-೨೦೧೩
- ಪ್ರಸ್ತುತ ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.)ಮಂಗಳೂರು-ಇದರ ಅಧ್ಯಕ್ಷೆ;೨೦೧೫ರಿಂದ
- ಯುವಜನೋತ್ಸವ-೨೦೧೩ ಲಘು ಶಾಸ್ತ್ರೀಯ ಸಂಗೀತ ಸ್ವರ್ಧೆಯ ತೀರ್ಪುಗಾರರಲ್ಲಿ ಒಬ್ಬರು.
- ಯೋಜನಾ ಸಹಾಯಕಿಯಾಗಿ-೩ವರ್ಷಗಳು (ಯುಜಿಸಿ ಪ್ರಧಾನ ಸಂಶೋಧನಾ ಯೋಜನೆ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ; ೨೦೦೪-೨೦೦೮
- ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಿ ಪ್ರಕಟಗೊಳ್ಳಲಿರುವ ಅಕಾಡೆಮಿ ಪ್ರಕಟಣೆಗಳ 'ಪರಿಣಾಮ ಅಧ್ಯಯನ'ದ ಲೇಖಕರಲ್ಲಿ ಒಬ್ಬರು.
ಪ್ರಕಟಣೆಗಳು
[ಬದಲಾಯಿಸಿ]ಸ್ವತಂತ್ರ ಕೃತಿಗಳು
[ಬದಲಾಯಿಸಿ]- ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ;೨೦೦೨(ಪಿ.ಎಚ್.ಡಿ ಸಂಶೋಧನ ಮಹಾಪ್ರಬಂಧದ ಗ್ರಂಥರೂಪ)
- ಶಿವರಾಮ ಕಾರಂತ :ವ್ಯಕ್ತಿ-ಅಭಿವ್ಯಕ್ತಿ; ೨೦೧೦(ಶಿವರಾಮ ಕಾರಂತ ಬದುಕು-ಬರಹಗಳ ಕುರಿತ ವಿಮರ್ಶಾ ಲೇಖನಗಳು)
- ಮಹಿಳೆ:ನೆಲೆ-ಬೆಲೆ; ೨೦೧೦(ಮಹಿಳಾಸಂಬಂಧಿ ವಿಮರ್ಶಾ ಲೇಖನಗಳು )
- ಕೈಗನ್ನಡಿ; ೨೦೧೨(ಕನ್ನಡ ಸಾಹಿತ್ಯಸಂಬಂಧಿ ವಿಮರ್ಶಾ ಲೇಖನಗಳು)
- ಪ್ರಾದೇಶಿಕತೆಯೂ ಕಲ್ಲು ಹೇಳಿದ ಕಥೆಗಳೂ;೨೦೧೨(ಶಾಸನಾಧಾರಿತ ಲೇಖನಗಳು)
- ಎ.ಪಿ.ಮಾಲತಿ ಅವರ ಬದುಕು-ಬರಹಗಳ ಕುರಿತು ಕೃತಿ ಪ್ರಕಟಣೆ[೧]
ಸಂಪಾದಿತ ಕೃತಿಗಳು
[ಬದಲಾಯಿಸಿ]- ಅಬ್ಬಕ್ಕ ಸಂಕಥನ ೨೦೧೧ (ಉಳ್ಳಾಲ ರಾಣಿ ಅಬ್ಬಕ್ಕರ ಕುರಿತ ವಿಚಾರಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳು)
- ಶಿವರಾಮ ಕಾರಂತರ ಕಾದಂಬರಿಗಳ ಸಾಂಸ್ಕೃತಿಕ ಪ್ರಾದೇಶಿಕ ಪದಕೋಶ ೨೦೧೨ (ಶಿವರಾಮ ಕಾರಂತರ ಕಾದಂಬಗಳನಾಧರಿಸಿ)
- ಬೆಳ್ಳಿಬೆಡಗು ೨೦೧೫ (ಕರಾವಳಿಯ ಲೇಖಕಿಯರ-ವಾಚಕಿಯರ ಸಂಘ(ರಿ.)ದ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ)
ಉಲ್ಲೇಖ
[ಬದಲಾಯಿಸಿ]- ↑ ಚಂದ್ರಗಿರಿ ನಾಡೋಜ ಡಾ ಸಾರಾ ಅಬೂಬ್ಬಕ್ಕರ್ ಅಭಿನಂದ ಗ್ರಂಥ, ಸಂಪಾದಕರು ಡಾ ಸಬಿಹಾ.ಸ ಸಿರಿವರ ಪ್ರಕಾಶನ, ಬೆಂಗಳೂರು . ಮೊದಲ ಮುದ್ರಣ ೨೦೦೯ , ೨೯೦