ಶೃತಿ ಕೋಟ್ಯಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೭ ರ ಹರೆಯದ ’ಶೃತಿ ಕೋಟ್ಯಾನ್’, ಸದ್ಯಕ್ಕೆ ಮುಂಬಯಿ ನಗರದ ಮಾಟುಂಗಾದಲ್ಲಿರುವ ’ರಾಮ್ ನಾರಾಯನ್ ರುಯ ಕಾಲೇಜ್,’ ನಲ್ಲಿ, ಎಚ್. ಎಸ್. ಸಿ. ವ್ಯಾಸಂಗ ಮಾಡುತ್ತಿದ್ದಾಳೆ. ಶೃತಿ ೧೨ ನೇ ತರಗತಿಯ ಮೆರಿಟ್ ಅಂಕಗಳನ್ನು ಪಡೆಯುವ ಒತ್ತಡ ಹಾಗೂ ಆವಶ್ಯಕತೆಗಳನ್ನು ಬಲ್ಲಳು. ಕಾಲೇಜ್ ನ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿರುವ ಶೃತಿ, ಭರತನಾಟ್ಯ-ನೃತ್ಯದಲ್ಲಿ ಅತೀವ ಆಸಕ್ತಿಹೊಂದಿದ್ದಾಳೆ. ನೃತ್ಯದ ಬಗ್ಗೆ ಹೆಚ್ಚು ಗೀಳು. ತನ್ನ ೬ ನೇವಯಸ್ಸಿನಲ್ಲೇ ಅದು ಅವಳ ತಲೆಯಲ್ಲಿ ಚೆನ್ನಾಗಿ ಬೇರೂರಿತ್ತು. ಶೃತಿ 'ಉತ್ತಮ ಜಾನಪದ-ನೃತ್ಯಪಟು,' ವೂ ಹೌದು. ಈಗ, ಆಕೆ ಭರತನಾಟ್ಯದಲ್ಲಿ ಮುಂಬಯಿನ ಕಲಾರಸಿಕರಿಗೆ ಪರಿಚಿತಳಾಗಿದ್ದಾಳೆ.

ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಮುಂಬಯಿನ ದಾದರ್ ಉಪನಗರದ ವಾಸಿಯಾದ ಶ್ರುತಿ, ದಕ್ಷಿಣ ಕನ್ನಡದ ’ಹಳೆಯಂಗಡಿ,’ ಯ ಮೂಲದಿಂದ ಬಂದವಳು. ತಂದೆ, 'ಕಿಶೋರ್ ಕೋಟ್ಯಾನ್, ತಾಯಿ, 'ಉದ್ಯಾವರ ಸವಿತಾ ಕೋಟ್ಯಾನ್,' ದಂಪತಿಗಳ ಪುತ್ರಿಯಾದ ಶೃತಿ, ಈಗ 'ಭರತ ನಾಟ್ಯಂ-ರಂಗ ಪ್ರವೇಶ,'ಕ್ಕೆ ಸಿದ್ಧಳಾಗುತ್ತಿದ್ದಾಳೆ.

’ಶೃತಿ ಕೋಟ್ಯಾನ್,’ ನೃತ್ಯಗುರುಗಳು[ಬದಲಾಯಿಸಿ]

ಡಾ. ಸಂದ್ಯಾ ಪುರೇಚಾರವರು’, ಅವಳ ನೃತ್ಯಗುರುಗಳು. 'ಆಂಗಿಕ ಅಭಿನಯ', ಭರತನಾಟ್ಯದಲ್ಲಿ, 'ಡಾಕ್ಟರೇಟ್,' ಗಳಿಸಿದ್ದಾರೆ. ಇಂತಹ ನುರಿತ ಹೆಸರಾಂತ ಕಲಾವಿದೆಯಿಂದ ಪ್ರೇರಿತಳಾಗಿರುವ ಶ್ರುತಿ, ತಾನೂ ಎತ್ತರಕ್ಕೇರುವ ನಿಟ್ಟಿನಲ್ಲಿ ಪ್ರಯತ್ನಶೀಲಳಾಗಿದ್ದಾಳೆ. ಇಷ್ಟು ಚಿಕ್ಕ ಪ್ರಾಯದಲ್ಲೇ ಶೃತಿಯ ಸಾಧನೆಯಳನ್ನುಗಮನಿಸಿದರೆ, ವಿಸ್ಮಯವಾಗುತ್ತದೆ. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇಂದಿನ ದಿನಗಳಲ್ಲಿ 'ಶೃತಿ', ಒಬ್ಬ ಹೊಣೆಗಾರಿಕೆಯ 'ನೃತ್ಯಾಂಗನೆ,' ಯಾಗಿ ಕಾಣಿಸಿಕೊಳ್ಳುತ್ತಿದ್ದಾಳೆ[ಬದಲಾಯಿಸಿ]

ಹಲವಾರು ಪ್ರತಿಷ್ಠಿತ ಸಮಾರಂಭಗಳಲ್ಲಿ ಪ್ರದರ್ಶನ ಕೊಟ್ಟಿದ್ದಾಳೆ[ಬದಲಾಯಿಸಿ]

೨೦೦೯, ರ ಆಗಸ್ಟ್, ೨೨ ರ ಸಂಜೆ, ಶೃತಿ ಕೋಟ್ಯಾನ್,'ಭರತನಾಟ್ಯ-ರಂಗಭೂಮಿ-ಪ್ರವೇಶ,[ಬದಲಾಯಿಸಿ]

ಕಾಲೇಜಿನ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಮೆರಿಟ್ ನ್ನೂ ಪಡೆಯುತ್ತಿರುವ ಶೃತಿ, ಪಠ್ಯೇತರ ವಲಯಗಳಲ್ಲೂ ವಿಶೇಷ ಆಸಕ್ತಿಯನ್ನು ಹೊಂದಿದ್ದಾಳೆ. ಮುಂಬಯಿನಗರದ, 'ಸಿದ್ಧಿವಿನಾಯಕ ಮಂದಿರ,' ದ ಬದಿಯಲ್ಲಿರುವ ’ರವೀಂದ್ರ ನಾಟ್ಯಮಂದಿರ,’ ದಲ್ಲಿ, ಆಗಸ್ಟ್, ೨೨ ರ ಸಂಜೆ, ೬ ಗಂಟೆಗೆ, 'ಅರಂಗೇಟ್ರಂ,' ಅಥವಾ, 'ಭರತನಾಟ್ಯ-ರಂಗಭೂಮಿ-ಪ್ರವೇಶ,' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತನ್ನ ಮೆಚ್ಚಿನ ಗುರುಗಳಾದ, ’ಸಂಧ್ಯಾ ಪುರೇಚಾ’ ಮತ್ತು ’ಆಚಾರ್ಯ ಪ್ರವೀಣ್ ಕುಮಾರ್,’ ಹಾಗೂ ಆಹ್ವಾನಿತರೆಲ್ಲರ ಸಮ್ಮುಖದಲ್ಲಿ, ಈ ಸಮಾರಂಭ ಜರುಗಲಿದೆ.