ಹಳೆಯಂಗಡಿ

ವಿಕಿಪೀಡಿಯ ಇಂದ
Jump to navigation Jump to search

ದಕ್ಷಿಣಕನ್ನಡ ಜಿಲ್ಲೆಮಂಗಳೂರು ತಾಲೂಕಿನ ಮೂಲ್ಕಿಯ ಬಳಿ ಇರುವ ಒಂದು ಊರು ಹಳೆಯಂಗಡಿ. ಇದು ಮಂಗಳೂರಿನಿಂದ ಸುಮಾರು ೩೦ ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ೧೭ರ ಪಕ್ಕದಲ್ಲಿದೆ.ಹಳೆಯಂಗಡಿಯು ವ್ಯಾವಹಾರಿಕವಾಗಿ ಅಭಿವ್ರದ್ದಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿದೆ. ಅಲ್ಲದೆ ಸಾಂಸ್ಕ್ರತಿಕ, ಶೈಕ್ಶಣಿಕ, ಕ್ರೀಡಾಕ್ಷೇತ್ರದಲ್ಲೂ ಸಾಧನೆಯನ್ನು ಮಾಡುತ್ತಿದೆ.

ಪರಿಚಯ[ಬದಲಾಯಿಸಿ]

ಹಳೆಯಂಗಡಿಯು ಹಲವಾರು ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ. ದಿನೇ ದಿನೇ ಹಳೆಯಂಗಡಿಯಲ್ಲಿ ಅನೇಕ ಕಟ್ಟಡಗಳು ತಲೆಯೆತ್ತುತಿದೆ. ಇತ್ತೀಚಿನ ದಿನಗಳಲ್ಲಿ ಹಳೆಯಂಗಡಿಯು ಯಾವ ಮಹಾನಗರಕ್ಕೂ ಕಡಿಮೆಯಿಲ್ಲವೆಂಬ ರೀತಿಯಲ್ಲಿ ಬೆಳೆಯುತ್ತಿದೆ. ಹಳೆಯಂಗಡಿಯಲ್ಲಿ ಅನೇಕ ವಿದ್ಯಾಕೇಂದ್ರಗಳಿವೆ. ಅನುದಾನಿತ ಯು.ಬಿ.ಯಮ್.ಸಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜು,ಸಿ.ಎಸ್.ಐ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಂತಾದವು ಪ್ರಮುಖವಾದುವು.

ಹಳೆಯಂಗಡಿಯಲ್ಲಿರುವ ಪ್ರಸಿದ್ದ ದೇವಸ್ಥಾನಗಳು[ಬದಲಾಯಿಸಿ]

  1. ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ,ಪಾವಂಜೆ.
  2. ಶ್ರೀ ಜ್ನಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನ ,ಪಾವಂಜೆ.
  3. ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ,ತೋಕೂರು.
  4. ಶ್ರೀ ಉಮಾಮಹೇಶ್ವರ ದೇವಸ್ಥಾನ ,ಹೊಯ್ಗೆಗುಡ್ಡೆ ,ಪಡುಪಣಂಬೂರು.

ಹಳೆಯಂಗಡಿಯ ವೈಶಿಷ್ಟ್ಯ[ಬದಲಾಯಿಸಿ]

  • ಊರಿನ ಗ್ರಾಮದೇವರ ಶ್ರೀಮ ಮಹಾಲಿಂಗೇಶ್ವರ ಮಹಾಗಣಪತಿ .ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯು ಬಹಳ ವೈಭವದಿಂದ ನಡೆಯುತ್ತದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರುತ್ತದೆ. ತೋಕೂರಿನ ಶ್ರೀ ಸುಬ್ರಹ್ಮಣ್ಯ ದೇವಾಸ್ಥಾನವು ಬಹಳ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದೆ.ಷಷ್ಟಿಯ ದಿನ ಲಕ್ಷಾಂತರ ಭಕ್ತರು ಇಲ್ಲಿಗೆ ಧಾವಿಸಿ ಪೂಜೆ ಸಲ್ಲಿಸುತ್ತಾರೆ. ಊರ ಪರಊರ ಭಕ್ತಾದಿಗಳು ಇಲ್ಲಿಗೆ ಬಂದು ಪುನೀತರಾಗುತ್ತರೆ.
  • ಹಳೆಯಂಗಡಿಯು ಕ್ರೀಡಾಕ್ಷೇತ್ರದಲ್ಲೂ ಬೆಳವಣಿಗೆಯನ್ನು ಹೊಂದುತ್ತಲಿದೆ. ಹಳೆಯಂಗಡಿಯು ಜನಪದ ಕ್ರೀಡೆಗಳ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಲಿದೆ.ಜನಪದ ಕ್ರೀಡೆಗಳ ಉಳಿವಿಗಾಗಿ ಪ್ರತಿವರ್ಷವೂ ಪಾವಂಜೆಯ ತೇರಿನ ಗದ್ದೆಯಲ್ಲಿ "ಕೆಸರು ಗದ್ದೆ" ಕ್ರೀಡೋತ್ಸವ ವನ್ನು ನಡೆಸಲಾಗುತ್ತಡೆ. ಗ್ರಾಮೀಣ ಜನರ ನೆಚ್ಚಿನ ಕ್ರೀಡೆ ಕೆಸರು ಗದ್ದೆ. ಮಣ್ಣಿನ ಮಕ್ಕಳೆಲ್ಲರೂ ಒಂದಾಗಿ ಕೆಸರು ಗದ್ದೆ ಉತ್ಸವದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾಭಿಮಾನವನ್ನು ಎತ್ತಿ ಹಿಹಿಡಿಯುತ್ತಾರೆ.
  • ಈ ಉತ್ಸವದಲ್ಲಿ ಹಿಮ್ಮುಖ ಓಟ ,ಮೂರು ಕಾಲಿನ ಓಟ, ನಿಧಿ ಶೋಧ, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ , ಜಾನಪದ ಗೀತೆ, ಪಾಡ್ದನ, ಜಾನಪದ ನೃತ್ಯ ಮುಂತಾದ ಸ್ಪರ್ಧೆಗಳು ನಡೆಯುತ್ತದೆ. ಒಟ್ಟಿನಲ್ಲಿ ಈ ಕೆಸರುಗದ್ದೆ ಉತ್ಸವದಲ್ಲಿ ಪಾಲ್ಗೊಂಡು ಕೆಸರಿನಲ್ಲಿ ಆಡುವುದೇ ಒಂದು ಖುಷಿ.ಮಾತ್ರವಲ್ಲ ನೋಡುವವರಿಗೂ ಖುಷಿ.
  • ಹಳೆಯಂಗಡಿಯ ಮತ್ತೊಂದು ಜಾನಪದ ಕ್ರೀಡೆ ಕಂಬಳ.ಪ್ರಾಚೀನ ಕಾಲದಿಂದಲೂ ನಡೆದು ಬಂದ ಮುಲ್ಕಿ ಸೀಮೆ ಅರಸು ಕಂಬಳ ಹಳೆಯಂಗಡಿಯ ಇನ್ನೊಂದು ವಿಶೇಷ. ಹಳೆಯಂಗಡಿಯ ಪಡುಪಣಂಬೂರು ಬಳಿ ನಡೆಯುವ ಈ ಕಂಬಳಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಅನೇಕ ತಂಡಗಳು ಇಲ್ಲಿ ಭಾಗವಹಿಸುತ್ತವೆ. ಕಂಬಳವನ್ನು ಹಳೆಯಂಗಡಿಯ ಜನ ಜಾತ್ರೆಯಮ್ತೆ ಆಚರಿಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಕಂಬಳದಲ್ಲಿ ಸಾವಿರಾರು ಜನರು ಸೇರುತ್ತಾರೆ.
  • ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ ಸಾವಂತರು ಅರಮನೆಯಲ್ಲಿ ಕುಳಿತಿರುತ್ತಾರೆ. ಮುಲ್ಕಿ ಸೀಮೆ ಅರಸರಾದವರು ಕಂಬಳದ ಗದ್ದೆಗೆ ಇಳಿಯಬಾರದೆಂಬ ಪ್ರತೀತಿ ಇದೆ. ಈ ಕಂಬಲು ಜನರಿಗೆ ಮನರಂಜನೆ ಒದಗಿಸುವುದರಲ್ಲಿ ಸಂದೇಹವಿಲ್ಲ. ಹಳೆಯಂಗಡಿಯಲ್ಲಿ ಕೋಳಿ ಅಂಕವೂ (ತುಳುವಿನಲ್ಲಿ ಕೋರ್ದಕಟ್ಟ)ನಡೆಯುತ್ತದೆ. ಹಳೆಯಂಗಡಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.