ಶೀತಲಾ ಮಾತಾ ಮಂದಿರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶೀತಲಾ ಮಾತಾ ಮಂದಿರ್ ಭಾರತೀಯ ಮಹಾಕಾವ್ಯವಾದ ಮಹಾಭಾರತದ ಪ್ರಕಾರ ಪಾಂಡವರು ಮತ್ತು ಕೌರವರ ಶಿಕ್ಷಕರಾಗಿದ್ದ ಗುರು ದ್ರೋಣಾಚಾರ್ಯರ ಪತ್ನಿ ಮಾತಾ ಶೀತಲಾ ದೇವಿಗೆ ಸಮರ್ಪಿತವಾದ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಭಾರತದ ಹರಿಯಾಣ ರಾಜ್ಯದ ಗುರುಗ್ರಾಮ್ ಜಿಲ್ಲೆಯ ಗುರುಗ್ರಾಮ್ ನಗರದ ಶೀತಲಾ ಮಾತಾ ರಸ್ತೆಯಲ್ಲಿದೆ.

ಈ ದೇವಾಲಯವು ಬಹಳ ಪ್ರಸಿದ್ಧವಾಗಿದ್ದು ನವರಾತ್ರಿ ಮತ್ತು ಇತರ ಹಬ್ಬಗಳಲ್ಲಿ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.[೧][೨][೩]

ದ್ರೋಣಾಚಾರ್ಯರ ಪತ್ನಿ ಕೃಪಿ ಅನಾರೋಗ್ಯಪೀಡಿತ ಮಕ್ಕಳನ್ನು, ವಿಶೇಷವಾಗಿ ಸಿಡುಬು ರೋಗದಿಂದ ಬಳಲುತ್ತಿರುವವರನ್ನು ನೋಡಿಕೊಳ್ಳಲು ತನ್ನನ್ನು ಮುಡಿಪಾಗಿಸಿಕೊಂಡಳು. ಜನರು ಪ್ರೀತಿ ಮತ್ತು ಗೌರವದಿಂದ ಅವಳನ್ನು ಮಾತಾ (ತಾಯಿ) ಎಂದು ಕರೆದರು. ಅವಳ ಮರಣದ ನಂತರ ಗ್ರಾಮಸ್ಥರು ಅವಳ ಗೌರವಾರ್ಥವಾಗಿ ಕೇಶೋಪುರ್‌ನಲ್ಲಿ ಒಂದು ದೇವಾಲಯವನ್ನು ನಿರ್ಮಿಸಿದರು ಮತ್ತು ಅವಳನ್ನು ಮಾತಾ ಶೀತಲಾ ಅಥವಾ ಮಾತಾ ಮಸಾನಿ, ಅಂದರೆ 'ಸಿಡುಬಿನ ದೇವತೆ' ಎಂದು ನೆನಪಿಸಿಕೊಳ್ಳಲಾರಂಭಿಸಲಾಯಿತು.

ಮೂರು ಶತಮಾನಗಳ ಹಿಂದೆ, ಮಸಾನಿ ತಾಯಿಯು ಗುರುಗ್ರಾಮ್ ಹಳ್ಳಿಯ ಜಾಟ್ ಚೌಧರಿ ಸಿಂಗ್ ರಾಮ್ ಉರುಫ್ ಸಿಂಘಾಗೆ ಕನಸಿನಲ್ಲಿ ಕಾಣಿಸಿಕೊಂಡಳು ಎಂದು ಹೇಳಲಾಗುತ್ತದೆ. ಅವಳು ಕೇಶೋಪುರವನ್ನು ಬಿಟ್ಟು ಗುರುಗ್ರಾಮ್‌ಗೆ ಬರಬೇಕೆಂಬ ಆಸೆ ವ್ಯಕ್ತಪಡಿಸಿದಳು. ಅವಳು ಅವನಿಗೆ ಒಂದು ಸ್ಥಳವನ್ನು ನಿರ್ಮಿಸುವಂತೆ ಮಾಡಿದಳು.

ಉಲ್ಲೇಖಗಳು[ಬದಲಾಯಿಸಿ]

  1. "Gurgaon admin to prepare 3-D maps of 100 buildings". hindustantimes.com. Retrieved 2016-03-03.
  2. "शीतला माता मंदिर में नवरात्र मेले की तैयारी". Dainik Jagran (in ಹಿಂದಿ). Retrieved 2019-03-19.
  3. "Sheetla Mata Mandir (Gurgaon, India): Address, Phone Number, Point of Interest & Landmark Reviews - TripAdvisor". www.tripadvisor.in. Retrieved 2016-03-03.