ಶಿವರಾಜ್ ಸಿಂಗ್ ಚೌಹಾಣ್

ವಿಕಿಪೀಡಿಯ ಇಂದ
Jump to navigation Jump to search

ಶಿವರಾಜ್ ಸಿಂಗ್ ಚೌಹಾಣ್(ಜನನ:ಮಾರ್ಚ್ ೫,೧೯೫೯) ಇವರು ಮಧ್ಯಪ್ರದೇಶದ ಮುಖ್ಯಮಂತ್ರಿಗಳು. ೨೦೦೩ರಲ್ಲಿ ಬಾಬುಲಾಲ್ ಗೌರ್ ಅವರ ನಂತರ ಇವರು ಮುಖ್ಯಮಂತ್ರಿಯಾದರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ೧೯೯೧ರಿಂದ ವಿದಿಷಾ ಕ್ಷೇತ್ರದಿಂದ ಲೋಕಸಭೆಗೆ ಐದು ಬಾರಿ ಚುನಾಯಿತರಾಗಿದ್ದರು. ೨೦೦೮ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿಗೆ ಕೊಂಡೊಯ್ದ ಇವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಇವರು ಭೂಪಾಲ್ಬರ್ಕತುಲ್ಲಾಹ್ ವಿಶ್ವವಿದ್ಯಾಲಯದಿಂದ ಎಮ್.ಎ(ತತ್ವಶಾಸ್ತ್ರ)ದಲ್ಲಿ ಬಂಗಾರದ ಪದಕವನ್ನು ಪಡೆದಿದ್ದಾರೆ.