ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಶಾಸ್ತ್ರ ಎನ್ನುವುದು ಸಂಸ್ಕೃತ ಶಬ್ದವಾಗಿದ್ದು ಇದರ ಸಾಮಾನ್ಯ ಅರ್ಥ "ಮಾರ್ಗದರ್ಶಕ ಸೂತ್ರ, ನಿಯಮಗಳು, ಕೈಪಿಡಿ, ಸಾರಸಂಗ್ರಹ, ಪುಸ್ತಕ ಅಥವಾ ಗ್ರಂಥ" ಎಂದಾಗಿದೆ. ಭಾರತೀಯ ಸಾಹಿತ್ಯದ ವಿಷಯದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಅಭ್ಯಾಸದ ಒಂದು ಸುನಿಶ್ಚಿತ ಕ್ಷೇತ್ರದಲ್ಲಿನ ತಾಂತ್ರಿಕ ಅಥವಾ ವಿಶೇಷ ಜ್ಞಾನಕ್ಕೆ ಪ್ರತ್ಯಯ ಶಬ್ದವಾಗಿ ಬಳಸಲಾಗುತ್ತದೆ.[೧]

ಶಾಸ್ತ್ರ ಶಬ್ದದ ಅರ್ಥದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ಮೂಲಭೂತ ತಿಳಿವಳಿಕೆ. ಆಧುನಿಕ ನವಪದ ಪ್ರಯೋಗದ ವಿಷಯದಲ್ಲಿನ ಉದಾಹರಣೆಗಳಲ್ಲಿ ಭೌತಿಕಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅರ್ಥಶಾಸ್ತ್ರ,[೨] ನೀತಿಶಾಸ್ತ್ರ ಸೇರಿವೆ.

ಕೆಲವು ಇತರ ಉದಾಹರಣೆಗಳೆಂದರೆ ಯೋಗಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಕಾಮಶಾಸ್ತ್ರ, ಮೋಕ್ಷಶಾಸ್ತ್ರ, ಅಲಂಕಾರಶಾಸ್ತ್ರ, ಕಾವ್ಯಶಾಸ್ತ್ರ, ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರ ಇತ್ಯಾದಿ.

ಉಲ್ಲೇಖಗಳು[ಬದಲಾಯಿಸಿ]

  1. James Lochtefeld (2002), "Shastra" in The Illustrated Encyclopedia of Hinduism, Vol. 2: N-Z, Rosen Publishing, ISBN 0-8239-2287-1, page 626
  2. Boesche, Roger (January 2003). "Kautilya's Arthaśāstra on War and Diplomacy in Ancient India". The Journal of Military History. Society for Military History. 67 (1): 9–37. doi:10.1353/jmh.2003.0006. ISSN 0899-3718.CS1 maint: ref=harv (link)
"https://kn.wikipedia.org/w/index.php?title=ಶಾಸ್ತ್ರ&oldid=986478" ಇಂದ ಪಡೆಯಲ್ಪಟ್ಟಿದೆ