ವಿಷಯಕ್ಕೆ ಹೋಗು

ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಸ್ತ್ರ ಎನ್ನುವುದು ಸಂಸ್ಕೃತ ಶಬ್ದವಾಗಿದ್ದು ಇದರ ಸಾಮಾನ್ಯ ಅರ್ಥ "ಮಾರ್ಗದರ್ಶಕ ಸೂತ್ರ, ನಿಯಮಗಳು, ಕೈಪಿಡಿ, ಸಾರಸಂಗ್ರಹ, ಪುಸ್ತಕ ಅಥವಾ ಗ್ರಂಥ" ಎಂದಾಗಿದೆ. ಭಾರತೀಯ ಸಾಹಿತ್ಯದ ವಿಷಯದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಅಭ್ಯಾಸದ ಒಂದು ಸುನಿಶ್ಚಿತ ಕ್ಷೇತ್ರದಲ್ಲಿನ ತಾಂತ್ರಿಕ ಅಥವಾ ವಿಶೇಷ ಜ್ಞಾನಕ್ಕೆ ಪ್ರತ್ಯಯ ಶಬ್ದವಾಗಿ ಬಳಸಲಾಗುತ್ತದೆ.[]

ಶಾಸ್ತ್ರ ಶಬ್ದದ ಅರ್ಥದ ಒಂದು ನಿರ್ದಿಷ್ಟ ವಿಷಯದ ಬಗ್ಗೆ ವೈಜ್ಞಾನಿಕ ಮತ್ತು ಮೂಲಭೂತ ತಿಳಿವಳಿಕೆ. ಆಧುನಿಕ ನವಪದ ಪ್ರಯೋಗದ ವಿಷಯದಲ್ಲಿನ ಉದಾಹರಣೆಗಳಲ್ಲಿ ಭೌತಿಕಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅರ್ಥಶಾಸ್ತ್ರ,[] ನೀತಿಶಾಸ್ತ್ರ ಸೇರಿವೆ.

ಕೆಲವು ಇತರ ಉದಾಹರಣೆಗಳೆಂದರೆ ಯೋಗಶಾಸ್ತ್ರ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಕಾಮಶಾಸ್ತ್ರ, ಮೋಕ್ಷಶಾಸ್ತ್ರ, ಅಲಂಕಾರಶಾಸ್ತ್ರ, ಕಾವ್ಯಶಾಸ್ತ್ರ, ಸಂಗೀತ ಶಾಸ್ತ್ರ, ನಾಟ್ಯಶಾಸ್ತ್ರ ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]
  1. James Lochtefeld (2002), "Shastra" in The Illustrated Encyclopedia of Hinduism, Vol. 2: N-Z, Rosen Publishing, ISBN 0-8239-2287-1, page 626
  2. Boesche, Roger (January 2003). "Kautilya's Arthaśāstra on War and Diplomacy in Ancient India". The Journal of Military History. 67 (1). Society for Military History: 9–37. doi:10.1353/jmh.2003.0006. ISSN 0899-3718. {{cite journal}}: Invalid |ref=harv (help)


"https://kn.wikipedia.org/w/index.php?title=ಶಾಸ್ತ್ರ&oldid=986478" ಇಂದ ಪಡೆಯಲ್ಪಟ್ಟಿದೆ