ವಿಷಯಕ್ಕೆ ಹೋಗು

ಶಾರ್ಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Emirate of Sharjah
إمارة الشارقةّ
Imārat al-Shāriqa
Flag of Emirate of Sharjah
Coat of arms of Emirate of Sharjah
Location of Sharjah in the UAE
Location of Sharjah in the UAE
CountryUnited Arab Emirates
SeatSharjah
Boroughs
Government
 • TypeAbsolute monarchy
 • EmirSultan bin Mohamed Al-Qasimi
Area
 • Total೨,೫೯೦ km (೧,೦೦೦ sq mi)
Population
 (2008)
 • Total೮,೯೦,೬೬೯


ಶಾರ್ಜ ಇದು ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್ ಅರಬ್ ಎಮಿರೇಟ್ಸ್)ಏಳು ಸಂಸ್ಥಾನಗಳಲ್ಲಿ ಒಂದು (ಭಾರತದಲ್ಲಿ ಇರುವ ರಾಜ್ಯಗಳ ಹಾಗೆ). ಶಾರ್ಜ ಸಂಸ್ಥಾನವು ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್ ಅರಬ್ ಎಮಿರೇಟ್ಸ್) ಸಾಂಸ್ಕೃತಿಕ ರಾಜಧಾನಿ ಎಂದು ಗುರುತಿಸಲ್ಪಟ್ಟಿದೆ. ಶಾರ್ಜ ನಗರವು ದೇಶದ ರಾಜಧಾನಿ ಅಬು ಧಾಬಿಯಿಂದ ಸುಮಾರು ೧೭೦ಕಿ.ಮೀ ದೂರದಲ್ಲಿದೆ.

ವಿಸ್ತಾರ ಹಾಗೂ ಜನಸಂಖ್ಯೆ[ಬದಲಾಯಿಸಿ]

ಶಾರ್ಜ ಸಂಸ್ಥಾನವು ವಿಸ್ತಾರದಲ್ಲಿ ೨೬೦೦ ಚದುರ ಕಿ.ಮೀ ಇದ್ದು ಸುಮಾರು ೮೦೦೦೦೦ (೨೦೦೮ ಜನಗಣತಿ ಪ್ರಕಾರ) ಜನಸಂಖ್ಯೆ ಹೊಂದಿದೆ. ಶಾರ್ಜ ಸಂಸ್ಥಾನವು ಕಲ್ಬ (Kalba), ದಿಬ್ಬ ಆಲ್ ಹಿಸ್ನ್(Dibba Al-Hisn) ಮತ್ತು ಖೋರ್ ಫಕ್ಕನ್ (Khor Fakkan) ಎಂಬ ಇತರೆ ಸಣ್ಣ ಪಟ್ಟಣಗಳನ್ನು ಒಳಗೊಂಡಿದೆ.

Khor Fakkan beach

ಸಂಯುಕ್ತ ಅರಬ್ ಸಂಸ್ಥಾನವು (ಯುನೈಟೆಡ್ ಅರಬ್ ಎಮಿರೇಟ್ಸ್) ರಾಜರ ಆಡಳಿತವಿರುವ ಕೆಲವೇ ದೇಶಗಳಲ್ಲಿ ಒಂದು. ಇಲ್ಲಿಯ ರಾಜರನ್ನು ಶೇಖ್ ಗಳೆಂದು ಕರೆಯುತ್ತಾರೆ. ಪ್ರಸ್ತುತ ಸುಲ್ತಾನ್ ಬಿನ್ ಮುಹಮ್ಮದ್ ಆಲ್ ಕಾಸಿಮಿ (Dr Sultan bin Muhammad Al-Qasimi) ಅವರು ಶಾರ್ಜಾದ ಶೇಖ್ ಆಗಿರುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಶಾರ್ಜ&oldid=1098705" ಇಂದ ಪಡೆಯಲ್ಪಟ್ಟಿದೆ