ಶಾಂತಿ ದವೆ
ಶಾಂತಿ ದವೆ | |
---|---|
Born | ಬದಪುರ, ಗುಜರಾತ್, ಭಾರತ | ೨೫ ಸೆಪ್ಟೆಂಬರ್ ೧೯೩೧
Occupation | ವರ್ಣಚಿತ್ರಕಾರ |
Known for | ಭಿತ್ತಿಚಿತ್ರಕಾರ, ವರ್ಣಚಿತ್ರಗಳು |
Movement | ಬರೋಡಾ ಗ್ರೂಪ್[೧] |
Awards | ಪದ್ಮಶ್ರಿ |
ಶಾಂತಿ ದವೆ (ಜನನ ೨೫ ಸೆಪ್ಟೆಂಬರ್ ೧೯೩೧) ಒಬ್ಬ ಭಾರತೀಯ ವರ್ಣಚಿತ್ರಕಾರ ಮತ್ತು ಶಿಲ್ಪಿ, [೨] [೩] ಇಪ್ಪತ್ತನೇ ಶತಮಾನದ ಪ್ರಮುಖ ಭಾರತೀಯ ಕಲಾವಿದರಲ್ಲಿ ಒಬ್ಬರೆಂದು ಅನೇಕರು ಪರಿಗಣಿಸಲ್ಪಟ್ಟಿದ್ದಾರೆ. [೪] ಅವರು ಲಲಿತ ಕಲಾ ಅಕಾಡೆಮಿ ಮತ್ತು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ. [೫] ಭಾರತ ಸರ್ಕಾರವು ೧೯೮೫ ರಲ್ಲಿ ಅವರಿಗೆ ಪದ್ಮಶ್ರೀಯ ಗೌರವವನ್ನು ನೀಡಿತು [೬]
ಜೀವನಚರಿತ್ರೆ
[ಬದಲಾಯಿಸಿ]ದವೆ, ೨೫ ಸೆಪ್ಟೆಂಬರ್ ೧೯೩೧ ರಂದು ಉತ್ತರ ಗುಜರಾತ್ ಗ್ರಾಮವಾದ ಬಾದ್ಪುರದಲ್ಲಿ ಒಂದು ಸಾಧಾರಣ ಕುಟುಂಬದ ನಾಲ್ಕು ಮಕ್ಕಳಲ್ಲಿ ಒಬ್ಬರಾಗಿ ಜನಿಸಿದರು. [೭] ಅವರು 1951 ರಲ್ಲಿ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದಿಂದ ತಮ್ಮ ಶಿಕ್ಷಣವನ್ನು ಪಡೆದರು, ಅಲ್ಲಿಂದ ಅವರು ಫೈನ್ ಆರ್ಟ್ಸ್ ಫ್ಯಾಕಲ್ಟಿಯಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದರು. [೫] ಅವರು ಬ್ಯಾನರ್‌ಗಳು ಮತ್ತು ಸೈನ್ ಬೋರ್ಡ್‌ಗಳನ್ನು ಮಾಡುವ ವಾಣಿಜ್ಯ ಕಲಾವಿದರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಆದರೆ ನಿಧಾನವಾಗಿ ವರ್ಣಚಿತ್ರಕಾರರಾಗಿ ತಮ್ಮ ಛಾಪು ಮೂಡಿಸಿದರು. ಇವರ ಚಿತ್ರಕೃತಿಗಳು ನ್ಯೂಯಾರ್ಕ್ ನ ಜೆ.ಎಫ಼್. ಕೆ ವಿಮಾನ ನಿಲ್ದಾಣದ ವಿ.ಐ.ಪಿ ಲಾಂಜ್‌ಗಳಲ್ಲಿ, ನ್ಯೂಯಾರ್ಕ್ ನ ಏರ್ ಇಂಡಿಯಾ ಬುಕಿಂಗ್ ಕಚೇರಿಗಳಲ್ಲಿ, ಲಾಸ್ ಏಂಜಲೀಸ್, ರೋಮ್, ಸಿಡ್ನಿ ಮತ್ತು ಪರ್ತ್ ನಲ್ಲಿ ರಾರಾಜಿಸಿತ್ತಿವೆ. [೮] [೭] ವಿಮಾನ ನಿಲ್ದಾಣದಲ್ಲಿನ ಇವರ ಭಿತ್ತಿಚಿತ್ರ ವನ್ನು ನ್ಯೂಯಾರ್ಕ್ ಟೈಮ್ಸ್ ತನ್ನ ಮುಖಪುಟದಲ್ಲಿ ೫ ಫೆಬ್ರವರಿ ೧೯೬೪ ರಂದು ಲಿಟಲ್ ಗುಜರಾತ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿತು. [೫]
ದವೆ ಅವರ ಚಿತ್ರಕೃತಿಗಳು ಅಮೂರ್ತವಾಗಿರುತ್ತವೆ, ಅಲಂಕಾರ ಲಿಪಿ(ಕ್ಯಾಲಿಗ್ರಫಿ), ತೈಲ ವರ್ಣ, ಎನ್ಕಾಸ್ಟಿಕ್ (ಬಿಸಿ ಮೇಣದ ಚಿತ್ರಕಲೆ) ತಂತ್ರಗಳನ್ನು ಬಳಸುತ್ತಾರೆ. ಅವರು ಮರದ ಬ್ಲಾಕ್ ಪೇಂಟಿಂಗ್, ಕಲ್ಲಿನ ಕೆತ್ತನೆ ಮತ್ತು ನೇಯ್ಗೆಯನ್ನು ಒಳಗೊಂಡಿರುವ ದೊಡ್ಡ ಪ್ರಮಾಣದ ಹಲವಾರು ಭಿತ್ತಿಚಿತ್ರಗಳನ್ನು ಮಾಡಿದ್ದಾರೆ. [೫] ಅವರು ೧೯೫೭ ರಲ್ಲಿ ತಮ್ಮ ಮೊದಲ ವೈಯಕ್ತಿಕ ಪ್ರದರ್ಶನವನ್ನು ಮಾಡಿದರು. ಪ್ರಪಂಚದ ಅನೇಕ ಭಾಗಗಳಲ್ಲಿ ಫಿಲಿಪೈನ್ಸ್, ಸ್ವಿಟ್ಜರ್ಲೆಂಡ್, ಲಂಡನ್, ಜಪಾನ್, ಫ್ರಾನ್ಸ್, ಪೂರ್ವ ಯುರೋಪ್ ಮತ್ತು ಮಧ್ಯಪ್ರಾಚ್ಯದಂತಹ ಸ್ಥಳಗಳಲ್ಲಿ ಚಿತ್ರಪ್ರದರ್ಶನಗಳನ್ನು ಮಾಡಿದ್ದಾರೆ. [೭] ಅವರ ರಚನೆಗಳನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನವದೆಹಲಿ ಮತ್ತು ಅನೇಕ ಸಾರ್ವಜನಿಕ ಸ್ಥಳಗಳಂತಹ ಆರ್ಟ್ ಗ್ಯಾಲರಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ಅವರ ವರ್ಣಚಿತ್ರಗಳನ್ನು ಕ್ರಿಸ್ಟೀಸ್ [೯] [೧೦] ಸೋಥೆಬಿಸ್ [೧೦] ಮತ್ತು ಬೋನ್‌ಹಾಮ್ಸ್‌ನಂತಹ ಪ್ರತಿಷ್ಠಿತ ಪ್ರದರ್ಶನ ಮಳಿಗೆಗಳಲ್ಲಿ ಮಾರಾಟವಾಗಿದೆ. [೧೧]
ದವೆ ಅವರು ಸಾಹಿತ್ಯ ಕಲಾ ಪರಿಷತ್ತಿನ ಮಾಜಿ ಸದಸ್ಯರಾಗಿದ್ದಾರೆ ಮತ್ತು ಲಲಿತ ಕಲಾ ಅಕಾಡೆಮಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. [೭]
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]ದವೆ ಅವರು ೧೯೫೬ ರಿಂದ ೧೯೫೮ ರವರೆಗೆ ಸತತವಾಗಿ ಮೂರು ವರ್ಷಗಳ ಕಾಲ ಲಲಿತ ಕಲಾ ಅಕಾಡೆಮಿಯನ್ನು ಗೆದ್ದಿದ್ದಾರೆ [೭] ಭಾರತ ಸರ್ಕಾರವು ಅವರಿಗೆ 1985 ರಲ್ಲಿ ಪದ್ಮಶ್ರೀ ಎಂಬ ನಾಗರಿಕ ಗೌರವವನ್ನು ನೀಡಿತು [೬]
ಇದನ್ನುನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "His name is listed as Baroda Group of Artists' fifth annual exhibition of paintings by". Asia Art Archive.
- ↑ "Blouinartinfo". Blouinartinfo. 2015. Archived from the original on 23 ಸೆಪ್ಟೆಂಬರ್ 2015. Retrieved 20 July 2015.
- ↑ "Christie's profile". Christie's The Art People. 2015. Retrieved 20 July 2015.
- ↑ Sunil Kumar Bhattacharya (1994). Trends in Modern Indian Art. M.D. Publications. p. 84. ISBN 9788185880211.
- ↑ ೫.೦ ೫.೧ ೫.೨ ೫.೩ "F Hessler Art Collection". F Hessler Art Collection. 2015. Archived from the original on 22 ಜುಲೈ 2015. Retrieved 20 July 2015.
- ↑ ೬.೦ ೬.೧ "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 18 June 2015.
- ↑ ೭.೦ ೭.೧ ೭.೨ ೭.೩ ೭.೪ "Saffron Art". Saffron Art. 2015. Retrieved 20 July 2015.
- ↑ Gargi Gupta, "Distress sale?", Business Standard, January 24, 2013
- ↑ "Christie's profile". Christie's The Art People. 2015. Retrieved 20 July 2015."Christie's profile".
- ↑ ೧೦.೦ ೧೦.೧ "Mutual Art". Mutual Art. 2015. Retrieved 20 July 2015.
- ↑ "Bonhams". Bonhams. 2015. Retrieved 20 July 2015.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- "Paintings on Mint Angle". Web display. Mint Angle. 2015. Archived from the original on 19 ಜುಲೈ 2015. Retrieved 20 July 2015.