ವಿಷಯಕ್ಕೆ ಹೋಗು

ಶರಭಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶರಭಂಗ
ಶರಭಂಗ ಅಗ್ನಿಯಿಂದ ಸ್ವ‍ರ್ಗದ ಕಡೆಗೆ ಪಯಣಿಸುತ್ತಿರುವುದು
ಗ್ರಂಥಗಳುರಾಮಾಯಣ

ಶರಭಂಗನನ್ನು ರಾಮಾಯಣಅರಣ್ಯ ಕಾಂಡದಲ್ಲಿ ಉಲ್ಲೇಖಿಸಲಾಗಿದೆ. ಈತ ಒಬ್ಬ ಋಷಿ ಮತ್ತು ಏಕಾಂತವಾಸಿ. ರಾಮನು ದಂಡಕ ಕಾಡಿನ ಮೂಲಕ ಪ್ರಯಾಣಿಸುವ ಸಮಯದಲ್ಲಿ ಶರಭಂಗನನ್ನು ಭೇಟಿ ಮಾಡುತ್ತಾನೆ. ರಾಮನ ಭೇಟಿಯ ಮೊದಲು, ಇಂದ್ರನು ಋಷಿಯನ್ನು ಬ್ರಹ್ಮಲೋಕದ ನಿವಾಸಕ್ಕೆ ಕರೆದೊಯ್ಯುವ ಸಲುವಾಗಿ ಅವನ ಆಶ್ರಮಕ್ಕೆ ಬಂದಿರುತ್ತಾನೆ. [೧] ಮರ್ತ್ಯಲೋಕವನ್ನು ತೊರೆಯುವ ಮೊದಲು ರಾಮನನ್ನು ನೋಡಬೇಕೆಂಬುದು ಶರಭಂಗನ ಕೊನೆಯ ಆಸೆಯಾಗಿತ್ತು. ರಾಮನನ್ನು ನೋಡಿದ ನಂತರ ಮತ್ತು ಅಗತ್ಯವಾದ ವಿಧಿಗಳನ್ನು ಮಾಡಿದ ನಂತರ, ಋಷಿಯು ಚಿತೆಗೆ ಹಾರುವ ಮೂಲಕ ಆತ್ಮಾಹುತಿ ಮಾಡಿಕೊಳ್ಳುತ್ತಾನೆ ಮತ್ತು ಯೌವನದ ಲೌಕಿಕ ರೂಪವು ಅಲೌಕಿಕವಾಗಿ ಸ್ವರ್ಗದ ಕಡೆಗೆ ಪಯಣಿಸುತ್ತದೆ. [೨]

ಉಲ್ಲೇಖಗಳು[ಬದಲಾಯಿಸಿ]

  1. "Paratva of Rama". The Hindu (in Indian English). 2014-10-26. ISSN 0971-751X. Retrieved 2019-10-08.
  2. Keshavadas, Sadguru Sant (1988). Ramayana at a Glance. Motilal Banarsidass. pp. 95–96. ISBN 978-81-208-0545-3.
"https://kn.wikipedia.org/w/index.php?title=ಶರಭಂಗ&oldid=1229570" ಇಂದ ಪಡೆಯಲ್ಪಟ್ಟಿದೆ