ವೇದಾ ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೇದಾ ಕೃಷ್ಣಮೂರ್ತಿ
Krishnamurthy batting for India during the 2020 ICC Women's T20 World Cup
೨೦೨೦ ಐಸಿಸಿ ಮಹಿಳಾ ಟಿ ೨೦ ವಿಶ್ವಕಪ್ ಸಂದರ್ಭದಲ್ಲಿ ಕೃಷ್ಣಮೂರ್ತಿ ಭಾರತ ಪರ ಬ್ಯಾಟಿಂಗ್
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ವೇದಾ ಕೃಷ್ಣಮೂರ್ತಿ
ಹುಟ್ಟು (1992-10-16) ೧೬ ಅಕ್ಟೋಬರ್ ೧೯೯೨ (ವಯಸ್ಸು ೩೧)
ಕಡೂರ್, ಕರ್ನಾಟಕ, ಭಾರತ
ಎತ್ತರ5 ft 6 in (1.68 m)
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ
ಪಾತ್ರಬ್ಯಾಟ್ಸ್ಮನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೯೬)೩೦ ಜೂನ್ ೨೦೧೧ v ಇಂಗ್ಲೆಂಡ್
ಕೊನೆಯ ಅಂ. ಏಕದಿನ​೧೨ ಏಪ್ರಿಲ್ ೨೦೧೮ v ಇಂಗ್ಲೆಂಡ್
ಅಂ. ಏಕದಿನ​ ಅಂಗಿ ನಂ.೭೯
ಟಿ೨೦ಐ ಚೊಚ್ಚಲ (ಕ್ಯಾಪ್ ೨೬)೧೧ ಜೂನ್ ೨೦೧೧ v ಆಸ್ಟ್ರೇಲಿಯಾ
ಕೊನೆಯ ಟಿ೨೦ಐ೮ ಮಾರ್ಚ್ 2020 v ಆಸ್ಟ್ರೇಲಿಯಾ
ಟಿ೨೦ಐ ಅಂಗಿ ನಂ.೭೯
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2009-2014ಕರ್ನಾಟಕ (squad no. ೭೯)
2015-presentರೈಲ್ವೆಸ್ (squad no. ೭೯)
2018-presentಹೋಬರ್ಟ್ ಹರಿಕೆಟ್ (squad no. ೭೯)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I WBBL
ಪಂದ್ಯಗಳು ೪೮
ಗಳಿಸಿದ ರನ್ಗಳು ೮೨೯ ೮೫೬ ೧೪೪
ಬ್ಯಾಟಿಂಗ್ ಸರಾಸರಿ ೨೫.೯೦ ೧೮.೬೦ ೧೮.೦೦
೧೦೦/೫೦ -/೮ ೦/೨ -/-
ಉನ್ನತ ಸ್ಕೋರ್ ೭೧ ೫೭* ೪೦
ಎಸೆತಗಳು ೧೧೪ ೧೨ ೩೦
ವಿಕೆಟ್‌ಗಳು -
ಬೌಲಿಂಗ್ ಸರಾಸರಿ ೨೨.೦೦ - ೫೧.೦೦
ಐದು ವಿಕೆಟ್ ಗಳಿಕೆ - - -
ಹತ್ತು ವಿಕೆಟ್ ಗಳಿಕೆ - - -
ಉನ್ನತ ಬೌಲಿಂಗ್ ೨/೧೪ n/a ೧/೧೮
ಹಿಡಿತಗಳು/ ಸ್ಟಂಪಿಂಗ್‌ ೨೦/೧ ೩೭/೦ ೨/-
ಮೂಲ: ESPNcricnfo, ೮ ಮಾರ್ಚ್ ೨೦೨೦

ವೇದಾ ಕೃಷ್ಣಾಮೂರ್ತಿಯವರು ೧೯೯೨, ಒಕ್ಟೋಬರ್ ೧೬ರಂದು ಕರ್ನಾಟಕದ, ಚಿಕ್ಕಮಗಳೂರಿನ,ಕಡೂರಿನಲ್ಲಿ ಹುಟ್ಟಿದರು. ಡರ್ಬಿಯಲ್ಲಿ, ಇಂಗ್ಲೆಂಡಿನ ವಿರುದ್ದ ಅಂತರಾಷ್ಟ್ರಿಯ ಮಹಿಳ ಕ್ರಿಕೆಟಿಗೆ ಪಾದರ್ಪಣೆ ಮಾಡಿದರು. ಇವರು ಬಲಗೈ-ಬ್ಯಾಟ್ಸ್ ಮನ್ ಮತ್ತು ಎಡಗೈ ಬೌಲರ್.[೧]

ಬಾಲ್ಯ[ಬದಲಾಯಿಸಿ]

ವೇದಾ ಕೃಷ್ಣಾಮೂರ್ತಿಯವರು, ತಮ್ಮ ಕುಟುಂಬದಲ್ಲಿ ಕಿರಿಯರು. ಇವರು ಕರಾಟೆಯಲ್ಲಿ ೧೨, ವಯಸ್ಸಿಗೆ ೨ "ಬ್ಲ್ಯಾಕ್ ಬೆಲ್ಟ್" ಪಡೆದರು. ಕ್ರಿಕೆಟ್ ಕ್ಷೇತ್ರದಲ್ಲಿ ಸಾದನೆ ಮಾಡಬೇಕೆಂಬ ಮಗಳ ಕನಸು ನನಸಾಗಿಸಲು, ವೇದಾ ಅವರ ತಂದೆ, ಚಿಕ್ಕಮಗಳೂರಿನಿಂದ ಬೆಂಗಳೂರಿನಲ್ಲಿ ಕುಟುಂಬದೊಡನೆ ನೆಲೆಸಿದರು. [೨] ವೇದಾ ಕೃಷ್ಣಾಮೂರ್ತಿ, ೨೦೦೫ರಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ನಲ್ಲಿ, ೧೩ವರ್ಷದವಳಾಗಿದ್ದಾಗ ತಮ್ಮ ಔಪಚಾರಿಕ ಕ್ರಿಕೆಟ್ ತರಬೇತಿ ಪ್ರಾರಂಭಿಸಿದರು. ವೇದಾ ೧೨ ವರ್ಷ ವಯಸ್ಸಿನವಳಾಗಿದ್ದಾಗ, ಮಿಥಾಲಿ ರಾಜ್ ಅವರನ್ನು, ತನ್ನ ಶಾಲೆಯಲ್ಲಿ ಸನ್ಮಾನಿಸಲಾಯಿತು. ಈ ಘಟನೆ, ಅವರ ಕ್ರಿಕೆಟ್ ಜೀವನದ ಪ್ರಾರಂಬವಾಯಿತು. ಮಿಥಾಲಿ ರಾಜ್ ಅವರು, ವೇದಾರವರ ಆದರ್ಶರಾದರು.[೩]

ಕ್ರಿಕೆಟ್ ವೃತ್ತಿಜೀವನ[ಬದಲಾಯಿಸಿ]

ನವೆಂಬರ್ ೨೦೧೫ರಲ್ಲಿ, ಅವರು ಬಿ-ಗ್ರೇಡ್ ಒಪ್ಪಂದದ ಪಟ್ಟಿಯಲ್ಲಿ ಹೆಸರಿಸಲ್ಪಟ್ಟರು, ಇದು ಮೊದಲ ಬಾರಿಗೆ ಬಿಸಿಸಿಐ ಮಹಿಳಾ ಆಟಗಾರರಿಗೆ ಒಪ್ಪಂದಗಳನ್ನು ನೀಡಿತು.[೪]

ದೇಶೀಯ ಕ್ರಿಕೆಟ್ ವೃತ್ತಿಜೀವನ[ಬದಲಾಯಿಸಿ]

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೊದಲ ಬಾರಿಗೆ ಟ್ವೆಂಟಿ -೨೦ ಪ್ರದರ್ಶನ ಪಂದ್ಯವನ್ನು ಆಯೋಜಿಸಿತ್ತು. ಈ ಪಂದ್ಯ ಕೆಎಸ್ಸಿಎ ಅಧ್ಯಕ್ಷ XI ಮತ್ತು ಕೆಎಸ್ಸಿಎ ಕಾರ್ಯದರ್ಶಿ XI ನಡುವೆ ನಡೆಯಿತು, ಮತ್ತು ಅಧ್ಯಕ್ಷರ XI ನೇತೃತ್ವ ವಹಿಸಲು ವೇದವನ್ನು ಆರಿಸಲಾಯಿತು. ೨೦೧೭ರ ಅಕ್ಟೋಬರ್ನಲ್ಲಿ, ೨೦೧೭-೧೮ರ ಮಹಿಳಾ ಬಿಗ್ ಬ್ಯಾಷ್ ಲೀಗ್ ಕ್ರೀಡಾಋತುವಿನಲ್ಲಿ ಅವರು ಹೋಬಾರ್ಟ್ ಹರಿಕೇನ್[ಶಾಶ್ವತವಾಗಿ ಮಡಿದ ಕೊಂಡಿ] ತಂಡದ ಪರ ಆಡಿದರು.[೫]

ಅಂತರ ರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನ[ಬದಲಾಯಿಸಿ]

೨೦೧೭ರ "ಮಹಿಳಾ ಕ್ರಿಕೆಟ್ ವಿಶ್ವಕಪ್" ಫೈನಲ್ ತಲುಪಲುಪಿದ ಭಾರತ ತಂಡದ ಸದಸ್ಯರಾಗಿದ್ದರು. [೬] [೭] ಅವರು ಬಿಗ್ ಬ್ಯಾಷ್ನಲ್ಲಿ ಆಡುವ ಭಾರತದ ಮೂರನೇ ಮಹಿಳ ಕ್ರಿಕೆಟಿಗರು. ಫೆಬ್ರವರಿ ೨೦೧೮ರಲ್ಲಿ, ಏಕದಿನ ಪಂದ್ಯಗಳಲ್ಲಿ ೧೦೦೦ ರನ್ಗಳನ್ನು ಗಳಿಸಿದ ಭಾರತದ ಕಿರಿಯ ಮಹಿಳಾ ಆಟಗಾರ್ತಿಯಾಗಿದ್ದಾಳೆ, ಈ ಸಾದನೆಯನ್ನು ಅವರು ಮೂರನೇ ಏಕದಿನ ಪಂದ್ಯದ ಸಮಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸಾದಿಸಿದರು.

ಉಲ್ಲೇಖ[ಬದಲಾಯಿಸಿ]

  1. http://www.espncricinfo.com/india/content/story/517762.html
  2. http://www.thehindu.com/news/national/karnataka/karnatakas-small-town-girls-turn-stars-on-world-cricket-stage/article19329572.ece
  3. Patnaik, Sidhanta (23 March 2016). "World T20: Veda Krishnamurthy—dancer, don, destiny's child". Livemint (in ಇಂಗ್ಲಿಷ್). Retrieved 19 March 2020.
  4. https://timesofindia.indiatimes.com/top-stories/Rahane-gets-Grade-A-contract-Raina-demoted-to-Grade-B/articleshow/49724826.cms
  5. http://www.espncricinfo.com/story/_/id/21060414/veda-krishnamurthy-signs-hobart-hurricanes-wbbl
  6. http://www.espncricinfo.com/series/8584/commentary/1085975/England-Women-vs-India-Women-Final-ICC-Women's-World-Cup-2017
  7. http://www.firstpost.com/sports/icc-womens-world-cup-2017-veda-krishnamurthy-a-threat-for-bowlers-despite-rusty-form-3728707.html