ವಿಷಯಕ್ಕೆ ಹೋಗು

ವೆಂಕಟರಾಜ ಪುಣಿಂಚಿತ್ತಾಯ ಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳು ಭಾಷೆಗೆ ಲಿಪಿಯಿದೆ ಎಂದು ಪ್ರಪಂಚಕ್ಕೆ ಸಾರಿದ ಹಿರಿಯ ಸಂಶೋಧಕ, ವಿದ್ವಾಂಸ ಡಾ. ಪುಂಡೂರು ವೆಂಕಟರಾಜ ಪುಣಿಂಚಿತ್ತಾಯ.

1936 ಅಕ್ಟೋಬರ್ 10ರಂದು ಕಾಸರಗೋಡಿನ ಬೆಳ್ಳೂರಿನ ಪುಂಡೂರು ಮನೆತನದಲ್ಲಿ ಜನಿಸಿದ ವೆಂಕಟರಾಜ ಪುಣಿಂಚಿತ್ತಾಯ,ಇವರ ತಂದೆಯ ಹೆಸರು ದಿ.ದಾಮೋದರ್ ಪುಣಿಂಚಿತ್ತಾಯ ,ತಾಯಿ ಸರಸ್ವತಿ ,ಪತ್ನಿ ವನಿತಾ, ಓರ್ವ ಪುತ್ರ, ಇಬ್ಬರು ಪುತ್ರಿಯರು. ಕರ್ನಾಟಕ ತುಳು ಅಕಾಡಮಿಯ ಸದಸ್ಯರಾಗಿ, ತುಳು ನಿಘಂಟು ಯೋಜ ನೆಯ ಸಂಪಾದಕೀಯ ಸಲಹಾ ಮಂಡಳಿಯ ಸದಸ್ಯರಾಗಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಸದಸ್ಯರಾಗಿ, ಕೇರಳ ಸ್ಟೇಟ್ ಆರ್ಕಿವ್ಸ್ ಡಿಪಾರ್ಟ್‌ಮೆಂಟ್‌ನ ಸದಸ್ಯರಾಗಿ, ಕೇರಳ ಕನ್ನಡ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕಾಸರಗೋಡು ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಸಾಕ್ಷರತಾ ಕನ್ನಡ ಪಠ್ಯ ಪುಸ್ತಕ ಸಮಿತಿಯ ದ.ಕ. ಜಿಲ್ಲೆ ಹಾಗೂ ಕೇರಳ ರಾಜ್ಯದ ಸದಸ್ಯರಾಗಿ ಸೇವೆ ಸಲ್ಲಿಸಿದ ಪುಣಿಂಚಿತ್ತಾಯರು, ಕೇರಳ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ನಿವೃತ್ತರಾಗಿದರು,ಪುಣಿಂಚಿತ್ತಾಯ (75) ಬೆಳ್ಳೂರು ಐತನಡ್ಕದಲ್ಲಿರುವ ಸ್ವಗೃಹದಲ್ಲಿ ಶುಕ್ರವಾರ ಸಂಜೆ ನಿಧನರಾದರು.

ಪುರಸ್ಕ್ರ್ರರಗಳು

[ಬದಲಾಯಿಸಿ]

ತುಳು ಸಂಶೋದಕ ರಾಷ್ರಪ್ರಶಸ್ತಿ ವಿಜೇತ ಶಿಕ್ಷಕ ಇವರು,ಕೇರಳದಲ್ಲಿ ತುಳು ಆಕಾಡೆಮಿಯ ಮ್ರಜಿ,

ಬಿರುದು

[ಬದಲಾಯಿಸಿ]

ಪ್ರಥಮ ಅದ್ಯಕ್ಷ ಹೀಗೆ ಬಿರುದುಗಳು ದೊರೆತೀದೆ.

ಕೃತಿಗಳು

[ಬದಲಾಯಿಸಿ]

ಸುಮರು ೨೭ ಅಧಿಕ ಕೈತಿಗಳನ್ನು ರಚಿಸಿದ್ದಾರೆ.

  1. ಜಯ ಜಯ ಸಂಸ್ಕೃತಿ ಜನನಿ,
  2. ಪರ್ಜನ್ಯಾಯ ಪ್ರಗಾಯತ ರುದ್ರಗೀತೆ,
  3. ಸುಭಾತ ರಸಾಸ್ವಾತ,
  4. ಸುಬಾತ ಲಹರಿ,
  5. ಸುಬ್ರಮಣ್ಯ ಸುಪ್ರಭಾತ ಜಾನಪದ,
  6. ಕಸಾರ ,
  7. ಸಾಹಿತ್ಯ ದ್ವನಿ, ಮೊದಲಾದ ಕೃತಿಗಳನ್ನು ರಚಿಸಿದರೆ.

ಗ್ರಂಥಗಳು

[ಬದಲಾಯಿಸಿ]
  1. ಸುಗಂಧ,
  2. ಚಂದ್ರಗಿರಿಯ ರಾಜಹಂಸ,
  3. ಶೆಲೂ ಕವನ ಸಂಕಲನ,
  4. ಸುಭಾತ ಲಹರಿ,
  5. ಜೋಕಾದು ಅನೆುತ್ತು,
  6. ಮೊಗವೀರ ಸಂಸ್ಕೃತಿ,
  7. ಕೇರಳ ವರ್ಣಚಿತ್ರ ಲೋಕ,
  8. ಶಂಕರ ವಿಜಯ .
  9. ಅಕ್ಷರ.
  10. ನನ್ನ ಅಜ್ಜನಿಗೊಂದು ಅನೆುತ್ತು.

ಪ್ರಶಸ್ತಿಗಳು

[ಬದಲಾಯಿಸಿ]
  1. 1991ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ,
  2. 1997ರಲ್ಲಿ ಸಂದೇಶ ಮಾಧ್ಯಮ ಪ್ರಶಸ್ತಿ, 1998ರಲ್ಲಿ ಕಯ್ಯರ ಪ್ರಶಸ್ತಿ,[]
  3. 1999ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ,[]
  4. 1999ರಲ್ಲಿ ಬೇವಿಂಜೆ ಶ್ರೀಧರ ಕಕ್ಕಿಲ್ಲಾಯ ಪ್ರಶಸ್ತಿ,
  5. 2002ರಲ್ಲಿ ಪರಶುರಾಮ ಪ್ರಶಸ್ತಿ,
  6. 2003ರಲ್ಲಿ ಕರ್ನಾಟಕ ಶ್ರೀಪ್ರಶಸ್ತಿ,
  7. 2004ರಲ್ಲಿ ಪೊಳಲಿ ಶೀನಪ್ಪ ಹೆಗಡೆ ಪ್ರಶಸ್ತಿ, []
  8. ಅನಂತ ಪ್ರಕಾಶ ಪುರಸ್ಕಾರ,
  9. ಪೇಜಾವರ ಶ್ರೀ ಪ್ರಶಸ್ತಿ,
  10. ಕೀರಿಕ್ಕಾಡು ಮಾಸ್ಟರ್ ಪ್ರಶಸ್ತಿ,
  11. 2006ರಲ್ಲಿ ಕುಕ್ಕಿಲ ಪ್ರಶಸ್ತಿ,
  12. ಬೆಸ್ಟ್ ರೀಸರ್ಚ್ ದ್ರಾವಿಡಿಯನ್ ವಿವಿ ಕುಪ್ಪಂನ ಪ್ರಶಸ್ತಿ,
  13. 2007ರಲ್ಲಿ ದೇರಾಜೆ ಪ್ರಶಸ್ತಿ ಸಿಕ್ಕಿದೆ.
  14. ಮಂಗಳೂರು ವಿವಿ 2007ರಲ್ಲಿ ಗೌರವ ಡಾಕ್ಟರೇಟ್ ನೀಡಿದೆ.[]

ಬಹುಮುಖ ಸಾಧನೆ

[ಬದಲಾಯಿಸಿ]

ಪುಣಿಂಚಿತ್ತಾಯರು ಸಾಹಿತಿ ಸಂಶೋಧಕ ಮಾತ್ರವಲ್ಲ, ಆಯುರ್ವೇದ, ನಾಟಿ ವೆದ್ಯಕೀಯದಲ್ಲೂ ಪರಿಣತರಾಗಿದ್ದರು.ಅವರು ಒಬ್ಬ ಉತ್ತಮ ರಂಗನಟ. ಪಾತ್ರಗಳೊಂದಿಗೆ ಸಂಪೂರ್ಣ ತಾದಾತ್ಮ್ಯ ಪಡೆದು ನಟಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ನಾಟಕಗಳನ್ನೂ ರಚಿಸಿದ್ದರು.ಯಕ್ಷಗಾನ ತಾಳಮದ್ದಳೆಗಳಲ್ಲೂ ಪ್ರತಿಭಾವಂತ ಅರ್ಥಧಾರಿಗಳಾಗಿದ್ದರು. ಉತ್ತಮ ವಾಗ್ಮಿ.

40ಕ್ಕೂ ಹೆಚ್ಚು ಧ್ವನಿಸುರುಳಿ

[ಬದಲಾಯಿಸಿ]

ಪುಣಿಂಚಿತ್ತಾಯರು 40ಕ್ಕೂ ಹೆಚ್ಚು ಧ್ವನಿಸುರುಳಿಗಳಿಗೆ ಸಾಹಿತ್ಯ ಒದಗಿಸಿದ್ದಾರೆ.ತುಳು ಭಾಷೆಯಲ್ಲಿ :ಮದಿಮೆ ಶೋಭಾನೆ, ಭಕ್ತವಾಹಿನಿ, ಪಾದೋಗ್ ಸೊಲ್ಮೆ, ಶ್ರೀ ಕಷ್ಣ ದರ್ಶನ, ಧರ್ಮಸ್ಥಳ ವೈಭಾವ ಇತ್ಯಾದಿ.ಕನ್ನಡದಲ್ಲಿ: ಅರ್ಪಣೆ, ಮಧ್ವರಿಗೊಲಿದ ಶ್ರೀ ಕಷ್ಣ, ಪೊಳಲಿ ಸುಪ್ರಭಾತ, ತೊಡಿಕ್ಕಾನ ಸುಪ್ರಭಾತ, ಹಾಗೂ ಇನ್ನಿತರ ಹಲವು ಭಕ್ತಿಗೀತೆಗಳು. ಮಲೆಯಾಳದಲ್ಲಿ ಅಮ್ಮೇ ಮೂಕಾಂಬಿಕೆ, ಶರಣಂ ಶಬರೀಶ ಮತ್ತು ಇತರ

ಉಲ್ಲೇಖಗಳು

[ಬದಲಾಯಿಸಿ]