ವೀರೇಂದ್ರ ಸಿಂಗ್ (ಭೌತವಿಜ್ಞಾನಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವೀರೇಂದ್ರ ಸಿಂಗ್
ಜನನ೮ ಜೂನ್ ೧೯೩೮
ಬಿಜ್ನೌರ್, ಬ್ರಿಟಿಷ್ ರಾಜ್
ವಾಸಸ್ಥಳಮುಂಬೈ, ಮಹಾರಾಷ್ಟ್ರ, ಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರ
  • ಸೈದ್ದಾಂತಿಕ ಭೌತಶಾಸ್ತ್ರ
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠ
ಡಾಕ್ಟರೇಟ್ ಸಲಹೆಗಾರರು
ಪ್ರಸಿದ್ಧಿಗೆ ಕಾರಣಹೈ ಎನರ್ಜಿ ಫಿಸಿಕ್ಸ್ ಮೇಲಿನ ಅಧ್ಯಯನಕ್ಕೆ
ಗಮನಾರ್ಹ ಪ್ರಶಸ್ತಿಗಳು

ವೀರೇಂದ್ರ ಸಿಂಗ್ (೮ ಜೂನ್ ೧೯೩೮) ರವರೊಬ್ಬ ಭಾರತೀಯ ಸೈದ್ಧಾಂತಿಕ ಭೌತಶಾಸ್ತ್ರಜ್ಞ , ಮಾಜಿ ಸಿ.ವಿ. ರಾಮನ್ ಚೇರ್ ಪ್ರೊಫೆಸರ್ ಮತ್ತು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ನ ನಿರ್ದೇಶಕರಾಗಿದ್ದಾರೆ .[೧] ಉನ್ನತ ಶಕ್ತಿ ಭೌತಶಾಸ್ತ್ರದಲ್ಲಿ ತನ್ನ ಸಂಶೋಧನೆಗೆ ಹೆಸರುವಾಸಿಯಾಗಿರುವ ಸಿಂಗ್ ರವರು ಭಾರತೀಯ ಪ್ರಮುಖ ವಿಜ್ಞಾನ ಅಕಾಡೆಮಿಗಳದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ , ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ - ಭಾರತ ಮತ್ತು ದಿ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ ನಲ್ಲಿ ಚುನಾಯಿತರಾಗಿದ್ದಾರೆ .[೨] ವೈಜ್ಞಾನಿಕ ಸಂಶೋಧನೆಗಾಗಿ ಭಾರತದ ಸರ್ಕಾರದ ಅತ್ಯುನ್ನತ ಸಂಸ್ಥೆಯಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯು ೧೯೭೩ ರಲ್ಲಿ , ಸಿಂಗ್ ರವರು ಸೈನ್ಸ್ ಅಂಡ್ ಟೆಕ್ನಾಲಜಿಗೆ ನೀಡಿದ ಕೊಡುಗೆಗಳಿಗಾಗಿ ,ಅತ್ಯುನ್ನತ ಭಾರತೀಯ ವಿಜ್ಞಾನ ಪ್ರಶಸ್ತಿಗಳಲ್ಲಿ ಒಂದಾದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು .[೩]

ಜನನ[ಬದಲಾಯಿಸಿ]

ವೀರೇಂದ್ರ ಸಿಂಗ್ ೮ ಜೂನ್ ೧೯೩೮ ರಂದು ಬಿಜ್ನೌರ್ ನಲ್ಲಿ ಜನಿಸಿದರು .[೪]

ನೆಹರು ವಿಜ್ಞಾನ ಕೇಂದ್ರ

ಶಿಕ್ಷಣ[ಬದಲಾಯಿಸಿ]

ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್

ವೀರೇಂದ್ರ ಸಿಂಗ್ ರವರು ಬಿ.ಎಸ್ಸಿ ಮತ್ತು ಎಮ್.ಎಸ್ಸಿ. ಪದವಿಯನ್ನು ಆಗ್ರ ವಿಶ್ವವಿದ್ಯಾಲಯದಲ್ಲಿ ಪಡೆದರು . ಅದರ ನಂತರ, ಅವರು ೧೯೫೭ ನಲ್ಲಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ( ಟಿಐಎಫ್ಆರ್ ), ಮುಂಬೈ ಸೇರಿದರು . ಅವರು ಬೆರ್ಕೆಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ (೧೯೫೯ - ೬೨) ನೇಮಿಸಲ್ಪಟ್ಟರು,[೫] ಅಲ್ಲಿ ಅವರು ಪಿಎಚ್ಡಿ ಪದವಿಯನ್ನು ಪೂರ್ಣಗೊಳಿಸಿದರು .[೬]

ಲೀಗಸಿ[ಬದಲಾಯಿಸಿ]

ಸಿಂಗ್ ರವರ ಅಧ್ಯಯನಗಳು ಹೈ ಎನರ್ಜಿ ಫಿಸಿಕ್ಸ್ , ಕ್ವಾಂಟಮ್ ಮೆಕ್ಯಾನಿಕ್ಸ್ ಮತ್ತು ಕಣ ಭೌತಶಾಸ್ತ್ರದ ಕ್ಷೇತ್ರಗಳನ್ನು ವ್ಯಾಪಿಸಿವೆ . ಅವರು ಎಕ್ಸ್-ಮ್ಯಾಟ್ರಿಕ್ಸ್ ಸಿದ್ಧಾಂತ ಮತ್ತು ಹ್ಯಾಡ್ರನ್ಸ್ ಸಮ್ಮೀತಿ ಸಿದ್ಧಾಂತಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಸ್ಕ್ಯಾಟರಿಂಗ್ ಆಂಪ್ಲಿಟ್ಯೂಡ್ಸ್ ನಲ್ಲಿನ ಅವರ ಸೈದ್ಧಾಂತಿಕ ಕೆಲಸವು ಹ್ಯಾಡ್ರನ್ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಶಕ್ತಿಯ ಒಟ್ಟು ಅಡ್ಡ-ವಿಭಾಗಗಳ ಗ್ರಹಿಕೆಯನ್ನು ವಿಸ್ತರಿಸಲು ಸಹಾಯ ಮಾಡಿತು. [೭]

ಸಂಶೋಧನಾ ಕ್ಷೇತ್ರಗಳು[ಬದಲಾಯಿಸಿ]

  • ಸೈದ್ಧಾಂತಿಕ ಭೌತಶಾಸ್ತ್ರ .
  • ಉನ್ನತ ಶಕ್ತಿ ಭೌತಶಾಸ್ತ್ರ .
  • ಕ್ವಾಂಟಮ್ ಮೆಕ್ಯಾನಿಕ್ಸ್ ಪ್ರತಿಷ್ಠಾನ ‌.[೮]

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಟಿಐಎಫ್ಆರ್
  2. TWAS Fellow
  3. ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ವಿಜೇತರು
  4. "Biography" (PDF). Tata Institute of Fundamental Research. 2017.
  5. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ
  6. ಭೌತಶಾಸ್ತ್ರ ತಜ್ಞರು[ಶಾಶ್ವತವಾಗಿ ಮಡಿದ ಕೊಂಡಿ]
  7. "ಲೀಗಸಿ". Archived from the original on 2017-04-11. Retrieved 2019-05-22.
  8. ಸಂಶೋಧನಾ ಕ್ಷೇತ್ರಗಳು
  9. ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ
  10. ಭಟ್ನಗರ್ ಪ್ರಶಸ್ತಿ ಪುರಸ್ಕೃತರು
  11. "ಸಾಹಾ ಅವಾರ್ಡ್". Archived from the original on 2019-12-05. Retrieved 2019-05-22.