"ಭೂರಚನಶಾಸ್ತ್ರದ ಯುಗಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
(ಇಂಗ್ಲೀಶ್ ವಿಕಿಪೀಡಿಯದ geologic time scale ಪುಟದ ಸಂಗ್ರಹಾನುವಾದ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
===ಪ್ರಾಥಮಿಕ ನಿಯಮಗಳ ರೂಪಗೊಳ್ಳುವಿಕೆ===
ಭೌಗೋಳಿಕ ಕಾಲಮಾನದ ಬಗೆಗಿನ ಪ್ರಾಥಮಿಕ ನಿಯಮಗಳನ್ನು ಹದಿನೇಳನೆಯ ಶತಮಾನದಲ್ಲಿ ನಿಕೊಲಸ್ ಸ್ಟೆನೊ ರೂಪಿಸಿದ. ಕಲ್ಲಿನ ಪದರಗಳು ಒಂದರ ನಂತರ ಒಂದು ಅನುಕ್ರಮವಾಗಿ ರೂಪಗೊಂಡಿರುತ್ತವೆ ಮತ್ತು ಪ್ರತೀ ಪದರವೂ ಕಾಲದ ಒಂದು "ಹೋಳನ್ನು" ಪ್ರತಿನಿಧಿಸುತ್ತದೆ ಎಂದು ಸ್ಟೆನೊ ವಾದಿಸಿದ. ಅವನು ಮೇಲಿನಪದರ ನಿಯಮ ರೂಪಿಸಿದ. ಇದರ ಪ್ರಕಾರ ಯಾವುದೇ ನಿರ್ದಿಷ್ಟ ಪದರದಲ್ಲಿನ ಕೆಳಗಿನ ಪದರವು ಬಹುಶ ಮೇಲಿನ ಪದರಕ್ಕಿಂತ ಕಾಲದಲ್ಲಿ ಮುಂಚಿನದಾಗಿರುತ್ತದೆ. ಸ್ಟೆನೊನ ನಿಯಮಗಳು ಸರಳವಾಗಿದ್ಯಾಗ್ಯೂ ಅವುಗಳನ್ನು ಅನ್ವಯಿಸುವುದು ಅಷ್ಟೇನೂ ಸುಲಭವಾಗಿರಲಿಲ್ಲ ಮತ್ತು ವಾಸ್ತವದ ಕಲ್ಲಿನ ಬಗೆಗೆ ಅವನ್ನು ಅನ್ವಯಿಸುವುದು ಸಂಕೀರ್ಣವಾಗಿತ್ತು. ಕೆಲಕಾಲದ ನಂತರ ಹದಿನೆಂಟನೆಯ ಶತಮಾನದ ಭೂಗೋಳಶಾಸ್ತ್ರಜ್ಞರು ಕೆಳಗಿನ ಸಮಸ್ಯೆಗಳನ್ನು ಗುರುತಿಸಿದರು.
#ಕಲ್ಲಿನ ಪದರಗಳು ಸಂಚಯವಾದ ನಂತರ ಕೆಲವೊಮ್ಮೆ ಸವೆಯ ಬಹುದು, ಆಕಾರ ಕೆಡಬಹುದು, ಒರೆಯಾಗ ಬಹುದು ಮತ್ತು ತಿರುವಮುರುವತಿರುವುಮುರುವು ಆಗಬಹುದು ಸಹ.
#ಒಂದೇ ಕಾಲಮಾನದಲ್ಲಿ ರೂಪಗೊಂಡರೂಪುಗೊಂಡ ಪದರಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯಾಗಿ ಕಾಣಬಹುದು
#ಯಾವುದೇ ಪ್ರದೇಶದ ಪದರವು ಭೂಮಿಯ ದೀರ್ಘ ಇತಿಹಾಸದ ಒಂದು ಸಣ್ಣ ಭಾಗ ಮಾತ್ರ.
 
ಚಿಂತನೆಯ ಪ್ರಮುಖ ಬದಲಾವಣೆಯು ಜೇಮ್ಸ್ ಹಟ್ಟನ್ ಚಿಂತನೆಯಿಂದ ಬಂದಿತು. ಅವನು ತನ್ನ ಪ್ರಬಂಧ <i>ಥಿಯರಿ ಆಫ್ ಅರ್ಥ</i>ನ್ನು ೧೭೮೫ರ ಮಾರ್ಚ್ ಮತ್ತು ಏಪ್ರಿಲ್‌ಗಳಲ್ಲಿ ಎಡಿನ್‌ಬರ್ಗ್‌ನ ರಾಯಲ್ ಸೊಸೈಟಿ ಮುಂದೆ ಪ್ರಸ್ತುತಪಡಿಸಿದ. “೨೦ನೆಯ ಶತಮಾನದ ದೃಷ್ಟಿಕೋನದಿಂದ ನೋಡಿದಲ್ಲಿ ಜೇಮ್ಸ್ ಹಟ್ಟನ್‌ನ ಪ್ರಸ್ತುತ ಪಡಿಸಿದ ಚಿಂತನೆಯು ಆಧುನಿಕ ಭೂಗೋಳಶಾಸ್ತ್ರದ ಬುನಾದಿಗಳಾದವು”.<ref> John McPhee, Basin and Range, New York:Farrar, Straus and Giroux, 1981, pp. 95–100.</ref> ಭೂಮಿಯ ಒಳ ಆವಾರಣವು ಬಿಸಿಯಾಗಿದೆ ಮತ್ತು ಈ ಬಿಸುಪೇ ಹೊಸ ಕಲ್ಲುಗಳಾಗಿಸುವ ಇಂಜಿನ್. ಭೂಮಿಯನ್ನು ಗಾಳಿ ಮತ್ತು ನೀರು ಸವೆಯಿಸುತ್ತವೆ ಮತ್ತು ಇದು ಸಾಗರಗಳಲ್ಲಿ ಪದರಗಳಾಗಿ ಸಂಚಿತವಾಗುತ್ತದೆ. ಈ ಗಸಿಯನ್ನು ಭೂಮಿಯ ಒಳಗಿನ ಬಿಸುಪು ಕಲ್ಲಾಗಿಸುತ್ತದೆ ಮತ್ತು ಇದು ಮೇಲೆದ್ದು ಭೂಮಿಯಾಗುತ್ತದೆ ಎಂಬುಂದು ಅವನ ಚಿಂತನಾ ಸರಣಿಯಾಗಿತ್ತು. ಪ್ರವಾಹ ಆಧಾರಿತ ಚಿಂತನೆಯಾದ “ನೆಪ್ಚೂನಿಸ್ಟ್”ನಿಂದ ಭಿನ್ನವಾಗಿ ಇದನ್ನು “ಪ್ಲುಟೋನಿಸ್ಟ್” ಎಂದು ಕರೆಯಲಾಯಿತು.
 
===ಭೂಗೋಳದ ಕಾಲಮಾನಗಳು ಮೊದಲ ಪ್ರಯತ್ನಗಳು===
ಮೊದಲನೆಯ ಭೂಗೋಳದ ಕಾಲಮಾನಗಳನ್ನು ನಿರ್ಣಯಿಸುವ ಗಂಭೀರ ಪ್ರಯತ್ನ ಹದಿನೆಂಟನೆಯ ಶತಮಾನದಲ್ಲಿ ನಡೆಯಿತು. ಇಂತಹ ಬಹಳ ಪ್ರಭಾವಿ ಪ್ರಯತ್ನವು ಭೂಮಿಯ ಗಡಸು ಹೊರಮೈ ಕಲ್ಲುಗಳನ್ನು ಪ್ರೈಮರಿ, ಸೆಂಕಡರಿ, ಟರ್ಶಿಯರಿ ಮತ್ತು ಕ್ವಾರ್ಟೆನರಿ ಎಂದು ನಾಲ್ಕು ವಿಭಜನೆಯನ್ನು ಮಾಡಿತು (ಇದರ ಪ್ರವರ್ತಕರಲ್ಲಿ ಮುಖ್ಯವಾದವರು ಅಬ್ರಾಹಾಂ ವೆರ್ನರ್). ಈ ಸಿದ್ಧಾಂತದ ಪ್ರಕಾರ ಪ್ರತೀ ನಮೂನೆಯ ಕಲ್ಲೂ ಭೂಮಿಯ ಇತಿಹಾಸದಲ್ಲಿ ನಿರ್ದಿಷ್ಟ ಕಾಲದಲ್ಲಿ ರೂಪಗೊಂಡಿದ್ದು. ಹೀಗಾಗಿ “ಟರ್ಶಿಯರಿ ಅವಧಿ” ಮತ್ತು ಹಾಗೆಯೇ “ಟರ್ಶಿಯರಿ ಕಲ್ಲು” ಎಂದು ಹೇಳಬಹುದಾಗಿತ್ತು. ಭೂಗೋಳಿಕ ಕಾಲಮಾನದ ಹೆಸರಾಗಿ “ಟರ್ಶಿಯರಿ” (ಈಗ ಪಾಲಿಯೊಜೀನ್ ಮತ್ತು ನಿಯೊಜೀನ್) ಇಪ್ಪತನೆಯ ಶತಮಾನದಲ್ಲಿಯೂ ಉಳಿದುಕೊಂಡಿತ್ತು. ಇಂದೂ ಸದ್ಯದ ಅವಧಿಗೆ ಕ್ವಾರ್ಟೆನರಿ ಎಂದು ಬಳಸುತ್ತಿದ್ದೇವೆ.
೨,೭೫೬

edits

"https://kn.wikipedia.org/wiki/ವಿಶೇಷ:MobileDiff/861460" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ