"ಗೀತರೂಪಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಸಂಗೀತಕ್ಕೆ ಅಳವಡಿಸಿರುವ ನಾಟಕಗಳಿಗೆ ಈ ಹೆಸರಿದೆ. ಇವನ್ನು ಸಂಗೀತನಾಟಕ, ಗೇಯರ...)
 
No edit summary
ಸಂಗೀತಕ್ಕೆ ಅಳವಡಿಸಿರುವ ನಾಟಕಗಳಿಗೆ ಈ ಹೆಸರಿದೆ. ಇವನ್ನು ಸಂಗೀತನಾಟಕ, ಗೇಯರೂಪಕ ಎಂದೂ ಕರೆವುದಿದೆ. ಸಾಮಾನ್ಯವಾಗಿ ಹಿಂದಿನ ಮತ್ತು ಇಂದಿನ ಅನೇಕ ನಾಟಕಗಳಲ್ಲಿ[[ನಾಟಕ]]ಗಳಲ್ಲಿ ನಡುನಡುವೆ ವಿಫುಲವಾಗಿ ಛಂದೋಬದ್ಧವಾದ ಪದ್ಯಗಳು, ಹಾಡುಗಳೂ ಇರುತ್ತವೆ. ಅವನ್ನು ರಾಗವಾಗಿ ಹಾಡುವುದೂ ಸಂಪ್ರದಾಯ. ಆದರೆ ಅವುಗಳಲ್ಲಿ ಉಳಿದ ಭಾಗಗಳು ಗದ್ಯದಲ್ಲಿರುತ್ತವೆ. ಆದ್ದರಿಂದ ಆ ಭಾಗಗಳನ್ನು ಯಾರೂ ಹಾಡುವುದಿಲ್ಲ. ಹೀಗಾಗಿ ಅವನ್ನು ಗೀತರೂಪಕಗಳೆನ್ನಲಾಗದು. ಗೀತರೂಪಕಗಳಲ್ಲಿ ಎಲ್ಲವೂ ಗೇಯಯೋಗ್ಯವಾದ ಮಾತುಗಳೇ ಬರುತ್ತವೆ.
 
 
ಸ್ಥೂಲವಾಗಿ ನಾವು ಗೀತರೂಪಕಗಳೆಂದು ಕರೆಯುವ ಪ್ರದರ್ಶನ ಪ್ರಕಾರವನ್ನು ಅವುಗಳ ನಿರೂಪಣಾ ವೈವಿಧ್ಯಗಳಿಗನುಸಾರವಾಗಿ ಹಲವು ರೀತಿಗಳಲ್ಲಿ ವರ್ಗೀಕರಿಸಲು ಸಾಧ್ಯವಾಗುತ್ತದೆ. ಹಾಡುಗಳನ್ನು ಹಿನ್ನಲೆಯಲ್ಲಿ ಮಾತ್ರ ಇರಿಸಿಕೊಂಡು ಅವುಗಳಿಗನುಗುಣ ವಾಗಿ ಪಾತ್ರಗಳು ರಂಗದ ಮೇಲೆ ಮೂಕಾಭಿನಯವೆಸಗುವ ರೀತಿಯವು ಮೂಕರೂಪಗಳು. ಬಿಳಿದೆರೆಯ ಹಿಂದೆ ಪಾತ್ರಗಳಿದ್ದು ಅವುಗಳ ಅಭಿನಯವನ್ನು ತೆರೆಯ ಮೇಲೆ ಛಾಯರೂಪದಲ್ಲಿ ಮೂಡಿಸುವ ವಿಧಾನವು ಛಾಯರೂಪಕ. ಹಿನ್ನಲೆಯ ಹಾಡುಗಳಿಗನುಗುಣವಾಗಿ ರಂಗದ ಮೇಲೆ ಪಾತ್ರಗಳು ನೃತ್ಯಾಭಿನಯ ಮಾಡಿದಾಗ ಇಲ್ಲವೇ ಹಾಡುಗಳೇ ಇಲ್ಲದೆ ವಾದ್ಯಸಂಗೀತದ ಹಿನ್ನಲೆಯಲ್ಲಿ ಕೇವಲ ನಾಟ್ಯರೂಪದಲ್ಲಿ ನಿರೂಪಣೆಯೊದಗಿಸಿದಾಗ ಆವು ನೃತ್ಯರೂಪಕಗಳಾಗುತ್ತವೆ.
ಭಾರತದಲ್ಲಿ ಪ್ರಚಾರದಲ್ಲಿರುವ ಹಳೆಯ ಗೀತರೂಪಕಗಳು ಈ ಬಗೆಯ ನಿರ್ದಿಷ್ಟವಾದ ವಿಭಜನೆಗೆ ಅಳವಡುವುದಿಲ್ಲ. ಅವು ಗೀತನೃತ್ಯಗಳ ಪ್ರತ್ಯೇಕತೆಯನ್ನು ಇರಿಸಿಕೊಂಡು ರಚನೆಗೊಂಡವುಗಳೂ ಅಲ್ಲ; ಆ ರೀತಿಯಲ್ಲಿ ಬೆಳೆದುಬಂದುವುಗಳೂ ಅಲ್ಲ. ಗೀತರೂಪಕಗಳಲ್ಲಿ ನೃತ್ಯವೂ ನೃತ್ಯರೂಪಕಗಳಲ್ಲಿ ಗೀತವೂ ಬೆರೆದುಕೊಂಡೇ ರೂಪಕಗಳು ರಚನೆಯಾಗಿರುವ ಕಾರಣ ಭಾರತೀಯ ಸಂಗೀತವೆಂದರೆ ಗೀತವಾದ್ಯ ನೃತ್ಯಗಳೆಂಬ ತ್ರಿವಿಧಗಳ ಸಮ್ಮಿಲನವಾಗಿದ್ದುದೂ ಇರಬಹುದು. ಗೀತಂ ವಾದ್ಯಂಚ ನೃತ್ಯಂಚ ತ್ರಯಂ ಸಂಗೀತಮುಚ್ಯತೇ ಎನ್ನುವುದು ಸಂಗೀತಕ್ಕೆ ಹಿಂದಿನ ಶಾಸ್ತ್ರಕಾರರು ಹೇಳಿದ ಲಕ್ಷಣ. ಮುಂದೆ ಸಂಗೀತ ನೃತ್ಯಗಳು ತಮ್ಮ ಪ್ರತ್ಯೇಕತೆಯನ್ನು ಪ್ರದರ್ಶಿಸಿ ಬೆಳೆದಾಗ ಲಾಕ್ಷಣಿಕರು ಗೀತ ವಾದ್ಯೋಭಯಂ ಯತ್ರ ಸಂಗೀತಮಿತಿ ಕೇಚನ ಎಂದರು.
ಭಾರತೀಯ ಗೀತರೂಪಕಗಳ ಮೂಲವನ್ನು ಪ್ರಚಲಿತಶಕದ ಪ್ರಾರಂಭದಿಂದಲೇ ಗುರುತಿಸಬಹುದು. ಕಾಳಿದಾಸನ ವಿಕ್ರಮೋರ್ವಶೀಯ ನಾಟಕದ ನಾಲ್ಕನೆಯ ಅಂಕ ಅಭಿನಯದೊಂದಿಗೆ ಹಾಡಿದ ಗೀತಗಳ ಸಂಕಲನವಾಗಿದೆ. ಪುರೂರವ ಊರ್ವಶಿಯ ವಿರಹದಿಂದ ಉನ್ಮತ್ತನಾಗಿ ವನದಲ್ಲಿ ಅಲೆಯುತ್ತ ಗಿಡಮರ ಪಕ್ಷಿಸಂಕುಲಗಳನ್ನು ಕುರಿತು ಊರ್ವಶಿಯನ್ನು ಕಂಡಿರಾ ಎಂದು ಕೇಳುವ ಸಂದರ್ಭಗಳೆಲ್ಲ ಸಂಸ್ಕೃತ ಭಾಷೆಯಲ್ಲಿರದೆ ಪ್ರಾಕೃತ ಅಪಭ್ರಂಶ ಗೀತಗಳಾಗಿವೆ. ಇವನ್ನು ರಂಗನಿರ್ದೇಶನದಲ್ಲಿ ಕವಿ ಚರ್ಚರಿಕಾ ಎಂದು ಕರೆದಿದ್ದಾನೆ. ಚರ್ಚರಿಕಾ ಎಂದರೆ ನೃತ್ಯಗೀತೆ, [[ಸಂಗೀತ]] ನೃತ್ಯವಿಧಾನವಿಶೇಷ ಎಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಆದುದರಿಂದ ಕಥಾಭಾಗಗಳನ್ನು ರಂಗದ ಮೇಲೆ ಪ್ರದರ್ಶಿಸುವಾಗ ಗೀತನೃತ್ಯರೂಪಕಗಳಾಗಿ ಪ್ರದರ್ಶಿಸುವ ಕ್ರಮವೂ ಭರತಖಂಡದಲ್ಲಿ ಹಿಂದಿನಿಂದಲೇ ಇತ್ತೆಂದು ಕಂಡುಬರುತ್ತದೆ.
 
 
೨೪೩

edits

"https://kn.wikipedia.org/wiki/ವಿಶೇಷ:MobileDiff/634308" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ