ವಿಷಯಕ್ಕೆ ಹೋಗು

ವಿಭಕ್ತಿ ಪ್ರತ್ಯಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವಿಭಕ್ತಿ ಇಂದ ಪುನರ್ನಿರ್ದೇಶಿತ)

ವಿಭಕ್ತಿ ಪ್ರತ್ಯಯಗಳು ವ್ಯಾಕರಣದ ಒಂದು ಪ್ರಮುಖ ಅಂಗ.

'ಪ್ರತ್ಯಯ' ಎಂದರೆ ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪುಗಳು'. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.

ಮಾದರಿ: 'ತೆ' ಪ್ರತ್ಯಯ

ಸಮಾನ + ತೆ = ಸಮಾನತೆ

ಮಾನವೀಯ + ತೆ = ಮಾನವೀಯತೆ

ಸರಳ + ತೆ = ಸರಳತೆ (ಕೃತ್ ಪ್ರತ್ಯಯ - ಕೃದಂತ)ಚರ್ಚೆ

ಒಂದು ವಾಕ್ಯ/ಸಾಲಿನಲ್ಲಿ ಇರುವ ಹೆಸರುಪದಗಳ (ನಾಮಪದಗಳ) ನಡುವಣ, ಇಲ್ಲವೆ ಹೆಸರುಪದ ಮತ್ತು ಕ್ರಿಯಾಪದಗಳ ನಡುವಣ ನಂಟನ್ನು(ಬೆಸುಗೆಯನ್ನು) ತಿಳಿಸುವ ಪದದ ಪ್ರತ್ಯಯಗಳನ್ನು ವಿಭಕ್ತಿ-ಪ್ರತ್ಯಯಗಳು ಎಂದು ಸಂಸ್ಕೃತದಲ್ಲಿ ಕರೆಯು

ವಾಕ್ಯ ರಚನೆ

ವಾಕ್ಯವೊಂದು ಕರ್ತೃ-ಕರ್ಮ-ಕ್ರಿಯಾ ಪದಗಳ ನೆಲೆಯಲ್ಲಿ ಅರ್ಥವಾಗುತ್ತದೆ. ಇದನ್ನು ನಾಮ ವಿಭಕ್ತಿ ಪ್ರತ್ಯಯವೆಂದು ಕರೆಯಬಹುದು.

ಮಾದರಿ

೧. "ರಾಮನ ಹೆಂಡತಿ ಸೀತೆ"- ಇಲ್ಲಿ ರಾಮ, ಹೆಂಡತಿ ಮತ್ತು ಸೀತೆ ಈ ಮೂರೂ ಪದಗಳು ಪ್ರಕೃತಿ ಪದಗಳು. ಈ ಪದಗಳಿಗೆ ಪ್ರತ್ಯಯಗಳನ್ನು ಸೇರಿಸಿದಾಗ ವಾಕ್ಯ ಅರ್ಥಪೂರ್ಣವಾಗುತ್ತದೆ. ಉದಾ : ರಾಮ+ಅ=ರಾಮನ ಆಗುತ್ತದೆ. ಎಂಬ ಷಷ್ಠಿ ವಿಭಕ್ತಿ ಪ್ರತ್ಯಯವು ಪದದ ಕೊನೆಯಲ್ಲಿ ಸೇರಿದಾಗ ಆಗುತ್ತದೆ.

೨. ಕಳ್ಳನು ಬಾವಿಗೆ ಬಿದ್ದನು. - ಈ ವಾಕ್ಯ ರಚನೆ : ಕಳ್ಳ+ಉ= ಕಳ್ಳನು, ಕೆರೆ+ಗೆ+ಕೆರೆಗೆ, ಬಿದ್ದ+ಅನು=ಬಿದ್ದನು ಆಗುತ್ತದೆ. ಕಳ್ಳನು ಎಂಬ ಪದದಲ್ಲಿ ಏಕ ವಚನ ಪುಲ್ಲಿಂಗ ಪ್ರತ್ಯಯವಿದೆ. ಬಿದ್ದನು ಎಂಬ ಕ್ರಿಯಾಪದದ ಕೊನೆಯಲ್ಲಿ ಉ ಪ್ರತ್ಯಯವು ಏಕ ವಚನ ಪುಲ್ಲಿಂಗ ಅನು ಆಗುತ್ತದೆ. ಅಂದರೆ ಬಿದ್ದ+ಅನು= ಬಿದ್ದನು. ಇದು ಸ್ತ್ರೀಲಿಂಗ ರೂಪದ ಕ್ರಿಯಾಪದವಾದರೆ ಬಿದ್ದ+ಅಳು=ಬಿದ್ದಳು ಆಗುತ್ತದೆ.


ಪ್ರತ್ಯಯಗಳು

ಇಲ್ಲಿ ಕನ್ನಡದಲ್ಲಿ ಇರುವ ಹಲವು ವಿಭಕ್ತಿ ಪ್ರತ್ಯಯಗಳ ಪಟ್ಟಿ ನೀಡಲಾಗಿದೆ

ಸಂಖ್ಯೆ ವಿಭಕ್ತಿ ಅರ್ಥ (ಕಾರಾಕಾರ್ಥ) ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ
ಪ್ರಥಮ ಕರ್ತೃರ್ಥ/ಮಾಡುಗ(ಕೆಲಸ ಮಾಡುವ ನಾಮಪದ) ಮ್
ದ್ವಿತೀಯಾ ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು ಅನ್ನು ಅಂ
ತೃತಿಯಾ ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು ಇಂದ ಇಂ, ಇಂದಂ, ಇಂದೆ, ಎ
ಚತುರ್ಥೀ ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ ಗೆ, ಇಗೆ, ಕ್ಕೆ, ಆಕ್ಕೆ ಗೆ, ಕೆ, ಕ್ಕೆ
ಪಂಚಮೀ ಅಪಾದಾನ (ಅಗಲಿಕೆ)/ಪ್ರೇರಣೆ ದೆಸೆಯಿಂದ ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ
ಷಷ್ಠೀ ಸಂಬಂಧ/ನಂಟು/ಬೆಸುಗೆ
ಸಪ್ತಮೀ ಅಧಿಕರಣ/ಜಾಗ ಅಲ್ಲಿ, ಒಳು, ಆಗೆ ಒಳ್

"ಗಮನಿಸಿರಿ:" ಈ ಮೇಲಿನ ಪಟ್ಟಿಯು ಸಂಸ್ಕೃತದ ವ್ಯಾಕರಣದ ವಿಭಕ್ತಿನಿಯಮಗಳಂತೆ ಇರುವುದು. ಆದರೆ ಕನ್ನಡ ಮತ್ತು ಸಂಸ್ಕೃತದ ವಿಭಕ್ತಿ ಪ್ರತ್ಯಯಗಳ ಬಳಕೆಗಳಲ್ಲಿ ಹಲವಾರು ಪ್ರಮುಖ ವ್ಯತ್ಯಾಸಗಳಿವೆ. ಆದುದರಿಂದ ಹಲವು ವೇಳೆ ಕನ್ನಡದ ವಿಭಕ್ತಿ ಪ್ರಯೋಗವು ಮೇಲಿನ ಪಟ್ಟಿಯನ್ನು ಅನುಸರಿಸುವುದಿಲ್ಲ.

ಮಾದರಿ:

೧.ಪ್ರಥಮ : "ರಾಮನು ಬಂದನು"

ಇಲ್ಲಿ "ಬಂದನು" ಎಂಬ ಕ್ರಿಯೆಯನ್ನು ನಡೆಸಿದ ಹೆಸರುಪದ 'ರಾಮ'(ಕರ್ತೃ).

"ಗಮನಿಸಿರಿ"

ಸಾಮಾನ್ಯವಾಗಿ ಕನ್ನಡದಲ್ಲಿ ಪ್ರಥಮ ವಿಭಕ್ತಿಯ ಬಳಕೆ ಬಹಳ ಕಡಮೆ. ಹೆಚ್ಚಾಗಿ "ರಾಮನು ಬಂದನು" ಎಂದು ಹೇಳಲು, "ರಾಮ ಬಂದ" ಎಂದು ಹೇಳುವುದು, ಬರೆಯುವುದು ಉಂಟು.

೨.ದ್ವಿತೀಯ : "ರಾಮನನ್ನು ಕರೆದರು"

ಇಲ್ಲಿ "ಕರೆದರು" ಎಂಬ ಕ್ರಿಯೆಯನ್ನು 'ರಾಮ' ಎಂಬ ನಾಮಪದದ ಕುರಿತು( ನಾಮಪದದ ಮೇಲೆ ) ನಡೆಯಿತು.

"ಗಮನಿಸಿರಿ" ಸಂಸ್ಕೃತ ಮತ್ತು ಕನ್ನಡದಲ್ಲಿ ದ್ವಿತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.

ಮಾದರಿ: ಸಂಸ್ಕೃತದಲ್ಲಿ "ಗ್ರಾಮಂ ಗತಃ" ಅಂದರೆ "ಗ್ರಾಮಕ್ಕೆ ಹೋದವನು" ಎಂದು. ಆದರೆ "ಗ್ರಾಮಂ" ದ್ವಿತೀಯಾ ವಿಭಕ್ತಿ, "ಗ್ರಾಮಕ್ಕೆ" ಚತುರ್ಥೀ ವಿಭಕ್ತಿ. ಕನ್ನಡದಲ್ಲಿ ಸಂಸ್ಕೃತದಂತೆ "ಗ್ರಾಮವನ್ನು ಹೋದನು" ಎಂದರೆ ತಪ್ಪು.

ಹೀಗೆ ಮುಂತಾದವು.

೩.ತೃತೀಯ: "ರಾಮನು ಬಿಲ್ಲಿನಿಂದ ಹೊಡೆದನು"

ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು 'ಬಿಲ್ಲು' ಎಂಬ ನಾಮಪದವನ್ನು ಬಳಸಿ ನಡೆಸಿತು.

"ಗಮನಿಸಿರಿ" ಸಂಸ್ಕೃತ ಮತ್ತು ಕನ್ನಡದಲ್ಲಿ ತೃತೀಯಾ ವಿಭಕ್ತಿಯ ಪ್ರಯೋಗದಲ್ಲಿ ಬಹಳ ವ್ಯತ್ಯಾಸಗಳುಂಟು.

ಮಾದರಿ:

೧. "ರಾಮೇನ ಸಹ" ಅಂದರೆ "ರಾಮನ ಜೊತೆ" ಎಂದು, ಆದರೆ "ರಾಮೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ರಾಮನ" ಷಷ್ಠೀ ವಿಭಕ್ತಿ. ಸಂಸ್ಕೃತದಂತೆ "ರಾಮನಿಂದ ಜೊತೆ" ಎಂದು ಕನ್ನಡದಲ್ಲಿ ಹೇಳಿದರೆ ಅದು ತಪ್ಪು.

೨. "ಸಂಸ್ಕೃತೇನ ಭಾಷತಿ" ಅಂದರೆ "ಸಂಸ್ಕೃತದಲ್ಲಿ ಮಾತಾಡುತ್ತದೆ" ಎಂದು, ಆದರೆ "ಸಂಸ್ಕೃತೇನ" ಇದು ತೃತೀಯಾ ವಿಭಕ್ತಿಯಲ್ಲಿದ್ದರೆ, "ಸಂಸ್ಕೃತದಲ್ಲಿ" ಇದು ಸಪ್ತಮೀ.

ಹೀಗೆ ಮುಂತಾದವು.


೪.ಚತುರ್ಥೀ : "ರಾಮನು ಮನೆಗೆ ಹೋದನು"

ಇಲ್ಲಿ 'ರಾಮ' ಎಂಬ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ನಡೆಸಿ ತಲುಪಿದ ಜಾಗ 'ಮನೆ' ಎಂಬ ನಾಮಪದ ತಿಳಿಸುವ ಜಾಗ.

೫.ಪಂಚಮೀ : "ರಾಮನ ದೆಸೆಯಿಂದ ಶಿವ ಹೋದನು"

ಇಲ್ಲಿ 'ರಾಮ' ಎಂಬ ನಾಮಪದದ ಪ್ರೇರಣೆಯಿಂದ 'ಶಿವ' ಎಂಬ ನಾಮಪದವು(ಪ್ರಥಮಾ ವಿಭಕ್ತಿ) 'ಹೋದನು' ಎಂಬ ಕ್ರಿಯೆಯನ್ನು ಮಾಡಿತು.

೬.ಷಷ್ಠೀ : "ರಾಮನ ಹೆಂಡತಿ ಸೀತೆ"

ಇಲ್ಲಿ 'ರಾಮ' ಎಂದ ನಾಮಪದಕ್ಕೆ ಮತ್ತು 'ಸೀತೆ' ಎಂಬ ನಾಮಪದಕ್ಕೆ ಇರುವ ಸಂಬಂಧ/ನಂಟನ್ನು 'ಹೆಂಡತಿ' ಎಂಬ ನಾಮಪದವು ತಿಳಿಸುವುದು.

೭.ಸಪ್ತಮೀ : "ರಾಮನು ಕಾಡಿನಲ್ಲಿ ಹೊಡೆದನು"

ಇಲ್ಲಿ 'ರಾಮ' ಎಂದ ನಾಮಪದವು(ಕರ್ತೃ-ಪ್ರಥಮಾ ವಿಭಕ್ತಿ) 'ಹೊಡೆದನು' ಎಂಬ ಕ್ರಿಯೆಯನ್ನು ನಡೆಸಿದ ಜಾಗವನ್ನು 'ಕಾಡು' ಎಂಬ ನಾಮಪದವು ತಿಳಿಸುವುದು.

ವಿಭಕ್ತಿ ಪ್ರತ್ಯಯಗಳ ಬಳಕೆ ಮತ್ತು ಅವು ಕೊಡುವ ಅರ್ಥ'

ಮನೆ ಎಂಬ ನಾಮಪದಕ್ಕೆ ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.

  • ಪ್ರಥಮ ವಿಭಕ್ತಿ: ಮನೆ + ಉ = ಮನೆಯು
  • ದ್ವಿತೀಯ ವಿಭಕ್ತಿ: ಮನೆ + ಅನ್ನು = ಮನೆಯನ್ನು
  • ತೃತೀಯ ವಿಭಕ್ತಿ: ಮನೆ + ಇಂದ = ಮನೆಯಿಂದ
  • ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
  • ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
  • ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
  • ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
  • ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ

"ಗಮನಿಸಿರಿ:"

ಕನ್ನಡದಲ್ಲಿ ಪ್ರಥಮಾ ಮತ್ತು ಪಂಚಮೀ ವಿಭಕ್ತಿಗಳ ಬಳಕೆ ಬಹಳ ಕಡಿಮೆ. ಅಲ್ಲದೆ ಪ್ರಥಮ ಮತ್ತು ಪಂಚಮೀ ಎಂಬ ಎರಡು ವಿಭಕ್ತಿಗಳು ಕನ್ನಡದಲ್ಲಿ ಇರದಿದ್ದರು ನಡೆಯುವುದು. ಪಂಚಮೀ ಮತ್ತು ತೃತೀಯಾ ವಿಭಕ್ತಿಗಳ ನಡುವೆ ಕನ್ನಡದಲ್ಲಿ ಹೆಚ್ಚು ಭೇದವಿಲ್ಲ.

ಮಾದರಿ:

  • ರಾಮನು ಕಾಡಿಗೆ ಹೋದನು = ರಾಮ ಕಾಡಿಗೆ ಹೋದನು
  • ಸಿಂಹದ ದೆಸೆಯಿಂದ ಹೆದರಿದೆನು = ಸಿಂಹದಿಂದ ಹೆದರಿದೆನು.

ಇವನ್ನೂ ನೋಡಿ