ವಿಟೋರಿಯಾ ಡಿ ಸಿಕ
ಗೋಚರ
ವಿಟೋರಿಯಾ ಡಿ ಸಿಕ (1902-1974) ಇಟಾಲಿಯನ್ ನಟ ಮತ್ತು ನಿರ್ದೇಶಕ.
1932ರಲ್ಲಿ ಚಿತ್ರಗಳಲ್ಲಿ ನಟಿಸುವುದಕ್ಕೆ ಮುಂಚೆ ಪ್ರಸಿದ್ಧ ರಂಗನಟನಾಗಿದ್ದ. ಬೊಂಬಿನಿ ಸಿ ಗಾರ್ಡಿನೊ ಇವನ ಪ್ರಥಮ ನಿರ್ದೇಶಿತ ಚಿತ್ರ. 1930ರಲ್ಲಿ ಇಟಲಿಯಲ್ಲಿ ಸುಪ್ರಸಿದ್ಧ ನಿರ್ದೇಶಕನಾಗಿ ಹೆಸರು ಪಡೆದು ದ್ವಿತೀಯ ಮಹಾಯುದ್ಧದ ಅನಂತರ ವಿಶ್ವವಿಖ್ಯಾತ ನಿರ್ದೇಶಕನಾದ. ನಿರ್ದೇಶನದ ಜೊತೆ ಜೊತೆಗೆ ನಟಿಸುತ್ತಲೂ ಇದ್ದ. ಚಿತ್ರಗಳಲ್ಲಿ ಅತ್ಯಂತ ಆಧುನಿಕ ವಾಸ್ತವತೆಯನ್ನು ನಿರೂಪಿಸಿರುವುದೇ ಇವನ ಮಹತ್ತ್ವ. 1961ರಲ್ಲಿ ಹೊರಬಂದ ಲಾ ಸಿಯೋ ಸಿಯೂದ-ಇವನನ್ನು ವಿಶ್ವವಿಖ್ಯಾತ ನಿರ್ದೇಶಕನನ್ನಾಗಿಸಿತು.
ನಿರ್ದೇಶನ , ನಟನೆ
[ಬದಲಾಯಿಸಿ]ಷೂ ಪೈನ್ (1946), ಬೈಸಿಕಲ್ ತೀವ್ಸ್ (1948), ಮಿರಕಲ್ ಇನ್ ಮಿಲಾನ್ (1950), ಗೋಲ್ಡ್ ಆಫ್ ನೇಪಲ್ಸ್ (1954), ಎ. ಫೇರ್‍ವೆಲ್ ಟು ಆರಮ್ಸ್ (1957), ಟೂ ವಿಮೆನ್ (1961), ದಿ ಷೂಸ್ ಆಫ್ ದಿ ಫಿಷರ್‍ಮನ್ (1968), ಸನ್ ಫ್ಲವರ್ (1970)-ಇವು ಈತ ನಿರ್ದೇಶಿಸಿದ ಪ್ರಖ್ಯಾತ ಚಿತ್ರಗಳು. ದಿ ಫೋರ್ ಫಾಸ್ಟ್ ಮೆನ್ ಮೊದಲಾದ ಟಿ.ವಿ ಚಿತ್ರಗಳಲ್ಲೀತ ನಟಿಸಿದ್ದಾನೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: