ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫೦

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Japan Tokyo Shinjuku billboards 11 014.jpg

ಜಾಹೀರಾತು ವಿಶಿಷ್ಟವಾಗಿ ಸಂಭಾವ್ಯ ಗ್ರಾಹಕರನ್ನು ಖರೀದಿ ಮಾಡುವಂತೆ ಅಥವಾ ಒಂದು ನಿರ್ದಿಷ್ಟ ಗುರುತಿನ ಉತ್ಪನ್ನ ಅಥವಾ ಸೇವೆಯನ್ನು ಹೆಚ್ಚು ಬಳಸುವಂತೆ ಒಲಿಸಲು ಪ್ರಯತ್ನಿಸುವ ಒಂದು ಪ್ರಸಾರ ಸಾಧನ. ಬಹಳ ಜಾಹೀರಾತುಗಳು ಗುರುತಿನ ಪ್ರತಿ ಅಭಿಪ್ರಾಯ (ಬ್ರ್ಯಾಂಡ್ ಇಮೇಜ್) ಮತ್ತು ಗುರುತಿನ ಪ್ರತಿ ನಿಷ್ಠೆಯ (ಬ್ರ್ಯಾಂಡ್ ಲಾಯಲ್ಟಿ) ನಿರ್ಮಾಣ ಮತ್ತು ಬಲವರ್ಧನೆ ಮೂಲಕ ಆ ಉತ್ಪನ್ನಗಳ ಮತ್ತು ಸೇವೆಗಳ ಬಳಕೆ ಹೆಚ್ಚಾಗುವಂತೆ ರೂಪಿಸಲ್ಪಡುತ್ತವೆ. ಈ ಉದ್ದೇಶಗಳಿಗಾಗಿ, ಜಾಹೀರಾತುಗಳು ಕೆಲವು ಸಲ ವಾಸ್ತವವಾದ ಮಾಹಿತಿಯ ಜೊತೆಗೆ ತಮ್ಮ ಪ್ರೇರಿಸುವ ಸಂದೇಶವನ್ನು ಹುದುಗಿಸುತ್ತವೆ. ದೂರದರ್ಶನ, ರೇಡಿಯೋ, ಚಲನಚಿತ್ರ, ಪತ್ರಿಕೆಗಳು, ವೀಡಿಯೋ ಗೇಮ್ಸ್, ಅಂತರ್ಜಾಲ ಮತ್ತು ಜಾಹೀರಾತು ಫಲಕ ಸಹಿತ ಪ್ರತಿಯೊಂದು ಪ್ರಮುಖ ಮಾಧ್ಯಮ ಈ ಸಂದೇಶಗಳನ್ನು ತಲುಪಿಸಲು ಉಪಯೋಗಿಸಲ್ಪಡುತ್ತದೆ. ಅನೇಕ ಸಲ, ಒಂದು ಕಂಪನಿ ಅಥವಾ ಇತರ ಸಂಸ್ಥೆಯ ಪರವಾಗಿ ಒಂದು ಜಾಹೀರಾತು ಸಂಸ್ಥೆ ಜಾಹೀರಾತುಗಳನ್ನು ಇರಿಸುತ್ತದೆ.

ಜಾಹೀರಾತು ಆರ್ಥಿಕ ಪ್ರಗತಿಗೆ ಅನಿವಾರ್ಯವೆಂದು ತೋರಬಹುದಾದರೂ, ಇದು ಸಾಮಾಜಿಕ ಹಾನಿಗಳಿಲ್ಲದೆ ಇಲ್ಲ. ಅನಪೇಕ್ಷಿತ ಇ-ಅಂಚೆ (ಸ್ಪ್ಯಾಮ್) ಬಹಳ ಪ್ರಚಲಿತವಾಗಿ ಈ ಸೇವೆಗಳನ್ನು ಬಳಸುವವರಿಗೆ ಒಂದು ಪ್ರಮುಖ ಪೀಡೆಯಾಗಿದೆ ಮತ್ತು, ಅಂತರ್ಜಾಲ ಸೇವಾ ಪ್ರಬಂಧಕರ ಮೇಲೆ ಕೂಡ ಒಂದು ಆರ್ಥಿಕ ಹೊರೆಯಾಗಿದೆ. ಜಾಹೀರಾತು, ಶಾಲೆಗಳಂತಹ ಸಾರ್ವಜನಿಕ ಪ್ರದೇಶಗಳನ್ನು ಹೆಚ್ಚೆಚ್ಚು ಅತಿಕ್ರಮಿಸುತ್ತಿದ್ದು, ಕೆಲವು ವಿಚಾರಕರು ಇದನ್ನು ಒಂದು ವಿಧದ ಮಕ್ಕಳ ಶೋಷಣೆಯೆಂದು ಪ್ರತಿಪಾದಿಸುತ್ತಾರೆ.