ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೩
ಗೋಚರ
ಹತ್ತಿ ಗಾಸಿಪಿಯಮ್ ಜಾತಿಯ ಗಿಡಗಳ ಬೀಜದ ಸುತ್ತಲು ಬೆಳೆಯುವ ಮೃದು ನಾರು. ಗಾಸಿಪಿಯಮ್ ಗಿಡಗಳು ಅಮೇರಿಕ, ಭಾರತ ಮತ್ತು ಆಫ್ರಿಕಗಳ ಮೂಲದವು. ಆದರೆ ಇಂದು ಪ್ರಪಂಚಾದ್ಯಂತ ಸಾಗುವಳಿಗೆ, ಮೂಲತಃ ಅಮೇರಿಕ ಖಂಡದ ಗಾಸಿಪಿಯಮ್ ಹಿರ್ಸುಟಮ್ ಮತ್ತು ಗಾಸಿಪಿಯಮ್ ಬಾರ್ಬಡೆನ್ಸ್ ತಳಿಗಳು ಉಪಯೋಗಿಸಲ್ಪಡುತ್ತವೆ.
ಹತ್ತಿಯ ನಾರಿನಿಂದ ಸೆಣೆದ ದಾರದಿಂದ ಮೃದುವಾದ, ಗಾಳಿ ತೂರಬಲ್ಲ ಬಟ್ಟೆ ತಯಾರಿಸಲಾಗುತ್ತದೆ. ಹತ್ತಿ ನಾರು ಪರಿಷ್ಕರಣೆಯ ನಂತರ ಶುದ್ಧ ಸೆಲ್ಲ್ಯುಲೊಸ್ ಮಾತ್ರ ಉಳಿಯುತ್ತದೆ. ಈ ಸೆಲ್ಲ್ಯುಲೊಸ್‍ನ ರಚನೆ ಹತ್ತಿಗೆ ಅದರ ತ್ರಾಣ ಮತ್ತು ಹೀರುವಿಕೆಯನ್ನು ನೀಡುತ್ತದೆ. ಹತ್ತಿ ಪ್ರಪಂಚದಲ್ಲಿ ಬಟ್ಟೆಗಾಗಿ ಅತ್ಯಂತ ಹೇರಳವಾಗಿ ಉಪಯೋಗಿಸಲ್ಪಡುವ ನೈಸರ್ಗಿಕ ಪದಾರ್ಥ.
ಹತ್ತಿಯು ಭಾರತದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅನಾದಿಕಾಲದಿಂದಲೂ ಹತ್ತಿ ಭಾರತದ ಜನಜೀವನದಲ್ಲಿ ಹಾಸು-ಹೊಕ್ಕಾಗಿದೆ. ಭಾರತದಲ್ಲೇ ಇದನ್ನು ತಮ್ಮ ಜೀವನಾವಲಂಬನೆಗೆ ಆರಿಸಿಕೊಂಡ ಜನರ ಸಂಖ್ಯೆ ೬೦ ಮಿಲಿಯನ್ ಎಂದು ಅಂದಾಜು ಮಾಡಲಾಗಿದೆ.