ಗಾಸಿಪಿಯಮ್
ಗಾಸಿಪಿಯಮ್ | |
---|---|
ಗಾಸಿಪಿಯಮ್ ಬಾರ್ಬಡೆನ್ಸ್ | |
Scientific classification | |
ಸಾಮ್ರಾಜ್ಯ: | |
Division: | |
ವರ್ಗ: | |
ಗಣ: | |
ಕುಟುಂಬ: | |
ಕುಲ: | ಗಾಸಿಪಿಯಮ್ |
Species | |
ಲೇಖನ ನೋಡಿ |
ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ. ಹತ್ತಿ ಗಿಡಗಳು ಈ ಪ್ರಜಾತಿಯ ಪ್ರಮುಖ [೧]ಸದಸ್ಯರು. ಗಾಸಿಪಿಯಮ್ ಮಾಲ್ವೇಸೆ ಕುಟುಂಬದ ಒಂದು ಸಸ್ಯ ಪ್ರಜಾತಿ.[೨] ಹತ್ತಿ ಗಿಡಗಳು ಸಹ ಈ ಪ್ರಜಾತಿಗೆ ಸೇರಿವೆ.ಇವು ಈ ಪ್ರಜಾತಿಯ ಪ್ರಮುಖ ಸದಸ್ಯರು. ಇದು ಉಷ್ಣವಲಯ ಮತ್ತು ಮಧ್ಯಮ ಉಷ್ಣವಲಯದಲ್ಲಿ ಬೆಳೆಯ ಬಹುದಾದ ಬೆಳೆಯಾಗಿದೆ.ಗಾಸಿಪಿಯಮ್ ನಲ್ಲಿ ಸರಿ ಸುಮಾರು ಐವತ್ತು ಬಗೆಗಳನ್ನು ಒಳಗೊಂಡಿದೆ. ಇನ್ನೂ ಹಲವು ಬಗೆಗಳನ್ನು ಆವಿಷ್ಕರಣ ದೂಡಲಾಗುತ್ತಿದೆ. ಈ ವರ್ಗದ ಹೆಸರನ್ನು ಆರೇಬಿಕ್ ಪದ ಗೋವಾ, ಅಂದರೆ ತುಂಬಾ ಮೃದು ಎಂಬ ಪದದಿಂದ ಆವಿಷ್ಕರಿಸಿದ್ದಾರೆ. ಹತ್ತಿ ತುಂಬಾ ಮುಖ್ಯವಾಗಿ ಉಪಯೋಗಿಸುತ್ತಿರುವ ನೈಸರ್ಗಿಕ ನಾರು. ಇತ್ತೀಚೆಗೆ ಕೃಷಿಯ ಮೂಲಕ ಬೆಳೆಯುವ ಹತ್ತಿಯನ್ನು ಮುಖ್ಯವಾಗಿ ಎಣ್ಣೆ ಉತ್ಪಾದನೆ ಮತ್ತು ಪಶುಗಳ ಪ್ರೋಟೀನ್ ಆಹಾರ ಉತ್ಪಾದನೆಯಲ್ಲಿ ಬಳಸಲಾಗುತ್ತಿದೆ. ಹತ್ತಿ ಗಿಡಗಳು ಪ್ರಮುಖವಾಗಿ ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತಿವೆ. ಹಾಗೂ ಪ್ರಮುಖವಾಗಿ ಉಷ್ಣವಲಯ ಮತ್ತು ಮಧ್ಯಮ ಉಷ್ಣವಲಯಗಳಾದ ಆಫ್ರಿಕಾ, ದಕ್ಷಿಣ ಅಮೇರಿಕಾ ಹಾಗೂ ಏಷ್ಯಾಗಳಲ್ಲಿ ಕೃಷಿ ಉತ್ಪಾದನೆ ಹಾಗೂ ಕಾರ್ಖಾನೆಗಳಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಹಾಗಾಗಿ ಗಾಸಿಪಿಯಮ್ ವರ್ಗವು ವಿಜ್ಞಾನಿಗಳ ಗಮನವನ್ನು ಸೆಳೆಯುತ್ತಿದೆ. ಗಾಸಿಪಿಯಮ್ ವರ್ಗದ ಹುಟ್ಟು ಸರಿಸುಮಾರು ಐದರಿಂದ ಹತ್ತು ದಶಲಕ್ಷ ವರ್ಷಗಳ ಹಿಂದಿನದ್ದು. ಸಾಮಾನ್ಯವಾಗಿ ಇವು ಪೊದರೆಗಳಾಗಿದ್ದು ಈ ವರ್ಗದ ಗಿಡಗಳು ಕೃಷಿಯಲ್ಲಿ ಬೆಳೆಯುವ ಹತ್ತಿಯು ಸರ್ವಕಾಲಿಕವಾಗಿದ್ದು, ವರ್ಷಗಟ್ಟಲೇ ಬೆಳೆಯಬಹುದಾಗಿದೆ. ಗಿಡಗಳು ಒಂದ ರಿಂದ ಎರಡು ಮೀಟರ್ ಉದ್ದವಾಗಿರುತ್ತವೆ. ಎಲೆಗಳು ಹಗಲ ಹಾಗೂ ಪಟಲವಾಗಿರುತ್ತವೆ. ಮೂರರಿಂದ ಐದು ಅಥವಾ ಏಳು ಪಟಲಗಳಿರುತ್ತವೆ. ಬೀಜಗಳು ಬೀಜಕೋಶದಲ್ಲಿ ಬಂಧಿಸಲ್ಪಟ್ಟದ್ದು. ಪ್ರತಿಯೊಂದು ಬೀಜವೂ ಎರಡು ರೀತಿಯ ನಾರುಗಳಿಂದ ಸುತ್ತುವರಿದಿರುತ್ತದೆ. ಈ ನಾರುಗಳು ತುಂಬಾ ವ್ಯಾಪಾರಿಕ ಆಸಕ್ತಿಯ ಅಂಗವಾಗಿವೆ.ಇವುಗಳನ್ನು ಹತ್ತಿ ಹಿಂಜುಗೆ ಎಂಬ ವಿಧಾನದಿಂದ ಬೇರ್ಪಡಿಸಲಾಗುತ್ತದೆ. ಮೊದಲ ಹಂತದಲ್ಲಿ, ಉದ್ದನೆಯ ನಾರುಗಳನ್ನು ತೆಗೆಯಲಾಗುತ್ತದೆ. ಹಾಗೂ ಇವುಗಳನ್ನು ತಿರುಚಿ ನೂಲಿನ ಎಳೆಗಳಂತೆ ಮಾಡಲಾಗುತ್ತದ್ದೆ. ಎರಡನೆ ಹಂತದಲ್ಲಿ ತುಂಡಾದ ಅಥವಾ ಚಿಕ್ಕದಾದ ನಾರುಗಳನ್ನು ಕುದಿಸಿ ತೆಗೆದು ಕಡಿಮೆ ಗುಣಮಟ್ಟದ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಸ್ವಾಭಾವಿಕವಾಗಿ ಹತ್ತಿಯೂ ಹಲವು ಬಣ್ಣಗಳಲ್ಲಿ ಬಿಳಿ, ಕಂದು, ಹಸಿರು ಹೀಗೆ ಹಲವಾರು ಬಣ್ಣಗಳಲ್ಲಿ ಲಭ್ಯವಾಗುತ್ತವೆ. ವಿಶಿಷ್ಟ ರೀತಿಯಾದ, ಅತೀ ಗುಣಮಟ್ಟದ ಹತ್ತಿ ಉತ್ಪಾದನೆಯಲ್ಲಿ ತುಂಬಾ ರೀತಿಯಾದ ಅನ್ವೇಷಣೆಗಳು ನಡೆಯುತ್ತಿವೆ. ೨೦೧೦ ರಲ್ಲಿ ಎರಡು ಕಂಪನಿಗಳಾದ ಮೊನಾಸ್ಟೋ ಮತ್ತು ಇಲ್ಲುಮಿನ ಹತ್ತಿ ಉತ್ಪಾದನೆಯತ್ತ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ.
ವಿವಿಧ ಜಾತಿಗಳು
[ಬದಲಾಯಿಸಿ]ಜ಼ೂನಿ ಮಾನವರು ಗಾಸಿಪಿಯಮ್ ಹರ್ಬೇಸಿಯಮ್ ಎಂಬ ಗಾಸಿಪಿಯಮ್ ತಳಿಯನ್ನು ಬಟ್ಟೆ ಉತ್ಪಾದನೆಗೆ ಬಳಸುತ್ತಾರೆ. ಹಾಗೂ ಹತ್ತಿಯ ತಂತುಗಳನ್ನು ನಿರ್ಧಾರಿತ ಮಟ್ಟದಲ್ಲಿ ಹೊಸೆದು ಹಗ್ಗವನ್ನು ತಯಾರಿಸುತ್ತಾರೆ. ಗಾಸಿಪಿಯಮ್ ಹಿರ್ಸುಟಮ್, ಇದು ಮೆಕ್ಸಿಕನ್ ಹತ್ತಿ, ಎಂಬ ಹೆಸರಿನಲ್ಲಿಯೂ ಸಹ ಪ್ರಸಿದ್ಧವಾಗಿದೆ. ಈ ಹತ್ತಿಯ ತಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಮೇರಿಕಾದಲ್ಲಿ ಕಾಣಬಹುದಾಗಿದೆ. ೯೫ ಪ್ರತಿಶತ ಹತ್ತಿಯನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಈ ತಳಿಗೆ ಮೆಕ್ಸಿಕೋ, ವೆಸ್ಟ್ ಇಂಡೀಸ್, ಉತ್ತರ ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ ತವರಾಗಿದೆ. ಪ್ರಪಂಚಾದ್ಯಂತ ೯೦ ಪ್ರತಿಶತ ಉತ್ಪಾದಿಸುವ ಹತ್ತಿ ಈ ತಳಿಯದ್ದೇ ಆಗಿರುತ್ತದೆ. ಭೂಗರ್ಭಶಾಸ್ತ್ರಜ್ಞರು ಮೆಕ್ಸಿಕೋದ ಟೀಹ್ವಾಕಾನ್ ವ್ಯಾಲಿಯ ಪ್ರಕಾರ ಈ ಹತ್ತಿಯ ತಳಿಗಳನ್ನು ೩,೫೦೦ ಬಿ.ಸಿ ಯಲ್ಲಿ ಉತ್ಪಾದಿಸಲಾಗುತ್ತಿತ್ತೆಂದು ಕಂಡು ಬರುತ್ತದೆ. ಆದರೆ ಇದರ ಉತ್ಪಾದನೆ ಮೊದಲು ಎಲ್ಲಿ ಪ್ರಾರಂಭವಾಯಿತೆಂಬುವುದಕ್ಕೆ ಯಾವುದೇ ರೀತಿಯ ಸಾಕ್ಷಾಧಾರಗಳಿಲ್ಲ. ಅಮೇರಿಕಾದಲ್ಲಿ ಸಿಕ್ಕ ಸಾಕ್ಷವೇ ಎಲ್ಲದಕ್ಕಿಂತಲೂ ಮೊದಲು ಸಿಕ್ಕ ಸಾಕ್ಷಾಧಾರವೆಂದು ಪರಿಗಣಿಸಲಾಗಿದೆ. [೩] ಗಾಸಿಪಿಯಮ್ ಹಿರ್ಸುಟಮ್,[೪] ಇದರಲ್ಲಿ ಹೆಚ್ಚಿನ ಬಗೆಗಳಿವೆ. ಇವುಗಳ ಸಸ್ಯಗಳ ಉದ್ದದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಉದ್ದವಾಗಿ ಬೆಳೆಯುವ ವಿಧದ ಧೀರ್ಘ ಪ್ರಧಾನ ಹತ್ತಿ ಎಂದು ಕರೆಯುತ್ತಾರೆ ಮತ್ತು ಕಡಿಮೆ ಎತ್ತರ ಬೆಳೆಯುವ ವಿಧವನ್ನು ಸಣ್ಣ ಪ್ರಧಾನ ಹತ್ತಿ ಎಂದು ಕರೆಯುತ್ತಾರೆ. ಧೀರ್ಘ ಪ್ರಧಾನ ಹತ್ತಿಯ ವಿಧಗಳನ್ನು ಹೆಚ್ಚಾಗಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ...[೫] ಮುಖ್ಯವಾಗಿ ಗಾಸಿಪಿಯಮ್ ಹಿರ್ಸುಟಮ್, ಮತ್ತು ಗಾಸಿಪಿಯಮ್ ಹರ್ಬೇಸಿಯಮ್, ತಳಿಗಳನ್ನು ಹತ್ತಿ ಬೀಜದ ಎಣ್ಣೆ ಉತ್ಪಾದನೆಗೆ ಬಳಸುತ್ತಾರೆ. ಗಾಸಿಪಿಯಮ್ ಆರ್ಬೋರಿಯಮ್ ಅನ್ನು ಸಾಮಾನ್ಯವಾಗಿ ಮರದ ಹತ್ತಿ ಎಂದು ಕರೆಯುತ್ತಾರೆ. ಈ ಜಾತಿಯ ಹತ್ತಿಯು ಭಾರತ, ಪಾಕಿಸ್ತಾನ, ಉಷ್ಣವಲಯ ಮತ್ತು ಉಪ ಉಷ್ಣವಲಯಗಳಲ್ಲಿ ಹಾಗೂ ಪ್ರಪಂಚದಾದ್ಯಂತ ಬೆಳೆಯಲಾಗುತ್ತದೆ. ಇದನ್ನು ಹರಪ್ಪ ನಾಗರಿಕತೆಯ ಸಿಂಧೂ ತಟದಲ್ಲಿ ಬೆಳೆಯಲಾಗಿತ್ತು, ಎಂಬುದಕ್ಕೆ ಸಾಕಷ್ಟು ಸಾಕ್ಷಾಧಾರಗಳಿವೆ. ಅವರು ಈ ಜಾತಿಯ ಹತ್ತಿಯನ್ನು ಹತ್ತಿ ಜವಳಿ ಉದ್ದಿಮೆಯಲ್ಲಿ ಬಳಸುತ್ತಿದ್ದರು.ಈ ಜಾತಿಯ ಹತ್ತಿಯನ್ನು ಪೂರ್ವ ಆಫ್ರಿಕಾದಲ್ಲಿಯೂ ಪರಿಚಯಿಸಿದ್ದರು. ಇದನ್ನು ಮೀರೋ ನಾಗರಿಕತೆಯವರು ಬೆಳೆಸಿದ್ದರು. ಈ ವಿಧವನ್ನು ೧೭೫೩ ರಲ್ಲಿ ಲಿನೆಯಸ್ ರವರು ಪ್ರಕಟಿಸಿದ ಪ್ಲಾಂಟೆರಿಯಮ್ ಎಂಬ ಪುಸ್ತಕದಲ್ಲಿ ಈ ವಿಧದ ಬಗ್ಗೆ ಮಾಹಿತಿ ಇದೆ. ಇವರು ಹೋಲೋ ಟೈಪ್ ಅನ್ನು ಪೂರೈಕೆ ಮಾಡಿದರು. ಇದು ಈಗ ಲಿನೇಯನ್ ಶುಷ್ಕವನ್ನು ಸ್ವೀಡಿಸ್ ಮ್ಯೂಸಿಯಮ್ ಆಪ್ ನ್ಯಾಚುರಲ್ ಹಿಸ್ಟರಿಯಲ್ಲಿ ಕಾಣಬಹುದು. ಹತ್ತಿ ಒಂದು ಪ್ರಪಂಚದಲ್ಲಿ ಆಹಾರಕ್ಕೆ ಬಳಸದ ಬೆಳೆಯಾಗಿದೆ. ಮತ್ತು ಪ್ರಪಂಚದ ಅರ್ಧ ಭಾಗ ಜನರಿಗೆ ಜವಳಿ ಉದ್ದಿಮೆ, ಸ್ಪೋಟಕ, ಎಣ್ಣೆ, ಹಸು ಆಹಾರ, ಟೂತ್ಪೇಸ್ಟ್ ಗಳಿಗೆ ಈ ಹತ್ತಿಯ ಬಳಕೆಯಾಗುತ್ತದೆ. ಈ ಬೆಳೆಯನ್ನು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದ್ದರು. ಆದರೆ ಇದಕ್ಕೆ ಹೆಚ್ಚಿನ ರಾಸಾಯನಿಕ ಗೂಬ್ಬರಗಳ ಬಳಕೆಯಿಂದ ಕೆಲಸಗಾರರ ಶೋಷಣೆಯಿಂದ ಇದು ಕಡಿಮೆಯಾಯಿತು.
ಉಪಯೋಗಗಳು
[ಬದಲಾಯಿಸಿ]ಹತ್ತಿ ಬಟ್ಟೆಗಳು ಅದರ ಸ್ಪರ್ಧಾಳುಗಳಾದ ನೈಲಾನ್,ಉಣ್ಣೆ, ಲಿನೆನ್ ಬಟ್ಟೆಗಳಿಗಿಂತಲೂ ಮಾನವರಿಗೆ ಅತ್ಯಂತ ಹತ್ತಿರವಾಯಿತು. ಹತ್ತಿಯ ವ್ಯಾಪಾರವು ಕೈಗಾರಿಕ ಕ್ರಾಂತಿಯಲ್ಲಿ ಒಂದು ದೊಡ್ಡ ಪಾತ್ರವನ್ನೇ ವಹಿಸಿತ್ತು. ಮತ್ತು ಬ್ರಿಟೀಷರ ಹಣಕಾಸಿನ ವ್ಯವಹಾರಕ್ಕೆ ತುಂಬಾ ಲಾಭದಾಯಕವಾಗಿತ್ತು. ಇದು ಗುಲಾಮಗಿರಿಯ ತಡೆಗೆ ಒಂದು ಪ್ರಮುಖ ಕಾರಣವಾಯಿತು. ಹಾಗೂ ಅಮೇರಿಕಾದ ಅಂತರ್ಯುದಕ್ಕೆ ಕಾರಣವಾಯಿತು. ೧೮ ಹಾಗು ೧೯ ನೆಯ ಶತಮಾನದಲ್ಲಿ ಬ್ರಿಟನ್ ದೇಶವು ದೊಡ್ಡ ಪ್ರಮಾಣದಲ್ಲಿ ಹತ್ತಿ ಬಟ್ಟೆಯ ಉದ್ದಿಮೆಯಲ್ಲಿ ತೊಡಗಿಕೊಂಡಿತ್ತು. ಹತ್ತಿ ನೇಕಾರರನ್ನು ಕೈಗಾರಿಕೆಯ ಉದ್ದಿಮೆಗೆ ಬಳಪಡಿಸಿತು. ಬೇರೆ ಬೆಳೆಗಳಿಗಿಂತಲೂ ರಾಸಾಯನಿಕ ಕ್ರಿಮಿನಾಶಕಗಳನ್ನು ಹತ್ತಿಯ ಬೆಳೆಗೆ ಹೆಚ್ಚಾಗಿ ಸಿಂಪಡಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Genus: Gossypium L". Germplasm Resources Information Network. United States Department of Agriculture date 2007-03-12 accessdate 2011-09-08.
- ↑ https://en.wikipedia.org/wiki/Gossypium
- ↑ www.theplantlist.org/browse/A/Malvaceae/Gossypium/
- ↑ www.edenproject.com/learn/for-everyone/plant-profiles/cotton
- ↑ "Monsanto and Illumina Reach Key Milestone in Cotton Genome Sequencing". www.monsanto.com access-date 2016-01-31 last = APPDMZ\gyoung.
{{cite web}}
: Missing pipe in:|website=
(help)