ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ವಿಶ್ವನಾಥ ಬದಿಕಾನ
ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ವಿಶ್ವನಾಥ ಬದಿಕಾನ.
ವಿಶ್ವನಾಥ ಬದಿಕಾನ
[ಬದಲಾಯಿಸಿ]ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು 16 ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. ಗೌಡ ಕನ್ನಡದ ಜನಪದ ಕತೆಗಳು, ಗಾದೆಗಳು, ಎ.ಕೆ. ರಾಮನುಜನ್ ಬದುಕು ಬರಹಗಳು, ತುಳುತ ಕತಾ ಸಂಸ್ಕೃತಿ ಎಂಬ 4 ಪುಸ್ತಕಗಳನ್ನು ಪ್ರಕಟಪಡಿಸಿದ್ದಾರೆ. ಇವರ 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ.
ವೃತ್ತಿ
[ಬದಲಾಯಿಸಿ]ಇವರು ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನಲ್ಲಿ ೧೯೯೬ರಿಂದ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅಲೋಶಿಯಸ್ ಕಾಲೇಜಿನಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಪ್ರಾರಂಭಿಸಿ, ಸಾರಥ್ಯವಹಿಸಿ ಇಂದಿಗೂ ಯೋಜನೆಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿದ್ದಾರೆ.
ಊರು
[ಬದಲಾಯಿಸಿ]ಇವರ ಮೂಲ ಊರು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಅಂಬ್ರೋಟಿ-ಪೇರಾಲು ಊರಿನ ಬದಿಕಾನ ಮನೆ. ಪ್ರಸ್ತುತ ಇವರು ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕನ್ನಡ ವಿಕಿಪೀಡಿಯದಲ್ಲಿ ಅರೆಭಾಷೆಗೆ ಸಂಬಂಧಿಸಿದ ಹಲವು ಲೇಖನಗಳನ್ನು ತಯಾರಿಸಿದ್ದಾರೆ. ತುಳು ವಿಕಿಪೀಡಿಯದ ಬೆಳವಣಿಗೆಗೆ ಇವರು ಉತ್ತಮ ಕೊಡುಗೆಯನ್ನು ನೀಡಿದ್ದಾರೆ.
(ಮೇ ೨೦೧೭ರಲ್ಲಿ ಪರಿಚಯಿಸಲ್ಪಟ್ಟವರು)