ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೨೦-೨೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೨೦-೨೧ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್/ವಿಕ್ಷಣರಿ ಸಮುದಾಯ, ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕಾಲೇಜಿನ ಬಗೆಗೆ[ಬದಲಾಯಿಸಿ]

ಸಂತ ಅಲೊಶೀಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯ ಕನ್ನಡ ವಿಭಾಗವು ಕಳೆದ ಮೂರು ವರ್ಷಗಳಿಂದ ಕನ್ನಡ ವಿಕಿಪೀಡಿಯ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ೨೦೦೭ರ ನಂತರ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿದೆ. ಈ ಸ್ವಾಯತ್ತ ಸಂಸ್ಥೆಯು ಬಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಸ್ನಾತಕ ಪದವಿಯನ್ನೂ ಹಾಗೂ ಎಂ.ಎ., ಎಂ.ಎಸ್ಸಿ., ಎಂ.ಕಾಂ., ಎಂ.ಬಿ.ಎ., ಎಂ.ಸಿ.ಎ., ಎಂ.ಎಸ್ಸಿ.ಐ.ಟಿ., ಎಂ.ಸಿ.ಜೆ., ಎಂ.ಎಸ್.ಡಬ್ಯು., ಹೀಗೆ ಸುಮಾರು ೧೫ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ನಡೆಸುತ್ತಿದೆ. ಕನ್ನಡ, ಹಿಂದಿ, ಇಂಗ್ಲಿಷ್, ರಸಾಯನಶಾಸ್ತ್ರ, ಕಾಮರ್ಸ್, ಇತಿಹಾಸ, ಅರ್ಥಶಾಸ್ತ್ರ ಇತ್ಯಾದಿ ವಿಭಾಗಗಳಲ್ಲಿ ಪಿಎಚ್.ಡಿ. ಗೈಡ್‍ಗಳಿದ್ದಾರೆ.

ಯೋಜನೆಯ ರೂಪುರೇಷೆ[ಬದಲಾಯಿಸಿ]

ಪ್ರಸ್ತುತ ಈ ಯೋಜನೆಯಲ್ಲಿ ಬಿ.ಸಿ.ಎ., ಬಿ.ಎಸ್ಸಿ., ಬಿ.ಕಾಂ., ಬಿ.ಬಿ.ಎಂ., ಬಿ.ಸಿ.ಎ., ಹೀಗೆ ಐದು ನಿಕಾಯಗಳ ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ಸ್ನಾತಕ ಪದವಿ ಓದುತ್ತಿರುವ ಮೊದಲ ಮತ್ತು ಎರಡನೆಯ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯ, ಕನ್ನಡ ವಿಕಿಸೋರ್ಸ್ ಮತ್ತು ವಿಕ್ಷಿಣರಿಗಳಲ್ಲಿ ಚತುರ್ಮಾಸಗಳಿಗೆ ಲೇಖನ ಬರೆಯುವ ಅಸೈನ್‌ಮೆಂಟ್ ತಯಾರು ಮಾಡುತ್ತಾರೆ. ಇವೆಲ್ಲವನ್ನೂ ಕನ್ನಡ ವಿಭಾಗದ ಪ್ರಾಧ್ಯಾಪಕರು ಮೇಲ್ವಿಚಾರಣೆ ಮಾಡುತ್ತಾರೆ. ಶಿಕ್ಷಣ ಯೋಜನೆ ಹೀಗಿದೆ;

  • ವಿದ್ಯಾರ್ಥಿಗಳು ಲಾಗಿನ್ ಆಗಿ ತಮ್ಮ ವೈಯಕ್ತಿಕ ಪರಿಚಯ ಮಾಡಿಕೊಳ್ಳುತ್ತಾರೆ.
  • ವಿದ್ಯಾರ್ಥಿಗಳು ವಿಕ್ಷ್‌ನರಿಯಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ವಿದ್ಯಾರ್ಥಿಗಳು ವಿಕಿಸೋರ್ಸ್‌ನಲ್ಲಿ ಬರೆಯಲು ಪ್ರಾರಂಭಿಸುತ್ತಾರೆ.
  • ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯದ ಸಾಂಡ್‍ಬಾಕ್ಸ್‌ನಲ್ಲಿ ಲೇಖನಗಳನ್ನು ಬರೆಯುತ್ತಾರೆ. ಅವುಗಳನ್ನು ಕನ್ನಡ ವಿಭಾಗದ ಪ್ರಾಧ್ಯಾಪಕರು ಪರಿಶೀಲಿಸಿ, ಗುಣಮಟ್ಟ ಲೇಖನವೆಂದು ಕಂಡುಬಂದರೆ ಲೈವ್ ಮಾಡಲು ಅನುಮತಿ ನೀಡುತ್ತಾರೆ.

ಮಾರ್ಗದರ್ಶನ[ಬದಲಾಯಿಸಿ]

  1. --Vishwanatha Badikana (ಚರ್ಚೆ) ೦೪:೪೩, ೧೧ ನವೆಂಬರ್ ೨೦೨೦ (UTC)
  1. --

ಬಿ.ಎ. ಒಂದನೆಯ ಚರ್ತುಮಾಸ[ಬದಲಾಯಿಸಿ]

ಕ್ರಮ ಸಂಖ‍್ಯೆ ವಿದ್ಯಾರ್ಥಿ ಹೆಸರು ಹಾಜರಿ ಸಂಖ್ಯೆ ಸದಸ್ಯ ಹೆಸರು ತಯಾರಿಸಿದ ಲೇಖನ ವಿಸ್ತರಿಸಿದ ಲೇಖನ