ವಿಕಿಪೀಡಿಯ:ದಿಕ್ಸೂಚಿ (ಸಂಪಾದನೆ)
ಮುಖ ಪುಟ, ೧. ಸಂಪಾದನೆ, ೨. ಅಕ್ಷರ ಜೋಡಣೆ ಮತ್ತು ವಿನ್ಯಾಸ, ೩. ವಿಕಿಪೀಡಿಯ ಸಂಪರ್ಕ ಕೊಂಡಿಗಳು, ೪. ಸಂಬಂಧಪಟ್ಟ ತಾಣಗಳ ಕೊಂಡಿಗಳು, ೫. ಬಾಹ್ಯ ಸಂಪರ್ಕ ಕೊಂಡಿಗಳು, ೬. ಚರ್ಚಾ ಪುಟಗಳು, ೭. ಗಮನಿಸಬೇಕಾದ ಸಂಗತಿಗಳು, ೮. ನೊಂದಣೆ, ೯. ನಾಮ ವರ್ಗಗಳು, ೧೦. ಮುಕ್ತಾಯ
![]() |
ಈ ಲೇಖನ ವಿಕಿಪೀಡಿಯ ದಿಕ್ಸೂಚಿಯ ಭಾಗ |
ದಿಕ್ಸೂಚಿ ಪುಟಗಳು... |
ಮುಖ ಪುಟ |
ಇವನ್ನೂ ನೋಡಿ... |
ಪುಟ ಸಂಪಾದಿಸುವುದು ವಿಕಿ ತಂತ್ರಾಂಶ ನೀಡುವ ಒಂದು ಮೂಲಭೂತ ಸೌಕರ್ಯ. ಕೆಲವು ಸಂರಕ್ಷಿಸಲ್ಪಟ್ಟ ಪುಟಗಳನ್ನು ಹೊರತುಪಡಿಸಿ ವಿಕಿಪೀಡಿಯದ ಉಳಿದೆಲ್ಲಾ ಪುಟಗಳನ್ನು ಯಾರು ಬೇಕಾದರೂ ಸಂಪಾದಿಸಬಹುದು. ಸಂಪಾದಿಸಬಹುದಾದ ಎಲ್ಲಾ ಪುಟಗಳಲ್ಲಿ ಈ ಪುಟವನ್ನು ಬದಲಾಯಿಸಿ ಅಥವಾ ಸಂಪಾದಿಸಿ ಎಂಬ ಸಂಪರ್ಕ ಕೊಂಡಿಗಳನ್ನು ಕಾಣಬಹುದು. ಈಗ ಪುಟವನ್ನು ಹೇಗೆ ಸಂಪಾದಿಸುವುದೆಂದು ನೋಡೋಣ.
- ಪ್ರಯೋಗ ಶಾಲೆಗೆ ಹೋಗಲು ನನ್ನ ಪ್ರಯೋಗಪುಟ ಎಂಬ ಪಠ್ಯದ ಮೇಲೆ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
- ಇಲ್ಲಿ ನಿಮಗಿಷ್ಟ ಬಂದ ಸಾಲುಗಳನ್ನು ಬರೆಯಿರಿ. ಉದಾ. ಸಿರಿಗನ್ನಡಂ ಗೆಲ್ಗೆ ಅಥವಾ ಇದು ನಾ ಬರೆದ ಮೊದಲನೆಸಾಲು. ಕನ್ನಡ ವಿಕಿಪೀಡಿಯದಲ್ಲಿ ಬರೆಯಲು ಬಲ ಮೂಲೆಯಲ್ಲಿ ಕಾಣುವ ಕೀಲಿಮಣೆ ಐಕಾನ್ ಮೇಲೆ ಕ್ಲಿಕ್ಕಿಸಿ, ಮೂಡಿಬರುವ ಆಯ್ಕೆಗಳಲ್ಲಿ ನಿಮಗಿಷ್ಟವಾದ ಕೀಲಿಮಣೆ ವಿನ್ಯಾಸವನ್ನು ಆಯ್ಕೆ ಮಾಡಿಕೊಳ್ಳಿ.
- ನಿಮ್ಮ ಬರವಣೆಗೆ ಮುಗಿದ ನಂತರ ಪುಟವನ್ನು ಉಳಿಸಿ ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ.
ಮುನ್ನೋಟ
[ಬದಲಾಯಿಸಿ]ಸಂಪಾದನೆಗೆಂದು ವಿಕಿ ತಂತ್ರಾಂಶ ಒದಗಿಸುವ ಇನ್ನೊಂದು ಸೌಲಭ್ಯ ಎಂದರೆ ಮುನ್ನೋಟ. ವಿಕಿಪೀಡಿಯ ಪುಟಗಳನ್ನು ಸಂಪಾದಿಸುವಾಗ ತಪ್ಪುಗಳು ಆಗುವುದು ಸಹಜ. ಮುನ್ನೋಟ ನೋಡುವುದರಿಂದ ನೀವು ಸಂಪಾದಿಸಿದ ಪುಟ ಹೇಗೆ ಕಾಣುವುದೆಂದು ಪುಟ ಉಳಿಸದೆ ಹಾಗೆಯೆ ನೋಡಬಹುದು. ಹೀಗೆ ಮುನ್ನೋಟ ನೋಡುವಾಗ ತಪ್ಪುಗಳು ಕಂಡುಬಂದಲ್ಲಿ ತಕ್ಷಣವೆ ಸರಿಪಡಿಸಬಹುದು ಹಾಗು ಅನಾವಶ್ಯಕವಾಗಿ ಪುಟದ ಚರಿತ್ರೆ ಬೆಳೆಯದಂತೆ ಕೂಡ ನೋಡಿಕೊಳ್ಳಬಹುದು. ಮೊನ್ನೋಟ ನೋಡಿದ ನಂತರ ಪುಟವನ್ನು ಉಳಿಸಲು ಮರೆಯದಿರಿ. ಮೊನ್ನೋಟ ನೋಡುವುದನ್ನು ಈಗ ಪ್ರಯೋಗ ಶಾಲೆಯಲ್ಲಿ ಅಭ್ಯಾಸಿಸೋಣವೆ?
- ಪ್ರಯೋಗ ಶಾಲೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
- ಆ ಪುಟದಲ್ಲಿರುವ ಈ ಪುಟವನ್ನು ಬದಲಾಯಿಸಿ ಅಥವಾ ಸಂಪಾದಿಸಿ ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
- ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು. ಇಲ್ಲಿ ನಿಮಗಿಷ್ಟ ಬಂದ ಸಾಲುಗಳನ್ನು ಬರೆಯಿರಿ.
- ನಿಮ್ಮ ಬರವಣೆಗೆ ಮುಗಿದ ನಂತರ "ಮೊನ್ನೋಟ" ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟದ ಮೊನ್ನೋಟ ನೋಡಿರಿ.
- ಸಂಪಾದಿಸಿದ ಪುಟ ಸರಿಯೆನ್ನಿಸಿದ ಪಕ್ಷದಲ್ಲಿ ಪುಟವನ್ನು ಉಳಿಸಿ ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ವೀಕ್ಷಿಸಿ ಇಲ್ಲದಿದ್ದಲ್ಲಿ ಸರಿಯೆನ್ನಿಸಿವವರೆಗೂ ಮೊನ್ನೋಟ ನೋಡುತ್ತಾ ಸಂಪಾದನೆ ಮಾಡಿ ನಂತರ ಪುಟವನ್ನು ಉಳಿಸಿ.
ಸಾರಾಂಶ
[ಬದಲಾಯಿಸಿ]ಪುಟ ಉಳಿಸುವುಕ್ಕಿಂತ ಮುನ್ನ ನೀವು ಮಾಡಿದ ಬದಲಾವಣೆ ಬಗ್ಗೆ ಸಂಕ್ಷಿಪ್ತ ಸಾರಾಂಶ ಬರೆಯುವುದು ಒಂದು ಉತ್ತಮ ಅಭ್ಯಾಸ. ಸಾರಾಂಶ ಎಂಬ ಶೀರ್ಷಿಕೆಯಡಿ ಹಾಗು ಪುಟವನ್ನು ಉಳಿಸಿ ಮತ್ತು ಮುನ್ನೋಟ ಗುಂಡಿಗಳ ಮೇಲಿರುವ ಸಂಪಾದಿಸ ಬಹುದಾದ ಅಕ್ಷರ ಕಣದಲ್ಲಿ (ಟೆಕ್ಸ್ಟ್ ಫೀಲ್ಡ್) ನೀವು ಸಂಕ್ಷಿಪ್ತ ಸಾರಾಂಶ ಬರೆಯುಬಹುದು. ಅಕಸ್ಮಾತ್ ನೀವು ಮಾಡುತ್ತಿರುವ ಬದಲಾವಣೆ ಸಣ್ಣದಾಗಿದ್ದಾದರೆ ಸಂಕ್ಷಿಪ್ತ ಸಾರಾಂಶದೊಂದಿಗೆ ಇದು ಚುಟುಕಾದ ಬದಲಾವಣೆ ಎಂಬ ತಾಳೆ ಗುಂಡಿ (ಚೆಕ್ ಬಾಕ್ಸ್) ಒತ್ತಿ ನಂತರ ಪುಟವನ್ನು ಉಳಿಸಬಹುದು. ಬನ್ನಿ ಮತ್ತೆ ಪ್ರಯೋಗ ಶಾಲೆಗೆ ಹೋಗೋಣ.
- ಪ್ರಯೋಗ ಶಾಲೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
- ಆ ಪುಟದಲ್ಲಿರುವ ಈ ಪುಟವನ್ನು ಬದಲಾಯಿಸಿ ಅಥವಾ ಸಂಪಾದಿಸಿ ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
- ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು. ಇಲ್ಲಿ ನಿಮಗಿಷ್ಟ ಬಂದ ಸಾಲುಗಳನ್ನು ಬರೆಯಿರಿ.
- ನಿಮ್ಮ ಬರವಣೆಗೆ ಮುಗಿದ ನಂತರ "ಸಾರಾಂಶ" ಎಂಬ ಅಕ್ಷರ ಕಣದಲ್ಲಿ ನಿಮ್ಮ ಬರವಣಿಗೆಯ ಬಗ್ಗೆ ಸಣ್ಣ ಸಾರಾಂಶ ಬರೆಯಿರಿ ನಂತರ ಇದು ಚುಟುಕಾದ ಬದಲಾವಣೆ ಎಂಬ ತಾಳೆ ಗುಂಡಿ (ಚೆಕ್ ಬಾಕ್ಸ್) ಒತ್ತಿ.
- ಪುಟವನ್ನು ಉಳಿಸಿ ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ.
ಸಂಪಾದನೆಯ ಬಗ್ಗೆ ಸ್ಥೂಲವಾಗಿ ತಿಳಿದುಕೊಂಡದ್ದಾಯ್ತು, ಈಗ ಮುಂದಿನ ಅಧ್ಯಾಯಕ್ಕೆ ಹೋಗೋಣವೆ?