ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ)
ಮುಖ ಪುಟ, ೧. ಸಂಪಾದನೆ, ೨. ಅಕ್ಷರ ಜೋಡಣೆ ಮತ್ತು ವಿನ್ಯಾಸ, ೩. ವಿಕಿಪೀಡಿಯ ಸಂಪರ್ಕ ಕೊಂಡಿಗಳು, ೪. ಸಂಬಂಧಪಟ್ಟ ತಾಣಗಳ ಕೊಂಡಿಗಳು, ೫. ಬಾಹ್ಯ ಸಂಪರ್ಕ ಕೊಂಡಿಗಳು, ೬. ಚರ್ಚಾ ಪುಟಗಳು, ೭. ಗಮನಿಸಬೇಕಾದ ಸಂಗತಿಗಳು, ೮. ನೊಂದಣೆ, ೯. ನಾಮ ವರ್ಗಗಳು, ೧೦. ಮುಕ್ತಾಯ
ಈ ಲೇಖನ ವಿಕಿಪೀಡಿಯ ದಿಕ್ಸೂಚಿಯ ಭಾಗ |
ದಿಕ್ಸೂಚಿ ಪುಟಗಳು... |
ಮುಖ ಪುಟ |
ಇವನ್ನೂ ನೋಡಿ... |
ಅಕ್ಷರ ವಿನ್ಯಾಸ ಮತ್ತು ಜೋಡಣೆಯನ್ನು ಸಾಮಾನ್ಯವಾಗಿ ವಿಕಿ ಸಂಕೇತಗಳನ್ನು ಬಳಸಿ ಮಾಡಲಾಗುತ್ತದೆ. ವಿಕಿ ಸಂಕೇತಗಳನ್ನು ಬಳಸುವುದರಿಂದ ಎಚ್‌ಟಿಎಮ್‌ಎಲ್(ಹೈಪರ್ ಟೆಕ್ಸ್ಟ್ ಮಾರ್ಕ್‌ಅಪ್ ಲ್ಯಾಂಗ್ವೇಜ್) ಕಲಿಯದೆ ಪುಟ ಮತ್ತು ವಿಷಯಗಳನ್ನು ನಿಮಗಿಷ್ಟಬಂದಂತೆ ಜೋಡಿಸಬಹುದು.
ವಿಕಿ ಸಂಕೇತಗಳು
[ಬದಲಾಯಿಸಿ]ವಿಕಿಪೀಡಿಯದ ಲೇಖನಗಳನ್ನು ಬರೆಯುವುದು ಪದ ಸಂಸ್ಕಾರಕ(ವರ್ಡ್ ಪ್ರೋಸಸರ್) ಉಪಕರಣಗಳಲ್ಲಿ ಬರೆಯುವುದಕ್ಕಿಂತ ಕೊಂಚ ಭಿನ್ನ. ಸಾಮಾನ್ಯವಾಗಿ ಪದ ಸಂಸ್ಕಾರಕ ಉಪಕರಣಗಳಲ್ಲಿ , ನೀವು ಮಾಡಿದ ವಿನ್ಯಾಸ ಮತ್ತು ಜೋಡಣೆ ಸಂಬಂಧಿತ ಬದಲಾವಣೆಗಳನ್ನು ತಕ್ಷಣ ನೋಡಬಹುದು (ಉದಾ. ಅಕ್ಷರ ಗಾತ್ರ ದೊಡ್ಡ ಮಾಡುವ ಗುಂಡಿ ಒತ್ತಿದರೆ ಅಕ್ಷರ ತಕ್ಷಣ ದೊಡ್ಡದಾಗುವುದು)ಆದರೆ ವಿಕಿ ಹಾಗೆ ಮಾಡದೆ ಸರಳ ಅಕ್ಷರ ಸಂಕೇತಗಳನ್ನು ಬಳಸುತ್ತದೆ. ಕೆಲ ಸಂಕೇತಗಳು ಹಾಗು ಅವುಗಳ ವಿಶೇಷತೆಯನ್ನು ಮುಂದಿನ ಸಾಲುಗಳು ವಿವರಿಸುತ್ತವೆ.
ದಪ್ಪ ಅಕ್ಷರ ಮತ್ತು ಓರೆ ಅಕ್ಷರಗಳು
[ಬದಲಾಯಿಸಿ]ಸರ್ವೇಸಾಮಾನ್ಯವಾಗಿ ಬಳಕೆಯಾಗುವ ವಿಕಿ ಸಂಕೇತಗಳೆಂದರೆ ದಪ್ಪ ಅಕ್ಷರ ಮತ್ತು ಓರೆ ಅಕ್ಷರಗಳನ್ನಾಗಿ ಮರ್ಪಾಟು ಮಾಡುವ ಸಂಕೇತಗಳು. ಅಕ್ಷರಗಳನ್ನು ದಪ್ಪ ಅಥವಾ ಓರೆ ಮಾಡಲು ಹಲವು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳ (') ಸಂಕೇತವನ್ನು ಬಳಸಲಾಗುತ್ತದೆ.
- ''ಓರೆ ಅಕ್ಷರಗಳು'' ಹೀಗೆ ಕಾಣಿಸುತ್ತದೆ ಓರೆ ಅಕ್ಷರಗಳು. (ಎರಡೂ ಬದಿಯಲ್ಲಿ ಎರಡು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳು)
- '''ದಪ್ಪ ಅಕ್ಷರಗಳು''' ಹೀಗೆ ಕಾಣಿಸುತ್ತದೆ ದಪ್ಪ ಅಕ್ಷರಗಳು . (ಎರಡೂ ಬದಿಯಲ್ಲಿ ಮೂರು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳು)
- '''''ದಪ್ಪ ಮತ್ತು ಓರೆ ಅಕ್ಷರಗಳು''''' ಹೀಗೆ ಕಾಣಿಸುತ್ತದೆ ದಪ್ಪ ಮತ್ತು ಓರೆ ಅಕ್ಷರಗಳು. (ಎರಡೂ ಬದಿಯಲ್ಲಿ ಐದು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳು)
ಲೇಖನದ ವಿಷಯದ ಮೊದಲ ಪ್ರಸ್ತಾಪ ದಪ್ಪ ಅಕ್ಷರದಲ್ಲಿಡುವುದು ವಿಕಿಪೀಡಿಯದಲ್ಲಿ ಬಳಕೆಯಿರುವ ಒಂದು ರೂಡಿ. ಉದಾ. ಡಾ. ರಾಜಾರಾಮಣ್ಣನವರ ಬಗ್ಗೆ ಇರುವ ಲೇಖನದ ಮೊದಲ ಸಾಲು ಹೀಗಿದೆ
ಡಾ. ರಾಜಾರಾಮಣ್ಣ ಆಧುನಿಕ ಭಾರತದ ಒಬ್ಬ ಅಪ್ರತಿಮ ವಿಜ್ಞಾನಿ.
ಪುಸ್ತಕ/ಚಿತ್ರ/ಕೃತಿಗಳನ್ನು ಓರೆ ಅಕ್ಷರದಲ್ಲಿಡುವುದು ವಿಕಿಪೀಡಿಯದಲ್ಲಿ ಬಳಕೆಯಿರುವ ಇನ್ನೊಂದು ರೂಡಿ. ಉದಾ. ಡಾ. ರಾಜಾರಾಮಣ್ಣನವರ ಬಗ್ಗೆ ಇರುವ ಲೇಖನದ ಒಂದು ಸಾಲು ಹೀಗಿದೆ
ಅವರ ಎರಡು ಉಲ್ಲೇಖನೀಯ ಕೃತಿಗಳೆಂದರೆ ಸ್ಟ್ರಕ್ಚರ್ ಆಫ್ ಮ್ಯುಸಿಕ್ ಇನ್ ರಾಗ ಎಂಡ್ ವೆಸ್ಟೆರ್ನ್ ಸಿಸ್ಟೆಮ್ಸ್ ಹಾಗು ಇಯರ್ಸ್ ಆಫ್ ಪಿಲಿಗ್ರಿಮೇಜ್: ಆನ್ ಆಟೋಬಯೋಗ್ರಫಿ
ಸೂಚನೆ: ನೀವು ಅಕ್ಷರಗಳನ್ನು ದಪ್ಪ ಮತ್ತು ಓರೆ ಮಾಡದೆ ಕೂಡ ಹಲವು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳನ್ನು ಒಟ್ಟಿಗೆ ಬಳಸಬಹುದು. ಹೀಗೆ ಮಾಡಲು ಅವುಗಳನ್ನು <nowiki> ಮತ್ತು </nowiki> ಸಂಕೇತಗಳ ಮಧ್ಯ ಸೇರಿಸಿ. <pre> ಮತ್ತು </pre> ; ಸಂಕೇತಗಳ ಮಧ್ಯ ಸೇರಿಸಿದರೂ ಅದೆ ಫಲಿತಾಂಶ ದೊರಕುವುದು.
ಉದಾ.
<nowiki>''ಅಕಟಕಟಕಟಾ!!''</nowiki> ಹೀಗೆ ಕಾಣುವುದು ''ಅಕಟಕಟಕಟಾ!!''
<pre>''ಅಕಟಕಟಕಟಾ!!''</pre>
ಹೀಗೆ ಕಾಣುವುದು
''ಅಕಟಕಟಕಟಾ!!''
ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳು
[ಬದಲಾಯಿಸಿ]ಶೀರ್ಷಿಕೆ (ಶಿರೋನಾಮೆ) ಮತ್ತು ಉಪಶೀರ್ಷಿಕೆಗಳು ನಿಮ್ಮ ಲೇಖನವನ್ನು ವ್ಯವಸ್ಥಿತವಾಗಿಡಲು ಸಹಾಯ ಮಾಡುತ್ತವೆ. ಲೇಖನದ ವಿಷಯದ ಹಲವೂ ಆಯಾಮಗಳನ್ನು ಉಚಿತ ಶೀರ್ಷಿಕೆಯಡಿ ಕ್ರಮಬದ್ಧವಾಗಿ ಸಂಯೋಜಿಸಿವುದಕ್ಕಾಗಿ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳನ್ನು ಹೀಗೆ ಸೃಷ್ಟಿಸಬಹುದು:
==ಉಚ್ಚ ಶೀರ್ಷಿಕೆ == (ಎರಡು ಸಮ/ಈಕ್ವಲ್ಸ್ ಚಿಹ್ನೆಗಳು)
===ಉಪಶೀರ್ಷಿಕೆ=== (ಮೂರು ಸಮ/ಈಕ್ವಲ್ಸ್ ಚಿಹ್ನೆಗಳು)
====ಇನ್ನೊಂದು ಹಂತ ತಗ್ಗಿನ ಉಪಶೀರ್ಷಿಕೆ==== (೪ ಸಮ/ಈಕ್ವಲ್ಸ್ ಚಿಹ್ನೆಗಳು)
ಸೂಚನೆ: ಯಾವುದೆ ಲೇಖನದಲ್ಲಿ ನಾಲ್ಕು ಅಥವಾ ಹೆಚ್ಚು ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳಿದ್ದರೆ, ವಿಕಿ ತಂತ್ರಾಂಶ ತಾನಾಗಿಯೆ ಪರಿವಿಡಿ ಸೃಷ್ಟಿಸುತ್ತದೆ.
ಈಗ ಪ್ರಯೋಗ ಶಾಲೆಗೆ ಹೋಗಿ ಕಲಿತದ್ದನ್ನು ಅಭ್ಯಾಸಿಸೋಣವೆ?
- ಪ್ರಯೋಗ ಶಾಲೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
- ಆ ಪುಟದಲ್ಲಿರುವ ಈ ಪುಟವನ್ನು ಬದಲಾಯಿಸಿ ಅಥವಾ ಸಂಪಾದಿಸಿ ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
- ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು.
- ಇಲ್ಲಿ ಈ ಕೆಳಗಿನ ಸಾಲುಗಳನ್ನು ಬರೆಯಿರಿ.
'''ಇದು ದಪ್ಪ ಅಕ್ಷರಗಳ ಸಾಲು'''
''ಇದು ಓರೆ ಅಕ್ಷರಗಳ ಸಾಲು''
==ಇದು ಉಚ್ಚ ಶೀರ್ಷಿಕೆ==
===ಇದು ಉಪಶೀರ್ಷಿಕೆ===
====ಇದು ಇನ್ನೊಂದು ಹಂತ ತಗ್ಗಿನ ಉಪಶೀರ್ಷಿಕೆ====
- ನಿಮ್ಮ ಬರವಣೆಗೆ ಮುಗಿದ ನಂತರ ಪುಟವನ್ನು ಉಳಿಸಿ ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ದಪ್ಪ ಅಕ್ಷರ, ಓರೆ ಅಕ್ಷರಗಳ ಸಾಲುಗಳು ಹಾಗು ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳನ್ನು ವೀಕ್ಷಿಸಿ.
ಸಾಲು ಹೊಂದಿಕೆ
[ಬದಲಾಯಿಸಿ]ಲೇಖನ ಓದಲು ಅನುಕೂಲಕರವಾಗಿಸಲು ಹಲವು ಬಾರಿ ಸಾಲುಗಳನ್ನು ಸ್ವಲ್ಪ ಬಲಕ್ಕೆ ಹೊಂದಿಸಬೇಕಾದ ಪರಿಸ್ಥಿತಿ ಬರಬಹುದು. ಉದಾ. ಚರ್ಚಾ ಪುಟಗಳಲ್ಲಿ(ಐದನೆ ಅಧ್ಯಾಯದಲ್ಲಿ ಇದರ ಬಗ್ಗೆ ವಿವರವಿದೆ), ಪ್ಯಾರ, ಅಂಶಸೂಚಕಗಳು, ಅಂಕಸೂಚಕಗಳು ಇತ್ಯಾದಿ. ವಿಕಿಪೀಡಿಯ ಸಾಲು ಹೊಂದಿಸಲು ನೀಡುವ ಕೆಲವು ವಿಧಾನಗಳು ಹೀಗಿವೆ:
ಸಾಧಾರಣ ಸಾಲು ಹೊಂದಿಕೆ
[ಬದಲಾಯಿಸಿ]ಸಾಲು ಹೊಂದಿಸಲಿರುವ ಅತಿ ಸರಳವಾದ ವಿಧಾನವಂದರೆ ಸಾಲಿನ ಮೊದಲು ವಿರಾಮ/ಸೂಚಕ ಚಿನ್ಹೆ (: ಅಥವಾ ಕೋಲನ್) ಇರಿಸುವುದು. ಎಷ್ಟು ವಿರಾಮ/ಸೂಚಕ ಚಿನ್ಹೆ ಇರಿಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು. ಒಂದು ಹೊಸ ಸಾಲು (ಎಂಟರ್ ಅಥವಾ ರಿಟರ್ನ್ ಕೀಲಿ ಒತ್ತಿದಾಗ ಬರುವ) ನೀವು ಹೊಂದಿಸಿದ ಸಾಲು ಅಥವಾ ಪ್ಯಾರದ ಅಂತ್ಯ ಸೂಚಿಸುವುದು.
ಉದಾ.
:ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು
::ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು
:::ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
- ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು
- ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು
- ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು
- ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು
ಅಂಶಸೂಚಕಗಳು
[ಬದಲಾಯಿಸಿ]ಅಂಶಸೂಚಕಗಳ (ಬುಲ್ಲೆಟ್‌ಗಳ) ಬಳಕೆಯಿಂದ ಕೂಡ ಸಾಲುಗಳನ್ನು ಹೊಂದಿಸಬಹುದು ಆದರೆ ಗಮನವಿರಲಿ ಸಾಮಾನ್ಯವಾಗಿ ಅಂಶಸೂಚಕಗಳ ಬಳಕೆ ಅಂಶಗಳನ್ನು ಪಟ್ಟಿ ಮಾಡಲು ಬಳಸಲಾಗುತ್ತದೆ. ಅಂಶಸೂಚಕವನ್ನು ಸೇರಿಸಲು ನಕ್ಷತ್ರ ಚಿಹ್ನೆ (* ಅಥವಾ ಆಸ್ಟ್ರಿಕ್) ಬಳಸಬೇಕು. ಎಷ್ಟು ನಕ್ಷತ್ರ ಚಿಹ್ನೆ ಬಳಸುವಿರೊ ಸಾಲು ಅಷ್ಟು ಬಲಕ್ಕೆ ಹೋಗುವುದು.
ಉದಾ.
*ಇದು ಪಟ್ಟಿಯ ಮೊದಲನೆ ಅಂಶ
*ಇದು ಪಟ್ಟಿಯ ಎರಡನೆ ಅಂಶ
**ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ
*ಇದು ಪಟ್ಟಿಯ ಮೂರನೆ ಅಂಶ
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
- ಇದು ಪಟ್ಟಿಯ ಮೊದಲನೆ ಅಂಶ
- ಇದು ಪಟ್ಟಿಯ ಎರಡನೆ ಅಂಶ
- ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ
- ಇದು ಪಟ್ಟಿಯ ಮೂರನೆ ಅಂಶ
ಅಂಕಸೂಚಕಗಳು
[ಬದಲಾಯಿಸಿ]ನೀವು ಅಂಕೆಗಳಿರುವ ಪಟ್ಟಿಗಳನ್ನು (ನಂಬರ್‍ಡ್ ಲಿಸ್ಟ್) ಕೂಡ ವಿಕಿ ಸಂಕೇತಗಳನ್ನು ಬಳಸಿ ತಯಾರಿಸಬಹುದು. ಹೀಗೆ ಮಾಡಲು ಹ್ಯಾಷ್ (# ಅಥವಾ ಪೌಂಡ್) ಚಿಹ್ನೆ ಬಳಸಿ. ಎಷ್ಟು ಹ್ಯಾಷ್ ಚಿಹ್ನೆ ಬಳಸುವಿರೊ ಇರಿಸುವಿರೊ ಅಂಕಸೂಚಿತ ಸಾಲು ಅಷ್ಟು ಬಲಕ್ಕೆ ಹೋಗುವುದು.
ಸೂಚನೆ: ಬರಹ ಡೈರೆಕ್ಟ್ ತಂತ್ರಾಂಶ ಬಳಸುವಾಗ # ಚಿನ್ಹೆ ಮೂಡಿಸಲು ~ (ಟಿಲ್ಡಾ) ಕೀಲಿ ಒತ್ತಿ ನಂತರ # (ಹ್ಯಾಷ್) ಕೀಲಿ ಒತ್ತಿ.
ಉದಾ.
#ಇದು ಪಟ್ಟಿಯ ಮೊದಲನೆ ವಿಷಯ
#ಇದು ಪಟ್ಟಿಯ ಎರಡನೆ ವಿಷಯ
##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ
#ಇದು ಪಟ್ಟಿಯ ಮೂರನೆ ವಿಷಯ
ಮೇಲಿನ ಸಾಲುಗಳು ಹೀಗೆ ಕಾಣಿಸುತ್ತವೆ
- ಇದು ಪಟ್ಟಿಯ ಮೊದಲನೆ ವಿಷಯ
- ಇದು ಪಟ್ಟಿಯ ಎರಡನೆ ವಿಷಯ
- ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ
- ಇದು ಪಟ್ಟಿಯ ಮೂರನೆ ವಿಷಯ
ಬನ್ನಿ ಈಗ ಸಾಲು ಹೊಂದಾಣಿಕೆ ಬಗ್ಗೆ ಪಡೆದ ಜ್ಞಾನವನ್ನು ಪ್ರಯೋಗ ಶಾಲೆಯಲ್ಲಿ ಅಭ್ಯಾಸಿಸೋಣ
- ಪ್ರಯೋಗ ಶಾಲೆಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. (ಹೊಸ ಕಿಟಕಿಯಲ್ಲಿ ಪುಟ ತೆರೆದರೆ ಉತ್ತಮ)
- ಆ ಪುಟದಲ್ಲಿರುವ ಈ ಪುಟವನ್ನು ಬದಲಾಯಿಸಿ ಅಥವಾ ಸಂಪಾದಿಸಿ ಎಂಬ ಸಂಪರ್ಕ ಕೊಂಡಿಯ ಮೇಲಿ ಕ್ಲಿಕ್ ಮಾಡಿ.
- ಈಗ ತೆರೆ ಕಂಡ ಪುಟದಲ್ಲಿ ಪುಟದಲ್ಲಿ ಪ್ರಕಟಗೊಂಡ ವಿಷಯ, ಒಂದು ಸಂಪಾದಿಸಬಹುದಾದ ಚೌಕಟ್ಟಿನಲ್ಲಿ ಕಾಣಸಿಗುವುದು.
- ಇಲ್ಲಿ ಈ ಕೆಳಗಿನ ಸಾಲುಗಳನ್ನು ಬರೆಯಿರಿ.
:ಇದು ಸ್ವಲ್ಪ ಬಲಕ್ಕೆ ಹೊಂದಿಸಿದ ಸಾಲು
::ಇದು ಇನ್ನಷ್ಟು ಬಲಕ್ಕೆ ಹೊಂದಿಸಿದ ಸಾಲು
:::ಇದು ಮತ್ತಷ್ಟು ಬಲಕ್ಕೆ ಹೊಂದಿಸಿದ ಸಾಲು
*ಇದು ಪಟ್ಟಿಯ ಮೊದಲನೆ ಅಂಶ
*ಇದು ಪಟ್ಟಿಯ ಎರಡನೆ ಅಂಶ
**ಇದು ಪಟ್ಟಿಯ ಎರಡನೆ ಅಂಶದಡಿಯಿರುವ ಉಪ ಅಂಶ
*ಇದು ಪಟ್ಟಿಯ ಮೂರನೆ ಅಂಶ
#ಇದು ಪಟ್ಟಿಯ ಮೊದಲನೆ ವಿಷಯ
#ಇದು ಪಟ್ಟಿಯ ಎರಡನೆ ವಿಷಯ
##ಇದು ಪಟ್ಟಿಯ ಎರಡನೆ ವಿಷಯದಡಿಯಿರುವ ಉಪ ವಿಷಯ
#ಇದು ಪಟ್ಟಿಯ ಮೂರನೆ ವಿಷಯ
- ನಿಮ್ಮ ಬರವಣೆಗೆ ಮುಗಿದ ನಂತರ ಪುಟವನ್ನು ಉಳಿಸಿ ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ನೀವು ಹೊಂದಿಸಿದ ಸಾಲುಗಳನ್ನು ವೀಕ್ಷಿಸಿ.
ಈಗ ಮುಂದಿನ ಅಧ್ಯಾಯಕ್ಕೆ ಹೋಗೋಣವೆ?
ಮುಖ ಪುಟ, ೧. ಸಂಪಾದನೆ, ೨. ಅಕ್ಷರ ಜೋಡಣೆ ಮತ್ತು ವಿನ್ಯಾಸ, ೩. ವಿಕಿಪೀಡಿಯ ಸಂಪರ್ಕ ಕೊಂಡಿಗಳು, ೪. ಸಂಬಂಧಪಟ್ಟ ತಾಣಗಳ ಕೊಂಡಿಗಳು, ೫. ಬಾಹ್ಯ ಸಂಪರ್ಕ ಕೊಂಡಿಗಳು, ೬. ಚರ್ಚಾ ಪುಟಗಳು, ೭. ಗಮನಿಸಬೇಕಾದ ಸಂಗತಿಗಳು, ೮. ನೊಂದಣೆ, ೯. ನಾಮ ವರ್ಗಗಳು, ೧೦. ಮುಕ್ತಾಯ