ವಿಕಿಪೀಡಿಯ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಕಿಪೀಡಿಯದಲ್ಲಿ ವ್ಯಕ್ತಿಗಳ ವ್ಯಕ್ತಿಚಿತ್ರ ಪುಟಗಳನ್ನು ಸೇರಿಸುವ ನೀತಿನಿಯಮಗಳ ಬಗ್ಗೆ

‍ಕನ್ನಡ ವಿಕಿಪೀಡಿಯ ಪುಟದಲ್ಲಿ ವ್ಯಕ್ತಿಗಳ ಬಗ್ಗೆ ಪುಟಗಳನ್ನು ಸೇರಿಸುವಾಗ ಸಂಪಾದಕರು ಗಮನಕ್ಕೆ ತೆಗೆದುಕೊಳ್ಳಬೇಕಾದ ಮಾನದಂಡಗಳ ಬಗ್ಗೆ ಚರ್ಚೆ ಮಾಡಿ ರೂಪಿಸಿದ ಕೆಲವು ಮಾನದಂಡಗಳು.

ಗಮನಾರ್ಹ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ಮಾತ್ರ ಲೇಖನ ಸೇರಿಸಬೇಕು.

ಯಾವುದೇ ಜೀವಂತ ವ್ಯಕ್ತಿಗಳ ಬಗ್ಗೆ ವಿಷಯ ಸಂಪಾದಿಸಬೇಕಾದರೆ, ಅತ್ಯಂತ ಹೆಚ್ಚಿನ ಗಮನ ಕೊಡಬೇಕು, ಸಂವೇದನಶೀಲವಾಗಿರಬೇಕು. ವಿಕಿಪೀಡಿಯಾದ ಮೂರು ಕಾರ್ಯನೀತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅದರ ಆಶಯಕ್ಕೆ ಸ್ವಲ್ಪವೂ ದಕ್ಕೆ ಬರದಂತಿರಬೇಕು.

ವಿಕಿಪೀಡಿಯಾದ ಮೂರು ಕಾರ್ಯನೀತಿಗಳು

  • ತಟಸ್ಥ ದೃಷ್ಟಿಕೋಣ
  • ರುಜುವಾತು(ದೃಡೀಕರಣ) ಪಡಿಸಬಹುದಾಗಿರಬೇಕು
  • ಮೂಲ ಸಂಶೋಧನೆ ಇರಬಾರದು

ಲೇಖನಕ್ಕೆ ಉಪಯೋಗಿಸುವ ಮೂಲ ದಾಖಲೆ / ಲೇಖನಗಳ ಗುಣಮಟ್ಟ ಅತ್ಯಂತ ಉತ್ತಮವಾಗಿರಬೇಕು. ಲೇಖನದಲ್ಲಿ ಬರುವ ಯಾವುದೇ ವಿಷಯ ಅಥವಾ ಉಲ್ಲೇಖಗಳ ಬಗ್ಗೆ ಆಕ್ಷೇಪಣೆ ಬರಬಹುದು. ಇಂಥಹ ಸಂಧರ್ಭದಲ್ಲಿ ಲೇಖನದಲ್ಲಿ ಉಲ್ಲೇಖಿಸಿರುವ ಆಕರಗಳು ವಿಶ್ವಾಸಾರ್ಹ ಮೂಲಗಳಿಂದ ಆರಿಸಿದ್ದಾಗಿರಬೇಕು ಮತ್ತು ಈಗಾಗಲೇ ಪ್ರಕಟವಾಗಿರುವಂತಹದ್ದಾಗಿರಬೇಕು. ಪ್ರತಿಬಾರಿ ಲೇಖನದಲ್ಲಿ ಈ ಮೂಲವನ್ನು ಉಲ್ಲೇಖಿಸಬೇಕು. ಯಾವುದೇ ಜೀವಂತ (ಅಥವಾ ಇತ್ತೀಚೆಗೆ ಮರಣಿಸಿದ) ವ್ಯಕ್ತಿಯ ಬಗ್ಗೆ ವಿವಾದಾಸ್ಪದ ಉಲ್ಲೇಖಗಳನ್ನು (ಈ ವಿಷಯಗಳು ಒಳ್ಳೆಯದಿರಲ್ಲಿ, ಕೆಟ್ಟದ್ದಿರಲಿ ಅಥವಾ ಪ್ರಶ್ನಿಸುವಂತಿರಲಿ) ಬರೆಯಬೇಕಾದರೆ, ಅವುಗಳ ಮೂಲ ಅತ್ಯಂತ ವಿಶ್ವಾಸಾರ್ಹವಾಗಿರಬೇಕು. ಒಂದು ವೇಳೇ ಹಾಗಿಲ್ಲದಿದ್ದಲ್ಲಿ. ಅವುಗಳನ್ನು ಯಾವುದೇ ಸಮಾಲೋಚನೆಯಿಲ್ಲದೆ ತೆಗೆದು ಹಾಕಬೇಕು. ಜೀವಂತ ವ್ಯಕ್ತಿಗಳ ವ್ಯಕ್ತಿ ಚಿತ್ರ ಸಂಪಾದಿಸಬೇಕಾದರೆ ಆ ಲೇಖನ ಅವರ ಖಾಸಗಿ ಜೀವನಕ್ಕೆ ಧಕ್ಕೆ ತರದಂತಿರಬೇಕು.

ಲೇಖಕ/ಲೇಖಕಿಯರು

  • ಸ್ಥಳೀಯವಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ತನ್ನ ಬರೆವಣಿಗೆಯಿಂದ ಗುರುತಿಸಲ್ಪಟ್ಟಿರಬೇಕು ಮತ್ತು ಅವರ ಕನಿಷ್ಠ ಐದು ಪುಸ್ತಕಗಳು ಬಿಡುಗಡೆಗೊಂಡಿರಬೇಕು.
  • ರಾಜ್ಯಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿ ಪ್ರಶಸ್ತಿ/ಮನ್ನಣೆಯನ್ನು ಗಳಿಸಿರಬೇಕು.
  • ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ ಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು.
  • ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.

ಚಲನಚಿತ್ರ ನಟನಟಿಯರು

  • ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು.
  • ಅವರು ಕನಿಷ್ಟ ಎರಡು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು.

ಆಟಗಾರರು

  • ಆ ವ್ಯಕ್ತಿ ಕನಿಷ್ಠ ದೇಶೀಯ ಮಟ್ಟದಲ್ಲಿ ಒಂದು ರಾಜ್ಯವನ್ನು ಪ್ರತಿನಿಧಿಸಿರಬೇಕು.
  • ಕನಿಷ್ಠ ೫ ಪ್ರಶಸ್ತಿಗಳನ್ನು ಪಡೆದಿರಬೇಕು.

ಕಲಾವಿದರು

  • ಕನಿಷ್ಟ ೫೦ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಟ್ಟಿರಬೇಕು.
  • ಈ ವಿಚಾರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಕಟವಾಗಿರಬೇಕು.
  • ಕನಿಷ್ಟ ಒಂದು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತನಾಗಿರಬೇಕು.

ರಾಜಕೀಯ ವ್ಯಕ್ತಿಗಳು

  • ಕನಿಷ್ಠ ೫೦೦೦ ಜನರನ್ನು ‍ಪ್ರತಿನಿಧಿಸಬೇಕು‍.
  • ಪ್ರತಿಷ್ಟಿತ ಪತ್ರಿಕೆಗಳಲ್ಲಿ ಕನಿಷ್ಠ ಮೂರು ಲೇಖನಗಳು ಪ್ರಕಟವಾಗಿರಬೇಕು.
  • ಪ್ರಕಟವಾದ ಲೇಖನಗಳು ಅವರ ವ್ಯಕ್ತಿತ್ವವಲ್ಲದೆ ಕೆಲಸಗಳನ್ನು ಸೂಚಿಸುವಂತಿರಬೇಕು.‍‍‍
  • ಅವರ ವಯುಕ್ತಿಕ ಜೀವನದ ಬಗ್ಗೆ ಬರೆಯಬೇಕಾದರೆ ಯಾವುದೇ ಪೂರ್ವಾಗ್ರಹ ಪೀಡಿತವಾಗಿರಬಾರದು. ಮತ್ತು ಬರೆಯುವ ಎಲ್ಲಾ ವಿಷಯಗಳಿಗೂ ಸರಿಯಾದ, ವಿಶ್ವಾಸಾರ್ಹವಾದ ಮೂಲ ಇರಬೇಕು

(ಹಿಂದೊಮ್ಮೆ ಅರಳಿಕಟ್ಟೆಯಲ್ಲಿ ನಡೆದ ಚರ್ಚೆಯಿಂದ)

ಉಲ್ಲೇಖ ನೀಡುವ ಬಗ್ಗೆ

  • ಯಾವುದೇ ಪ್ರಶಸ್ತಿ ಸಾಧನೆಗೆಳ ಬಗ್ಗೆ ಬರೆಯುವಾಗ ವಿಶ್ವಾಸಾರ್ಹ ಉಲ್ಲೇಖ ನೀಡತಕ್ಕದ್ದು.
  • ವಿಶ್ವಾಸಾರ್ಹ ಪತ್ರಿಕೆಗಳು, ನಿಯತಕಾಲಿಕೆಗಳು, ಅಕಾಡೆಮಿಯ ಜಾಲತಾಣಗಳು, ಪ್ರಶಸ್ತಿ ನೀಡುವ ಸಂಸ್ಥೆಗಳ ಅಧಿಕೃತ ಜಾಲತಾಣಗಳು, ಪುಸ್ತಕಗಳು -ಇವುಗಳನ್ನು ಉಲ್ಲೇಖಿಸಬಹುದು.
  • ವೈಯಕ್ತಿ ಬ್ಲಾಗ್‍, ವಿಶ್ವಾಸಾರ್ಹವಲ್ಲದ ಜಾಲತಾಣ, ಯುಟ್ಯೂಬ್ ವಿಡಿಯೋ, ಯಾವ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದೀರೋ ಅವರದೇ ಅಥವಾ ಅವರ ಸಂಸ್ಥೆಯ ಜಾಲತಾಣ, ಫೇಸ್‍ಬುಕ್ -ಇವೆಲ್ಲವನ್ನು ಸೂಕ್ತ ಉಲ್ಲೇಖ ಎಂದು ಪರಿಗಣಿಸಲಾಗುವುದಿಲ್ಲ
  • ಯಾವ ಪ್ರಶಸ್ತಿ ಅಥವಾ ಸಾಧನೆಯ ಬಗ್ಗೆ ಬರೆಯುತ್ತಿದ್ದೀರೋ ಅದೇ ವಾಕ್ಯದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಉಲ್ಲೇಖವನ್ನು ನೀಡಬೇಕು. ಲೇಖನದ ಕೊನೆಯಲ್ಲಿ ಒಟ್ಟಾರೆ ನೀಡಿದ ಉಲ್ಲೇಖಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ

ಲೇಖನ ಅಳಿಸುವ ಬಗ್ಗೆ

  • ವ್ಯಕ್ತಿಗಳ ಬಗ್ಗೆ ಬರೆಯುವಾಗ ಗಮನಾರ್ಹ ಸಾಧನೆ ಮಾಡಿಲ್ಲವೆಂದು ಖಚಿತವಾದಲ್ಲಿ ಆ ಲೇಖನವನ್ನು ಅಳಿಸಲು ಹಾಕಲಾಗುವುದು. ಅಳಿಸಲು ಹಾಕಿ ಒಂದು ವಾರದ ತನಕ ಕಾಯಲಾಗುವುದು. ಒಂದು ವಾರದಲ್ಲಿ ಸೂಕ್ತ ಉಲ್ಲೇಖ ನೀಡದಿದ್ದಲ್ಲಿ ಲೇಖನವನ್ನು ಅಳಿಸಲಾಗುವುದು.