ವಿಷಯಕ್ಕೆ ಹೋಗು

ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಿಪೀಡಿಯ ನೀತಿಗಳು
ಲೇಖನಗಳ ಗುಣಮಟ್ಟ
ತಟಸ್ಥ ದೃಷ್ಟಿಕೋನ
ಪರಿಶೀಲನಾರ್ಹತೆ
ಸ್ವಂತ ಸಂಶೋಧನೆ ಸಲ್ಲದು
ಮೂಲಗಳ ಉಲ್ಲೇಖ
ವಿಕಿಪೀಡಿಯ ಏನಲ್ಲ
ಜೀವಂತವಾಗಿರುವರ ಆತ್ಮಚರಿತ್ರೆಗಳು
ಇತರರೊಡನೆ ಸಹಯೋಗ
ಸದುದ್ದೇಶವಿದೆಯೆಂದು ನಂಬಿ
ನಾಗರೀಕತೆ ಹಾಗು ಶಿಷ್ಟಾಚಾರ
ವೈಯುಕ್ತಿಕ ದಾಳಿ ಸಲ್ಲದು
ಬಿಕ್ಕಟ್ಟು ನಿವಾರಣೆ

ವಿಕಿಪೀಡಿಯ : ಸ್ವಂತ ಸಂಶೋಧನೆಗಳನ್ನು ಒಳಗೊಂಡಿರಬಾರದು. ವಿಕಿಪೀಡಿಯದಲ್ಲಿ ಬಳಸಲಾಗುತ್ತಿರುವ "ಮೂಲ ಸಂಶೋಧನೆ"ಯ ನುಡಿಗಟ್ಟು- ವಾಸ್ತವ, ಆರೋಪಣೆ ಮತ್ತು ಚಿಂತನೆಗಳಂತಹ ಮಾಹಿತಿಗಳ ಬಗೆಗೆ ಯಾವುದೇ ನಂಬಲರ್ಹ ಅಥವಾ ವಿಶ್ವಾಸಾರ್ಹ, ಪ್ರಕಟಿತ ಮೂಲಗಳು ಅಸ್ಥಿತ್ವದಲ್ಲಿ ಇಲ್ಲ ಎಂದು ಸೂಚಿಸುತ್ತದೆ. [೧] ಇದು ಪ್ರಕಟಿತ ಮಾಹಿತಿಯ ಬಗೆಗೆ ಮೂಲ ಆಕಾರಗಳು ಸೂಚಿಸದ ನಿಲುವುಗಳನ್ನು ಪ್ರತಿಪಾದಿಸುವ ವಿಶ್ಲೇಷಣೆ ಮತ್ತು ಮರುನಿರೂಪಣೆಗಳನ್ನು ಸಹ ಒಳಗೊಳುತ್ತದೆ. ನೀವು ಸ್ವಂತ ಸಂಶೋಧನೆಯನ್ನು ಸೇರಿಸುತ್ತಿಲ್ಲ ಎಂದು ತೋರಿಸಿಕೊಡಲು ಲೇಖನದ ವಿಷಯಕ್ಕೆ ನೇರವಾಗಿ ಸಂಬಂಧಿಸಿದ ನಂಬಲರ್ಹ, ಪ್ರಕಟಿತ ಮೂಲಗಳ ಉಲ್ಲೇಖಗಳನ್ನು ಸೇರಿಸಬೇಕು ಮತ್ತು ಅವು ಪ್ರಸ್ತುತ ಪಡಿಸಿದ ಮಾಹಿತಿಯನ್ನು ಬೆಂಬಲಿಸುವಂತೆ ಇರಬೇಕು. (ಸ್ವಂತ ಸಂಶೋಧನೆಯ ಬಗೆಗಿನ ಈ ನಿರ್ಬಂಧ ಚರ್ಚಾ ಪುಟಕ್ಕೆ ಅನ್ವಯಿಸುವುದಿಲ್ಲ)

ಸ್ವಂತ ಸಂಶೋಧನೆ (ಸ್ವಂಸಂ) ಬಗೆಗಿನ ತಡೆ ಅಥವಾ ನಿಷೇಧದ ಅರ್ಥವೆಂದರೆ ಲೇಖನದಲ್ಲಿ ಸೇರಿಸಿದ ಎಲ್ಲಾ ಮಾಹಿತಿಯೂ ನಂಬಲರ್ಹ, ಪ್ರಕಟಿತ ಮೂಲಗಳಿಗೆ ವಾಸ್ತವದಲ್ಲಿ ಆರೋಪಿಸದಿದ್ದಾಗ್ಯೂ ಹಾಗೆ ಆರೋಪಿಸಲು ಸಾಧ್ಯವಾಗುವಂತಿರ ಬೇಕು. [೧] ಪರಿಶೀಲನಾರ್ಹತೆ ನೀತಿಯು ಎಲ್ಲಾ ಉದ್ಧರಣಗಳಿಗೂ (ಬೇರೆ ಮೂಲಗಳಿಂದ ಎತ್ತಿಕೊಳ್ಳುವುದಕ್ಕೆ) ಲೇಖನದೊಳಗೆ (ಇನ್‌ಲೈನ್) ಉಲ್ಲೇಖಗಳು ಇರಬೇಕೆಂದು ಹೇಳುತ್ತದೆ. ಇದು ಪ್ರಶ್ನಿಸಲಾಗಿರುವ ಅಥವಾ ಪ್ರಶ್ನಿಸಬಹುದಾದ ಎಲ್ಲಾ ಮಾಹಿತಿಗೂ ಅನ್ವಯಿಸುತ್ತದೆ ಮತ್ತು ಮಾಹಿತಿಯ ಬಗೆಗೆ ಎಂದೂ ಪ್ರಶ್ನಿಸದಿದ್ದಾಗ್ಯೂ ಪರಿಶೀಲನೆಗೆ ಮೂಲ ಆಕಾರಗಳು ಇರಬೇಕು. ಉದಾಹರಣೆಗೆ: "ಫ್ರಾನ್ಸ್ ರಾಜಧಾನಿ ಪ್ಯಾರಿಸ್" ಹೇಳಿಕೆಗೆ ಯಾವುದೇ ಮೂಲ ಉಲ್ಲೇಖಿಸುವ ಅಗತ್ಯವಿಲ್ಲ. ಏಕೆಂದರೆ, ಯಾರೂ ಇದನ್ನು ವಿರೋಧಿಸುವ ಸಾಧ್ಯತೆ ಇಲ್ಲ ಮತ್ತು ಇದಕ್ಕೆ ಪ್ರಕಟಿತ ಮೂಲಗಳು ಅಸ್ತಿತ್ವದಲ್ಲಿವೆ ಎಂದು ನಮಗೆ ತಿಳಿದಿದೆ. ಈ ಹೇಳಿಕೆಯು ವಾಸ್ತವದಲ್ಲಿ ಉಲ್ಲೇಖಗಳನ್ನು ಆರೋಪಿಸದಿದ್ದಾಗ್ಯೂ ಇದು ಉಲ್ಲೇಖಗಳನ್ನು ಆರೋಪಿಸಲು ಶಕ್ಯವಿರುವ ಹೇಳಿಕೆ.

ಮಾಹಿತಿಗೆ ವಿಶ್ವಾಸಾರ್ಹ ಮೂಲಗಳು ಆರೋಪಿಸುವ ಅಗತ್ಯದ ಹೊರತಾಗಿಯೂ, ನೀವು ಅವುಗಳನ್ನು ಕೃತಿಚೌರ್ಯ ಮಾಡಬಾರದು ಅಥವಾ ಅವುಗಳ ಹಕ್ಕುಸ್ವಾಮ್ಯಗಳನ್ನು ಉಲ್ಲಂಘಿಸಬಾರದು. ಲೇಖನವನ್ನು ಮೂಲದ ಅರ್ಥಕ್ಕೆ ಚ್ಯುತಿ ಬರದಂತೆ ನಿಮ್ಮದೇ ಪದಗಳಲ್ಲಿ ಬರೆಯಬೇಕು.

"ಸ್ವಂತ ಸಂಶೋಧನೆ ಸಲ್ಲದು" (ಸ್ವಂಸಂಸ) ಎನ್ನುವುದು ವಿಕಿಪಿಡೀಯದ ಮೂರು ಮುಖ್ಯ ಮಾಹಿತಿಯನ್ನು ತುಂಬುವ ನೀತಿಗಳಲ್ಲೊಂದು. ಇತರ ಎರಡು ತಟಸ್ಥ ದೃಷ್ಟಿಕೋನ ಮತ್ತು ಪರಿಶೀಲನಾರ್ಹತೆಗಳು ಮತ್ತು ಇವು ಮೂರೂ ಲೇಖನಗಳಲ್ಲಿ ತುಂಬುವ ಮಾಹಿತಿಯ ಸ್ವರೂಪ ಮತ್ತು ಗುಣಮಟ್ಟವನ್ನು ನಿರ್ಧರಿಸುತ್ತವೆ. ಈ ನೀತಿಗಳು ಸಾಮರಸ್ಯದಲ್ಲಿ ಕೆಲಸ ಮಾಡುತ್ತವೆ, ಹೀಗಾಗಿ ಒಂದರಿಂದ ಇನ್ನೊಂದನ್ನು ಬಿಡಿಸಿ ಅಥವಾ ಪ್ರತ್ಯೇಕಿಸಿ ವ್ಯಾಖ್ಯಾನಿಸಬಾರದು. ಸಂಪಾದಕರು ಎಲ್ಲಾ ಮೂರರ ಬಗೆಗೂ ಅರಿತುಕೊಳ್ಳಬೇಕು. ಯಾವುದೇ ನಿರ್ಧಿಷ್ಟ ಸಂಪಾದನೆಯು ಸ್ವಂತ ಸಂಶೋಧನೆಯೇ ಅಲ್ಲವೇ ಎಂಬುದನ್ನು ತಿಳಿಯಲು ಸ್ವಂಸಂಸ ನೋಟೀಸ್‌ ಬೋರ್ಡ್ ನೋಡಿ.

ಆಕರಗಳ ಬಳಕೆ[ಬದಲಾಯಿಸಿ]

ಇರುವ ಆಕರಗಳಿಂದ ಇಲ್ಲಿನ ಮತ್ತು ಇತರ ಮಾಹಿತಿಯ ಬಗೆಗಿನ ನೀತಿಗಳ ಆಧಾರದ ಮೇಲೆ ಮಾಹಿತಿಯನ್ನು ಸಂಶೋಧಿಸಿ ಕ್ರೂಡೀಕರಿಸುವುದು ಮತ್ತು ಸಂಘಟಿಸುವುದು ಒಂದು ವಿಶ್ವಕೋಶದ ಬರೆವಣಿಗೆಯ ಮೂಲಭೂತ ಅಗತ್ಯವಾಗಿದೆ. ಒಳ್ಳೆಯ ಪದ್ಧತಿಯೆಂದರೆ ವಿಷಯದ ಮೇಲೆ ನಂಬಲರ್ಹ ಆಕಾರಗಳನ್ನು ಹುಡುಕಿ ಮತ್ತು ಮಾಹಿತಿಯನ್ನು ಸಂಗ್ರಹರೂಪದಲ್ಲಿ ನಿಮ್ಮದೇ ಪದಗಳಲ್ಲಿ ಹೇಳುವುದು. ಅಲ್ಲದೆ ಲೇಖನದ ಪ್ರತಿ ಹೇಳಿಕೆಯನ್ನೂ ಅದನ್ನು ವಿಷದ ಪಡಿಸುವ ಆಕಾರಗಳಿಗೆ ಆರೋಪಿಸುವುದು ಸಹ ಅಗತ್ಯ. ಮೂಲ ಆಕರಗಳ ಮಾಹಿತಿಯನ್ನು ಅದರ ಅರ್ಥ ಮತ್ತು ಅಂಥರಾರ್ಥಗಳಿಗೆ ಚ್ಯುತಿ ಬರದಂತೆ ಎಚ್ಚರಿಕೆಯಿಂದ ಸಂಗ್ರಹಿಸಬೇಕು. ಆಕರಗಳಲ್ಲಿ ಏನು ಹೇಳಿದೆಯೊ ಅದರಾಚೆ ಹೋಗದಂತೆ ಅಥವಾ ಮೂಲ ಆಕರಗಳ ಉದ್ಧೇಶಕ್ಕೆ ಸಂಗತವಲ್ಲದ ರೀತಿಯಲ್ಲಿ (ಉದಾಹರಣೆಗೆ ಉಲ್ಲೇಖಗಳನ್ನು ಅದರ ಸಂದರ್ಭವನ್ನು ಗಣನೆ ತೆಗೆದುಕೊಳ್ಳದಂತೆ ಉಲ್ಲೇಖಿಸುವುದು) ಬಳಸದಂತೆ ಎಚ್ಚರಿಕೆ ವಹಿಸಿ. ಬೇರೆ ಮಾತುಗಳಲ್ಲಿ ಮೂಲಕ್ಕೆ ಚ್ಯುತಿ ಬರದಿರಲಿ. ವಿಷಯದ ಮೇಲೆ ಯಾವುದೇ ವಿಶ್ವಾಸಾರ್ಹ ತೃತೀಯ ಪಕ್ಷದ ಆಕರಗಳು ಕಾಣಸಿಗುವುದಿಲ್ಲ ಎಂದಾದರೆ, ವಿಕಿಪೀಡಿಯದಲ್ಲಿ ಅದರ ಬಗ್ಗೆ ಲೇಖನವು ಇರಬಾರದು. ನೀವು ಏನಾದರು ಹೊಸತನ್ನು ಕಂಡುಹಿಡಿದಲ್ಲಿ, ವಿಕಿಪೀಡಿಯ ಇಂತಹ ಆವಿಷ್ಕಾರವನ್ನು ಘೋಷಿಸಲು ಸೂಕ್ತ ಸ್ಥಳವಲ್ಲ.

ವಿಶ್ವಾಸಾರ್ಹ ಆಕರಗಳು[ಬದಲಾಯಿಸಿ]

ಯಾವುದೇ ಮಾಹಿತಿಯನ್ನು ಪ್ರಶ್ನಿಸಲಾಗಿದ್ದರೆ ಅಥವಾ ಪ್ರಶ್ನಿಸುವ ಸಾಧ್ಯತೆ ಇದ್ದರೆ ಅದಕ್ಕೆ ನಂಬಲರ್ಹ ಆಕಾರಗಳ ಬೆಂಬಲವಿರಬೇಕು. ವಿಶ್ವಾಸಾರ್ಹ ಆಕರವಿಲ್ಲದ ಮಾಹಿತಿಯನ್ನು 'ಸ್ವಂತ ಸಂಶೋಧನೆ' ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಸಂಪಾದನೆ ಸ್ವಂತ ಸಂಶೋಧನೆಯಲ್ಲ ಎಂದು ತೋರಿಸಲು ಇರುವ ಒಂದೇ ದಾರಿಯೆಂದರೆ ಆ ಮಾಹಿತಿ ಇರುವ ನಂಬಲರ್ಹ ಪ್ರಕಟಿತ ಮೂಲ ಆಕಾರಗಳನ್ನು ಉಲ್ಲೇಖಿಸುವುದು. ನಂಬಲರ್ಹ ಮಾಹಿತಿಗಳ ಆಕಾರಗಳನ್ನೂ ಅವುಗಳ ಸಂದರ್ಭಕ್ಕೆ ಹೊರತಾಗಿ ನೀವು ಬಳಸಿದರೆ ಅಥವಾ ಅವುಗಳಲ್ಲಿ ನೇರ ಮತ್ತು ಸುಸ್ಪಷ್ಟವಾಗಿ ಇಲ್ಲದ ನಿರ್ಣಯಗಳನ್ನು ನೀವು ತಲುಪಿದಲ್ಲಿ ನೀವು ಸ್ವಂತ ಸಂಶೋಧನೆ ಮಾಡಿದಿರೆಂದೇ ಅರ್ಥ.


ಸಾಮಾನ್ಯವಾಗಿ, ಹೆಚ್ಚಿನ ವಿಶ್ವಾಸಾರ್ಹ ಮೂಲಗಳು:

 • ತಜ್ಞರ ವಿಮರ್ಶೆಗೊಳಗಾದ ಪತ್ರಿಕೆಗಳು
 • ವಿಶ್ವವಿದ್ಯಾನಿಲಯದ ಮುದ್ರಣ ಸಂಸ್ಥೆಯಿಂದ ಪ್ರಕಟಿತವಾದ ಪುಸ್ತಕಗಳು
 • ವಿಶ್ವವಿದ್ಯಾನಿಲಯ ಮಟ್ಟದ ಪಠ್ಯಪುಸ್ತಕಗಳು
 • ಗೌರವಾನ್ವಿತ ಪ್ರಕಾಶಕರು ಪ್ರಕಟಿಸಿದ ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಪುಸ್ತಕಗಳು
 • ಮುಖ್ಯವಾಹಿನಿಯ ಪತ್ರಿಕೆಗಳು

ಹೆಬ್ಬೆರಳಿನ ನಿಯಮದಂತೆ, ಹೆಚ್ಚು ಜನರಿಂದ ವಾಸ್ತವಗಳು ತಪಾಸಣೆಗೆ ಒಳಗಾಗುವ, ಕಾನೂನು ವಿಶ್ಲೇಷಣೆಗೆ ಒಳಪಡುವ ಮತ್ತು ಬರವಣಿಗೆ ಪರಿಶೀಲನೆಗೆ ಒಳಪಡುವ ಪ್ರಕಟಣೆಗಳು ಹೆಚ್ಚಿನ ವಿಶ್ವಾಸಾರ್ಗಹತೆ ಪಡೆದಿವೆ. ಸ್ವಯಂ ಪ್ರಕಟಿತವಾದ ಮಾಹಿತಿಯು, ಅದು ಪತ್ರಿಕೆಯಾಗಿರಲಿ ಅಥವಾ ಆನ್ಲೈನ್‌ನಲ್ಲಿರಲಿ, ಸಾಮಾನ್ಯವಾಗಿ ವಿಶ್ವಾಸಾರ್ಹವೆಂದು ಪರಿಗಣಿಸಲ್ಪಟ್ಟಿಲ್ಲ, ಆದರೆ ಇದಕ್ಕೆ ಅಪವಾದಗಳಿಗೆ ಸ್ವಪ್ರಕಟಿತ ಆಕರಗಳು ನೋಡಿ.

ಲೇಖನದ ಮಾಹಿತಿಯ ಬಗೆಗಿನ ಉಲ್ಲೇಖಗಳು ಪರಿಶೀಲನಾರ್ಹವಾಗಿರ ಬೇಕು. ಸಾಮಾನ್ಯವಾಗಿ ಲೇಖನದ ಹೇಳಿಕೆಗಳನ್ನು ಸಂಗತವಲ್ಲದ ಅಥವಾ ಅಸ್ಪಷ್ಟ ಭಾಗದಿಂದ ಅಥವಾ ಸಾಂದರ್ಭಿಕ ಹೇಳಿಕೆಗಳಿಂದ ಪಡೆದಿರಬಾರದು. ಹಲವು ವಿಶ್ಲೇಷಣೆಗಳು ಸಾಧ್ಯವಿರುವ ಭಾಗಗಳನ್ನು ಖಚಿತವಾಗಿ ಉಲ್ಲೇಖಿಸ ಬೇಕು ಅಥವಾ ಬಳಸಬಾರದು. ವ್ಯಾಪಕ ಚರ್ಚೆಯ ಸಾರಾಂಶವು ಮೂಲ ಆಕರಗಳ ತೀರ್ಮಾನಗಳನ್ನು ಬಿಂಬಿಸಬೇಕು. ಯಾವುದೇ ರೀತಿಯ ಉಲ್ಲೇಖವಿರಲಿ ಅವುಗಳಲ್ಲಿ ಸ್ಪಷ್ಟವಿಲ್ಲದ ನಿರ್ಣಯಗಳನ್ನು ಪಡೆದಲ್ಲಿ ಅದು ಸ್ವಂತ ಸಂಶೋಧನೆ. ನಮೂದಿಸಿದ ಉಲ್ಲೇಖಗಳು ಅವುಗಳ ಸಂದರ್ಭಗಳಿಗೆ ಹೊಂದಿಕೊಂಡಿರಬೇಕು ಮತ್ತು ವಿಷಯದ ಬಗೆಗೆ ಇರಬೇಕು.

ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆಕರಗಳು[ಬದಲಾಯಿಸಿ]

ವಿಕಿಪೀಡಿಯ ಲೇಖನಗಳು ನಂಬಲರ್ಹ, ಪ್ರಕಟಿತ ದ್ವಿತೀಯ ಅಥವಾ ಎರಡನೆಯ ಆಕರಗಳ ಮೇಲೆ ಆಧಾರ ಪಟ್ಟಿರ ಬೇಕು ಮತ್ತು ಪ್ರಾಥಮಿಕ ಮತ್ತು ತೃತೀಯ ಅಥವಾ ಮೂರನೆಯ ಆಕಾರಗಳ ಮೇಲೆ ಕಡಿಮೆ ಆಧಾರ ಪಟ್ಟಿರಬೇಕು. ಎರಡನೆಯ ಅಥವಾ ಮೂರನೆಯ ಆಕಾರಗಳು ವಿಷಯದ ಗಮನಾರ್ಹತೆ ಮತ್ತು ಪ್ರಾಥಮಿಕ ಆಕರಗಳ ಹೊಸತೆರನಾದ ವಿಶ್ಲೇಷಣೆಗಳನ್ನು ತಡೆಹಿಡಿಯಲು ಅಗತ್ಯ. ಪ್ರಾಥಮಿಕ ಆಕರಗಳ ಎಲ್ಲಾ ವಿಶ್ಲೇಷಣೆಗಳು ಅಥವಾ ಸಂಶ್ಲೇಷಿತ ಅಥವಾ ಮರುರೂಪಣೆಗೊಂಡ ಹೇಳಿಕೆಗಳಿಗೆ ಎರಡನೆಯ ಆಕಾರಗಳ ಉಲ್ಲೇಖ ಅತ್ಯಗತ್ಯವಾಗಿದ್ದು ವಿಕಿಪೀಡಿಯ ಸಂಪಾದಕರು ಪ್ರಾಥಮಿಕ ಆಕರಗಳನ್ನು ಸ್ವಂತ ವಿಶ್ಲೇಷಣೆ ಮಾಡಬಾರದು.

ಸೂಕ್ತ ಆಕರ ಎನ್ನುವುದು ಸಂಕೀರ್ಣ ಅಂಶ ಮತ್ತು ಕೆಳಗೆ ಹೇಳಿದವನ್ನು ಸಾಮಾನ್ಯ ನಿಯಮಗಳಾಗಿ ಪರಿಗಣಿಸ ಬಹುದು. ಯಾವುದೇ ಒಂದು ಸಂದರ್ಭದಲ್ಲಿ ಆಕರವನ್ನು ಪ್ರಾಥಮಿಕ, ಎರಡನೆಯ ಅಥವಾ ಮೂರನೆ ಎಂದು ಸೂಕ್ತವಾಗಿ ತೀರ್ಮಾನಿಸುವುದು ಒಳ್ಳೆಯ ಸಂಪಾದಕೀಯ ನಿರ್ಣಯ ಮತ್ತು ಸಾಮಾನ್ಯ ಅರಿವು ಮತ್ತು ಇದನ್ನು ಲೇಖನದ ಚರ್ಚೆಯ ಪುಟದಲ್ಲಿ ಚರ್ಚಿಸಬೇಕು. ಒಂದು ಆಕರವು ಒಂದು ಹೇಳಿಕೆಯ ಬಗೆಗೆ ಪ್ರಾಥಮಿಕವಾಗಿರ ಬಹುದು ಆದರೆ ಇನ್ನೊಂದರ ಬಗೆಗೆ ಎರಡನೆಯ ಆಕರವಾಗಿರ ಬಹುದು. ಹಾಗೆಯೇ ಒಂದೇ ಹೇಳಿಕೆಯು ಪ್ರಾಥಮಿಕ ಮತ್ತು ಎರಡನೆ ಆಕರದ ಮಾಹಿತಿಯೂ ಆಗಿರಲು ಸಾಧ್ಯ. ಇಲ್ಲಿನ ನೀತಿಗೆ ಸಂಬಂಧಿಸಿದಂತೆ ಪ್ರಾಥಮಿಕ, ಎರಡನೆಯ ಮತ್ತು ಮೂರನೆ ಆಕರಗಳನ್ನು ಈ ಕೆಳಗಿನಂತ ವ್ಯಾಖ್ಯಾನಿಸಲಾಗಿದೆ.[೨]

 • ಪ್ರಾಥಮಿಕ ಆಕರವು ಘಟನೆಗೆ ಹತ್ತಿರವಾದ ಮೂಲ ಆಕರ ಮತ್ತು ಬಹಳಷ್ಟು ಸಲ ನೇರವಾಗಿ ಘಟನಾವಳಿಗಳಲ್ಲಿ ಭಾಗವಹಿಸಿದವರ ಬರೆವಣಿಗೆಯಾಗಿರುತ್ತದೆ. ಅದು ಒಂದು ಘಟನೆ, ಒಂದು ಇತಿಹಾಸದ ಕಾಲಮಾನ, ಕಲಾಕೃತಿ, ರಾಜಕೀಯ ನಿರ್ಣಯ ಮುಂತಾದವುಗಳ ಬಗೆಗಿನ ಒಳಗಿನವರ ದೃಷ್ಟಿಕೋನವನ್ನು ಕೊಡುತ್ತದೆ. ಪ್ರಾಥಮಿಕ ಆಕರಗಳು ಸ್ವತಂತ್ರವಾಗಿರ ಬಹುದು ಅಥವಾ ಮೂರನೆಯ ವ್ಯಕ್ತಿಯ ಆಕಾರಗಳೂ ಆಗಿರಬಹುದು ಅಥವಾ ಆಗಿಲ್ಲದೆಯೂ ಇರಬಹುದು. ಒಂದು ರಸ್ತೆಯಲ್ಲಿ ನಡೆದ ಘಟನೆಯ ಬಗೆಗಿನ ಸಾಕ್ಷಿಯ ಹೇಳಿಕೆಯು ಈ ಘಟನೆಯ ಬಗೆಗಿನ ಪ್ರಾಥಮಿಕ ಆಕರ. ಹಾಗೆಯೇ ತಾನು ಮಾಡಿದ ಹೊಸ ಪ್ರಯೋಗದ ಮೇಲೆ ಲೇಖಕ ವೈಜ್ಞಾನಿಕವಾಗಿ ದಾಖಲಿಸಿದ ಪ್ರಬಂಧವು ಆ ಪ್ರಯೋಗದ ಪಲಿತಾಂಶದ ಮೇಲಿನ ಪ್ರಾಥಮಿಕ ಆಕರ. ಐತಿಹಾಸಿಕ ದಾಖಲೆಗಳಾದ ದಿನಚರಿ ಪ್ರಾಥಮಿಕ ಆಕರ.[೩]
ನೀತಿ: ಬೇರೊಂದು ನೀತಿಯ ನಿರ್ಬಂಧವಿರದಿದ್ದಲ್ಲಿ ಹೆಸರಾಂತ ಪ್ರಕಾಶಕರು ಪ್ರಕಟಿಸಿದ ಪ್ರಾಥಮಿಕ ಆಕರಗಳನ್ನು ವಿಕಿಪೀಡಿಯದಲ್ಲಿ ಬಳಸಬಹುದು. ಆದರೆ ಎಚ್ಚರಿಕೆ ಅಗತ್ಯ, ಏಕೆಂದರೆ ಇವನ್ನು ಸುಲಭವಾಗಿ ದುರುಪಯೋಗ ಮಾಡಿಕೊಳ್ಳಬಹುದು. [೪] ಯಾವುದೇ ಪ್ರಾಥಮಿಕ ಆಕರದ ವಿಶ್ಲೇಷಣೆಗೆ ಒಂದು ವಿಶ್ವಾಸಾರ್ಹ ಎರಡನೆಯ ಆಕರದ ಅಗತ್ಯವಿರುತ್ತದೆ. ಪ್ರಾಥಮಿಕ ಆಕರಗಳನ್ನು ವಿಕಿಪೀಡಿಯದಲ್ಲಿ ವಾಸ್ತವದ ಬಗೆಗಿನ ನೇರವಾದ, ವಿವರಣಾತ್ಮಕ ಹೇಳಿಕೆಗಳಿಗೆ ಮಾತ್ರ ಬಳಸಬಹುದಾಗಿದ್ದು, ಇವುಗಳನ್ನು ಯಾವುದೇ ಶಿಕ್ಷಿತನು ವಿಶೇಷ ಜ್ಞಾನವಿಲ್ಲದೆ, ಕೇವಲ ಲಭ್ಯವಿರುವ ಮೂಲ ಆಕರಗಳ ಮೂಲಕ ಪರಿಶೀಲಿಸುವಂತೆ ಇರಬೇಕು. ಉದಾಹರಣೆಗೆ ಲೇಖನವೊಂದು ಕಾದಂಬರಿಯ ಕಥಾವಸ್ತುವನ್ನು ವಿವರಿಸಲು ಅದರ ಭಾಗವೊಂದ್ನು ಉದ್ಧರಿಸ ಬಹುದು. ಆದರೆ ಯಾವುದೇ ವಿಶ್ಲೇಷಣೆಗೂ ದ್ವಿತೀಯ ಆಕರವು ಅಗತ್ಯವಾಗಿದೆ. ಆದರೆ ಪ್ರಾಥಮಿಕ ಆಕಾರದಲ್ಲಿರುವ ವಿಷಯವನ್ನು ನೀವೇ ಸ್ವತಹ ವಿಶ್ಲೇಷಣೆ, ಮೌಲ್ಯಮಾಪನ ಅಥವಾ ಮರುನಿರೂಪಣೆ ಮಾಡಬೇಡಿ. ಬದಲಿಗೆ, ವಿಶ್ವಾಸಾರ್ಹ ದ್ವಿತೀಯ ಮೂಲ ಆಕರಗಳನ್ನು ಇದಕ್ಕೆ ಉಲ್ಲೇಖಿಸಿ. ಪ್ರಾಥಮಿಕ ಮೂಲಗಳನ್ನೇ ಇಡೀ ಲೇಖನವು ಆಧರಿಸಿರಬಾರದು, ಮತ್ತು ಅವುಗಳ ಆಧಾರದ ಮೇಲೆ ದೊಡ್ಡ ಭಾಗಗಳನ್ನು ರಚಿಸದಂತೆ ಎಚ್ಚರ ವಹಿಸಿ. ನಿಮ್ಮ ವೈಯಕ್ತಿಕ ಅನುಭವದಿಂದ ಆಕರಗಳಲ್ಲಿದ್ದ ಮಾಹಿತಿಯನ್ನು ಸೇರಿಸಬೇಡಿ, ಏಕೆಂದರೆ ವೀಕಿಪೀಡಿಯಾ ಆ ಮಾಹಿತಿಗೆ ಒಂದು ಪ್ರಾಥಮಿಕ ಆಕಾರವಾಗಿ ಬಿಡುತ್ತದೆ. ಬದುಕಿರುವ ವ್ಯಕ್ತಿಗಳ ಬಗೆಗಿನ ಪ್ರಾಥಮಿಕ ಆಕರಗಳನ್ನು ಬಳಸುವಾಗ ವಿಶೇಷವಾಗಿ ಎಚ್ಚರಿಕೆ ವಹಿಸಿ. ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ ಪ್ರಾಥಮಿಕ ಆಕರಗಳ ದುರುಪಯೋಗ ಸಾಧ್ಯತೆಯ ಬಗೆಗಿನ ನೀತಿಯನ್ನು ನೋಡಿ.
 • ದ್ವಿತೀಯ ಆಕರವು ಪ್ರಾಥಮಿಕ ಆಕರಗಳ ಆಧಾರಿತವಾಗಿರುವ ಒಬ್ಬ ಲೇಖಕನ ಸ್ವಂತ ಚಿಂತನೆ, ಸಾಮಾನ್ಯವಾಗಿ ಕನಿಷ್ಠ ಒಂದು ಹೆಜ್ಜೆಯಾದರೂ ಘಟನೆಯಿಂದ ಹಿಂದೆ ಇರುತ್ತದೆ. ಇದು ಲೇಖಕನು ಪ್ರಾರ್ಥಮಿಕ ಆಕಾರಗಳಿಂದ ಪಡೆದ ಮಾಹಿತಿಯ ಅರ್ಥವಿವರಣೆ, ವಿಶ್ಲೇಷಣೆ, ವಾಸ್ತವದ ಮೌಲ್ಯಮಾಪನ, ಸಾಕ್ಷಿ, ಪರಿಕಲ್ಪನೆ ಮತ್ತು ಚಿಂತನೆಗಳನ್ನು ಒಳಗೊಂಡಿರುತ್ತದೆ. ದ್ವಿತೀಯ ಆಕರಗಳು ಅಗತ್ಯವಾಗಿ ಸ್ವತಂತ್ರ ಅಥವಾ ತೃತೀಯ ಪಕ್ಷದ ಆಕರಗಳಲ್ಲ. ಅವರು ತಮ್ಮ ಮಾಹಿತಿಯನ್ನು ಪ್ರಾಥಮಿಕ ಆಕರಗಳಿಂದ ಪಡೆದಿರುತ್ತಾರೆ ಮತ್ತು ಅವುಗಳ ಬಗೆಗೆ ವಿಶ್ಲೇಷಣಾತ್ಮಕ ಅಥವಾ ಮೌಲ್ಯಮಾಪಕ ಹೇಳಿಕೆಗಳನ್ನು ನೀಡುತ್ತಾರೆ. [೫] ಉದಾಹರಣೆಗೆ ಒಂದು ಕ್ಷೇತ್ರದ ಸಂಶೋಧನೆಯ ಪ್ರಬಂಧವನ್ನು ವಿಮರ್ಶಿಸುವ ಲೇಖನ ಸಂಶೋಧನೆಯ ಎರಡನೆಯ ಆಕರ [೬] ಆಕರವು ಪ್ರಾಥಮಿಕವೇ ಅಥವಾ ಎರಡನೆಯದೇ ಎಂಬುದು ಸಂದರ್ಭಗಳ ಮೇಲೆ ಆಧಾರಪಟ್ಟಿರುತ್ತದೆ. ಎರಡನೇ ಮಹಾ ಯುದ್ಧದ ಬಗ್ಗೆ ಮಿಲಿಟರಿ ಇತಿಹಾಸಕಾರ ಬರೆದ ಪುಸ್ತಕವು ಯುದ್ಧದ ಬಗ್ಗೆ ಒಂದು ದ್ವಿತೀಯ ಆಕರ, ಆದರೆ ಲೇಖಕನ ಸ್ವಂತ ಯುದ್ಧದ ಅನುಭವದ ವಿವರಗಳನ್ನು ಅದು ಒಳಗೊಂಡಿದ್ದರೆ, ಆ ಅನುಭವಗಳ ಬಗ್ಗೆ ಅದು ಪ್ರಾಥಮಿಕ ಆಕರವಾಗುತ್ತದೆ. ಒಂದು ಪುಸ್ತಕದ ವಿಮರ್ಶೆಯು ಅಭಿಪ್ರಾಯ, ಸಾರಾಂಶ ಅಥವಾ ಪಾಂಡಿತ್ಯಪೂರ್ಣ ವಿಮರ್ಶೆ ಯಾವುದನ್ನಾದರೂ ಒಳಗೊಳ್ಳ ಬಹುದು.[೭]
ನೀತಿ: ವಿಕಿಪೀಡಿಯ ಲೇಖನಗಳು ಸಾಮಾನ್ಯವಾಗಿ ವಿಶ್ವಾಸಾರ್ಹ ದ್ವಿತೀಯ ಆಕರಗಳ ಮಾಹಿತಿಯನ್ನು ಅವಲಂಬಿಸುತ್ತವೆ. ನಂಬಲರ್ಹ ಎರಡನೆಯ ಆಕಾರಗಳ ಪ್ರಕಟಿತ ಮೂಲಗಳು ಇದ್ದರೆ ಮಾತ್ರ ವಿಶ್ಲೇಷಣಾತ್ಮಕ, ಮೌಲ್ಯಮಾಪಕ, ಅರ್ಥವಿವರಣೆಯ ಸಂಯೋಜನೆಯ ಹೇಳಿಕೆಗಳನ್ನು ಲೇಖನದಲ್ಲಿ ಸೇರಿಸಬಹುದು.
 • ತೃತೀಯ ಆಕರಗಳು ವಿಶ್ವಕೋಶಗಳು ಮತ್ತು ಇತರ ಸಾರಸಂಗ್ರಹಗಳಂತಹ ಪ್ರಕಟಣೆಗಳು ಮತ್ತು ಪ್ರಾಥಮಿಕ ಹಾಗೂ ಎರಡನೆಯ ಆಕಾರಗಳ ಮಾಹಿತಿಯನ್ನು ಸಂಕ್ಷಿಪ್ತವಾಗಿ ಹೇಳುತ್ತವೆ. ವಿಕಿಪೀಡಿಯ ತೃತೀಯ ಆಕರವಾಗಿದೆ. ಅನೇಕ ಪರಿಚಯಾತ್ಮಕ ಪದವಿಪೂರ್ವ ಮಟ್ಟದ ಪಠ್ಯಪುಸ್ತಕಗಳನ್ನು ತೃತೀಯ ಆಕರಗಳಾಗಿ ಪರಿಗಣಿಸಲಾಗುತ್ತದೆ ಏಕೆಂದರೆ ಅವು ಅನೇಕ ದ್ವಿತೀಯ ಆಕರಗಳನ್ನು ಕ್ರೂಡೀಕರಿಸುತ್ತವೆ.
ನೀತಿ: ವಿಶ್ವಾಸಾರ್ಹ ಮೂರನೆಯ ಆಕರಗಳು ವಿಷಯದ ಮೇಲಿನ ಅನೇಕ ಪ್ರಾಥಮಿಕ ಹಾಗೂ ಎರಡನೆಯ ಆಕಾರಗಳ ವಿಶಾಲ ಸಾರಾಂಶಗಳನ್ನು ಒದಗಿಸಲು ಸಹಾಯಕವಾಗುತ್ತವೆ. ವಿಶೇಷವಾಗಿ ಪ್ರಾಥಮಿಕ ಆಕರ ಅಥವಾ ಎರಡನೆಯ ಆಕಾರಗಳಲ್ಲಿ ಪರಸ್ಪರ ವಿರೋಧವಿದ್ದಾಗ ಅಗತ್ಯ ಒತ್ತನ್ನು ಮೌಲ್ಯಮಾಪನ ಮಾಡಲು ಸಹಾಯಕ. ಕೆಲವು ತೃತೀಯ ಮೂಲಗಳು ಇತರವಕ್ಕಿಂತ ಹೆಚ್ಚು ವಿಶ್ವಾಸಾರ್ಹ, ಮತ್ತು ಯಾವುದೇ ತೃತೀಯ ಆಕರದ ಒಳಗೆ, ಕೆಲವು ಇತರವಕ್ಕಿಂತ ಹೆಚ್ಚು ವಿಶ್ವಾಸಾರ್ಹ. ವಿಕಿಪೀಡಿಯ ಲೇಖನಗಳನ್ನು ಇತರ ವಿಕಿಪೀಡಿಯ ಲೇಖನಗಳಿಗೆ ಮೂರನೆಯ ಆಕರಗಳಾಗಿ ಬಳಸಬಾರದು. ಆದರೆ ಕೆಲವೊಮ್ಮೆ ಸ್ವತಃ ವಿಕಿಪೀಡಿಯವನ್ನು ಕುರಿತು ಲೇಖನಗಳಲ್ಲಿ ಪ್ರಾಥಮಿಕ ಆಕರವಾಗಿ ಉಪಯೋಗಿಸಲಾಗುತ್ತದೆ.

ಪ್ರಕಟಿತ ಆಕರಗಳ ಸಂಯೋಜನೆ[ಬದಲಾಯಿಸಿ]

ಹಲವು ಆಕರಗಳ ಮಾಹಿತಿಗಳನ್ನು ಪೋಣಿಸಿ ಆಕರಗಳಲ್ಲಿ ಸ್ಪಷ್ಟವಾಗಿ ವ್ಯಕ್ತಪಡಿಸದ ತೀರ್ಮಾನಗಳಿಗೆ ಬರುವುದು ಅಥವಾ ಸೂಚಿಸುವುದನ್ನು ಮಾಡಬೇಡಿ. ಹಾಗೆಯೇ ಒಂದು ಆಕರದ ಬೇರೆ ಬೇರೆ ಭಾಗಗಳನ್ನು ಸೇರಿಸಿ ಆಕರದಲ್ಲಿರದ ತೀರ್ಮಾನಗಳಿಗೆ ಬರಬೇಡಿ. ಒಂದು ಆಕರ ಎಂದು ಹೇಳಿದರೆ ಮತ್ತು ಇನ್ನೊಂದು ಎಂದು ಹೇಳಿದರೆ ಮತ್ತು ಸೇರಿ ತೀರ್ಮಾನಕ್ಕೆ ಬರಲು ಆಗುವುದಿಲ್ಲ. ಏಕೆಂದರೆ ತೀರ್ಮಾನವು ಎರಡೂ ಆಕರಗಳಲ್ಲಿ ಇಲ್ಲ. ಇದು ಪ್ರಕಟಿತ ಆಕರದ ಹೊಸ ತೀರ್ಮಾನ ಸೂಚಿಸುವ ಸರಿಯಲ್ಲದ ಸಂಪಾದಕೀಯ ಸಂಯೋಜನೆ ಮತ್ತು ಸಂಪಾದಕರು ಮಾಡಿದ ಸ್ವಂತ ಸಂಶೋಧನೆ.[೮] "ಅ ಮತ್ತು ಆ, ಹೀಗಾಗಿ ಇ"ಯನ್ನು ಪ್ರಕಟಿಸಲಾದ ನಂಬಲರ್ಹ ಆಕರಗಳು ಇದೇ ವಾದವನ್ನು ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಮಂಡಿಸಿದ್ದರೆ ಮಾತ್ರ ಒಪ್ಪಿಕೊಳ್ಳಬಹುದು. ಒಂದೇ ಆಕರವು ಒಂದು ಸಂದರ್ಭದಲ್ಲಿ "ಅ" ಮತ್ತು ಇನ್ನೊಂದು ಸಂದರ್ಭದಲ್ಲಿ "" ಹೇಳಿದ್ದು ಅವುಗಳ ನಡುವೆ ಸಂಬಂಧ ಬೆಸೆಯದಿದ್ದರೆ ಮತ್ತು "ಆದ್ದರಿಂದ " ವಾದವನ್ನು ಮಂಡಿಸದಿದ್ದರೆ ಯಾವುದೇ ಲೇಖನದಲ್ಲಿ "ಆದ್ದರಿಂದ " ಬಳಸಲು ಬರುವುದಿಲ್ಲ

ಮೂಲ ಚಿತ್ರಗಳು[ಬದಲಾಯಿಸಿ]

ಹಲವು ದೇಶಗಳಲ್ಲಿನ ಕೃತಿಸ್ವಾಮ್ಯ ಕಾನೂನುಗಳ ಕಾರಣಕ್ಕೆ, ಕೆಲವೇ ಚಿತ್ರಗಳು ವಿಕಿಪೀಡಿಯದಲ್ಲಿ ಬಳಸುವುದಕ್ಕೆ ಲಭ್ಯವಿವೆ. ಆದ್ದರಿಂದ, ವಿಕಿಪೀಡಿಯ ಸಂಪಾದಕರು ತಮ್ಮವೇ ಚಿತ್ರಗಳನ್ನು (ತಮ್ಮ ಚಿತ್ರಗಳಲ್ಲ) ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಅಥವಾ ಇತರ ಮುಕ್ತ ಲೈಸೆನ್ಸ್ ಅಡಿ ಬಿಡುಗಡೆ ಮಾಡಿ ಅಪ್‌ಲೋಡ್ ಮಾಡಲು ಪ್ರೋತ್ಸಾಹಿಸುತ್ತದೆ. ವಿಕಿಪಿಡಿಯನ್ ಸೃಷ್ಟಿಸಿದ ಚಿತ್ರವನ್ನು ಎಲ್ಲಿಯವರೆಗೆ ಅವು ಅಪ್ರಕಟಿತ ಚಿಂತನೆಗಳು ಅಥವಾ ವಾದಗಳನ್ನು ಮುಂದಿಡುವುದಿಲ್ಲವೋ ಅಥವಾ ಚಿತ್ರಿಸುವುದಿಲ್ಲವೋ ಅಲ್ಲಿಯವರೆಗೆ ಮೂಲ ಚಿತ್ರಗಳನ್ನು ಸ್ವಂತ ಸಂಶೋಧನೆ ಎಂದು ಪರಿಗಣಿಸುವುದಿಲ್ಲ. ಇದರ ಹಿಂದಿರುವ ಕಾರಣ ಸ್ವಂಸಂಸ ನೀತಿ. ಲೇಖನದ ಹೇಳಿಕೆಗಳಿಗಷ್ಟೇ ಚಿತ್ರದ ಶೀರ್ಷಿಕೆಗಳೂ ಈ ನೀತಿಗೆ ಒಳಪಡುತ್ತವೆ.

ಸಂಪಾದಕರು ಪೋಟೋ ಮ್ಯಾನುಪುಲೇನ್ (ಚಿತ್ರಗಳನ್ನು ತಿದ್ದುವ ತಂತ್ರಾಶ) ಬಳಸಿ ಚಿತ್ರದ ವಾಸ್ತವನ್ನು ಅಥವಾ ಚಿತ್ರದಲ್ಲಿನ ಸ್ಥಾನವನ್ನು ವಿರೂಪಗೊಳಿಸುವುದು ಅಥವಾ ತಿರುಚುವುದು ಸಮ್ಮತವಲ್ಲ. ತಿದ್ದಿದ ಚಿತ್ರಗಳನ್ನು ಎದ್ದುಕಾಣುವಂತೆ ಗುರುತಿಸಬೇಕು. ಯಾವುದೇ ತಿದ್ದಿದ ಚಿತ್ರವು ತಿದ್ದಿದ ಕಾರಣಕ್ಕೆ ಅವುಗಳ ವಿಶ್ವಕೋಶೀಯ ಮೌಲ್ಯದ ಮೇಲೆ ಪರಿಣಾಮ ಉಂಟಾದಲ್ಲಿ ಅದನ್ನು ವಿಕಿಪೀಡಿಯ: ಫೈಲ್ಸ್ ಅಳಿಸುವಿಕೆಗೆ ಹಾಕಬೇಕು. ಜೀವಂತ ವ್ಯಕ್ತಿಗಳ ಚಿತ್ರಗಳನ್ನು ಸುಳ್ಳು ಅಥವಾ ಅಗೌರವ ತರುವ ರೀತಿಯಲ್ಲಿ ಪ್ರಸ್ತುತ ಪಡಿಸಬಾರದು.

ಅನುವಾದ ಮತ್ತು ಪ್ರತಿಲೇಖನ[ಬದಲಾಯಿಸಿ]

ನಿಷ್ಠೆಯಿಂದ ಮೂಲ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸುವುದು ಅಥವಾ ಆಡಿಯೋ/ವೀಡಿಯೊ ಮೂಲಗಳಿಂದ ಮಾತುಗಳನ್ನು ಪ್ರತಿಲೇಖನಿಸುವುದು, ಮೂಲ ಸಂಶೋಧನೆಯಾಗಿ ಪರಿಗಣಿತವಾಗುವುದಿಲ್ಲ.

ರೂಢಿಯ ಲೆಕ್ಕಾಚಾರಗಳು[ಬದಲಾಯಿಸಿ]

ರೂಢಿಯ ಲೆಕ್ಕಾಚಾರಗಳು, ಅವುಗಳ ಪಲಿತಾಂಶಗಳು ಮೂಲ ಆಕರಗಳನ್ನು ಸ್ಪಷ್ಟವಾಗಿ, ಸರಿಯಾಗಿ ಮತ್ತು ಅರ್ಥಪೂರ್ಣವಾಗಿ ಬಿಂಬಿಸುತ್ತವೆ ಎಂಬುದರ ಬಗೆಗೆ ಸಂಪಾದಕರಲ್ಲಿ ಒಮ್ಮತ ಇದೆಯೆಂದಾದರೆ, ಸ್ವಂತ ಸಂಶೋಧನೆ ಎಂದು ಪರಿಗಣಿತವಾಗುವುದಿಲ್ಲ. ಕೂಡಿಸುವುದು, ಘಟಕಗಳ ಪರಿವರ್ತನೆ ಅಥವಾ ವ್ಯಕ್ತಿಯ ವಯಸ್ಸನ್ನು ಲೆಕ್ಕ ಮಾಡುವುದು ಮುಂತಾದ ಬೇಸಿಕ್ ಅಂಕಗಣಿತ ರೂಢಿಯ ಲೆಕ್ಕಾಚಾರದ ಕೆಲವು ಉದಾಹರಣೆಗಳು.

ಸಂಬಂಧಿತ ನೀತಿಗಳು[ಬದಲಾಯಿಸಿ]

ಪರಿಶೀಲನಾರ್ಹತೆ[ಬದಲಾಯಿಸಿ]

ವಿಕಿಪೀಡಿಯ ವಿಷಯವು ವೈಯಕ್ತಿಕ ನಂಬಿಕೆಗಳು ಅಥವಾ ಸಂಪಾದಕರ ಅನುಭವಗಳಿಗಿಂತ ಹಿಂದೆ ಪ್ರಕಟವಾದ ಮಾಹಿತಿಯ ಆಧಾರದ ಮೇಲೆ ನಿರ್ಧರಿವಾಗುತ್ತದೆ. ನೀವು ಯಾವುದೋ ಒಂದು ವಿಷಯ ಖಚಿತವಾಗಿ ನಿಜ ಎಂದು ಭಾವಿಸಿದರೂ, ನೀವು ಲೇಖನದಲ್ಲಿ ಸೇರಿಸುವ ಮೊದಲು ಅದನ್ನು ಪರಿಶೀಲಿಸ ಬೇಕು. ಎಲ್ಲಾ ಮಾಹಿತಿಯು ಪ್ರಶ್ನಿಸಲ್ಪಡ ಬಹುದು ಅಥವಾ ಅಕ್ಷೇಪಿಸಲ್ಪಡುವ ಸಾಧ್ಯತೆ ಇದೆ ಎಂದು ನೀತಿ ಹೇಳುತ್ತದೆ. ಎಲ್ಲಾ ಉದ್ಧರಣಗಳಿಗೂ (ಎತ್ತಿಕೊಳ್ಳುವಿಕೆ) ಒಂದು ವಿಶ್ವಾಸಾರ್ಹ ಆಕರದ ಅಗತ್ಯವಿದೆ. ಯಾವುದನ್ನು ವಿಶ್ವಾಸಾರ್ಹ ಆಕರವೆಂದು ಪರಿಗಣಿಸಲಾಗುತ್ತದೆ ಎಂಬುದಕ್ಕೆ ಇಲ್ಲಿ ನೋಡಿ.

ತಟಸ್ಥ ದೃಷ್ಟಿಕೋನ[ಬದಲಾಯಿಸಿ]

ಸ್ವಂತ ಸಂಶೋಧನೆಯ ವಿರುದ್ಧದ ನಿಷೇಧವು ಸಂಪಾದಕರು ಲೇಖನಗಳಲ್ಲಿ ತಮ್ಮ ಸ್ವಂತ ಅಬಿಪ್ರಾಯಗಳನ್ನು ಪ್ರಸ್ತುತ ಪಡಿಸಲು ಮಿತಿಯೊಂದನ್ನು ಹೇರುತ್ತದೆ. ಬೇರೆಯವರ ಪರಿಶೀಲಿಸ ಬಹುದಾದ ಸಂಶೋಧನೆಗಳನ್ನು ಸೇರಿಸುವುದರ ಮಹತ್ವವನ್ನು ಬಲಪಡಿಸುವ ಮೂಲಕ ಈ ನೀತಿಯು ವಿಭಿನ್ನ ದೃಷ್ಟಿಕೋನಗಳನ್ನು ಒಳಗೊಳ್ಳುವಂತೆ ಪ್ರೋತ್ಸಾಹಿಸುತ್ತದೆ. ಪರಿಣಾಮವಾಗಿ ಈ ನೀತಿಯು ನಮ್ಮ ತಟಸ್ಥ ನೀತಿಯನ್ನು ಬಲಪಡಿಸುತ್ತದೆ. ಹಲವು ಸಂದರ್ಭಗಳಲ್ಲಿ ಒಂದು ವಿಷಯದ ಬಗೆಗೆ ಹಲವು ಸ್ಥಾಪಿತ ದೃಷ್ಚಿಕೋನಗಳು ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಯಾವುದೇ ಒಂದು ನಿಲುವು, ಅದೆಷ್ಟೇ ಚೆನ್ನಾಗಿ ಸಂಶೋಧಿಸಲ್ಪಟ್ಟಿದ್ದಾಗ್ಯೂ, ಅಧಿಕೃತವಲ್ಲ. ಎಲ್ಲಾ ದೃಷ್ಟಿಕೋನಗಳನ್ನೂ ಸಂಶೋಧಿಸುವುದು ಯಾವುದೇ ಒಬ್ಬ ಸಂಪಾದಕನ ಜವಾಬುದಾರಿಯಲ್ಲ. ಒಂದು ಲೇಖನದೊಳಗೆ ಸಂಶೋಧನೆಯನ್ನು ಅಡಕಗೊಳಿಸುವಾಗ ಸಂಪಾದಕರು, ಸದ್ಯದ ನಿಲುವು ಹೇಗಿದೆ ಮತ್ತು ಅದು ಬಹುಸಂಖ್ಯಾತರ ನಿಲುವೇ ಅಥವಾ ಅಲ್ಪಸಂಖ್ಯಾತರದೇ ಎಂದು ಹೇಳುವ ಮೂಲಕ, ಆ ದೃಷ್ಟಿಕೋನದ ಸಂದರ್ಭದ ಮಾಹಿತಿ ನೀಡಬೇಕು.

ತೀರಾ ಸಣ್ಣ ಅಲ್ಪಸಂಖ್ಯಾತರು ಹೊಂದಿದ ದೃಷ್ಟಿಕೋನವನ್ನು ಸೇರಿಸುವುದು ಸ್ವಂತ ಸಂಶೋಧನೆಯಾಗುತ್ತದೆ. ಈ ಬಗೆಗೆ ಜಿಂಬೊ ವೇಲ್ಸ್ ಹೀಗೆ ಹೇಳುತ್ತಾರೆ:

 • ನಿಮ್ಮ ದೃಷ್ಟಿಕೋನವು ಬಹುಸಂಖ್ಯಾತರದೇ ಆಗಿದ್ದರೆ, ಸಾಮಾನ್ಯವಾಗಿ ಒಪ್ಪಿತ ಮೂಲ ಉಲ್ಲೇಖ ಪಠ್ಯಗಳಿಂದ ಉಲ್ಲೇಖಗಳ ಮೂಲಕ ಸಮರ್ಥಿಸಿಕೊಳ್ಳುವುದು ಸುಲಭವಾಗಿರುತ್ತದೆ.
 • ನಿಮ್ಮ ದೃಷ್ಟಿಕೋನವು ಗಮನಾರ್ಹ ಅಲ್ಪಸಂಖ್ಯಾತರದು ಆಗಿದ್ದಲ್ಲಿ, ಪ್ರಮುಖ ಅನುಯಾಯಿಗಳನ್ನು ಹೆಸರಿಸುವುದು ಸುಲಭವಾಗಿರುತ್ತದೆ.
 • ನಿಮ್ಮ ದೃಷ್ಟಿಕೋನವು ಅತ್ಯಂತ ಸಣ್ಣ ಅಲ್ಪಸಂಖ್ಯಾತರದು ಆಗಿದ್ದಲ್ಲಿ — ಅದು ಸರಿ ಇರಲಿ ಅಥವಾ ಇಲ್ಲದಿರಲಿ ಅಥವಾ ನೀವು ಅದನ್ನು ಸಿದ್ಧ ಮಾಡಿರಲಿ ಅಥವಾ ಮಾಡದಿರಲಿ —ಬಹುಶಃ ಕೆಲವು ಪೂರಕ ಲೇಖನದಲ್ಲಿ ಹೊರತುಪಡಿಸಿದರೆ, ಅದು ವಿಕಿಪೀಡಿಯಕ್ಕೆ ಸೇರಿದ್ದಲ್ಲ. ವಿಕಿಪೀಡಿಯ ಮೂಲ ಸಂಶೋಧನೆಗೆ ಸ್ಥಳವಲ್ಲ. [೯]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ಇಲ್ಲಿ "ಇದೆ" ಎಂದರೆ ಸಮುದಾಯದ ಅರ್ಥ- ನಂಬಲರ್ಹ ಆಕರ ಪ್ರಟವಾಗಿರ ಬೇಕು ಮತ್ತು ಅದು ಇನ್ನೂ ಆಸ್ತಿತ್ವದಲ್ಲಿರ ಬೇಕು ಎಂದು ಭಾವಿಸುತ್ತದೆ. ಅದು ಜಗತ್ತಿನಲ್ಲಿ ಯಾವ ಮೂಲೆಯಲ್ಲಿಯಾದರೂ, ಯಾವುದೇ ಭಾಷೆಯಲ್ಲಿಯಾದರೂ ಇರಬಹುದು, ವೆಬ್‌ ಮೂಲಕ ಅದು ನಿಲುಕ ಬಹುದು ಅಥವಾ ನಿಲುಕದಿರ ಬಹುದು - ಈಗ ಸದ್ಯಕ್ಕೆ ಲೇಖನದಲ್ಲಿ ಯಾವುದೇ ಆಕರವನ್ನು ಉಲ್ಲೇಖಿಸದಿದ್ದಾಗಲೂ. ಈ ಅರ್ಥದಲ್ಲಿ ಅಂತಹ ಲೇಖನಗಳೂ ಸಹ, ಎಲ್ಲಿಯವರೆಗೂ ಮಾಹಿತಿಯು ಪ್ರಕಟವಾಗಿದ್ದು, ನಂಬಲರ್ಹವಾಗಿದೆ ಎಂಬ "ನ್ಯಾಯಸಮ್ಮತ ನಿರೀಕ್ಷೆ" ಇರುತ್ತದೆಯೊ ಅಲ್ಲಿಯವರೆಗೂ ಈ ನೀತಿಯ ಅನುಸಾರವಾಗಿಯೇ ಇರುತ್ತವೆ.
 2. This University of Maryland library page ಪ್ರಾಥಮಿಕ, ಎರಡನೆಯ ಮತ್ತು ಮೂರನೆಯ ಆಕರಗಳ ಮಾದರಿ ಉದಾಹರಣೆಗಳನ್ನು ಕೊಡುತ್ತದೆ. ಪಡೆದುದು 07/26/2013.
 3. ಪ್ರಾಥಮಿಕ ಆಕರಗಳ ಬಗೆಗಿನ ಇನ್ನಷ್ಟು ಉದಾಹರಣೆಗಳಲ್ಲಿ ಪ್ರಾಚ್ಯಶಾಸ್ತ್ರ ಹಸ್ತಕೃತಿಗಳು, ಜನಗಣತಿ (ಇತರ ಗಣತಿಗಳ) ಪಲಿತಾಂಶಗಳು, ಬೇಹುಗಾರಿಕೆ ವಿಡಿಯೋ ಅಥವಾ ಪ್ರತಿಲೇಖನಗಳು, ಸಾರ್ವಜನಿಕ ಅಹವಾಲುಗಳು, ತನಿಖಾ ವರದಿಗಳು, ಯಾವುದೇ ದೇಶದಲ್ಲಿನ ಮೊಕ್ಕದ್ದಮೆ/ಖಟ್ಲೆ (ಇದು ಕಟ್ಲೆಯ ಬಗೆಗೆ ಅಥವಾ ಕಟ್ಲೆಯಲ್ಲಿರುವ ಯಾವುದೇ ಪಕ್ಷದ ಬಗೆಗೆ- ಭಾಗಿಯಾದ ಯಾವುದೇ ಪಕ್ಷವು ಮೊಕದ್ದಮೆಯ ಮುಂಚೆ, ಮೊಕದ್ಧಮೆಯ ಕಾಲದಲ್ಲಿ, ನಂತರ ಪ್ರಕಟಿಸಿದ/ಬರೆದ-ದಾಖಲೆಗಳನ್ನು ಒಳಗೊಳ್ಳುತ್ತದೆ ), ಸಂಪಾದಕೀಯ, ಪತ್ರಿಕಾ ಲೇಖನ, ಬ್ಲಾಗ್, ಲಿಖಿತ ಅಭಿಪ್ರಾಯಗಳು, ಅಥವಾ (ಸಂದರ್ಭಾನುಸಾರವಾಗಿ) ಸಂದರ್ಶನಗಳು; ಸರ್ವೆ ಅಥವಾ ಪ್ರಶ್ನಾವಳಿಗಳ ಕೋಷ್ಟಕ ರೂಪದ ಪಲಿತಾಂಶಗಳು; ಮೂಲ ತತ್ತ್ವಶಾಸ್ತ್ರ ಕೃತಿಗಳು; ಧಾರ್ಮಿಕಗ್ರಂಥಗಳು; ಪ್ರಾಚೀನ ಕೃತಿಗಳು- ಅವು ಕಳೆದು ಹೋದ ಬರಹಗಳನ್ನು ಉಲ್ಲೇಖಿಸಿದಾಗಲೂ; ಸಮಾಧಿಯಲ್ಲಿನ ಫಲಕ; ಮತ್ತು ಕವನಗಳು, ಕೈಬರಹ, ಚಿತ್ರಕತೆ, ಕಾದಂಬರಿ, ಚಲನಚಿತ್ರ, ವಿಡಿಯೋ ಮತ್ತು ಟೆಲಿವಿಶನ್ ಪ್ರೋಗ್ರಾಂ ಮುಂತಾದ ಕಲೆ ಮತ್ತು ಕಥಾನಕಗಳನ್ನು ಒಳಗೊಂಡಿವೆ. ಪ್ರಾಥಮಿಕ ಆಕರಗಳ ವ್ಯಾಖ್ಯಾನಕ್ಕೆ:
  • The University of Nevada, Reno Libraries ಪ್ರಾಥಮಿಕ ಆಕರಗಳನ್ನು "ನಿರ್ಧಿಷ್ಟ ಘಟನೆಯ ಒಂದು ಒಳ ದೃಷ್ಟಿಕೋನ" ಎಂದು ವ್ಯಾಖ್ಯಾನಿಸುತ್ತದೆ. ಅವು ಈ ಉದಾಹರಣೆಗಳನ್ನು ಕೊಡುತ್ತವೆ: ಆತ್ಮಚರಿತ್ರೆ, ದಿನಚರಿ, ಇ-ಮೇಲ್, ಸಂದರ್ಶನ, ಪತ್ರ, ನಡಾವಳಿ, ಸುದ್ಧಿ ಚಿತ್ರದ ಅಡಿಬರಹ, ಅಧಿಕಾರ ದಾಖಲೆಗಳು, ಫೋಟೊ ಚಿತ್ರಗಳು, ಕಚ್ಚಾ ಸಂಶೋಧನಾ ದತ್ತಾಂಶ ಮತ್ತು ಭಾಷಣಗಳಂಹ ಮೂಲ ದಾಖಲೆಗಳನ್ನು ಮತ್ತು ಕಲೆ, ನಾಟಕ, ಸಿನೆಮಾ, ಸಂಗೀತ, ಕಾದಂಬರಿ, ಕವನಗಳಂಹ ಸೃಜನಾತ್ಮಕ ರಚನೆಗಳನ್ನು; ಕಟ್ಟಡ, ಬಟ್ಟೆ, ಡಿಎನ್‌ಎ, ಪೀಠೋಪಕರಣ, ಒಡವೆ, ಮಡಕೆಗಳಂತಹ ಸ್ಮಾರಕ ಅಥವಾ ಹಸ್ತಕೃತಿಗಳನ್ನು ಒಳಗೊಳ್ಳುತ್ತವೆ.
  • The University of California, Berkeley library ನೀಡುವ ವ್ಯಾಖ್ಯಾನ: "ಪ್ರಾಥಮಿಕ ಆಕರಗಳು ಸಂಶೋಧಕನಿಗೆ ಒಂದು ಐತಿಹಾಸಿಕ ಘಟನೆ ಯಾ ಕಾಲಮಾನದ ಎಷ್ಟು ಸಾಧ್ಯವೊ ಅಷ್ಟು ಹತ್ತಿರ ಹೋಗಲು ಅನುವು ಮಾಡಿಕೊಡುತ್ತವೆ. ಪ್ರಾಥಮಿಕ ಆಕರಗಳು ಅಧ್ಯಯನ ಮಾಡುತ್ತಿರವ ಕಾಲಮಾನದಲ್ಲಿ ರಚಿತವಾಗಿರುತ್ತವೆ ಅಥವಾ ಆ ಘಟನೆಗಳಲ್ಲಿ ಭಾಗವಹಿಸಿದವರು ನಂತರದ ಕಾಲಮಾನದಲ್ಲಿ ರಚಿತವಾಗಿರುತ್ತವೆ (ಉದಾಹರಣೆಗೆ ನೆನಪಿನ ವೃತ್ತಾಂತಗಳು) ಮತ್ತು ಅವು ಭಾಗಹಿಸುವವನ ಅಥವಾ ನೋಡುಗನ ವೈಯಕ್ತಿಕ ದೃಷ್ಟಿಕೋನವನ್ನು ಬಿಂಬಿಸುತ್ತವೆ."
  • Duke University, Libraries ಹೀಗೆ ವ್ಯಾಖ್ಯಾನಿಸುತ್ತದೆ: "ಪ್ರಾಥಮಿಕ ಆಕರವು ಘಟನೆಯ ನೇರ ವರದಿ. ಪ್ರಾಥಮಿಕ ಆಕರಗಳು ಪತಿಕ್ರೆಯ ಲೇಖನಗಳು, ಪತ್ರಗಳು, ಸಂದರ್ಶನಗಳು, ಕಾನೂನುಗಳು, ಸರಕಾರಿ ಕಮಿಶನ್‌ಗಳ ವರದಿಗಳು ಮತ್ತು ಇತರ ಹಲವು ರೀತಿಯ ದಾಖಲೆಗಳು." ಎನ್ನುತ್ತದೆ.
 4. Any exceptional claim would require exceptional sources.
 5. University of California, Berkeley library "ಎರಡನೆಯ ಆಕರ"ವನ್ನು ಹೀಗೆ ವ್ಯಾಖ್ಯಾನಿಸುತ್ತದೆ "ಒಂದು ಐತಿಹಾಸಿಕ ಘಟನೆ ಅಥವಾ ವಿದ್ಯಮಾನದ ಅರ್ಥವಿವರಿಸುತ್ತದೆ ಅಥವಾ ವಿಶ್ಲೇಷಿಸುತ್ತದೆ. ಇದು ಸಾಮಾನ್ಯವಾಗಿ ಘಟನೆಯಿಂದ ಕನಿಷ್ಟ ಒಂದು ಹೆಜ್ಜೆ ಹಿಂದೆ ಇರುತ್ತದೆ."
 6. The Ithaca College Library ಸಂಶೋಧನಾ ಲೇಖನವನ್ನು ವಿಮರ್ಶಾ ಲೇಖನಕ್ಕೆ ಹೋಲಿಸುತ್ತದೆ. ಎಚ್ಚರ ಎರಡೂ ರೀತಿಯ ಲೇಖನಗಳು ಪ್ರಾಥಮಿಕ ಮತ್ತು ಎರಡನೆ ಆಕರಗಳಾಗಿರ ಬಲ್ಲವು. ಆದರೆ ಸಂಶೋಧನಾ ಲೇಖನಗಳು ಪ್ರಾಥಮಿಕ ಆಕರಗಳಾಗಿ ಹೆಚ್ಚು ಉಪಯುಕ್ತವಾಗ ಬಹುದು ಮತ್ತು ವಿಮರ್ಶಾ ಲೇಖನಗಳು ಎರಡನೆಯ ಆಕರಗಳಾಗಿ ಉಪಯುಕ್ತವಾಗ ಬಲ್ಲವು.
 7. ಪುಸ್ತಕ ವಿಮರ್ಶೆಯು ಬೇರೆಯದೇ ವಿಭಾಗಗಳಲ್ಲಿ ಇರಬಹುದು ಅಥವಾ ಸುದ್ಧಿ ವರದಿಗಳ ನಡುವೆಯೇ ಇರಬಹುದು. ಹಲವು ಪುಸ್ತಕ ವಿಮರ್ಶೆಗಳಲ್ಲಿ ಪುಸ್ತಕವೊಂದು ಕಾಣಿಸಿಕೊಳ್ಳುವುದು ಅದರ ಗಮನಾರ್ಹತೆಯ ಮಾನದಂಡಗಳಲ್ಲಿ ಒಂದು; ಪುಸ್ತಕ ವಿಮರ್ಶೆಯು ಪುಸ್ತಕದ ಬಗೆಗಿನ ಲೇಖನಕ್ಕೆ ಪೂರಕ ಆಕರವಾಗಿ ಬಳಸಲು ಪರಿಗಣಿಸ ಬಹುದು. ಪುಸ್ತಕ ವಿಮರ್ಶೆಗಳನ್ನು ಪುಸ್ತಕ ಪ್ರಸ್ತಾಪಿಸಿದ ವಿಷಯಗಳ ಬಗೆಗಿ ಆಕರವಾಗಿ ಸಾಧ್ಯವಾದಷ್ಟೂ ಬಳಸಬೇಡಿ. ಪುಸ್ತಕ ವಿಮರ್ಶೆಯನ್ನು ಆ ಪುಸ್ತಕ ಪ್ರಸ್ತಾಪಿಸಿದ ವಿಷಯಗಳ ಬಗೆಗೆ ಎರಡನೆ ಆಕಾರವಾಗಿ ಗಣನೆಗೆ ತೆಗದುಕೊಳ್ಳುವುದಕ್ಕಿಂತ ಅದು ಪುಸ್ತಕ, ಲೇಖಕ ಮತ್ತು ಸಂಬಂಧಿತ ಬರವಣಿಗೆಯ ಅಂಶಗಳ ಬಗೆಗಿನ ಸ್ವತಂತ್ರ ವಿಮರ್ಶೆ ಉದ್ಧೇಶ ಹೊಂದಿದೆ ಎಂದು ಭಾವಿಸಲಾಗುತ್ತದೆ. ಪುಸ್ತಕ ವಿಮರ್ಶೆಯ ವ್ಯಾಖ್ಯಾನವನ್ನು ಹೀಗೆ ಮಾಡಲಾಗಿದೆ:
  • Princeton's Wordnet 2011 scholarly definitions repository ಪುಸ್ತಕ ವಿಮರ್ಶೆಯನ್ನು "ಒಂದು ಪುಸ್ತಕದ (ಸಾಮಾನ್ಯವಾಗಿ ಇತ್ತೀಚೆಗೆ ಪ್ರಕಟವಾದ ಪುಸ್ತಕದ) ವಿವೇಚನೆಯುತ ವಿಮರ್ಶೆ." ಎನ್ನುತ್ತದೆ.
  • VirginiaTech University Libraries ಈ ವ್ಯಾಖ್ಯಾನವನ್ನು ನೀಡುತ್ತದೆ: "ಪುಸ್ತಕ ವಿಮರ್ಶೆಯು ಪತ್ರಿಕೆ, ನಿಯತಕಾಲಿಕ ಅಥವಾ ಆ ಪುಸ್ತಕವನ್ನು ವಿವರಿಸುವ ಮತ್ತು ಮೌಲ್ಯಮಾಪನ ಮಾಡುವ ಪಾಂಡಿತ್ಯಪೂರ್ಣ ಕೃತಿ…. ವಿಮರ್ಶೆಗಳು ಸಾಹಿತ್ಯಿಕ ಕ್ರಿಟಿಕ್‌ಗಳಿಗಿಂತ ಭಿನ್ನ. ಕ್ರಿಟಿಕ್‌ಗಳು ಲೇಖಕ ಅಥವಾ ಕಲಾಪ್ರಕಾರದ ಶೈಲಿ ಮತ್ತು ವಸ್ತುಗಳನ್ನು ಪರಿಶೋಧಿಸುತ್ತವೆ." ಎನ್ನುತ್ತದೆ.
 8. ಜಿಮ್ಮಿ ವೇಲ್ಸ್ ಐತಿಹಾಸಿಕ ಸಿದ್ಧಾಂತಗಳ ಸಂಯೋಜನೆಯ ಬಗೆಗೆ ಹೀಗೆ ಹೇಳುತ್ತಾರೆ: "ಕೆಲವರು ವಿಕಿಪೀಡಿಯ ಹೊಸ ಭೌತಶಾಸ್ತ್ರ ಸಿದ್ಧಾಂತಗಳನ್ನು ಸೃಷ್ಟಿಸಬಾರದು ಎಂದು ಪ್ರಯೋಗದ ಪಲಿತಾಂಶಗಳು, ಮುಂತಾದವುಗಳನ್ನು ಉಲ್ಲೇಖಿಸುತ್ತಾರೆ, ಅವುಗಳನ್ನು ಹೊಸತಾಗಿ ಸಂಯೋಜಿಸುವುದು ಏಕೆ ಬೇಡ ಎಂಬುದನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಇದೇ ಏಕೆ ಇತಿಹಾಸಕ್ಕೆ ಅನ್ವಯಿಸಬಾರದು ಎಂದು ಅರ್ಥಮಾಡಿಕೊಳ್ಳುವಲ್ಲಿ ಸೋಲುತ್ತಾರೆ."(Wales, Jimmy. "Original research", December 6, 2004)
 9. Wales, Jimmy. "WikiEN-l roy_q_royce@hotmail.com: --A Request RE a WIKIArticle--", September 29, 2003.