ವಿಕಿಪೀಡಿಯ ಚರ್ಚೆಪುಟ:ಜೀವಂತ ವ್ಯಕ್ತಿಗಳ ವ್ಯಕ್ತಿಚಿತ್ರ
ಗೋಚರ
ಇದರಲ್ಲಿನ ಅಂಶಗಳಲ್ಲಿ ಅನೇಕ ಗೊಂದಲಗಳಿವೆ. ಅರಳಿಕಟ್ಟೆಯಲ್ಲಿ ಈ ಬಗ್ಗೆ ಸದಸ್ಯರು ಆಕ್ಷೇಪವೆತ್ತಿದ್ದಾರೆ. ಈ ವಿಷಯ ಮತ್ತೆ ಚರ್ಚೆಗೊಳಪಡಿಸಿ ರಚಿಸುವುದೊಳ್ಳೆಯದು--Vikas Hegde (ಚರ್ಚೆ) ೦೮:೦೯, ೨೩ ಜೂನ್ ೨೦೧೬ (UTC)
"ಚಲನಚಿತ್ರ ತಾರೆಯರು ಕನಿಷ್ಟ ೫ ಚಲನಚಿತ್ರದಲ್ಲಿ ಗಮನಾರ್ಹ ಪಾತ್ರಗಳಲ್ಲಿ ನಟಿಸಿರಬೇಕು. ಅವರು ಕನಿಷ್ಟ ಎರಡು ರಾಜ್ಯ ಅಥವಾ ರಾಷ್ಟ್ರ ಪ್ರಶಸ್ತಿ ಪಡೆದಿರಬೇಕು ಅಥವಾ ಜನಪ್ರಿಯತೆ ಹೊಂದಿರಬೇಕು."
ವರ್ಷಕ್ಕೆ ೪ ಮಂದಿ ಕಲಾವಿದರು (ನಟ, ನಟಿ, ಪೋಷಕ ನಟ, ನಟಿ) ರಾಜ್ಯ ಪ್ರಶಸ್ತಿ ಪಡೆವರು. ಈ ನಿಯಮದ ಸಡಲಿಕೆ ಅನಿವಾರ್ಯ. ಇಲ್ಲವೆಂದಲ್ಲಿ, ಬಹುತೇಕ ಲೇಖನಗಳು ಅಸಿಂಧುವಾಗುವುವು.
Mallikarjunasj ೦೪:೩೬, ೯ ಜುಲೈ ೨೦೧೮ (UTC)
ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಕನಿಷ್ಠ ಐದು ಬಾರಿ ಆತನ ಬರೆವಣಿಗೆಯ ಸುದ್ದಿಗಳು ಪ್ರಕಟಿತವಾಗಿರಬೇಕು. ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳಲ್ಲಿ ಅಂಕಣ, ಲೇಖನ ಮುಂತಾದ ಪ್ರಕಟಣೆಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿರಬೇಕು/ತೊಡಗಿದ್ದವರಾಗಿರಬೇಕು.
[ಬದಲಾಯಿಸಿ]ಜಿಲ್ಲಾಮಟ್ಟ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪತ್ರಿಕೆಗಳ ಜಾಲತಾಣವೇ ಇರುವುದಿಲ್ಲ.. ಉಲ್ಲೇಖದ ಕೊಂಡಿ ಹಾಕುವ ಬಗೆ ಹೇಗೆ? Gangaasoonu (ಚರ್ಚೆ) ೦೬:೪೮, ೩೧ ಜುಲೈ ೨೦೨೪ (IST)