ವಿಕಿಪೀಡಿಯ:ಉತ್ತಮ ಲೇಖನ
ಗೋಚರ
ಕನ್ನಡ ವಿಕಿಪೀಡಿಯದಲ್ಲಿನ ಲೇಖನಗಳು ಉತ್ತಮ ಲೇಖನಗಳೆಂದು ಪರಿಗಣಿಸಲು ಈ ಕೆಳಗಿನ ಮಾನದಂಡಗಳನ್ನು ಅನುಸರಿಸಬಹುದು.
ಉತ್ತಮ ಲೇಖನಕ್ಕೆ ಆರು ಮಾನದಂಡಗಳು
- ಚೆನ್ನಾಗಿರುವಿಕೆ
- ಪರಿಶೀಲನಾರ್ಹತೆ (ಸ್ವಂತ ಸಂಶೋಧನೆ ಇಲ್ಲದಂತೆ)
- ವಿಸ್ತೃತತೆ
- ತಟಸ್ಥತೆ
- ಸ್ಥಿರತೆ
- ದೃಷ್ಟಾಂತ ಸಹಿತ ವಿವರಣೆ
ಶ್ರೇಷ್ಠ ಲೇಖನದ ಗುಣಲಕ್ಷಣಗಳು
ಗಮನಾರ್ಹತೆ
- ಲೇಖನವು ಗಮನಾರ್ಹವಾದ ವಿಷಯದ ಬಗ್ಗೆ ಇರಬೇಕು[೧]. ಉದಾಹರಣೆಗೆ ಸುಪ್ರಸಿದ್ಧ/ಕುಪ್ರಸಿದ್ಧ ವ್ಯಕ್ತಿಗಳು, ಘಟನೆಗಳು, ಸ್ಥಳಗಳು ಇತ್ಯಾದಿ[೨].
ಉತ್ತಮ ವಿನ್ಯಾಸ
- ಲೇಖನದ ಶೀರ್ಷಿಕೆ ಕನ್ನಡದಲ್ಲಿರಬೇಕು, ಕಾಗುಣಿತ ದೋಷಗಳಿಂದ ಮುಕ್ತವಾಗಿರಬೇಕು ಮತ್ತು ವಿಕಿಪೀಡಿಯದಲ್ಲಿನ ಸಂಪ್ರದಾಯಕ್ಕೆ ತಕ್ಕಂತೆ ಇರಬೇಕು.
- ಲೇಖನವು ವಿಷಯದ ಬಗ್ಗೆ ಸ್ಪಷ್ಟವಾದ ವಿವರದೊಂದಿಗೆ ಆರಂಭವಾಗಬೇಕು. ಆರಂಭಿಕ ಪರಿಚ್ಛೇದವು ವಿಷಯದ ಬಗ್ಗೆ ಅತಿಯಾದ ವಿವರಗಳಿಂದ ಕೂಡಿರದೆ, ಸ್ಪಷ್ಟ ಹಾಗೂ ನಿಖರವಾಗಿ ವಿಷಯದ ಪ್ರಾಮುಖ್ಯತೆ ಮತ್ತು ವಿವರಣೆಯನ್ನು ನೀಡಬೇಕು.
ಚೆನ್ನಾಗಿ ಬರೆದಿರಬೇಕು
- ಸ್ಪಷ್ಟವಾಗಿರಬೇಕು.
- ಸಾಮಾನ್ಯ ಜನರಿಗೆ ಅರ್ಥವಾಗುವಂತಿರಬೇಕು.
- ನಿಖರವಾಗಿ ಮುಚ್ಚುಮರೆಯಿಲ್ಲದಂತೆ ವಿವರವಾಗಿರಬೇಕು.
- ಬರವಣಿಗೆ ಸ್ವಂತದ್ದಾಗಿರಬೇಕು, ಆದರೆ ಬರವಣಿಗೆಯ ವಿಷಯ ಸ್ವಂತ ಸಂಶೋಧನೆಯಾಗಿರಬಾರದು.
- ಲೇಖನವು ಓದಿಸಿಕೊಂಡು ಹೋಗುವಂತಿರಬೇಕು.
- ರೂಢಿಯಲ್ಲಿರುವ ಪಠ್ಯದ ಬರವಣಿಗೆಯ ಪರಿಭಾಷೆಯನ್ನು ಬಳಸಿರಬೇಕು (ಕಾಗುಣಿತ, ವಾಕ್ಯ ಸಂಯೋಜನೆ, ಕಾಲ, ವಿರಾಮಚಿಹ್ನೆಗಳು ಇತ್ಯಾದಿ).
ಮಾಹಿತಿಯುಕ್ತ ಮತ್ತು ಸಂಬದ್ಧವಾದ ಚಿತ್ರಗಳನ್ನು ಹೊಂದಿರಬೇಕು
ದೃಷ್ಟಾಂತ ಕೊಡಲು, ಅಥವಾ ವಿಷಯವನ್ನು ವಿವರಿಸಲು ಚಿತ್ರಗಳನ್ನು ಬಳಸಿರಬೇಕು.
- ಚಿತ್ರವು ಸ್ವಾಮ್ಯತೆಗೊಳಪಟ್ಟಿರಬಾರದು.[೩]
- ಸರಿಯಾದ ಚಿತ್ರಶೀರ್ಷಿಕೆ ಹೊಂದಿರಬೇಕು.
ಅನಾಥ ಲೇಖನವಾಗಿರಬಾರದು
ವಿಕಿಪೀಡಿಯದ ಪರಿಭಾಷೆಯಲ್ಲಿ ಬೇರೆ ಯಾವ ಪುಟದಿಂದಲೂ ಮತ್ತು ಬೇರೆ ಯಾವ ಪುಟಕ್ಕೂ ಕೊಂಡಿಗಳನ್ನು ಹೊಂದಿರದ ಪುಟಗಳನ್ನು ಅನಾಥ ಲೇಖನಗಳೆಂದು ಕರೆಯುತ್ತಾರೆ.
- ವಿಷಯಕ್ಕೆ ಸಂಬಂಧಿಸಿದ ಬೇರೆ ಲೇಖನಗಳಿಗೆ ಕೊಂಡಿ ಹೊಂದಿರಬೇಕು.
- ವಿಷಯಕ್ಕೆ ಸಂಬಂಧಿಸಿದ ಬೇರೆ ಲೇಖನಗಳಿಂದಲೂ ಕೊಂಡಿ ಹೊಂದಿರಬೇಕು.
ಸರಿಯಾದ ಗಾತ್ರ ಹೊಂದಿರಬೇಕು
- ಚುಟುಕು ಲೇಖನವಾಗಿರಬಾರದು. ವಿಷಯದ ಬಗ್ಗೆ ಸಂಪೂರ್ಣ ವಿಷಯವನ್ನು ಹೊಂದಿರಬೇಕು. ಒಂದೇ ವಿಷಯದ ಮಾಹಿತಿಗಾಗಿ ಬೇರೆ ಬೇರೆ ಲೇಖನಗಳನ್ನು ಓದುವಂತಾಗಬಾರದು.
- ಎಲ್ಲ ದೃಷ್ಟಿಕೋನಗಳಿಂದಲೂ ವಿಷಯವನ್ನು ವಿವರಿಸಬೇಕು.
- ವಿಶ್ವಕೋಶಕ್ಕೆ ತಕ್ಕ ಮಾಹಿತಿಯನ್ನು ಮಾತ್ರ ಹೊಂದಿರಬೇಕು.
ತಟಸ್ಥವಾಗಿರಬೇಕು
- ಪೂರ್ವಗ್ರಹಪೀಡಿತವಾಗಿರಬಾರದು.
- ತಟಸ್ಥ ದೃಷ್ಟಿಕೋನ ಹೊಂದಿರಬೇಕು[೪].
- ನಿಷ್ಪಕ್ಷಪಾತವಾಗಿರಬೇಕು.
ದೃಢಪಡಿಸಿಕೊಳ್ಳಬಹುದಾದ ಆಕರ ಹೊಂದಿರಬೇಕು
- ಎಲ್ಲರೂ ನೋಡಬಹುದಾದ, ದೃಢಪಡಿಸಿಕೊಳ್ಳಬಹುದಾದ ಲೇಖನಗಳನ್ನು ಉಲ್ಲೇಖಿಸಿರಬೇಕು.
- ಪ್ರಖ್ಯಾತ ಮತ್ತು ವಿಶ್ವಾಸಾರ್ಹ ಮೂಲಗಳನ್ನು ಹೊಂದಿರಬಹುದು. ಉದಾಹರಣೆಗೆ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು.
- ಕನ್ನಡದಲ್ಲಿ ಆಕರಗಳ ಕೊರತೆಯಿರುವುದರಿಂದ ಬ್ಲಾಗುಗಳನ್ನು ಉಲ್ಲೇಖವಾಗಿ ಬಳಸಬಹುದಾದರೂ, ಅವುಗಳನ್ನು ಉಲ್ಲೇಖಿಸುವುದನ್ನು ಆದಷ್ಟೂ ಕಡಿಮೆ ಮಾಡಬೇಕು.
- ಪರಿಣತಿ ಹೊಂದಿರುವ ವಿಷಯಗಳಿಂದ ಕೂಡಿದ್ದು ತರ್ಕಬದ್ಧವಾಗಿರಬೇಕು.
- ಆಕರಗಳು ಅನಾಥವಾಗಬಾರದು; ಕನ್ನಡದ ಬಗ್ಗೆ ಮಾಹಿತಿ ಕಡಿಮೆಯಿದೆ ಮತ್ತು ಪುಟಗಳು, ಕಳೆದುಹೋಗುವ ಸಾಧ್ಯತೆ ಹೆಚ್ಚು. ಸಾಧ್ಯವಾದಷ್ಟೂ https://web.archive.org/ ನಲ್ಲಿ Save Page Now ಬಳಸಿ, ಪುಟಗಳನ್ನು ಉಳಿಸಿ, ಆ ಕೊಂಡಿಯನ್ನು ಆಕರವಾಗಿ ಬಳಸಿ.
ವರ್ಗೀಕೃತವಾಗಿರಬೇಕು
- ಸುಲಭವಾಗಿ ಹುಡುಕಲು ಮತ್ತು ಗುಂಪುಗೊಳಿಸಲು ಅನುಕೂಲವಾಗುವಂತೆ ಉತ್ತಮವಾಗಿ ವರ್ಗೀಕೃತವಾಗಿರಬೇಕು[೫].
ಅಂತರಭಾಷಾ ಕೊಂಡಿಗಳನ್ನು ಹೊಂದಿರಬೇಕು
- ಸಾಧ್ಯವಾದಲ್ಲಿ ಬೇರೆ ಭಾಷೆಯ ವಿಕಿಪೀಡಿಯಗಳಿಗೆ ಕೊಂಡಿ ಹೊಂದಿರಬೇಕು[೬].
ಪರಿಪೂರ್ಣವಾಗಿರಲೇಬೇಕೆಂದಿಲ್ಲ
- ಪರಿಪೂರ್ಣತೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಹಾಗಾಗಿ ಲೇಖನವು ಎಲ್ಲರ ದೃಷ್ಟಿಯಲ್ಲಿಯೂ ಪರಿಪೂರ್ಣವಾಗಿರಲೇಬೇಕೆಂದಿಲ್ಲ. ಆದರೆ ಸಾಧ್ಯವಾದಷ್ಟೂ ಪರಿಪೂರ್ಣತೆಗೆ ಹತ್ತಿರವಾಗಿರಬೇಕು.
ಇವನ್ನೂ ನೋಡಿ
ಉಲ್ಲೇಖಗಳು
- ↑ "ಗಮನಾರ್ಹತೆ ಬಗ್ಗೆ ಮಾಹಿತಿ". ಆಂಗ್ಲ ವಿಕಿಪೀಡಿಯ.
- ↑ "ವ್ಯಕ್ತಿಗಳ ಗಮನಾರ್ಹತೆ ಬಗ್ಗೆ ಮಾಹಿತಿ". ಆಂಗ್ಲ ವಿಕಿಪೀಡಿಯ.
- ↑ "ಕೃತಿಸ್ವಾಮ್ಯತೆ ಬಗ್ಗೆ ಮಾಹಿತಿ". ಆಂಗ್ಲ ವಿಕಿಪೀಡಿಯ.
- ↑ "ತಟಸ್ಥ ದೃಷ್ಟಿಕೋನದ ಬಗ್ಗೆ ಮಾಹಿತಿ". ಆಂಗ್ಲ ವಿಕಿಪೀಡಿಯ.
- ↑ "ವರ್ಗೀಕರಣದ ಮಾಹಿತಿ". ಆಂಗ್ಲ ವಿಕಿಪೀಡಿಯ.
- ↑ "ವಿಕಿಡೇಟಾ ಬಗ್ಗೆ ಮಾಹಿತಿ". ಆಂಗ್ಲ ವಿಕಿಪೀಡಿಯ.