ವರ್ಗ ಚರ್ಚೆಪುಟ:ಸಾಹಿತಿಗಳು
ಸಾಹಿತಿಗಳ ಭಾವಚಿತ್ರ
[ಬದಲಾಯಿಸಿ]ಸಾಹಿತಿಗಳ ಪುಟಗಳಿಗೆ ಸಾಹಿತಿಗಳ ಭಾವಚಿತ್ರಗಳು ಬೇಕಿವೆ. ನಿಮ್ಮ ಬಳಿ ವಿಕಿಪೀಡಿಯದಲ್ಲಿ ಉಪಯೋಗಿಸಬಲ್ಲಂತ ಚಿತ್ರಗಳು ಇದ್ದಲ್ಲಿ ದಯವಿಟ್ಟು ಸೇರಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 12:46, ೮ April ೨೦೦೬ (UTC)
ಈ category ಹೆಸರನ್ನು "ಸಾಹಿತಿಗಳು' ಬದಲಾಗಿ "ಕನ್ನಡ ಸಾಹಿತ್ಯ" ಎಂದು ಬದಲಿಸಿದರೆ ಸೂಕ್ತ. ಏಕೆಂದರೆ, ದಾಸರು, ಶರಣರುಗಳು ರಚಿಸಿರುವುದು ಕನ್ನಡ ಸಾಹಿತ್ಯವೇ ಆದರೂ ಅವರನ್ನು ಸಾಹಿತಿಗಳು ಎಂದು ಕರೆಯುವುದು ಅಷ್ಟು ಸರಿಯಾಗದು. ಹಾಗೆಯೇ 'ಕನ್ನಡ ಸಾಹಿತ್ಯ' ಎಂದು ಈಗಾಗಲೇ ಇರುವ ವಿಭಾಗವನ್ನು ಅಳಿಸಿ. ಈಗಾಗಲೇ ಅಲ್ಲಿರುವ ಹೆಸರುಗಳನ್ನು ಇಲ್ಲಿಗೆ ರವಾನಿಸಲು ಸಾಧ್ಯವೇ?Sritri
- ದಾಸರನ್ನು, ಶರಣರನ್ನು ಇಲ್ಲಿ ಸೇರಿಸಲೇಬೇಕೆಂದಿಲ್ಲ... ದಾಸರು, ಶರಣರು ಎಂಬ ಪ್ರತ್ಯೇಕ ವರ್ಗ ಮಾಡಿದರೂ ನಡೆಯುತ್ತದೆ. ಇನ್ನು ಎರಡನೆಯ ವಿಷಯ - 'ಸಾಹಿತಿಗಳು' ವರ್ಗವನ್ನು 'ಕನ್ನಡ ಸಾಹಿತ್ಯ' ಎಂದು ಮಾಡಿ ಎನ್ನುವ ಬಗ್ಗೆ - ಸಾಹಿತಿಗಳು ಅನ್ನುವ ವರ್ಗ litterateurs ಎಂಬ ವರ್ಗಕ್ಕೆ analogous ಆದ ವರ್ಗ. ಅರ್ಥದ ಮಟ್ಟಿಗೆ "ಸಾಹಿತಿಗಳು" ಮತ್ತು "ಕನ್ನಡ ಸಾಹಿತ್ಯ" (Litterateurs vs Kannada Literature) ಎನ್ನುವ ವರ್ಗಗಳನ್ನು ಹೋಲಿಸಿ ನೋಡಿ, ಗೊಂದಲ ನಿವಾರಣೆಯಾಗುತ್ತದೆ. :)
- ಕನ್ನಡ ವಿಕಿಪೀಡಿಯದಲ್ಲಿ ಸಾಹಿತ್ಯ ಎಂದು ಉದ್ದೇಶಿಸಿದಾಗ ಅದು ಕನ್ನಡ ಸಾಹಿತ್ಯವೇ ಆಗಿರಬೇಕು, ಬೇರೆ ಭಾಷೆಯದ್ದಾದರೆ ಅದಕ್ಕೆ ಭಾಷೆಯ ಹೆಸರು prefix ಆಗಿ ಸೇರಿಸಿ (ಉದಾ: ಬೆಂಗಾಲಿ ಸಾಹಿತ್ಯ) ಎಂದು ಉದ್ದೇಶಿಸಿ ಬರೆಯಬೇಕು ಎಂಬ ದೃಷ್ಟಿಯಿಂದ ಕನ್ನಡ ಸಾಹಿತ್ಯ ಹಾಗೂ ಕನ್ನಡದ ಸಾಹಿತಿಗಳು ಬದಲು ಸಾಹಿತಿಗಳು ಮತ್ತು ಸಾಹಿತ್ಯ ಎಂದು ಉಪಯೋಗಿಸಲಾಗಿದೆ. ಲೇಖನಗಳಲ್ಲೂ ಹೀಗೇ ಉಪಯೋಗವಾಗುವುದರಿಂದ ಭಾಷಾ ವಿಕಿಪೀಡಿಯದ ಮಟ್ಟಿಗೆ ಇದೊಂದನ್ನ ಪಾಲಿಸಿದರೇ ಉತ್ತಮ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೧೩, ೧೯ June ೨೦೦೬ (UTC)
ಸಾಹಿತಿಗಳ ಹೆಸರುಗಳು ರಿಪೀಟ ಆಗಿರುವದು ಕಂಡುಬರುತ್ತಿದೆ.ಉದಾ: ತಿರುಮಲಾಂಬ ಹಾಗು ನಂಜನಗೂಡು ತಿರುಮಲಾಂಬಾ, ಶಂಕರ ಮೊಕಾಶಿ ಪುಣೇಕರ ಹಾಗು ಶಂಕರ್ ಮೊಕಾಶಿ ಪುಣೇಕರ್. ಈ ಹೆಸರುಗಳ ಲಿಂಕ್ follow ಮಾಡಿದಾಗ ಪ್ರತಿ ಹೆಸರಿನ ಕೆಳಗಡೆ ಲೇಖನಗಳಿವೆ. ಈ ಸಮಸ್ಯೆಗೆ ಕಾರಣವೆಂದರೆ ಹೆಸರುಗಳನ್ನು ಬೇರ ರೀತಿಯಾಗಿ ಬರೆದಾಗ ಗಣಕಯಂತ್ರವು ಅದನ್ನು ಗುರುತಿಸದಿರುವದು. ಹೀಗಾಗಿ ಓರ್ವ ಸಾಹಿತಿಯ (ಅಥವಾ ವ್ಯಕ್ತಿಯ) ಹೆಸರಿನಲ್ಲಿ ಲೇಖನವಿಲ್ಲವೆಂಬ ತಪ್ಪು ಕಲ್ಪನೆಯಿಂದ ಮತ್ತೊಂದು ಲೇಖನ ಬರೆಯುವದು.
ಎರಡನೆಯದಾಗಿ ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ spelling ಅನ್ನು ಬೇರೆಯಾಗಿ ಬರೆಯುತ್ತಾರೆ. ಉದಾಹರಣೆಗೆ ಉತ್ತರ ಕರ್ನಾಟಕದ ಸುನಂದಾ ಬೆಳಗಾವಕರ ದಕ್ಷಿಣ ಭಾಗದಲ್ಲಿ ಸುನಂದ ಬೆಳಗಾಂಕರ್ ಆಗುತ್ತಾಳೆ. ಯಾವುದು ಸರಿ ಎನ್ನುವ ತಾತ್ವಿಕ ಚರ್ಚೆಗೆ ಬೀಳದೆ ಇದಕ್ಕೆ ಪರಿಹಾರ ಕಂಡು ಹಿಡಿಯುವದಾದರೆ ಆಯಾ ವ್ಯಕ್ತಿ ಸ್ವತಃ ತನ್ನ ಹೆಸರನ್ನು ಹೇಗೆ ಬರೆಯುತ್ತಾನೆ ಎನ್ನುವದನ್ನೆ ಅನುಸರಿಸುವದು. ಉದಾಹರಣೆಗೆ ಶಂ.ಬಾ.ಜೋಶಿಯವರು ತಮ್ಮ ಹೆಸರನ್ನು ಜೋಷಿ ಎಂದು ಬರೆಯುವದಿಲ್ಲ; ಗಿರೀಶ ಕಾರ್ನಾಡರು ತಮ್ಮ ಹೆಸರನ್ನು ಗಿರೀಶ್ ಕಾರ್ನಾಡ್ ಎಂದು ಬರೆಯುವದಿಲ್ಲ. ಅದರಂತೆ ತಿರುಮಲಾಂಬ ತಮ್ಮ ಹೆಸರನ್ನು ತಿರುಮಲಾಂಬಾ ಎಂದು ಬರೆಯುವದಿಲ್ಲ.
ಇದಕ್ಕೆ ನೀವೇನೆನ್ನುತ್ತೀರಿ?--Sunaath ೧೩:೪೩, ೩೦ June ೨೦೦೬ (UTC)ಸುನಾಥ
- ಎರಡು ವಿಷಯಗಳು. ೧.ಲೇಖನದ ಹೆಸರು ೨.ಲೇಖನದದೊಳಗೆ ಹೆಸರು
- ೧. ಈ ಸಮಸ್ಯೆಗೆ ಪರಿಹಾರ, ಸೂಕ್ತವಾದ 'ರೀಡೈರೆಕ್ಟ್' ಗಳನ್ನು ಕೊಡುವುದು. ಆಗ ವಿಷಯಗಳನ್ನು, ಲೇಖನಗಳನ್ನು ಹುಡುಕುವವರಿಗೆ ಸುಲಭ. ಹಾಗೆಯೇ ಹೊಸ ಲೇಖನ ಪ್ರಾರಂಭಿಸುವವರಿಗೂ ಸುಲಭ.
- ಉದಾ: 'ಗಿರೀಶ ಕಾರ್ನಾಡ' ಮತ್ತು 'ಗಿರೀಶ್ ಕಾರ್ನಾಡ್' ಇವೆರಡೂ ಕಾರ್ನಾಡರ ಲೇಖನಕ್ಕೆ ಕರೆದೊಯ್ಯಬೇಕು. ಹಾಗೆಯೇ, 'ತಿರುಮಲಾಂಬ' ಮತ್ತು 'ನಂಜನಗೂಡು ತಿರುಮಲಾಂಬ', 'ನಂಜನಗೂಡು ತಿರುಮಲಾಂಬಾ' ಇವೆಲ್ಲವೂ ಒಂದೇ ಲೇಖನಕ್ಕೆ reach ಆಗಬೇಕು.
- ೨. ಇನ್ನು ಲೇಖನದಲ್ಲಿ ಹೆಸರನ್ನು ಹೇಗೆ ಬರೆಯಬೇಕು ಎನ್ನುವುದಕ್ಕೆ, ಸುನಾಥರು ಕೊಟ್ಟಿರುವ ಸಲಹೆ ಚೆನ್ನಾಗಿದೆ! ಆಯಾ ವ್ಯಕ್ತಿಯು ತಮ್ಮ ಹೆಸರನ್ನು ಹೇಗೆ ಬರೆಯುವರೋ ಹಾಗೆ ನಾವು ಲೇಖನದ ಒಳಗೆ ಬಳಸುವುದು ಉಚಿತ. ಉದಾ: 'ಶಂ.ಬಾ.ಜೋಶಿ' ಲೇಖನದಲ್ಲಿ ಅವರ ಹೆಸರನ್ನು ಶಂ.ಬಾ.ಜೋಶಿ ಎಂದು ಬರೆಯುವುದು (ಶಂ.ಬಾ.ಜೋಷಿ ಎಂದು ಬರೆಯದೆ). - ಮನ | Mana ೧೫:೩೫, ೩೦ June ೨೦೦೬ (UTC)