ವರುಣ್ ಸಿಂಗ್ ಭಾಟೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವರುಣ್ ಸಿಂಗ್ ಭಾಟೀ
ವೈಯುಕ್ತಿಕ ಮಾಹಿತಿ
ರಾಷ್ರೀಯತೆಭಾರತೀಯ (Indian)
ಜನನ (1995-02-13) ೧೩ ಫೆಬ್ರವರಿ ೧೯೯೫ (ವಯಸ್ಸು ೨೯)
ನಿವಾಸಭೃಹತ್‍ ನೊಯಿಡ (Greater Noida), ಉತ್ತರ ಪ್ರದೇಶ, ಭಾರತ
Sport
ದೇಶ ಭಾರತ
ಕ್ರೀಡೆPara Athletics (ವಿಕಲ ಕ್ರೀಡಾಪಟು)
ಸ್ಪರ್ಧೆಗಳು(ಗಳು)ಎತ್ತರ ಜಿಗಿತ T42

ಉನ್ನತ ಕ್ರೀಡಾಪಟು[ಬದಲಾಯಿಸಿ]

  • ವರುಣ್ ಸಿಂಗ್ ಭಾಟೀ (ಹಿಂದಿ:वरुण सिंह भाटी)ಯವರು ಪ್ಯಾರಾ ಎತ್ತರ ಜಿಗಿತಗಾರರು ಮತ್ತು ತಮ್ಮ ಭಾರತದ ಒಬ್ಬ ಉನ್ನತ ಕ್ರೀಡಾಪಟು/ಅಥ್ಲೆಟ್. ಅವರ ಅಂಗ ವಿಕಲತೆ ಹ್ಯಾಂಡಿಕ್ಯಾಪ್ ಸ್ವರೂಪ (ಒಂದು ಕಾಲು ನ್ಯೂನತೆ)ವನ್ನು ಪೋಲಿಯೋಮೈಲಿಟಿಸ್ ಕರೆಯಲಾಗುತ್ತದೆ. ಅವರು ಪ್ರಸ್ತುತ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತಿ ಪಡೆಯುತ್ತಿರುವರು. ಅವರಿಗೆ ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮ ಮೂಲಕ ಗೊ ಸ್ಪೋಟ್ರ್ಸ್ಫೌಂಡೇಶನ್ ಬೆಂಬಲ ಕೊಡುತ್ತಿದೆ. ಇವರು ಗ್ರೇಟರ್ ನೋಯ್ಡಾ ನಿವಾಸಿ ಮತ್ತು ಶ್ರೀ ಹೇಮ್ ಸಿಂಗ್ ಭಾಟೀ ಯವರ ಮಗ. ಗಣಿತದ ಬಿ.ಎಸ್.ಸಿ.(ಆನರ್ಸ್) ವಿದ್ಯಾರ್ಥಿ. ವರುಣ್ ಅವರ ಅಂತರ್ಗತ ಪ್ರತಿಭೆಯನ್ನು ಅಲ್ಲಿಯ ಸೇಂಟ್ ಜೋಸೆಫ್ಸ್ ಸ್ಕೂಲ್, ತನ್ನ ತವರು ನೆಲದ ಶಾಲೆಯಲ್ಲಿ ಗರುತಿಸಿದರು. ನಂತರ ಅವರನ್ನು ಗ್ರೇಟರ್ ನೋಯ್ಡಾದಲ್ಲಿ ಶ್ರೀ ಸತ್ಯನಾರಾಯಣ, ಮಾಜಿ ರಾಷ್ಟ್ರೀಯ ಕ್ರೀಡಾಪಟು ಗುರುತಿಸಿದಾಗ. ಇವರ ಪ್ರತಿಭೆ ಮತ್ತಷ್ಟು ಬೆಳೆಯಿತು. ವರುಣ್ ಪ್ರಸ್ತುತ ಪ್ಯಾರಾ ಚಾಂಪಿಯನ್ಸ್ ಕಾರ್ಯಕ್ರಮ ಮೂಲಕ ಗೊಸ್ಪೊಟ್ರ್ಸ್ ಫೌಂಡೇಶನ್ ಬೆಂಬಲದಿಂದ ಕ್ರೀಡೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ.[೧]

ವೃತ್ತಿಜೀವನ[ಬದಲಾಯಿಸಿ]

  • ಲಂಡನ್ ಪ್ಯಾರಾಲಿಂಪಿಕ್ಸ್ 2012 ರಲ್ಲಿ ಅವರು 1.60ಮೀ ಎತ್ತರ ಜಿಗಿvದ ಪ್ರದರ್ಶನ ದಿಂದ 'ಎ’ದರ್ಜೆಯ ಅರ್ಹತೆ /ಮಾರ್ಕ್ ಗುರುತಿಸಲ್ಪಟ್ಟಿತು. 2012 ರಲ್ಲಿ ಬಂದಿತು. ಭಾರತಕ್ಕೆ ಲಭ್ಯವಿರುವ ಸೀಮಿತ ಸ್ಲಾಟ್ಗಳು ಕಾರಣ ಅವರು ಅಲ್ಲಿ ಪ್ರತಭೆ ತೋರಿಸಲಾಗಲಿಲ್ಲ. ಇಂಚಿಯಾನ್ಗೆ 2014 ಏಷ್ಯನ್ ಪ್ಯಾರಾ ಆಟಗಳಲ್ಲಿ, (ಕೊರಿಯಾ) ಭಾರತೀಯ ತಂಡದಲ್ಲಿದ್ದರು. ಅಲ್ಲಿ ಅವರು 5ನೇ ಸ್ಥಾನಕ್ಕೆ ಬಂದರು. ಅದೇ ವರ್ಷ ಅವರು 2014 ಚೀನಾ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2015 ರಲ್ಲಿ ಅವರು ದೋಹಾದಲ್ಲಿ 2015 ಪ್ಯಾರಾ ವಿಶ್ವ ಚಾಂಪಿಯನ್ಷಿಪ್ (ಕತಾರ್) ಮತ್ತೆ 5ನೇ ಸ್ಥಾನಕ್ಕೆ ಬಂದರು. ಆದರೆ ಅವರು ಹೆಚ್.ಎನ್.ಗಿರೀಶ್ ಮತ್ತು ಶರದ್ ಕುಮಾರ್ ಅವರಿಗಿಂತ ಉತ್ತಮ ಸ್ಥಾನ ಪಡೆದರು.. ಭಾರತದ ಪ್ರಮುಖ ಪ್ಯಾರಾ ಹೆಚ್ಚಿನ ಜಿಗಿತಗಾರರಲ್ಲಿ ತಮ್ಮ ಖ್ಯಾತಿಯನ್ನು ಹೆಚ್ಚಿಸಿರುವ ವರುಣ್ 2016 ಐಪಿಸಿ ಅಥ್ಲೆಟಿಕ್ಸ್ ಏಷ್ಯಾ ಓಷಿಯಾನಿಯಾ ದಲ್ಲಿ ಅವರು ಹೊಸ ಏಷ್ಯನ್ ದಾಖಲೆ ನಿರ್ಮಿಸಿದರು ಹಾಗೂ ಒಂದು ಚಿನ್ನದ ¥ಗಳಿಸಿದರು. ಅಲ್ಲಿ ಚಾಂಪಿಯನ್ಷಿಪ್ನಲ್ಲಿ 1.82 ಮೀ [4] ಜಿಗಿತವನ್ನು ದಾಖಲಿಸಿದರು. ಈ ಪ್ರಯತ್ನವು 2015 ವಿಶ್ವ ಚಾಂಪಿಯನ್ಷಿಪ್ನಲ್ಲಿ ಚಿನ್ನದ ವಿಜೇತ ಜಿಗಿತಗಾರನ ಜಿಗಿತಕ್ಕಿಂತ ಉತ್ತಮವಾಗಿತ್ತು. ಅವರು ರಿಯೋ ಡಿ ಜನೈರೋ, ಬ್ರೆಜಿಲ್ 2016 ಬೇಸಿಗೆ ಪ್ಯಾರಾಲಿಂಪಿಕ್ ಗೇಮ್ಸ್ ಕಂಚಿನ ಪದಕ ಗೆದ್ದಿದ್ದಾರೆ.[೨][೩]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. http://www.gosportsfoundation.in/
  2. "ಆರ್ಕೈವ್ ನಕಲು". Archived from the original on 2016-09-11. Retrieved 2016-09-13.
  3. http://www.prajavani.net/news/article/2016/09/10/436999.html