ವನುವಾಟು
ವನುವಾಟು ಗಣರಾಜ್ಯ ರಿಪಬ್ಲಿಕ್ ಬ್ಲಾಂಗ್ ವನುವಾಟು ರಿಪಬ್ಲಿಕ್ ದಿ ವನುವಾಟು | |
|---|---|
| Motto: "ಲಾಂಗ್ ಗಾಡ್ ಯುಮಿ ಸ್ಟನಪ್" (ನಾವು ದೇವರಲ್ಲಿ) | |
| Anthem: ಯುಮಿ, ಯುಮಿ, ಯುಮಿ | |
![]() | |
| ರಾಜಧಾನಿ and ಅತೀದೊಡ್ಡ ನಗರ | ಪೋರ್ಟ್ ವಿಲಾ |
| Official languages | ಬಿಸ್ಲಾಮಾ, ಇಂಗ್ಲಿಷ್, ಫ್ರೆಂಚ್ |
| Demonym(s) | ವನುವಾಟುವನ್ |
| ಸರ್ಕಾರ | ಗಣರಾಜ್ಯ |
| ಕಲ್ಕೋಟ್ ಮಟಸ್ಕೆಲೆಕೇಲೆ | |
• ಪ್ರಧಾನಿ | ಹಾಮ್ ಲಿನಿ |
| ಸ್ವಾತಂತ್ರ್ಯ ಫ್ರಾನ್ಸ್ ಮತ್ತು ಯು.ಕೆ.ಯಿಂದ | |
• ದಿನಾಂಕ | ಜುಲೈ ೩೦ 1980 |
• Water (%) | ಅಗಣನೀಯ |
| ಜನಸಂಖ್ಯೆ | |
• July 2006 estimate | 209,000 (183ನೆಯದು) |
| GDP (PPP) | 2005 estimate |
• Total | $726 ಮಿಲಿಯನ್ (175ನೆಯದು) |
• Per capita | $3,346 (121ನೆಯದು) |
| HDI (2004) | Error: Invalid HDI value · 119ನೆಯದು |
| Currency | ವನುವಾಟು ವಾಟು (VUV) |
| Time zone | UTC+11 |
| Calling code | 678 |
| Internet TLD | .vu |
ವನುವಾಟು ಗಣರಾಜ್ಯವು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಈ ದ್ವೀಪಗುಚ್ಛವು ಆಸ್ಟ್ರೇಲಿಯಾದ ಈಶಾನ್ಯಕ್ಕೆ ೧೭೫೦ ಕಿ.ಮೀ. ದೂರದಲ್ಲಿದೆ. ೧೨೧೮೯ ಚ.ಕಿ.ಮೀ. ವಿಸ್ತೀರ್ಣವುಳ್ಳ ವನುವಾಟುವಿನ ಜನಸಂಖ್ಯೆ ಸುಮಾರು ೨೨೧೦೦೦. ರಾಷ್ಟ್ರದ ರಾಜಧಾನಿ ಪೋರ್ಟ್ ವಿಲಾ. ೧೮ನೆಯ ಶತಮಾನದ ಕೊನೆಯಲ್ಲಿ ವನುವಾಟುವಿನಲ್ಲಿ ಬ್ರಿಟಿಷರು ನೆಲೆಸತೊಡಗಿದರು. ೧೮೮೭ರಲ್ಲಿ ವನುವಾಟು ಆಂಗ್ಲರ ಹಾಗೂ ಫ್ರೆಂಚರ ಜಂಟಿ ನೌಕಾಪಡೆಗಳ ಆಡಳಿತಕ್ಕೆ ಒಳಪಟ್ಟಿತು. ೧೯೮೦ರಲ್ಲಿ ಪೂರ್ಣ ಸ್ವಾತಂತ್ರ್ಯ ಪಡೆದ ವನುವಾಟು ಗಣರಾಜ್ಯವಾಯಿತು. ವನುವಾಟು ೮೩ ದ್ವೀಪಗಳ ಸಮೂಹ. ಇವುಗಳ ಪೈಕಿ ೨ರ ಮೇಲೆ ಫ್ರಾನ್ಸ್ ಸ್ವಾಮಿತ್ವದ ದಾವೆ ಹೂಡಿದೆ. ಹೆಚ್ಚಿನ ಎಲ್ಲಾ ದ್ವೀಪಗಳೂ ಪರ್ವತಪ್ರಾಂತ್ಯ. ಉಷ್ಣವಲಯದ ಅಥವಾ ಸಮಶೀತೋಷ್ಣವಲಯದ ಹವಾಮಾನವನ್ನು ವನುವಾಟು ಹೊಂದಿದೆ. ದೇಶದಲ್ಲಿ ಲೊಪೇವಿ ಸೇರಿದಂತೆ ಹಲವಾರು ಸಕ್ರಿಯ ಜ್ವಾಲಾಮುಖಿಗಳಿವೆ. ಜ್ವಾಲಾಮುಖಿಗಳ ಸ್ಫೋಟಗಳು ವನುವಾಟುವಿಗೆ ನಿರಂತರ ಆತಂಕದ ವಿಷಯ. ಇತ್ತೀಚಿನ ಸ್ಫೋಟ ೧೯೪೫ರಲ್ಲಿ ಸಂಭವಿಸಿತು. ವನುವಾಟು ಹೆಚ್ಚು ಮಳೆ ಬೀಳುವ ವಲಯದಲ್ಲಿದೆ. ಕೃಷಿ ರಾಷ್ಟ್ರದ ಪ್ರಮುಖ ಉದ್ಯೋಗ. ನಾಡಿನ ೬೫% ಜನತೆ ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಉಳಿದಂತೆ ಮೀನುಗಾರಿಕೆಯೂ ವ್ಯಾಪಕ. ರಫ್ತಾಗುವ ಸರಕುಗಳು ಬಹಳ ಕಡಿಮೆ. ರಾಷ್ಟ್ರವು ಜ್ವಾಲಾಮುಖಿಸ್ಫೋಟ, ಭೂಕಂಪ ಮತ್ತು ಸುನಾಮಿಗಳಂತಹ ನೈಸರ್ಗಿಕ ಪ್ರಕೋಪಗಳಿಗೆ ತುತ್ತಾಗುತ್ತಲೇ ಇದೆ. ದ್ವೀಪಗಳ ನಡುವೆ ಅಗಾಧ ಅಂತರವಿರುವುದು. ಈ ಕಾರಣಗಳಿಂದಾಗಿ ಆರ್ಥಿಕ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಮೆಲಾನೇಷ್ಯನ್ ಜನಾಂಗದವರು ಹೆಚ್ಚಿರುವ ವನುವಾಟುವಿನ ಮುಖ್ಯ ಭಾಷೆಗಳು ಇಂಗ್ಲಿಷ್, ಫ್ರೆಂಚ್ ಮತ್ತು ಬಿಸ್ಲಾಮಾ. ಇವಲ್ಲದೆ ನೂರಕ್ಕೂ ಹೆಚ್ಚು ಬುಡಕಟ್ಟು ಭಾಷೆಗಳೂ ನುಡಿಯಲ್ಪಡುತ್ತಿವೆ. ಬಹುಸಂಖ್ಯಾಕರು ಕ್ರಿಶ್ಚಿಯನ್ ಮತಾವಲಂಬಿಗಳು.
