ವಂದೇ ಮಾತರಮ್

ವಿಕಿಪೀಡಿಯ ಇಂದ
Jump to navigation Jump to search

ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿರು ರಚಿಸಿದ ವಂದೇ ಮಾತರಂ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ,ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ 'ಜನಗಣ ಮನ' ಕೃತಿಗೆ ಆ ಪಟ್ಟ ದೊರಕಿತು. ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ "ಆನಂದ ಮಠ" ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.

ವಂದೇಮಾತರಂನ ಖ್ಯಾತ ಭಾಗ[ಬದಲಾಯಿಸಿ]

ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!


ಸಪ್ತಕೋಟಿ ಕಂಠ ಕಲಕಲ ನಿನಾದ ಕರಾಲೇ,
ಸಪ್ತಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ?
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

ಸಂಪೂರ್ಣ ಗೀತೆ[ಬದಲಾಯಿಸಿ]

ವಂದೇ ಮಾತರಂ

ವಂದೇ ಮಾತರಂ!
ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ!
ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ ಫುಲ್ಲ ಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ, ಸುಖದಾಂ ವರದಾಂ ಮಾತರಂ!


ಕೋಟಿ ಕೋಟಿ ಕಂಠ ಕಲಕಲ ನಿನಾದ ಕರಾಲೇ
ಕೋಟಿ ಕೋಟಿ ಭುಜೈರ್ದೃತಕರಕರಾವಲೇ ಕೇ ಬಲೇ ಮಾ ತುಮಿ ಅಬಲೇ
ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!


ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದೀ ತುಮಿ ಮರ್ಮ ತ್ವಂ ಹೀ ಪ್ರಾಣಹ ಶರೀರಾ ಬಹುತೇ
ತುಮೀ ಮಾ ಶಕ್ತಿ ಹೃದಯೇ, ತುಮೀ ಮಾ ಭಕ್ತಿ ತೊಮಾರಿ ಪ್ರತಿಮಾ ಗಡಿ ಮಂದಿರ ಮಂದಿರೇ


ತ್ವಂ ಹೀ ದುರ್ಗಾ ದಶ ಪ್ರಹಾರಣ ಧಾರಿಣೀ ಕಮಲಾ ಕಮಲಾದಳ ವಿಹಾರಿಣೀ
ವಾಣೀ ವಿದ್ಯಾ ದಾಯಿನೀ ನಮಾಮಿ ತ್ವಂ ನಮಾಮಿ ಕಮಲಂ ಅಮಲಂ ಅತುಲಂ
ಸುಜಲಾಂ ಸುಫಲಾಂ ಮಾತರಂ ವಂದೇ ಮಾತರಂ!

ಶ್ಯಾಮಲಂ ಸರಳಂ ಸುಶ್ಮಿತಂ ಭೂಷಿತಾಂ ಧರಣೀಂ ಭರಣೀಂ ಮಾತರಂ!

ಉಲ್ಲೇಖಗಳು[ಬದಲಾಯಿಸಿ]

ರಾಷ್ಟ್ರಗಾನ

ಬಾಹ್ಯ ಸಂಪರ್ಕಗಳು[ಬದಲಾಯಿಸಿ]