ಲೋಕನಾಯಕ (ಇಸ್ಲಾಂ ಧರ್ಮ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಮೊಹಮ್ಮದ್(ಸ) ಅವರನ್ನು ಮುಸ್ಲಿಮರು 'ಲೋಕನಾಯಕ' ಎಂದೂ ಕರೆಯುತ್ತಾರೆ. ಹಿಂದಿ ಭಾಷೆಯಲ್ಲಿ ಅದನ್ನು ಜಗತ್ಗುರು ಎಂದೂ ಇಂಗ್ಲೀಷ್ನಲ್ಲಿ ಲೀಡರ್ ಆಫ್ ದಿ ವಲ್ಡ ಎಂದೂ ಅಥೈಸಬಹುದು. ಮೇಲ್ನೋಟಕ್ಕೆ ಇದೊಂದು ಮಹಾ ಬಿರುದೆಂದು ತೋರುತ್ತದೆ. ಆದರೆ ಈ ಬಿರುದನ್ನು ಯಾವ ಅತ್ಯುನ್ನತ ವ್ಯಕ್ತಿಗೆ ನೀಡಲಾಗಿದೆಯೋ ಆ ವ್ಯಕ್ತಿಯ ಸಾಧನೆಗಳನ್ನು ನೋಡುವಾಗ ಅವರನ್ನು ಲೊಕನಾಯಕನೆಂದು ಸಂಬೋಧಿಸಿದರೆ ಅದೇನೂ ಅತಿಶಯೋಕ್ತಿಯಾಗಲಾರದು. ಬದಲಾಗಿ ಅವರನ್ನು ನಿಜವಾಗಿಯೂ ಅದಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಯುತ್ತದೆ. ಒಬ್ಬ ವ್ಯಕ್ತಿಯನ್ನು ಲೋಕದ ನಾಯಕ ಎನ್ನ ಬೇಕಾದರೆ ನಾಲ್ಕು ಶರತ್ತುಗಳಿವೆ.

ನಾಲ್ಕು ಶರತ್ತುಗಳು[ಬದಲಾಯಿಸಿ]

೧. ಅವನು ವಿಶಿಷ್ಟ ದೇಶ, ಜನಾಂಗ ಅಥವಾ ವರ್ಗದ ಒಳಿತಿಗಾಗಿರದೆ, ಸಮಸ್ತ ಲೋಕದ ಜನರ ಒಳಿತಿಗಾಗಿ ಕೆಲಸ ಮಾಡಿರಬೇಕು. ಒಬ್ಬ ದೇಶ ಭಕ್ತ ಅಥವ ಜನಾಂಗಪ್ರೀಯ ನಾಯಕನನ್ನು ಅವನು ತನ್ನವರಿಗಾಗಿ ಬಹಳ ದುಡಿದಿದ್ದಾನೆ ಎಂಬ ಕಾರಕ್ಕಾಗಿ ನೀವು ಎಷ್ಟು ಬೇಕಾದರೂ ಗೌರವಿಸಬಹುದು. ಆದರೆ ನೀವು ಅವನ ದೇಶದ ಅಥವಾ ಅವನ ಜನಾಂಗದವರಾಗಿಲ್ಲದ ಕಾರಣ ಅವನು ನಿಮ್ಮ ನಾಯಕನಾಗಲಾರ. ಒಬ್ಬ ವ್ಯಕ್ತಿಯ ದೇಶಭಕ್ತಿ, ಸಹಾನುಭೂತಿ ಮತ್ತು ಸಾಧನೆಗಳೆಲ್ಲವೂ ಚೀನ ಅಥವಾ ಸ್ಪೆಯಿನ್ಗೆ ಮಾತ್ರ ಸೀಮಿತವಾಗಿದ್ದರೆ ಭಾರತೀಯನಾದ ನಾನೇಕೆ ಅವನನ್ನು ನನ್ನ ನಾಯಕನೆಂದು ಒಪ್ಪಬೇಕು? ತದ್ವಿರುಧವಾಗಿ ಅವನು ತನ್ನ ಜನಾಂಗಕ್ಕೆ ಇತರ ಜನಾಂಗಗಳಿಗಿಂತ ಮೇಲ್ಮೆ ನೀಡಹೊರಟರೆ ಮತ್ತು ಇತರರನ್ನು ಅಧೋಗತಿಗೆ ತಳ್ಳಿ ತನ್ನ ಜನಾಂಗವನ್ನೇ ಮೇಲೆತ್ತ ಬಯಸಿದರೆ ನಾನು ಅವನನ್ನು ದ್ವೇಷಿಸಲೇ ಬೇಕಾಗುತ್ತದೆ. ಲೋಕದ ಎಲ್ಲಾ ಜನರು ಕೇವಲ ಒಂದೇ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳ ಬಹುದು. ಅದೇನೆಂದರೆ ಅವನ ದೃಷ್ಟಿಯಲ್ಲಿ ಸಕಲ ಜನಾಂಗಗಳು ಎಲ್ಲಾ ಮಾನವರು ಸಾಮಾನರಾಗಿರಬೇಕು. ಅವನು ಎಲ್ಲರ ಸಮಾನ ಹಿತಚಿಂತಕನಾಗಿರಬೇಕು. ಮತ್ತು ತನ್ನ ಹಿತಚಿಂತನೆಯಲ್ಲಿ ಯಾರ ಬಗ್ಗೆಯೂ ತಾರತಮ್ಯ ತೋರಿಸುವವನಾಗಿರಬಾರದು.

೨. ಒಬ್ಬನನ್ನು ಲೋಕದ ನಾಯಕನೆನ್ನಬೇಕಾದರೆ ಅವನು ಸಮಸ್ತ ಲೋಕದ ಜನರ ಮಾರ್ಗದರ್ಶನಕ್ಕೆ ಬೇಕಾದಂತಹ ತತ್ವಗಳನ್ನು ಲೋಕಕ್ಕೆ ನೀಡಿರಬೇಕು ಮತ್ತು ಮಾನವ ಜೀವನದ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಬೇಕಾದ ಪರಿಹಾರ ಆ ತತ್ವಗಳಲ್ಲಿರಬೇಕು. ನಾಯಕ ಎಂದರೆ ಮಾರ್ಗದರ್ಶಕ. ಒಳಿತು ಮತ್ತು ಯಶಸ್ಸಿನ ಮಾರ್ಗ ತೋರಿಸಲಿಕ್ಕಾಗಿಯೇ ನಾಯಕನ ಅಗತ್ಯವಿರುತ್ತದೆ. ಆದುದರಿಂದ ಸಮಸ್ತ ಲೋಕದ ಜನರ ಯಸಸ್ಸಿಗೆ ಬೇಕಾದ ಮಾರ್ಗವನ್ನು ತೋರಿಸಬಲ್ಲವನೇ ಲೋಕದ ನಾಯಕನಾಗಲು ಅರ್ಹನಾಗಬಲ್ಲನು.

೩. ಅವನ ಮಾರ್ಗದರ್ಶನವು ಯಾವುದೇ ವಿಶಿಷ್ಟ ಕಾಲಾವಧಿಗಾಗಿರದೆ ಎಲ್ಲಾ ಕಾಲಗಳಿಗೆ, ಎಲ್ಲಾ ಪರಿಸ್ಥಿತಿಗಳಿಗೆ ಸಮಾನ ಉಪಯುಕ್ತವೂ ಸೂಕ್ತವೂ ಅನುಸರಣೆಗೆ ಯೋಗ್ಯವೂ ಆಗಿರ ಬೇಕು. ಒಬ್ಬನ ಮಾರ್ಗದರ್ಶನವು ಒಂದು ಕಾಲಕ್ಕೆ ಯೋಗ್ಯವೂ ಇನ್ನೊಂದು ಕಾಲಕ್ಕೆ ಅಯೊಗ್ಯವೂ ಆಗಿದ್ದರೆ ಅವನನ್ನು ಲೋಕದ ನಾಯಕನೆನ್ನುವಂತಿಲ್ಲ. ಈ ಲೋಕವು ಉಳಿದಿರುವ ತನಕ ಯಾರ ಮಾರ್ಗದರ್ಶನವೂ ಯೋಗ್ಯವಾಗಿರುವುದೋ ಅವನೇ ಲೋಕದ ನಾಯಕನಾಗಬಲ್ಲ.

೪. ಈ ನಾಯಕನು ಕೇವಲ ಜೀವನದ ತತ್ವಗಳನ್ನು ಲೋಕಕ್ಕೆ ಕೊಟ್ಟು ಸುಮ್ಮನಾಗಿರದೆ ತಾನು ಪ್ರತಿಪಾದಿಸಿದ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ತೋರಿಸುವುದರ ಜೊತೆಗೆ ಅದರ ಅದಾರದಲ್ಲಿ ಒಂದು ಜೀವಂತ ಸಮಾಜವನ್ನು ಕಟ್ಟಿ ತೋರಿಸಬೇಕು. ಕೇವಲ ತತ್ವಗಳನ್ನು ಪ್ರತಿಪಾದಿಸುವವನು ಹೆಚ್ಚೆಂದರೆ ಒಬ್ಬ ಚಿಂತಕನಾಗಬಲ್ಲ. ಆದರೆ ಅವನು ನಾಯಕನಾಗುವಂತಿಲ್ಲ. ನಾಯಕನಾಗಬೇಕಾದರೆ ಅವನು ತನ್ನ ತತ್ವಗಳನ್ನು ಕಾರ್ಯತಃ ಮಾಡಿ ತೋರಿಸಬೇಕು.

ನಾಲ್ಕು ಶರತ್ತುಗಳ ನಿಮರ್ಶೆ[ಬದಲಾಯಿಸಿ]

ಇನ್ನು ನಾವು 'ಲೋಕನಾಯಕ'ಎಂದು ಹೇಳುವ ವ್ಯಕ್ತಿಯಲ್ಲಿ ಪ್ರಸ್ತುತ ನಾಲ್ಕು ಶರತ್ತುಗಳು ಎಷ್ಟರ ಮಟ್ಟಿಗೆ ಇವೆಯೆಂಬುದನ್ನು ಪರಿಶೀಲಿಸೋಣ.

ಮೊಟ್ಟ ಮೊದಲನೆಯ ಶರತ್ತನ್ನು ನೋಡಿರಿ. ಮೊಹಮ್ಮದ್ (ಸ) ಅವರ ಜೀವನವನ್ನು ನೀವು ಅಧ್ಯಯನ ಮಾಡಿದರೆ, ಅವರ ಜೀವನವು ಓರ್ವ ಜನಾಂಗೀಯವಾದಿಯ ಅಥವಾ ದೇಶ ಭಕ್ತನ ಜೀವನವಾಗಿರದೆ, ಒಬ್ಬ ಮಾನವ ಪ್ರೇಮಿಯ ಮತ್ತು ಒಂದು ಸರ್ವಲೌಕಿಕ ಸಿದಾಂತವನ್ನು ಹೊಂದಿರುವ ವ್ಯಕ್ತಿಯ ಜೀವನವಾಗಿದೆಯೆಂದು ಒಂದೇ ನೋಟದಲ್ಲಿ ತಿಳಿದುಕೊಳ್ಳುವಿರಿ. ಅವರ ದೃಷ್ಟಿಯಲ್ಲಿ ಮಾನವರೆಲ್ಲರೂ ಸಮಾನರಾಗಿದ್ದರು. ಯಾವುದೇ ಒಂದು ಕುಟುಂಭದ, ಒಂದು ವರ್ಗದ, ಒಂದು ಜನಾಂಗದ, ಒಂದು ಜನ ವಿಭಾಗದ ಅಥವಾ ಒಂದು ದೇಶದ ವಿಶೇಷ ಸ್ವಾರ್ಥ ಲಾಭದೊಂದಿಗೆ ಅವರಿಗೆ ಆಸಕ್ತಿ ಇರಲಿಲ್ಲ. ಬಡವ-ಬಲ್ಲಿದ, ಉಚ್ಚ-ನೀಚ, ಕರಿಯ-ಬಿಳಿಯ, ಅರಬ-ಅರಬೇತರ, ಪೌವರ್ಾತ್ಯ-ಪಶ್ಚಿಮಾತ್ಯ, ಸಬಯನ-ಆರ್ಯ ಎಂಬ ಯಾವುದೇ ವ್ಯತ್ಯಾಸವಿಲ್ಲದೆ ಅವರೆಲ್ಲರೂ ಒಂದೇ ಮಾನವ ಕುಲದ ಸದಸ್ಯರು ಎಂಬ ನೆಲೆಯಲ್ಲಿ ಅವರನ್ನು ನೋಡುತ್ತಿದ್ದರು. ಅವರ ಭಾಯಿಯಿಂದ ಇಡೀ ಜೀವನದಲ್ಲಿ ಅವರಿಗೆ ಮಾನವ ಸಮಾಜ ಯಾವುದೇ ಒಂದು ವರ್ಗದ ಹಿತಾಸಕ್ತಿಯೊಂದಿಗೆ ಹೆಚ್ಚಿನ ಒಲವಿದೆ ಎಂಬ ಅನುಮಾನ ಬರುವಂತಹ ಒಂದೇ ಒಂದು ಶಬ್ದವಾಗಲಿ, ಮಾತಾಗಲಿ ಹೊರಟಿಲ್ಲ ಅಥವಾ ಅವರ ಇಡೀ ಜೀವನದಲ್ಲಿ ಅವರಿಂದ ಅಂತಹ ಯಾವುದೇ ಒಂದು ಕೆಲಸ ನಡೆದಿಲ್ಲ. ಆದುದರಿಂದಲೇ ಅವರ ಜೀವನಾವಧಿಯಲ್ಲೆ ಅರಬರು ಅವರ ಆಪ್ತ ಸಂಗಾತಿಗಳಾದಂತೆಯೇ ಇಥಿಯೋಪಿಯನ್ನರು, ಇರಾನಿಯರು, ರೊಮನರು, ಈಜಿಪ್ಟ್ನವರು ಮತ್ತು ಇಸ್ರೇಲಿಗಳು ಕೂಡ ಅವರ ಸಂಗಾತಿಗಳಾದರು. ಅವರ ನಿಧನ ನಂತರ ಭೂಮುಖದ ಮೆಲಿರುವ ನಾಲ್ಕು ಮೂಲೆಯಲ್ಲಿ ವ್ಯಾಪಿಸಿರುವ ಪ್ರತಿಯೊಂದು ಪೀಳಿಗೆ ಮತ್ತು ಜನಾಂಗದವರು ಅವರ ಜನಾಂಗವಾಗಿರುವ ಅರಬರಂತೆಯೇ ಅವರನ್ನು ತಮ್ಮ ಮಾರ್ಗದರ್ಶಕರೆಂದು ಅಂಗೀಕರಿಸಿದರು. ಇಂದು ನೀವು ಒಬ್ಬ ಭಾರತೀಯನ ಭಾಯಿಯಿಂದ ಶತಮಾನಗಳ ಹಿಂದೆ ಅರೇಬಿಯಾದಲ್ಲಿ ಹುಟ್ಟಿದಂತಹ ಒಬ್ಬ ವ್ಯಕ್ತಿಯ ಗುಣಗಾನ ಕೇಳುವುದು ಕೂಡ ಈ ಅಪ್ಪಟ ಮಾನವೀಯತೆಯ ಪವಾಡವೇ ಆಗಿದೆ.

ಇನ್ನು ಎರಡು ಮತ್ತು ಮೂರನೆ ಶರತ್ತುಗಳನ್ನು ಒಟ್ಟಾಗಿ ಪರಿಶೀಲಿಸಿ ನೋಡೋಣ. ಮೊಹಮ್ಮದ್(ಸ) ಅವರ ವಿವಿಧ ಜನಾಂಗಗಳ ಮತ್ತು ವಿವಿಧ ದೇಶಗಳ ತಾತ್ಕಾಲಿಕ ಮತ್ತು ಪಾದೇಶಿಕ ಸಮಸ್ಯೆಗಳ ಚಚರ್ೆಯಲ್ಲಿ ತಮ್ಮ ಸಮಯವನ್ನು ಹಾಳು ಮಾಡಲಿಲ್ಲ. ಬದಲಾಗಿ ಈ ಲೋಕದಲ್ಲಿ ಅವರು ತಮ್ಮ ಸಂಪೂರ್ಣ ಶಕ್ತಿಯನ್ನು ಅಖಿಲ ಮಾನವರ ಚಿಕ್ಕ ಪುಟ್ಟ ಸಮಸ್ಯೆಗಳು ಸ್ವಯಂ ಬಗೆಹರಿಯಬಲ್ಲಂತಹ ಮಾನವರ ಅತೀ ದೊಡ್ಡ ಸಮಸ್ಯೆಯೊಂದನ್ನು ಬಗೆಹರಿಸಲು ವಿನಿಯೋಗಿಸಿದರು. ಆ ದೊಡ್ಡ ಸಮಸ್ಯೆಯೆನಾಗಿತ್ತು ಎಂಬುವುದೇ ಮುಖ್ಯ ಪ್ರಶ್ನೆ. ಅದು ವಿಶ್ವ ವ್ಯವಸ್ಥೆಯು ಯಥಾರ್ಥದಲ್ಲಿ ಯಾವ ತತ್ವ ಸಿದ್ಧಾಂತಗಳ ಆದಾರದಲ್ಲಿ ಮೇಲೆ ನಿಂತಿದೆಯೊ ಅದೇ ತತ್ವ ಸಿದ್ಧಾಂತಗಳ ಆಧಾರದಲ್ಲಿ ಮಾನವ ಜೀವನ ವ್ಯವಸ್ಥೆಯು ನೆಲಗೊಳ್ಳಬೇಕು ಎಂಬುದೇ ಆಗಿತ್ತು. ಏಕೆಂದರೆ ಮಾನವನು ಈ ವಿಶ್ವದ ಒಂದು ಅಂಗವೇ ಆಗಿದ್ದಾನೆ. ಒಂದು ಅಂಗದ ಚಲನೆಯು ಇಡೀ ವ್ಯವಸ್ಥೆಯ ಚಲನೆಗೆ ವಿರುಧವಾಗಿದ್ದರೆ ಅದುವೇ ಕೆಡುಕಿನ ಮೂಲ ಕಾರಣವಾಗುತ್ತದೆ. ಇದನ್ನು ನೀವು ಚೆನ್ನಾಗಿ ತಿಳಿಯಬಯಸುವುದಾದರೆ ಅದಕ್ಕೆ ಒಂದು ಸುಲಭ ಉಪಾಯವಿದೆ. ನೀವು ನಿಮ್ಮ ದೃಷ್ಟಿಯನ್ನು ಕಾಲ ಮತ್ತು ಪ್ರಾದೇಶಿಕ ಗಡಿಗಳಿಂದ ಮುಕ್ತಗೊಳಿಸಿರಿ ಮತ್ತು ಆದಿಯಿಂದ ಈವರೆಗಿನ ಹಾಗೂ ಮುಂದಿನ ಅನಂತ ಕಾಲದವರೆಗೆ ವಾಸಿಸುವ ಮಾನವರು ನಿಮ್ಮ ಮುಂದಿದ್ದಾರೆ ಎಂಬಂತೆ ನೀವು ಈ ಭೂಮಿಯ ಮೇಲೆ ದೃಷ್ಟಿ ಹಾಯಿಸಿರಿ. ಆನಂತರ ಮಾನವ ಜೀವನದಲ್ಲಿ ಉಂಟಾಗಿರುವ ಅಥವಾ ಉಂಟಾಗಲು ಸಾಧ್ಯವಿರುವ ಕೆಡುಕಿನ ಯಾವುದೇ ರೂಪವಿದ್ದರೂ ಅದರ ಮೂಲವೆಲ್ಲಿದೆ ಅಥವಾ ಎಲ್ಲಿರಬಹುದು ಎಂಬುವುದನ್ನು ನೋಡಿರಿ. ಈ ಪ್ರಶ್ನೆಯ ಮೇಲೆ ನೀವು ಎಷ್ಟು ಚಿಂತನೆ ನಡೆಸಿದರು ಎಷ್ಟು ಹುಡುಕಾಟ ನಡೆಸಿದರು ಎಷ್ಟು ಸಂಶೋಧನೆ ನಡೆಸಿದರು ಮಾನವನು ದೇವನ ವಿರುಧ ಮಾಡಿರುವ ಬಂಡಾಯವೇ ಸಕಲ ಕೆಡುಕುಗಳ ಮೂಲ ಎಂಬ ಒಂದೇ ಉತ್ತರ ನಿಮಗೆ ದೊರೆಯುವುದು. ಏಕೆಂದರೆ ದೇವನಿಗೆದುರು ಬಂಡೆದ್ದು ಮಾನವನಿಗೆ ಎರಡರಲ್ಲೊಂದು ಮಾರ್ಗವನ್ನವಲಂಬಿಸದಿರಲು ಸಾಧ್ಯವಿಲ್ಲ. ಒಂದೋ ಅವನು ತನ್ನನ್ನು ನಿರಂಕುಶನೆಂದೂ ಹೊಣೆರಹಿತನೆಂದೂ ಬಗೆದು ಮನಬಂದಂತೆ ವತರ್ಿಸತೊಡಗುತ್ತಾನೆ. ಇದು ಅವನನ್ನು ಅಕ್ರಮಿಯಾಗಿ ಮಾಡುತ್ತದೆ ಅಥವಾ ಅವನು ದೇವನ ಹೊರತು ಇತರರ ಆಜ್ಞೆಗಳಿಗೆ ಶಿರಬಾಗತೊಡಗುತ್ತಾನೆ ಇದರಿಂದಾಗಿ ಭೂಮಿಯ ಮೇಲೆ ಕ್ಷೊಭೆಯು ವಿವಿಧ ರೀತಿಯಲ್ಲಿ ಉಂಟಾಗುತ್ತದೆ.

ಈಗ ಯೊಚಿಸಬೇಕಾದ ಅಂಶವೇನೆಂದರೆ ಮಾನವನು ದೇವನ ವಿರುದ ಬಂಡಾಯ ಮಾಡಿದರೆ ಈ ಕೆಡುಕು ಹೇಗೆ ಹುಟ್ಟಿಕೊಳ್ಳುತ್ತವೆ ಎಂಬುದು. ಹಾಗೆ ಬಂಡಾಯ ಹೂಡುವುದು ವಾಸ್ತವೀಕತೆಗೆ ವಿರುಧವಾಗಿರುವುದರಿಂದ ಅದರ ಪರಿಣಾಮವು ಕೆಟ್ಟದಾಗಿರುವುದು ಎಂಬುವುದೇ ಅದರ ಸ್ಪಷ್ಟ ಹಾಗೂ ನೇರ ಉತ್ತರ. ಈ ಸಂಪೂರ್ಣ ವಿಶ್ವವು ದೇವನ ಸಾಮ್ರಾಜ್ಯವಾಗಿದೆ. ಭೂಮಿ, ಸೂರ್ಯ, ಚಂದ್ರ, ಗಾಳಿ, ನೀರು, ಬೆಳಕು ಎಲ್ಲವೂ ದೇವನ ಸೊತ್ತಾಗಿದೆ. ಮಾನವನ ನೆಲೆಯು ಈ ಸಾಮ್ರಾಜ್ಯದಲ್ಲಿ ಓರ್ವ ಹುಟ್ಟು ದಾಸನದ್ದಾಗಿ. ಈ ಸಂಪೂರ್ಣ ವಿಶ್ವ ಸಾಮ್ರಾಜ್ಯವು ಯಾವ ವ್ಯವಸ್ಥೆಯಲ್ಲಿ ನೆಲೆ ನಿಂತು, ಚಲಿಸುತ್ತಿದೆಯೊ ವಿಶ್ವ ವ್ಯವಸ್ಥೆಯ ಒಂದಂಗವಾಗಿರುವ ಮಾನವನು ಅದಕ್ಕೆ ವಿರುಧವಾಗಿ ನಡೆದರೆ ಅವನ ಈ ವರ್ತನೆಯಿಂದ ವಿನಾಶಕಾರಿ ಪರಿಣಾಮವನ್ನೇ ಉಂಟು ಮಾಡಬಲ್ಲುದು. ತನ್ನ ಮೇಲೆ ಯಾರು ಪರಮಾಧಿಕಾರಿ ಇಲ್ಲ, ತಾನು ಯಾರ ಮುಂದೆಯು ಜವಾಬ್ದಾರನಲ್ಲ ಎಂದು ಅವನು ಭಾವಿಸಿದರೆ ಅದು ವಸ್ತುಸ್ಥಿತಿಗೆ ವಿರುಧವಾಗಿರುವುದು. ಆದುದರಿಂದ ಅವನು ತನ್ನನ್ನು ನಿರಂಕುಶ ಎಂದು ಭಾವಿಸಿ ಜವಾಬ್ದಾರಿ ರಹಿತವಾದ ವಿಧಾನಗಳಿಂದ ಕೆಲಸ ಮಾಡಿದರೆ ಮತ್ತು ತನ್ನ ಜೀವನಕ್ಕೆ ಬೇಕಾದ ನೀತಿ-ನಿಯಮಗಳನ್ನು ಸ್ವಯಂ ರಚಿಸಿಕೊಂಡರೆ ಪರಿಣಾಮ ಕೆಟ್ಟದಾಗುವುದು. ಅದೇ ರೀತಿಯಲ್ಲಿ ಅವನು ದೇವನ ಹೊರತು ಇನ್ನಾರನ್ನಾದರೂ ಪರಮಾಧಿಕಾರಿ ಎಂದು ಬಗೆದು ಅವರ ಭಯ ಅಥವ ನಿರೀಕ್ಷೆಯನ್ನು ಹೃದಯದಲ್ಲಿರಿಸಿಕೊಂಡರೆ ಹಾಗೂ ಅವರ ಒಡೆತನದ ಮುಂದೆ ತಲೆಬಾಗಿದರೆ ಅದು ವಾಸ್ತವೀಕತೆಯ ವಿರುಧವಾಗಿರುವುದು. ಏಕೆಂದರೆ ಯಥಾರ್ಥದಲ್ಲಿ ಈ ಸಂಪೂರ್ಣ ವಿಶ್ವದಲ್ಲಿ ದೇವನ ಹೊರತು ಇನ್ನಾರಿಗೂ ಈ ಸ್ಥಾನ ಪ್ರಾಪ್ತವಿಲ್ಲ. ಆದುದರಿಂದ ಅದರ ಪರಿಣಾಮವು ಕೆಟ್ಟದಾಗಿಯೇ ಗೋಚರಿಸುವುದು. ಸರಿಯಾದ ಪರಿಣಾಮ ಗೋಚರವಾಗ ಬೇಕಾದರೆ ಅದಕ್ಕೆ ಒಂದೇ ಮಾರ್ಗವಿರುವುದು. ಅದೇನೆಂದರೆ ಭೂಮಿ- ಆಕಾಶಗಳಲ್ಲಿ ಯಾರ ನೈಜ ಆಡಳಿತವಿರುವುದೋ ಮಾನವನು ಅವನ ಮುಂದೆ ತಲೆ ಬಾಗುವುದು, ತನ್ನ ಅಹಂಭಾವ ಮತ್ತು ಮೊಂಡುತನವನ್ನು ಅವನ ಮುಂದೆ ಅಪರ್ಿಸಿಬಿಡುವುದು, ತನ್ನ ದಾಸ್ಯ-ಅನುಸರಣೆಯನ್ನು ಅವನಿಗಾಗಿ ಮೀಸಲಿಡುವುದು ಮತ್ತು ತನ್ನ ಜೀವನಕ್ಕೆ ಬೇಕಾದ ನಿಯಮ- ನಿಬಂಧನೆಗಳನ್ನು ತಾನೆ ರಚಿಸುವ ಅಥವಾ ಇತರರಿಂದ ಮಾಡಿಸುವ ಬದಲು ಅವನಿಂದಲೇ ಪಡೆಯುವುದು.

ಇದುವೇ ಮುಹಮ್ಮದ್(ಸ) ಅವರು ಮಾನವ ಜೀವನದ ಮೂಲಭೂತ ಸುಧಾರಣೆಗಾಗಿ ಸಮಪರ್ಿಸಿದ ಯೋಜನೆ. ಇದು ಪೂರ್ವ-ಪಶ್ಚಿಮಗಳ ಗಡಿಗಳನ್ನು ಮೀರಿದೆ. ಭೂಮುಖದ ಮೇಲೆ ಎಲ್ಲೆಲ್ಲಾ ಜನರು ವಾಸಿಸುತ್ತಿರುವರೋ ಅವರ ಜೀವನ ಕೆಟ್ಟುಹೋದ ನಿನ್ನೆಯನ್ನು ಈ ಒಂದು ಸುಧಾರಣಾ ಯೋಜನೆ ಮಾತ್ರ ಸರಿಪಡಿಸಬಲ್ಲುದು. ಇದು ಭೂತ-ಭವಿಷ್ಯ ಕಾಲಗಳ ಬಂಧನದಿಂದಲೂ ಮುಕ್ತವಾಗಿದೆ. ಒಂದುವರೆ ಸಾವಿರ ವರ್ಷಗಳ ಹಿಂದೆ ಇದು ಎಷ್ಟು ಸರಿಯೂ ಸೂಕ್ತವೂ ಆಗಿತ್ತೋ ಇಂದಿಗೂ ಹಾಗೆಯೇ ಇದೆ. ಇನ್ನೊಂದು ಹತ್ತು ಸಾವಿರ ವರ್ಷಗಳ ಬಳಿಕವೂ ಹಾಗೆಯೇ ಇರುವುದು.

ಇನ್ನು ಕೊನೆಯ ಶರತ್ತನ್ನು ನೋಡೋಣ. ಮೋಹಮ್ಮದ್(ಸ) ಅವರು ಲೋಕಕ್ಕೆ ಕೇವಲ ಕಾಲ್ಪನಿಕ ನಕಾಶೆ ನೀಡಿದ್ದಲ್ಲ, ಬದಲಾಗಿ ಆ ನಕಾಶೆಗೆ ಅನುಗುಣವಾದಂತಹ ಒಂದು ಜೀವಂತ ಸಮಾಜವನ್ನು ನಿಮರ್ಿಸಿ ತೋರಿಸಿದರು ಎಂಬುದು ಒಂದು ಐತಿಹಾಸಿಕ ಸತ್ಯವಾಗಿದೆ. ಅವರು 23 ವರ್ಷಗಳ ಅಲ್ಪಾವಧಿಯಲ್ಲಿ ಲಕ್ಷೊಪಲಕ್ಷ ಮಾನವರನ್ನು ದೇವನ ಆಡಳಿತದ ಮುಂದೆ ವಿಧೇಯರಾಗಿ ತಲೆ ಬಾಗುವಂತೆ ಮಾಡಿದರು. ಅವರಿಂದ ಅವರ ಅಹಂಭಾವವನ್ನು ತೊಡೆದು ಹಾಕಿದರು. ದೇವನ ಹೊರತು ಇತರರ ದಾಸ್ಯದಿಂದ ಅವರನ್ನು ವಿಮೋಚಿಸಿದರು ತರುವಾಯ ಅವರನ್ನು ಒಂದುಗೂಡಿಸಿ, ಅಪ್ಪಟ ದೇವನ ದಾಸ್ಯ-ಅನುಸರಣೆಯ ಆಧಾರದಲ್ಲಿ ಒಂದು ಹೊಸ ನೈತಿಕ ವ್ಯವಸ್ಥೆ, ಹೊಸ ನಾಗರಿಕ, ಹೊಸ ಆಥರ್ಿಕ ವ್ಯವಸ್ಥೆ ಮತ್ತು ಹೊಸ ಆಡಳಿತ ವ್ಯವಸ್ಥೆಯನ್ನು ರಚಿಸಿದರು. ಮತ್ತು ಸಮಸ್ತ ಲೋಕದ ಮುಂದೆ ಅದನ್ನು ಕಾರ್ಯತಃ ಪ್ರದಶರ್ಿಸಿ, ತಾನೂ ಪ್ರತಿಪಾದಿಸುವ ತತ್ವಗಳಿಂದ ಎಂತಹ ಉದಾತ್ತ ಜೀವನ ನಿಮರ್ಾಣವಾಗುತ್ತದೆ ಮತ್ತು ಇತರ ತತ್ವಗಳಲ್ಲಾಧರಿತ ಜೀವನಕ್ಕೆ ವಿರುಧವಾಗಿ ಇದು ಎಷ್ಟು ಉತ್ತಮ, ಎಷ್ಟು ಪಾವನ ಮತ್ತು ಎಷ್ಟು ಪರಿಶುದವಾಗಿದೆ ಎಂಬುದನ್ನು ತೋರಿಸಿಕೊಟ್ಟರು.

ಈ ಎಲ್ಲಾ ಸಾಧನೆಗಳಿಂದಾಗಿ ನಾವು ಮೊಹಮ್ಮದ್(ಸ) ಅವರನ್ನು ಲೊಕನಾಯಕನೆಂದು ಕರೆಯುತ್ತೇವೆ. ಅವರ ಕಾರ್ಯವು ಯಾವುದೇ ಒಂದು ಜನಾಂಗಕ್ಕಾಗಿರದೆ ಸಂಪೂರ್ಣ ಮಾನವ ಕುಲಕ್ಕಾಗಿತ್ತು. ಇದು ಸಕಲ ಮಾನವರ ಒಟ್ಟು ವಾರಿಸು ಹಕ್ಕಾಗಿದ್ದು, ಇದರಲ್ಲಿ ಒಬ್ಬರ ಹಕ್ಕು ಇನ್ನೊಬ್ಬರಿಗಿಂತ ಹೆಚ್ಚೋ ಕಡಿಮೆಯೋ ಇಲ್ಲ. ಯಾರು ಬೇಕಾದರೂ ಈ ವಾರಿಸು ಹಕ್ಕಿನ ಪ್ರಯೋಜನ ಪಡೆಯಬಹುದು.ಈ ವಿಷಯದಲ್ಲಿ ಯಾರಾದರೂ ಪಕ್ಷಪಾತ ತೋರುವುದಾದರೆ ಅದಕ್ಕೇನಾದರೂ ಕಾರಣವಿರ ಬಹುದೆಂದು ನನಗನಿಸುವುದಿಲ್ಲ. (ಮೌಲಾನ ಸಯ್ಯದ್ ಅಬುಲ್ ಅಲಾ ಮೌದೂದಿ)