ವಿಷಯಕ್ಕೆ ಹೋಗು

ಸಂಭೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಲೈಂಗಿಕ ಕ್ರಿಯೆ ಇಂದ ಪುನರ್ನಿರ್ದೇಶಿತ)
ಗಂಡು ಹೆಣ್ಣನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡು, ಅವಳ ಮೇಲೆ ಮಲಗಿ, ತನ್ನ ಶಿಶ್ನವನ್ನು ಅವಳ ಯೋನಿಯೊಳಕ್ಕೆ ತುರುಕಿಸುವ ಕಾಮಭಂಗಿಯನ್ನು ಮಿಷನರಿ ಭಂಗಿಯೆಂದು ಕರೆಯುತ್ತಾರೆ. ಇಲ್ಲಿರುವ ಚಿತ್ರದಲ್ಲಿ ಮಿಷನರಿ ಭಂಗಿಯಲ್ಲಿ ಭೋಗಿಸುತ್ತಿರುವ ಜೋಡಿಯೊಂದನ್ನು ಕಾಣಬಹುದು. ಚಿತ್ರಕಾರ: ಎಡ್ವರ್ಡ್ ಹೆನ್ರಿ

ಲೈಂಗಿಕ ಸಂಭೋಗ ಎಂಬುದು ಗಂಡಿನ ಶಿಶ್ನವನ್ನು ಹೆಣ್ಣಿನ ಯೋನಿಯೊಳಕ್ಕೆ ತುರುಕಿಸುವ ಮತ್ತು ಹಿಂತೆಗೆದುಕೊಳ್ಳುವ ದೈಹಿಕ ಕ್ರಿಯೆ. ಹೆಣ್ಣಿನ ದೇಹಕ್ಕೆ ಗಂಡು ತನ್ನ ಶಿಶ್ನವನ್ನು ತುರುಕಿಸುವುದುದನ್ನು ವೇಧನ ಎಂದೂ ಕರೆಯಬಹುದು. ಸಾಮಾನ್ಯವಾಗಿ ಲೈಂಗಿಕ ಆನಂದಕ್ಕಾಗಿ ಸಂಭೋಗ ನಡೆಸುವುದಿದೆ ಮತ್ತು ಸಂತಾನೋತ್ಪತ್ತಿಗಾಗಿಯೂ ಸಂಭೋಗ ನಡೆಸಲಾಗುತ್ತದೆ. ನಿಜವಾಗಿ ನೋಡಿದರೆ ಗಂಡು ಮತ್ತು ಹೆಣ್ಣು ಕೂಡಿ ಸೃಷ್ಟಿಕಾರ್ಯದಲ್ಲಿ ತೊಡಗುವುದು ಲೈಂಗಿಕ ಕ್ರಿಯೆಯ ಮೂಲಕವೇ ಮತ್ತು ಮಗುವಿಗೆ ಜನ್ಮ ಕೊಡಲು ಸಾಧ್ಯವಾಗುವುದು ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ. ಗಂಡಿನಿಂದ ಶರಿರದಿಂದ ಹೆಣ್ಣಿನ ಶರೀರಕ್ಕೆ ವೀರ್ಯ ವರ್ಗಾವಣೆಯನ್ನು ಸಕ್ರಿಯಗೊಳಿಸಲು ಮಾನವರು ಸೇರಿದಂತೆ ಅನೇಕ ಜೀವಿಗಳಲ್ಲಿ ಲೈಂಗಿಕ ಸಂಭೋಗವು ಸಂತಾನೋತ್ಪತ್ತಿಯ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಲೈಂಗಿಕ ಸಂಭೋಗದ ಸಮಯದಲ್ಲಿ ಸಂಗಾತಿಗಳಿಬ್ಬರೂ ಸಾಮಾನ್ಯವಾಗಿ ಆಹ್ಲಾದಕರ ಸಂವೇದನೆಗಳನ್ನು ಅನುಭವಿಸುತ್ತಾರೆ ಮತ್ತು ಪರಾಕಾಷ್ಠೆಯನ್ನು ತಲುಪುತ್ತಾರೆ. ಈ ಪ್ರಕ್ರಿಯೆ ಪ್ರಚೋದನೆ, ಶಿಶ್ನದ ನಿಮಿರುವಿಕೆ, ಯೋನಿಯ ತೇವಗೊಳ್ಳುವಿಕೆ ಮತ್ತು ಚಲನೆಗಳನ್ನು ಒಳಗೊಂಡಿದೆ. ಗಂಡಹೆಂಡಿರ ಭಾವನಾತ್ಮಕ ಬಂಧಗಳನ್ನು ಬಲಪಡಿಸಲಿಕ್ಕೆ ಮತ್ತು ಆನಂದದಾಯಕ ಜೀವನವನ್ನು ಪರಸ್ಪರ ಹಂಚಿಕೊಳ್ಳಲಿಕ್ಕೆ ಲೈಂಗಿಕತೆ ಉತ್ತಮ ಮಾರ್ಗವೆಂದು ಪರಿಗಣಿಸಲ್ಪಟ್ಟಿದೆ.

ಗಂಡು ಹೆಣ್ಣುಗಳು ಸಂಗಾತಿಗಳಾಗಿ ಜೊತೆಯಾಗಿ ಏಕಾಂತದಲ್ಲಿರುವಾಗ ಇಬ್ಬರಲ್ಲೂ ಕಾಮಾಸಕ್ತಿ ಕೆರಳುತ್ತದೆ. ಇದರಿಂದಾಗಿ ಗಂಡು ಹೆಣ್ಣುಗಳು ಕಾಮ ಕ್ರೀಡೆಯಲ್ಲಿ ತೊಡಗಿಕೊಳ್ಳುತ್ತಾರೆ. ಒಬ್ಬರ ಮೈಯನ್ನು ಮತ್ತೊಬ್ಬರು ನಯವಾಗಿ ಉಜ್ಜುವುದು, ಮುತ್ತಿಡುವುದು, ನಾಲಿಗೆಯಲ್ಲಿ ನೆಕ್ಕುವುದು ಮಾಡುತ್ತಾ ಒಬ್ಬರ ಬಟ್ಟೆಗಳನ್ನು ಒಬ್ಬರು ಕಳಚಿಕೊಳ್ಳುತ್ತಾ ಬೆತ್ತಲಾಗಿ ನಿಲ್ಲುತ್ತಾರೆ. ಈ ಸಮಯದಲ್ಲಿ ಗಂಡು ಹೆಣ್ಣುಗಳಿಬ್ಬರ ದೇಹದಲ್ಲೂ ವಿವಿಧ ಗ್ರಂಥಿಗಳು ಸ್ರವಿಸಿ ದೇಹದಾದ್ಯಂತ ಹಲವಾರು ಹಾರ್ಮೋನ್ ಗಳ ಸಂಚಾರ ಆರಂಭವಾಗುತ್ತದೆ. ಈ ಕಾರಣದಿಂದ ದೇಹದಲ್ಲಿ ರಕ್ತಸಂಚಾರ ಅಧಿಕವಾಗುತ್ತದೆ ಹಾಗು ಇತರ ದೈಹಿಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಗಂಡಿನ ಶಿಶ್ನ ಗಡುಸಾಗಿ ಎದ್ದು ನಿಲ್ಲುತ್ತದೆ, ಹಾಗು ಹೆಣ್ಣಿಗೆ ಯೋನಿಯಲ್ಲಿ ಎಣ್ಣೆಯಂತಹ ದ್ರವ ಒಸರಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಗಂಡಿನ ಶಿಶ್ನ ಕಬ್ಬಿಣದ ರಾಡಿನಂತೆ ಗಟ್ಟಿಯಾಗಿರುವುದರಿಂದ ಹೆಣ್ಣಿನ ಯೋನಿಯೊಳಗೆ ಸುಲಭವಾಗಿ ನುಗ್ಗಲು ಅನುವಾಗುತ್ತದೆ. ಆನಂತರ ಗಂಡು ತನ್ನ ಶಿಶ್ನವನ್ನು ಹೆಣ್ಣಿನ ಯೋನಿಯೊಳಗೆ ಹಾಕಿ ಹಿಂದೆ ಮುಂದೆ ಆಡಿಸಲು ಶುರು ಮಾಡುತ್ತಾನೆ ಹಲವು ನಿಮಿಷಗಳ ಕಾಲ ಇದೆ ಕ್ರಿಯೆ ಮುಂದುವರೆದು ಗಂಡು ಹಾಗು ಹೆಣ್ಣು ಕಾಮದ ಪರಾಕಾಷ್ಠೆಯನ್ನು ತಲುಪಿ ಗಂಡು ತನ್ನ ವೀರ್ಯವನ್ನು ಹೆಣ್ಣಿನ ಯೋನಿಯೊಳಗೆ ಬಿಡುತ್ತಾನೆ. ಗಂಡು ತಾನು ಬಿಡುವ ವೀರ್ಯದಲ್ಲಿ ಮಗುವಿನ ಜನ್ಮಕ್ಕೆ ಕಾರಣವಾಗುವ ಜೀವಕೋಶಗಳು ಇರುತ್ತವೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಇರುವ ಈ ಕೋಶಗಳು ಹೆಣ್ಣಿನ ಗರ್ಭನಾಳಗಳ ಮೂಲಕ ಹೆಣ್ಣಿನ ಅಂಡಾಶಯ ತಲುಪುತ್ತವೆ. ಇದೆ ಮಗುವಿನ ಜನ್ಮಕ್ಕೆ ಕಾರಣವಾಗುತ್ತದೆ. ಮಗುವಿನ ಜನ್ಮವೊಂದೇ ಅಲ್ಲದೆ ಸಂಗಾತಿಗಳ ದೈಹಿಕ ತೃಪ್ತಿಗೂ ಕಾರಣವಾಗುತ್ತದೆ. ಸಾಮಾನ್ಯವಾಗಿ ಮದುವೆಯಾದ ನವ ದಂಪತಿಗಳು ಪ್ರತೀದಿನ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಾರೆ. ಆದರೆ ಹೆಣ್ಣು ಗರ್ಭವತಿಯಾದಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಆತಂಕಭರಿತವಾಗಿದ್ದು ವೈದ್ಯರ ಸೂಕ್ತ ಸಲಹೆ ಮೇರೆಗೆ ಲೈಂಗಿಕ ಕ್ರಿಯೆ ನಡೆಸಬಹುದು.

ಹೆಣ್ಣು ಮೇಲೆ ಸಂಭೋಗ ಭಂಗಿಯಲ್ಲಿ ಹೆಣ್ಣು ಗಂಡಿನ ಮೇಲಿದ್ದು ತನ್ನ ಯೋನಿಯಲ್ಲಿ ಶಿಶ್ನವನ್ನು ವೇಧಿಸಿಕೊಳ್ಳುತ್ತಿರುವುದು

ಲೈಂಗಿಕ ತೃಪ್ತಿಗಾಗಿ ಮಾತ್ರ ಲೈಂಗಿಕ ಕ್ರಿಯೆ ನಡೆಸುವ ದಂಪತಿಗಳು ಮಗುವಾಗುವುದನ್ನು ತಡೆಯಲು ಹಲವಾರು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಗಂಡು ನಿರೋಧ್/ಕಾಂಡೊಮ್ ಬಳಸುವ ಮೂಲಕ ಲೈಂಗಿಕ ಕ್ರಿಯೆಯಾದ ನಂತರವೂ ತಾಣ ವೀರ್ಯವು ಹೆಣ್ಣಿನ ಗರ್ಭಕೋಶದೊಳಕ್ಕೆ ಹರಿಯುವುದನ್ನು ತಪ್ಪಿಸುವ ಮುಖಾಂತರ ಬೇಡವಾದ ಗರ್ಭಧಾರಣೆಗಳನ್ನು ತಡೆಗಟ್ಟಬಹುದು.ಮಹಿಳೆಯರು ಬಳಸುವ ಕಾಂಡೊಮ್'ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಪುರುಷರು ಮಾತ್ರವಲ್ಲದೆ ಮಹಿಳೆಯರೂ ಕೂಡ ಲೈಂಗಿಕ ಸಂಪರ್ಕ ನಡೆಯುವ ಮುನ್ನ ಎಚ್ಚರ ವಹಿಸಬಹುದು.

ಸ್ತ್ರೀಯ ಯೋನಿಯೊಳಗೆ ಪುರುಷನು ಶಿಶ್ನವನ್ನು ವೇಧಿಸುತ್ತಿರುವುದು

ನಿಂತು ಭೋಗಿಸುವ ಭಂಗಿ

  • ನಿಂತು ಭೋಗಿಸುವ ಭಂಗಿಯಲ್ಲಿ ಸಂಗಾತಿಗಳು ಒಬ್ಬರಿಗೊಬ್ಬರು ಎದುರಾಗಿ ನಿಂತು ಭೋಗಿಸುತ್ತಾರೆ. ಸಂಗಾತಿಗಳ ಎತ್ತರದಲ್ಲಿ ಹೆಚ್ಚು ಕಡಮೆ ಇದ್ದರೆ ಸಂಗಾತಿಗಳಲ್ಲಿ ಒಬ್ಬರು ಮೆಟ್ಟಿಲುಗಳನ್ನು ಅಥವಾ ಬೆಂಚುಗಳನ್ನು ಆಧರಿಸಿ ಎತ್ತರವನ್ನು ಸರಿದೂಗಿಸಬಹುದು. ಹೆಣ್ಣು ಗೋಡೆಗೆ ಬೆನ್ನು ಮಾಡಿದರೆ ಶರೀರ ಭಾರದ ನಿರ್ವಹಣೆ ಸುಲಭವಾಗುತ್ತದೆ. ಈ ಭಂಗಿ ಕಾಮಸೂತ್ರದಲ್ಲಿ ವಿವರಿಸಲ್ಪಟ್ಟಿದೆ.[]
ನಿಂತು ಭೋಗಿಸುವ ಭಂಗಿ


ಅಸುರಕ್ಷಿತ ಲೈಂಗಿಕ ಕ್ರಿಯೆ

ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಹಲವಾರು ಅರಿವಿನ ಕಾರ್ಯಕ್ರಮಗಳ ಆಯೋಜನೆಯಾಗುತ್ತಿದ್ದು ಜನರಲ್ಲೂ ಈ ಬಗ್ಗೆ ಉತ್ತಮ ಅರಿವು ಮೂಡಿದೆ. ಒಂದಕ್ಕಿಂತಲೂ ಹೆಚ್ಚಿನ ಸಂಗಾತಿಗಳೊಂದಿಗೆ ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೆ ನೇರ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದನ್ನು ಅಸುರಕ್ಷಿತ ಲೈಂಗಿಕ ಕ್ರಿಯೆ ಎನ್ನಲಾಗುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಬೇಡದ ಗರ್ಭ ಧರಿಸುವಿಕೆ, ಲೈಂಗಿಕ ರೋಗಗಳು, ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆಗಳು ಹರಡುತ್ತವೆ.

ಲೈಂಗಿಕ ಕ್ರಿಯೆಯ ಅರಿವು ಮೂಡಿಸುವ ಚಿತ್ರ ಮಾಹಿತಿ

ಕೂಡುವಿಕೆಯ ಮಹತ್ವ

ಕೂಡುವಿಕೆಯೆಂದರೆ ಪ್ರೀತಿಯನ್ನು ವ್ಯಕ್ತಪಡೀಸುವ ಕಲೆಯೆಂದು ಕರೆದಿದ್ದಾರೆ. ಇತರ ಶಾರೀರಿಕ ಚೋದನೆಗಳಿಗಿಂತ ಕೂಡುವಿಕೆ ಯಾಕೆ ಮಹತ್ತರವಾಗಿದೆಯೆಂದರೆ ಅದು ಅತ್ಯಂತ ಆನಂದದಾಯಕವಾದ ಅನುಭೂತಿಯನ್ನು ಒದಗಿಸುತ್ತದೆ. [] ದೈಹಿಕವಾಗಿ ಹೇಳುವುದಾದರೆ ಕೂಡುವಿಕೆ ಪಾಲುದಾರರ ಲೈಂಗಿಕ ಇಂದ್ರಿಯಗಳ ಮಿಲನವಾಗಿದೆ (ಶಿಶ್ನ-ಯೋನಿ ಸಂಪರ್ಕ, ನಂತರದ ಚಲನೆಗಳು, ಮತ್ತು ಕೊನೆಯದಾಗಿ ವೀರ್ಯಸ್ಖಲನ). ಆದರೆ ದೈಹಿಕ ಸಂಭೋಗವನ್ನು ಮೀರಿಯೂ ಲೈಂಗಿಕತೆಗೆ ಹಲವು ನೆಲೆಗಳಿವೆ.[] [] []

ಸಂಭೋಗದ ವೇಳೆ ನೋವು ತರುವ ಕಾರಣಗಳು

ಸಂಭೋಗದ ವೇಳೆ ಸ್ತ್ರೀಯರ ಯೋನಿಯಲ್ಲಿ ಉಂಟಾಗುವ ತೀವ್ರವಾದ ನೋವನ್ನು ಡಿಸ್ಪರೇನಿಯಾ ಎನ್ನುತ್ತಾರೆ. ದೈಹಿಕ ನೋವಿನ ಜೊತೆಗೆ, ಇದು ದಂಪತಿಗಳ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ನಕಾರಾತ್ಮಕ ಭಾವನಾತ್ಮಕ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಹಾಗಾದರೆ, ನೋವಿಗೆ ಕಾರಣವೇನು? ಸಾಮಾನ್ಯವಾಗಿ, ಸಾಕಷ್ಟು ನಯಗೊಳಿಸುವಿಕೆ ಇಲ್ಲದಿದ್ದಾಗ, ಮಹಿಳೆ ನೋವಿನ ಲೈಂಗಿಕತೆಯನ್ನು ಅನುಭವಿಸುತ್ತಾಳೆ. ಆದರೆ, ಫೋರ್‌ಪ್ಲೇ ಹೆಚ್ಚಾದರೆ, ಮಹಿಳೆಯನ್ನು ವಿಶ್ರಾಂತಿ ಪಡೆಯಲು ಅಥವಾ ದಂಪತಿಗಳು ಅಂಗಡಿಯಲ್ಲಿ ಖರೀದಿಸಿದ ಲೂಬ್ರಿಕೆಂಟುಗಳನ್ನು [] ಸಹ ಬಳಸಬಹುದು.

ಮಹಿಳೆಯರು ನೋವಿನ ಸಂಭೋಗವನ್ನು ಅನುಭವಿಸಲು ಇತರ ಕಾರಣಗಳು:

  • ವಜಿನಿಸ್ಮಸ್

ಸಾಮಾನ್ಯವಾಗಿ ಯೋನಿಯಲ್ಲಿನ ಸ್ನಾಯುಗಳು ಅನೈಚ್ಛಿಕವಾಗಿ ಸೆಳೆತಕ್ಕೆ ಒಳಗಾದಾಗ ಇದು ಉಂಟಾಗುತ್ತದೆ. ನೋವಾಗಬಹುದು ಎಂಬ ಭಯದಿಂದಲೂ ಇದು ಪ್ರಚೋದಿಸಲ್ಪಡಬಹುದು.

  • ಯೋನಿಯ ಸೋಂಕು

ಇವು ಸಾಮಾನ್ಯವಾಗಿ ಕಂಡುಬರುವ ಕಾಯಿಲೆ ಮತ್ತು ಯೀಸ್ಟ್ ಸೋಂಕುಗಳು ಸಹ ಇದರ ಭಾಗವಾಗಿವೆ.

  • ಗರ್ಭಕಂಠದ ತೊಂದರೆಗಳು

ಗರ್ಭಕಂಠವು ಗರ್ಭಾಶಯದ ದ್ವಾರವೇ ಆಗಿದೆ. ಶಿಶ್ನವನ್ನು ಬಲವಾಗಿ ತುರುಕಿಸಿದರೆ ಅದು ಗರ್ಭಕಂಠವನ್ನು ತಲುಪಬಹುದು ಮತ್ತು ಗರ್ಭಕಂಠದಲ್ಲಿ ಸೋಂಕುಗಳೇ ಮುಂತಾದ ಯಾವುದೇ ಸಮಸ್ಯೆಗಳಿದ್ದರೆ ಅದು ನೋವನ್ನು ಉಂಟುಮಾಡಬಲ್ಲುದು.

  • ಗರ್ಭಾಶಯದ ಸಮಸ್ಯೆಗಳು

ಫೈಬ್ರಾಯ್ಡ್ ರೋಗ ಲಕ್ಷಣಗಳು ಗರ್ಭಾಶಯದಲ್ಲಿನ ಸಮಸ್ಯೆಗಳಲ್ಲಿ ಒಂದು. ಇದರಿಂದ ಸಂಭೋಗದ ವೇಳೆ ಯೋನಿ ಬಿಗಿದು ನೋವುಂಟಾಗುವ ಸಂಭವವಿದೆ.

  • ಎಂಡೊಮೆಟ್ರಿಯೊಸಿಸ್

ಇದು ಗರ್ಭಾಶಯದ ಒಳ ಪದರವು, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಅಂಡಾಶಯಗಳಂತಹ ಸಂತಾನೋತ್ಪತ್ತಿ ಅಂಗಗಳ ಮೇಲೆ ಹೊರಗೆ ಬೆಳೆಯಲು ಪ್ರಾರಂಭಿಸುವ ಸ್ಥಿತಿಯಾಗಿದೆ.

  • ಅಂಡಾಶಯಗಳಲ್ಲಿ ಸಮಸ್ಯೆಗಳು

ಈ ಸಮಸ್ಯೆಗಳಲ್ಲಿ ಚೀಲಗಳು ಮತ್ತು ಇತರ ಅಂಡಾಶಯದ ಸಮಸ್ಯೆಗಳು ಸೇರಿವೆ.

  • ಶ್ರೋಣಿಯ ಉರಿಯೂತದ ಕಾಯಿಲೆ

ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ ಅಥವಾ ಪಿಐಡಿ ಎಂಬುದು ಅಂಗಾಂಶಗಳು ತೀವ್ರವಾಗಿ ಉರಿಯುವ ಸ್ಥಿತಿಯಾಗಿದ್ದು, ಸಂಭೋಗದ ಸಮಯದಲ್ಲಿ ಉಂಟಾಗುವ ಒತ್ತಡವು ತೀವ್ರವಾದ ನೋವಿಗೆ ಕಾರಣವಾಗಬಹುದು.

  • ಅಪಸ್ಥಾನೀಯ ಗರ್ಭಧಾರಣೆ

ಇದು ಗರ್ಭಧಾರಣೆಯಾಗಿದ್ದು, ಫಲವತ್ತಾದ ಮೊಟ್ಟೆಗಳು ಗರ್ಭಾಶಯದ ಹೊರಗೆ ಬೆಳೆಯಲು ಪ್ರಾರಂಭಿಸುತ್ತವೆ.

  • ಋತುಬಂಧ

ಮಹಿಳೆಗೆ ಋತುಬಂಧವಾದಾಗ, ಯೋನಿಯ ಒಳಪದರವು ತೆಳುವಾಗುವುದರಿಂದ ಆಕೆಯ ಯೋನಿಯ ತೇವಾಂಶ ಕಳೆದುಹೋಗುತ್ತದೆ, ಇದರಿಂದಾಗಿ ಅದು ಒಣಗುತ್ತದೆ. ಆದ್ದರಿಂದ, ನೋವಿನಿಂದ ಕೂಡಿದ ಲೈಂಗಿಕ ಕ್ರಿಯೆ ನಡೆಯುತ್ತದೆ.

  • ಪ್ರಮುಖ ಶಸ್ತ್ರಚಿಕಿತ್ಸೆ ಅಥವಾ ಹೆರಿಗೆಯ ನಂತರ ಶೀಘ್ರದಲ್ಲೇ ಸಂಭೋಗದಲ್ಲಿ ಭಾಗವಹಿಸುವುದು.
  • ಲೈಂಗಿಕವಾಗಿ ಹರಡುವ ರೋಗಗಳು

ಇವುಗಳಲ್ಲಿ ಜನನಾಂಗದ ಗಂಟುಗಳು, ಹರ್ಪಿಸ್ ಹುಣ್ಣುಗಳು ಅಥವಾ ಇತರ ಲೈಂಗಿಕವಾಗಿ ಹರಡುವ ರೋಗಗಳು ಸಹ ಸೇರಿವೆ.

  • ಗಾಯ

ಯೋನಿಯಲ್ಲಿ ಅಥವಾ ಯೋನಿದ್ವಾರದಲ್ಲಿ ಗಾಯಗಳಾಗಿದ್ದರೆ ಅದು ಅತ್ಯಂತ ನೋವಿನಿಂದ ಕೂಡಿದ ಲೈಂಗಿಕತೆಗೆ ಕಾರಣವಾಗಬಹುದು.

  • ವಲ್ವೊಡಿನಿಯಾ

ಇದು ಮಹಿಳೆ ತನ್ನ ಬಾಹ್ಯ ಜನನಾಂಗವಾದ ಯೋನಿದ್ವಾರದಲ್ಲಿ ಅನುಭವಿಸುವ ದೀರ್ಘಕಾಲದ ನೋವು.[]

ಉಲ್ಲೇಖಗಳು

  1. "Kama Sutra – the ancient art of love". Kamasutra-sex.org. Archived from the original on 2008-09-06. Retrieved 2010-04-19.
  2. "How to Make Great Love".
  3. "sexual intercourse".
  4. "Love and Sex".
  5. "ಸಂಭೋಗ ಕ್ರಿಯೆಯಿಂದ ಆರೋಗ್ಯಕ್ಕೇನು ಲಾಭ?".
  6. "ಲೂಬ್ರಿಕಂಟ್‌ ಬಳಕೆಯಿಂದ ಆಹ್ಲಾದಕರ-ಸುಖಕರ ಸಂಭೋಗ ಸಾಧ್ಯ".
  7. "ಕೆಲವು ಮಹಿಳೆಯರು ನೋವಿನ ಲೈಂಗಿಕ ಸಂಭೋಗವನ್ನು ಏಕೆ ಅನುಭವಿಸುತ್ತಾರೆ?".

ನೋಡಿ

ಹೆಚ್ಚಿನ ಮಾಹಿತಿ

ಹೊರಗಣ ಕೊಂಡಿಗಳು

"https://kn.wikipedia.org/w/index.php?title=ಸಂಭೋಗ&oldid=1308902" ಇಂದ ಪಡೆಯಲ್ಪಟ್ಟಿದೆ