ಹೀರೆ
Luffa acutangula | |
---|---|
![]() | |
Scientific classification ![]() | |
Unrecognized taxon (fix): | Luffa |
Species: | L. acutangula
|
Binomial name | |
Luffa acutangula | |
Synonyms[೧] | |
|
ಹೀರೆಯನ್ನು ವಾಣಿಜ್ಯಿಕವಾಗಿ ತರಕಾರಿಯಾಗಿ ಅದರ ಬಲಿಯದ ಹಣ್ಣುಗಳಿಗಾಗಿ ಬೆಳೆಯಲಾಗುತ್ತದೆ. ಲ್ಯುಫಾ ಅಕ್ಯುಟಾಂಗುಲ ಎಂಬ ಪ್ರಭೇದದ ಈ ಬಳ್ಳಿಯು ಕುಕರ್‌ಬಿಟೇಸಿ ಕುಟುಂಬಕ್ಕೆ ಸೇರುತ್ತದೆ. ಇದರ ಹಣ್ಣು ಸ್ವಲ್ಪಮಟ್ಟಿಗೆ ಏಣುಗೆರೆಗಳಿರುವ ಸೌತೆಕಾಯಿ ಅಥವಾ ಜ಼ುಕೀನಿಯನ್ನು ಹೋಲುತ್ತದೆ.
ಇತರ ಭಾಷೆಗಳಲ್ಲಿ[ಬದಲಾಯಿಸಿ]
ಇದನ್ನು ಆಂಗ್ಲಭಾಷೆಯಲ್ಲಿ ರಿಬ್ಬರ್‌ಗಾರ್ಡ್, ವೆಜಿಟೇಬಲ್‌ಸ್ಪಾಂಜ್, ಹಿಂದಿಯಲ್ಲಿ ಕಾಲಿ ಟೊರೈ, ಜಿಂಗಾ ಮತ್ತು ಕನ್ನಡದಲ್ಲಿ ಹೀರೆಕಾಯಿ ಎಂದು ಕರೆಯುತ್ತಾರೆ.
ವಿವರ[ಬದಲಾಯಿಸಿ]
ಉಷ್ಣವಲಯದಲ್ಲಿ ಬೆಳೆಯುವ ಈ ಸಸ್ಯ ನೆಲದ ಮೇಲೆ ಬೆಳೆಯುವ ವಾರ್ಷಿಕ ಬಳ್ಳಿ. ಏಷ್ಯದ ವಿವಿಧ ದೇಶಗಳಲ್ಲಿ ಬೆಳೆಯುತ್ತದೆ. ಭಾರತದ ಎಲ್ಲ ಭಾಗಗಳಲ್ಲಿ ಬೆಳೆಯುತ್ತಾರೆ.
ಉಪಯೋಗಗಳು[ಬದಲಾಯಿಸಿ]
ಬಲಿತ ಹಣ್ಣುಗಳನ್ನು ನೈಸರ್ಗಿಕ ಸ್ವಚ್ಛಗೊಳಿಸುವ ಸ್ಪಂಜುಗಳಾಗಿ ಬಳಸಲಾಗುತ್ತದೆ.
ಹೀರೆಕಾಯಿ ತರಕಾರಿಯ ರೂಪದಲ್ಲಿ ಅಡುಗೆಗೆ ಉಪಯೋಗವಾಗುತ್ತದೆ.[೨] ಒಣಗಿದ ಹಣ್ಣುಗಳಿಂದ ಪಡೆಯುವ ತಂತುಮಯ ಪದಾರ್ಥವು ಕಾರ್ಖಾನೆಗಳಲ್ಲಿ ಸೋಸುವ ಅರಿವೆಯಾಗಿ ಮತ್ತು ಸ್ನಾನದ ಸ್ಪಂಜಿನ ಬದಲಾಗಿ ಉಪಯುಕ್ತವಾಗುತ್ತದೆ.
ಚಿತ್ರಸಂಪುಟ[ಬದಲಾಯಿಸಿ]
ಹೀರೆ ಬಳ್ಳಿಯಲ್ಲಿ ಪುಷ್ಪಬಾಹ್ಯ ಮಕರಂದ ಗ್ರಂಥಿಗಳು[೩] ಮತ್ತು ಇರುವೆಗಳು
ಉಲ್ಲೇಖಗಳು[ಬದಲಾಯಿಸಿ]
- ↑ "The Plant List: A Working List of All Plant Species". Retrieved 21 November 2014.
- ↑ Grubben, G.J.H.; Africa, P.R.o.T. (2004). Vegetables. Backhuys. ISBN 9789057821479.
- ↑ Chakravarty, H. L. (October 1948). "Extrafloral Glands of Cucurbitaceæ". Nature. 162 (4119): 576–577. Bibcode:1948Natur.162..576C. doi:10.1038/162576b0. S2CID 4128826.